'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ಈ ನಟಿ ಮಿಸ್ ಚಿಕ್ಕಮಗಳೂರು ರನ್ನರ್‌ಅಪ್: ಯಾರಿವರು? ಹಿನ್ನೆಲೆಯೇನು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಶ್ರಾವಣಿ ಸುಬ್ರಹ್ಮಣ್ಯ' ಕೂಡಾ ಒಂದು. ಕೌಟುಂಬಿಕ ಕಥಾಹಂದರವನ್ನೊಳಗೊಂಡಿರುವ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯು ತೆಲುಗಿನ 'ಅಮ್ಮಾಯಿಗಾರು' ಧಾರಾವಾಹಿಯ ರಿಮೇಕ್ ಎಂದು ಹೇಳಿದರೆ ತಪ್ಪಾಗಲಾರದು.

ಕಳೆದ ವರ್ಷ ಮಾರ್ಚ್ 18ರಂದು ಪ್ರಸಾರ ಶುರುವಾದ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸಿ ಹಾಗೂ ನಾಯಕ ಸುಬ್ರಹ್ಮಣ್ಯನಾಗಿ ಅಮೋಘ ಆದಿತ್ಯ ನಟಿಸುತ್ತಿದ್ದಾರೆ.

Shravani Subramanya serial actress Prajna Bhat is also Miss Chikkamagaluru runner up

ಎಜುಕೇಶನ್ ಮಿನಿಸ್ಟರ್ ಆಗಿರುವ ವೀರೇಂದ್ರನಾಥ ದೇಸಾಯಿ ತನ್ನ ಅಕ್ಕ ವಿಜಯಾಳ ಮೋಸವನ್ನು ಅರಿಯದೇ, ತನ್ನ ಹೆಂಡತಿಯನ್ನು ದೂರ ಮಾಡಿರುತ್ತಾನೆ. ಹೆಂಡತಿ ದೂರವಾಗಲು ಮಗಳು ಶ್ರಾವಣಿ ಕಾರಣ ಎಂದು ವೀರೆಂದ್ರ ದೇಸಾಯಿ ಆಕೆಯನ್ನು ಮಗಳು ಎಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿರುತ್ತಾನೆ. ಅಪ್ಪ ಮಗಳನ್ನು ದೂರ ಮಾಡಿ ತನ್ನ ಮಗನಿಗೆ ಶ್ರಾವಣಿಯನ್ನು ಕೊಟ್ಟು ಮಾಡುವೆ ಮಾಡಿಸಿ ಸಂಪೂರ್ಣ ಆಸ್ತಿಯನ್ನು ಕಬಳಿಸಲು ಹೊಂಚುಹಾಕುತ್ತಿರುವ ಅಕ್ಕ ವಿಜಯ ಬಗ್ಗೆ ವೀರೇಂದ್ರನಾಥ ದೇಸಾಯಿಗೆ ಯಾವುದೇ ಸಂದೇಹ ಬಂದಿರುವುದಿಲ್ಲ.

ಈ ದೊಡ್ಡ ಮನೆಯಲ್ಲಿ ಕೆಲಸಕ್ಕಿರುವ ಕಥೆಯ ಹೀರೋ ಸುಬ್ರಮಣ್ಯ ವೀರೇಂದ್ರನಾಥ ದೇಸಾಯಿಗೆ ಪಿಎ ಕೂಡ ಹೌದು. ತನ್ನ ಪ್ರತಿ ಯಶಸ್ಸಿನ ಹಿಂದೆ ಸುಬ್ರಮಣ್ಯ ಇರುತ್ತಾನೆ ಎನ್ನುವ ಮಟ್ಟಿಗೆ ವೀರೇಂದ್ರನಾಥ ದೇಸಾಯಿ ಸುಬ್ರಮಣ್ಯನನ್ನು ನಂಬಿರುತ್ತಾನೆ. ಸುಬ್ರಮಣ್ಯ ಕೂಡ ವೀರೇಂದ್ರನಾಥ ದೇಸಾಯಿ ಮತ್ತು ಮಗಳು ಶ್ರಾವಣಿ ಒಂದಾಗಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ಸುಬ್ಬುವಿನ ಒಳ್ಳೆತನ ನೋಡಿ ಶ್ರಾವಣಿಗೆ ಆತನ ಮೇಲೆ ಪ್ರೀತಿಯಾಗುತ್ತದೆ. ಮನೆಯವರ ವಿರೋಧದ ನಡುವೆಯೂ ಶ್ರಾವಣಿ ಸುಬ್ರಹ್ಮಣ್ಯನನ್ನು ಮದುವೆಯೂ ಆಗುತ್ತಾಳೆ. ಜೊತೆಗೆ ಸುಬ್ರಹ್ಮಣ್ಯನ ತಂಗಿ ವರಲಕ್ಷ್ಮಿಯ ಮದುವೆಯನ್ನು ಕೂಡಾ ಆಕೆ ಪ್ರೀತಿಸಿದ ವರದನ ಜೊತೆಗೆ ಶ್ರಾವಣಿ ಮಾಡಿಸುತ್ತಾಳೆ.

