Shravani subramanya:ಶ್ರಾವಣಿ ಲೆಕ್ಕಾಚಾರ ಉಲ್ಟಾಪಲ್ಟಾ; ಮದುವೆಯ ವಿಚಾರದಲ್ಲೂ ಯಡವಟ್ಟು!
ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಆರಂಭವಾಗಿದೆ. ಒಂದು ಕಡೆ ಬಡತನವೇ ಇದ್ದರೂ ಪ್ರೀತಿಯ ಸಿರಿತನ ತುಂಬಿರುವ ಸುಬ್ಬು, ಮತ್ತೊಂದು ಕಡೆ ಸಿರಿತನವೇ ತುಂಬಿದ್ದರು, ಪ್ರೀತಿಗೆ ಹೆಚ್ಚು ಕೊರತೆ. ಇದು ಶ್ರಾವಣಿ ಸುಬ್ರಮಣ್ಯರ ಕಥೆಯಾಗಿದೆ.
ಶ್ರಾವಣಿಗೆ ಹೇಗಾದರು ಮಾಡಿ ಅಪ್ಪನ ಪ್ರೀತಿಯನ್ನು ಪಡೆಯಬೇಕು ಎಂಬ ಹಂಬಲವಿದೆ. ಆದರೆ ಅದ್ಯಾಕೋ ಶ್ರಾವಣಿಯ ತಂದೆಗೆ ತನ್ನ ಹೆಂಡತಿಯ ಮೇಲೆನೆ ಕೋಪ. ಆ ಕೋಪ ಮಗಳ ಮೇಲೂ ಮುಂದುವರೆದಿದೆ. ಅಪ್ಪನ ನಂಬಿಕೆ ಗಳಿಸಬೇಕೆಂದುಕೊಂಡಿರುವ ಶ್ರಾವಣಿಯಿಂದ ಪದೇ ಪದೇ ತಪ್ಪುಗಳೇ ನಡೆಯುತ್ತಿವೆ.

ಬೆಳಗಿನ ಜಾವವೇ ದೇವರಿಗೆ ಅಪ್ಲಿಕೇಷನ್
ಶ್ರಾವಣಿ ಓದುವುದರಲ್ಲಿ ಅಷ್ಟಕ್ಕೆ ಅಷ್ಟೆ. ಈಗ ಪರೀಕ್ಷೆಯಲ್ಲಿ ಪಾಸು ಮಾಡಪ್ಪ ದೇವರೆ ಅಂತ ಬೇಡಿಕೊಂಡಿದ್ದಾಳೆ. ಅದರಲ್ಲೂ ಬೆಳಗಿನ ಜಾವವೇ ಎದ್ದು, ಯಾರೋ ಜ್ಯೋತಿಷಿ ಹೇಳುವ ವಿಡಿಯೋ ನೋಡಿಕೊಂಡು, ಅದರಂತೆ ಪೂಜೆ-ಪುನಸ್ಕಾರ ಮಾಡಿ, ಅರಳಿಕಟ್ಟೆಗೆ ಪ್ರದಕ್ಷಿಣೆ ಹಾಕಿದ್ದಾಳೆ. ಮಂತ್ರವೆಲ್ಲಾ ಜೋರಾಗಿಯೇ ಪಠಿಸಿದ್ದಾಳೆ. ಆದರೆ ದೇವರು ವರ ಕೊಟ್ಟರು, ಶ್ರಾವಣಿ ನಿರೀಕ್ಷೆ ಬೇರೆಯದ್ದೇ ಆಗಿತ್ತು. ಎಕ್ಸಾಂ ಹಾಲ್ ಗೆ ಹೋದಾಗಲೇ ಅದರ ಅನುಭವ ಕೂಡ ಆಗಿದ್ದು.
ಪರೀಕ್ಷೆ ಇರೋದೊಂದು ಓದಿದ್ದೊಂದು
ಇವತ್ತಿನ ಪರೀಕ್ಷೆ ಇದ್ದದ್ದು ಫಿಸಿಕ್ಸ್. ಆದರೆ ಶ್ರಾವಣಿ ತೆಗೆದ ಪುಸ್ತಕ ಕೆಮಿಸ್ಟ್ರಿ. ಮನೆಯಲ್ಲಿ ತಂಗಿ ಹೇಳಿದ ಮಾತು ಸುಬ್ಬುಗೆ ನೆನಪಿತ್ತು. ಅದನ್ನು ಹೇಳುವುದಕ್ಕೆ ಎಷ್ಟೇ ಪ್ರಯತ್ನ ಪಟ್ಟರು ಶ್ರಾವಣಿ ಕೇಳಿಸಿಕೊಳ್ಳುವುದಕ್ಕೆ ರೆಡಿ ಇರಲಿಲ್ಲ. ಕಾರಿನಲ್ಲಿ ಕಿವಿ ಮುಚ್ಚಿಕೊಂಡು, ಕೆಮಿಸ್ಟ್ರಿ ವಿಷಯವನ್ನೇ ಓದಿದಳು. ಇನ್ನು ಕಾಲೇಜು ಬಳಿ ಇಳಿದಾಗಲೂ ಸುಬ್ಬು ಅರ್ಥ ಮಾಡಿಸಲು ಪ್ರಯತ್ನ ಪಟ್ಟಾಗ, ಶ್ರಾವಣಿ ಕೆಳುವ ಸ್ಥಿತಿಯಲ್ಲಿ ಇರಲಿಲ್ಲ. ಸುಮ್ಮನೆ ಹೊರಟು ಹೋದ ಸುಬ್ಬು. ರಾತ್ರಿಯೆಲ್ಕಾ ಗದ್ದೆಗೆ ನೀರು ಹಾಯಿಸಿ, ಬೆಳಗ್ಗೆ ಎದ್ದು ನೋಡಿದರೆ ಅದು ಬೇರೆಯವರ ಗದ್ದೆಯಾಗಿರುತ್ತದೆ ಎಂಬ ಗಾದೆ ಮಾತಿನಂತೆಯೇ ಆಗಿದೆ ಶ್ರಾವಣಿಯ ಸ್ಥಿತಿ. ಪ್ರಶ್ನೆ ಪತ್ರಿಕೆ ನೋಡಿದಾಗಲೇ ಶ್ರಾವಣಿ ದಂಗು ಬಡಿದಿದ್ದು.
ಬೇರೆ ದಾರಿಯಲ್ಲಿ ತಪ್ಪಿಸಿಕೊಂಡ ಶ್ರಾವಣಿ
ಅರಮನೆಯಿಂದ ಸುಬ್ಬುಗೆ ಕರೆ ಮಾಡಿದ ಶ್ರಾವಣಿಯ ಅತ್ತೆ, ಪರೀಕ್ಷೆ ಮುಗಿದ ಕೂಡಲೇ ಕರೆದುಕೊಂಡು ಬಾ ಎಂದಳು. ಮನೆಗೆ ಹುಡುಗನ ಕಡೆಯವರು ಬರುತ್ತಾರೆ ಎಂದಷ್ಟೇ ಹೇಳಿದರು. ಆದರೆ ಹುಡುಗ ಯಾರನ್ನು ನೋಡುವುದಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಸುಬ್ಬು ಕೂಡ ಶ್ರಾವಣಿಗೆ ಹೋಗಿ, ಮನೆಗೆ ಬೇಗ ಹೋಗಬೇಕಂತೆ ಹುಡುಗನ ಕಡೆಯವರು ಬರುತ್ತಿದ್ದಾರೆ ಎಂದು ಹೇಳಿದ. ಇದನ್ನು ಶ್ರಾವಣಿ ತಪ್ಪಾಗಿ ಭಾವಿಸಿದಳು.

