Shravani subramanya: ಅಪ್ಪನ ಎದುರೇ ಎಡವಿದಳು ಶ್ರಾವಣಿ; ಸತ್ಯ ಗೊತ್ತಾದ ಮೇಲೆ ಬಿಡ್ತಾರಾ ಅಪ್ಪ..?

By ಎಸ್ ಸುಮಂತ್

ಶ್ರಾವಣಿಗೆ ತಂದೆಯ ಪ್ರೀತಿಯನ್ನು ಪಡೆಯಬೇಕೆಂಬ ಹಂಬಲ ಜಾಸ್ತಿ ಇದೆ. ಹುಟ್ಟುತ್ತಲೆ ಅಮ್ಮನನ್ನು ಕಳೆದುಕೊಂಡ ಶ್ರಾವಣಿಗೆ ಯಾವತ್ತಿಗೂ ಅಮ್ಮನ ಪ್ರೀತಿ ಹೇಗಿರುತ್ತೆ ಎಂಬುದನ್ನು ನೋಡಿಲ್ಲ. ಹಾಗಂತ ಅಮ್ಮ ಬೇಕು ಎಂದು ಬಯಸಿದವಳಲ್ಲ. ಆದರೆ ಅಪ್ಪನ ಪ್ರೀತಿಗಾಗಿ ಸದಾ ಹಂಬಲಿಸುತ್ತಾ ಇರುತ್ತಾಳೆ. ಅಪ್ಪ ಒಂದೇ ಒಂದು ಸಲ ಮಾತನಾಡಿದರೂ ಸಾಕು ಎಂದು ಕನವರಿಸುತ್ತಾಳೆ. ಅಪ್ಪ ಎಷ್ಟೇ ಮನಸ್ತಾಪ ಮಾಡಿಕೊಂಡರು ಬೇಸರ ಆದರೂ ತೋಡಿಕೊಳ್ಳದೆ, ಆ ಪ್ರೀತಿಗಾಗಿ ಕಾಯುತ್ತಿದ್ದಾಳೆ.

ತಂದೆ ಯಾಕೆ ತನ್ನ ಜೊತೆಗೆ ಮಾತನಾಡುತ್ತಿಲ್ಲ ಎಂಬ ಸಣ್ಣ ಕಾರಣವೂ ಶ್ರಾವಣಿಗೆ ಗೊತ್ತಿಲ್ಲ. ಊಟ ಮಾಡುವಾಗಲೂ ಮಗಳ ಜೊತೆಗೆ ಕುಳಿತುಕೊಳ್ಳಲು ಇಷ್ಟಪಡಲ್ಲ. ನಾಯಿಯನ್ನ ಬೇಕಾದರೆ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಮಗಳನ್ನು ಕರೆದುಕೊಂಡು ಹೋಗಲ್ಲ. ವೀರೇಂದ್ರನ ತಂಗಿಯೇ ಮನೆಯಲ್ಲಿ ಪ್ರಭಾವ ಶಾಲಿಯಾಗಿದ್ದಾರೆ.

Shravani Subramanya Kannada serila Written Update on March 20th episode

ವೀರೇಂದ್ರ ಮನೆಗೆ ಬಂದ ಗಂಡಿನ ಕಡೆಯವರು

ಅತ್ತೆಯ ನಡವಳಿಕೆಯಿಂದ ನನ್ನನ್ನೇ ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆಂದು ಊಹೆ ಮಾಡಿಕೊಂಡ ಶ್ರಾವಣಿ, ಗಂಡಿನ ಮನೆಯವರನ್ನು ಅಡ್ಡ ಹಾಕಿ, ಹುಡುಗಿಯ ಬಗ್ಗೆ ಕೆಟ್ಟದಾಗಿ ಹೇಳಿದ್ದಳು. ಆದರೆ ಗಂಡಿನ ಇದ್ಯಾವುದನ್ನು ಲೆಕ್ಕಿಸದೆ ಹುಡುಗಿಯನ್ನು ನೋಡುವುದಕ್ಕೆ ವೀರೇಂದ್ರ ಮನೆಗೆ ಬಂದರು. ಬಂದ ಅತಿಥಿಗಳಿಗೆ ವೀರೇಂದ್ರ ಮನೆಯವರಿಂದ ಒಳ್ಳೆಯ ಆತಿಥ್ಯ ಸಿಕ್ಕಿದೆ. ಶಾಸ್ತ್ರದ ಪ್ರಕಾರವೇ ಹುಡುಗಿಯನ್ನು ನೋಡಿದರು.