Shravani Subramanya serial actress Prajna Bhat is also Miss Chikkamagaluru runner up

'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕ ಸುಬ್ರಹ್ಮಣ್ಯನ ತಂಗಿ ವರಲಕ್ಷ್ಮಿಯಾಗಿ ನಟಿಸುತ್ತಿರುವ ಚೆಲುವೆಯ ಹೆಸರು ಪ್ರಜ್ಞಾ ಭಟ್. ಪೋಷಕ ಪಾತ್ರಗಳಲ್ಲಿ ಪ್ರಜ್ಞಾ ಭಟ್ ಕಾಣಿಸಿಕೊಂಡಿದ್ದರೂ ತಮ್ಮ ಅದ್ಭುತ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಬೆಡಗಿ ಈಕೆ. ಸಿನಿಮಾ, ಕಿರುತೆರೆ ಅಂತ ನಟಿಯಾಗಿ ಹೇಗೆ ಗುರುತಿಸಿಕೊಂಡಿದ್ದಾರೋ ಹಾಗೆ ಮಾಡಲಿಂಗ್ ಕ್ಷೇತ್ರದಲ್ಲಿ ಇವರು ಜನಪ್ರಿಯ.

ಸದ್ಯ ವರಲಕ್ಷ್ಮಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಪ್ರಜ್ಞಾ ಭಟ್ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕಿ ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು ಪ್ರಜ್ಞಾ ಭಟ್. ಮುಂದೆ 'ಪ್ರೇಮಲೋಕ', 'ಪಾಪಾ ಪಾಂಡು ಸೀಸನ್ 2' ಧಾರಾವಾಹಿಗಳಲ್ಲಿ ಈಕೆ ಬಣ್ಣ ಹಚ್ಚಿದ್ದರು.

'ಒಲವೇ ಮಂದಾರ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟನಾ ಕಂಪನ್ನು ಪಸರಿಸಿರುವ ಪ್ರಜ್ಞಾ ಭಟ್ ಕೇವಲ ನಟಿ ಮಾತ್ರವಲ್ಲ. ಬದಲಿಗೆ ಮಾಡೆಲ್ ಕೂಡಾ ಹೌದು. ಚಿಕ್ಕಮಗಳೂರು ಮೂಲದ ಪ್ರಜ್ಞಾ ಭಟ್ ಅವರು ಮಲೆನಾಡಿನ ಸುಂದರಿ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಚೆಲುವೆ. ಮಾಡೆಲಿಂಗ್ ಲೋಕದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಜ್ಞಾ ಭಟ್ 2015 ರಲ್ಲಿ ಮಿಸ್ ಚಿಕ್ಕಮಗಳೂರು ಶೋವಿನಲ್ಲಿ ಭಾಗವಹಿಸಿದ್ದು ಅಲ್ಲದೇ ಪ್ರಸ್ತುತ ಶೋ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.

ಇದರ ಜೊತೆಗೆ 2016ರಲ್ಲಿ ನಡೆದ 'ಮಿಸ್ ಕ್ವೀನ್ ಕರ್ನಾಟಕ' ಶೋವಿನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಈಕೆ ಆ ಶೋವಿನ ವಿನ್ನರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಚೆಲುವೆ. ಸದ್ಯ ವರಲಕ್ಷ್ಮಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಪ್ರಜ್ಞಾ ಭಟ್ ಅವರು ಎರಡು ವರ್ಷದ ಹಿಂದೆಯಷ್ಟೇ ನಾಗಶ್ರಿತ್ ಭಟ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಪ್ರಜ್ಞಾ ಭಟ್ ಬಿಡುವು ಸಿಕ್ಕಾಗಲೆಲ್ಲಾ ಪೋಸ್ಟ್ ಗಳನ್ನು ಹಾಕುವ ಮೂಲಕ ಫಾಲೋವರ್ಸ್ ಗಳನ್ನು ಆ್ಯಕ್ಟೀವ್ ಆಗಿರಿಸುತ್ತಾರೆ. ಫೋಟೋಗಳನ್ನು, ರೀಲ್ಸ್ ಗಳನ್ನು ಅಪ್ ಲೋಡ್ ಮಾಡುವ ಮೂಲಕ ನೆಟ್ಟಿಗರನ್ನು ಎಂಗೇಜ್ ಮಾಡುತ್ತಾರೆ ಪ್ರಜ್ಞಾ ಭಟ್‌

More from Filmibeat

English summary
Shravani Subramanya serial actress Prajna Bhat is also a model;
Read more about: actress tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X