ಗಂಡಿನವರಿಗೆ ಚಾಡಿ ಹೇಳಿದ ಶ್ರಾವಣಿ
ಪರೀಕ್ಷೆ ಮುಗಿಸಿ ಮನೆಗೆ ಬಂದ ಶ್ರಾವಣಿ, ಎಲ್ಲರ ಕಣ್ಣು ತಪ್ಪಿಸಿ, ಸೀರೆಕಟ್ಟಿ ಇಳಿದು ಓಡಿ ಹೋಗಿದ್ದಳು. ಆದರೆ ಅವಳು ಓಡಿ ಹೋಗಿದ್ದು ಗಂಡಿನ ಕಡೆಯವರನ್ನು ತಡೆಯುವುದಕ್ಕಾಗಿ. ಇದು ಸುಬ್ಬುಗು ಗೊತ್ತಾಯ್ತು. ತಕ್ಷಣ ಗಾಡಿ ತೆಗೆದುಕೊಂಡು ಹೊರಟ. ಅಲ್ಲಿ ಅದಾಗಲೇ ಶ್ರಾವಣಿ, ತನ್ನ ಮುಖಕ್ಕೆಲ್ಲಾ ಬಟ್ಟೆ ಸುತ್ತಿಕೊಂಡು ಮಿನಿಸ್ಟರ್ ಮನೆಯ ಹುಡುಗಿಯ ಕ್ಯಾರೆಕ್ಟರ್ ಸರಿ ಇಲ್ಲ ಎಂದು ಹೇಳಿದ್ದಳು. ಸುಬ್ಬು ಬಂದು ತಪ್ಪಿಸುವಷ್ಟರಲ್ಲಿ ಅನಾಹುತ ನಡೆದೇ ಹೋಗಿತ್ತು. ತಕ್ಷಣ ಅಲ್ಲಿಂದ ಶ್ರಾವಣಿಯನ್ನು ಕರೆದುಕೊಂಡು ಹೊರಟು ಬಿಟ್ಟ.


Click it and Unblock the Notifications