ಮಗಳನ್ನು ಸಂಸ್ಕಾರವಂತೆ ಎಂದ ಬೀಗರು

ವೀರೇಂದ್ರ ಅವರ ಮಗಳನ್ನು ಕರೆಸಿದರು. ಮಗಳು ನಡೆದುಕೊಂಡ ರೀತಿಗೆ ಗಂಡಿನ ಕಡೆಯವರು ಖುಷಿಯಾದರು. ಮನೆಯವರು ನೋಡಿಕೊಂಡ ರೀತಿಗೆ ಸಂಸ್ಕಾರವಂತರು ಎಂದು ನಂಬಿದರು‌. ಗಂಡಿನ ಕಡೆಯವರಿಗೆ ಖುಷಿಯಾಗಿ, ಎಲ್ಲರೂ ಖುಷಿಯಿಂದಾನೇ ಹೇಳಿದರು. ಹೆಣ್ಣಿನ ಗುಣ ನೋಡಿದರೇನೆ ಗೊತ್ತಾಗುತ್ತದೆ. ತುಂಬಾ ಸಂಸ್ಕಾರವಂತರು ಎಂಬುದು ನೋಡಿದರೇನೆ ಗೊತ್ತಾಗುತ್ತದೆ ಎಂದು ಹೊಗಳಿದರು. ಇದೇ ಸಮಯಕ್ಕೆ ಗಂಡಿನ ತಾಯಿ, 'ಇಷ್ಟು ಸಂಸ್ಕಾರವಂತರಾದರೂ ಆ ಹುಡುಗಿ ಬಂದು ಕೆಟ್ಟದಾಗಿ ಹೇಳಿದ್ದು ಯಾಕೆ' ಎಂದು ಎಲ್ಲರ ಮುಂದೆಯೇ ಪ್ರಶ್ನೆ ಮಾಡಿದರು.

ಯಾರೆಂದ ತಿಳಿಯಲು ಹೊರಟ ವೀರೇಂದ್ರ

ಇದನ್ನು ಕೇಳಿಸಿಕೊಂಡ ವೀರೇಂದ್ರ ಅವರಿಗೆ ಕೋಪ ನೆತ್ತಿಗೇರಿತ್ತು. ಮಗಳ ಮೇಲೆ ಕೆಟ್ಟದಾಗಿ ಮಾತನಾಡಿದರಾ, ಯಾರದು ಎಂದು ಪ್ರಶ್ನಿಸಿದರು. ಗಂಡಿನವರು ಅದನ್ನು ಅಲ್ಲಿಗೆ ತೇಲಿಸುವುದಕ್ಕೆ ಪ್ರಯತ್ನ ಪಟ್ಟರು. ಬಿಡಿ ಒಂದು ಗಂಡು ಹೆಣ್ಣಿನ ಮದುವೆ ಎಂದರೆ ಈ ರೀತಿಯ ಆರೋಪಗಳು ಬರುವುದು ಸಹಜ ಎಂದೇ ಹೇಳಿದರು. ಆದರು ಬಿಡದ ವೀರೇಂದ್ರ, ಇದನ್ನು ಸುಲಭವಾಗಿ ನೀವೂ ಬಿಡಬಹುದು. ಆದರೆ ನಾನು ಬಿಡುವುದಕ್ಕೆ ಸಾಧ್ಯವಿಲ್ಲ. ಅವರನ್ನು ಹುಡುಕುತ್ತೇನೆ ಎಂದೇ ನಿರ್ಧಾರ ಮಾಡಿದ್ದಾನೆ.

Shravani Subramanya Kannada serila Written Update on March 20th episode

ಅಪ್ಪನ ಎದುರೇ ಎಡವಿದಾ ಶ್ರಾವಣಿ

ಇಷ್ಟೆಲ್ಲಾ ಮಾತನಾಡುವಾಗಲೇ ಶ್ರಾವಣಿಯ ಗ್ರಹಚಾರ ಕೆಟ್ಟಿದೆ. ಆಚೆ ಹೋಗುವಾಗ ಎಡವಿ ಬಿದ್ದಿದ್ದಾಳೆ. ಮೊದಲೇ ಗಂಡಿನ ಮನೆಯವರಿಗೆ ಚಾಡಿ ಹೇಳುವಾಗಲೂ ಅದೇ ಚೂಡಿದಾರ್ ಹಾಕಿದ್ದಳು. ಮುಖವನ್ನು ಅದೇ ದುಪ್ಪಟದಿಂದ ಕವರ್ ಮಾಡಿಕೊಂಡಿದ್ದಳು. ಮನೆಯಲ್ಲಿ ಅಪ್ಪನ ಎದುರು ಬಿದ್ದಾಗಲೇ ಗಂಡಿನ ಮನೆಯವರ ಎದುರು ಸಿಕ್ಕಿ ಬಿದ್ದಳು. ತಕ್ಷಣ ಅವಳನ್ನು ಕಂಡು ನೀನೆ ಅಲ್ವಾ, ಈ ಹುಡುಗಿಯ ಬಗ್ಗೆ ಕೆಟ್ಟದಾಗಿ ಹೇಳಿದ್ದು ಎಂದೇ ಎಲ್ಲರು ಕೇಳಿದರು. ಅಪ್ಪ ಬೇರೆ ಅಲ್ಲಿಯೇ ನಿಂತಿದ್ದರು. ಮಗಳನ್ನು ಕೆಕ್ಕರಿಸಿ ನೋಡಿದರು. ಶ್ರಾವಣಿಗೆ ಏನು ಮಾಡಬೇಕು ಎಂಬುದು ಮಾತ್ರ ತಿಳಿಯದೇ ಕಂಗಲಾದಳು.

More from Filmibeat

English summary
Shravani Subramanya Kannada serila today episode. Here is the details about Shravani, caught in front of Dad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X