Prajna Bhat: 'ಶ್ರಾವಣಿ ಸುಬ್ರಮಣ್ಯ' ವರದನನ್ನ ಲವ್ ಮಾಡ್ತಿರೋ ವರು ರಿಯಲ್ ಪತಿ ಯಾರು?
ಜೀ ಕನ್ನಡದಲ್ಲಿ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅದರಲ್ಲೂ ಶಿಕ್ಷಣ ಸಚಿವನ ಪಿಎ ಆಗಿ ಸುಬ್ಬು ತುಂಬಾ ಮುಗ್ಧನ ಪಾತ್ರದಲ್ಲಿ ಕಾಡುತ್ತಾನೆ. ತನ್ನ ಮಗಳು ಸುಬ್ಬು ಜೊತೆಗೆ ಅಷ್ಟೊಂದು ಆತ್ಮೀಯವಾಗಿದ್ದರು, ಮನೆಯಲ್ಲಿ ಯಾರೂ ಕೂಡ ಅನುಮಾನ ಪಡಲ್ಲ. ಅಷ್ಟು ನಂಬಿಕೆ ತನ್ನ ಪಿಎ ಸುಬ್ಬು ಮೇಲೆ. ಸುಬ್ಬು ಕೂಡ ತನಗೆ ಕೆಲಸ ಕೊಟ್ಟವರನ್ನ ದೇವರೆಂದೆ ಭಾವಿಸಿದ್ದಾನೆ. ವೀರೇಂದ್ರ ಅವರ ಮನೆಯನ್ನ ದೇವಸ್ಥಾನವೆಂದೇ ಭಾವಿಸಿದ್ದಾನೆ.
ಇಷ್ಟು ಮುಗ್ಧ ಹುಡುಗ ಸುಬ್ಬುನ ಮುದ್ದಿನ ತಂಗಿ ವರಲಕ್ಷ್ಮೀ. ಮಧ್ಯಮ ವರ್ಗದ ಕುಟುಂಬವಾದರೂ ಅಣ್ಣನ ಕನಸು, ಅಪ್ಪ ಅಮ್ಮನ ಕನಸ್ಸನ್ನು ಈಡೇರಿಸುವ ಹುಡುಗಿ. ಚೆನ್ನಾಗಿ ಓದುತ್ತಿದ್ದಾಳೆ. ಈಗ ಮನೆ ಮಾಲೀಕರ ಮಗ ವರದ ಮೇಲೆ ಲವ್ ಬೇರೆ ಆಗಿದೆ. ವರಲಕ್ಷ್ಮೀಯ ಒಳ್ಳೆಯ ತನಕ್ಕೆ ವರದ ಮನೆಯವರು ಮದುವೆಗೆ ಒಪ್ಪಿದ್ದಾರೆ. ಇದು ಸೀರಿಯಲ್ ಕಥೆ. ಆದರೆ ವರು ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತಾ..?

ಮದುವೆ ಖುಷಿಯಲ್ಲಿದೆ ಜೋಡಿ
'ಶ್ರಾವಣಿ ಸುಬ್ರಮಣ್ಯ'ದಲ್ಲಿ ಸದ್ಯ ವರ ಹಾಗೂ ವರದ ಲವ್ ಸ್ಟೋರಿ ಎಲ್ಲರಿಗೂ ಗೊತ್ತಾಗಿದೆ. ವರೂ ಓದಿಕೊಂಡಿದ್ದಾಳೆ ಎಂದು ಹೇಳಿ ಶ್ರೀವಲ್ಲಿಯೇ ಮನೆಯವರನ್ನೆಲ್ಲ ಮದುವೆಗೆ ಒಪ್ಪಿಸಿದ್ದಾಳೆ. ಮನೆಯವರು ಮದುವೆಗೆ ಒಪ್ಪಿದ್ದು, ಸುಬ್ಬು ಹಾಗೂ ಅವರ ತಂದೆ ಪಸ್ಮನಾಭ ಸಾಲಿಗ್ರಾಮಕ್ಕೆ ಹೋಗಿದ್ದಾರೆ. ಬಂದ ಮೇಲೆ ಮದುವೆ ಮಾತುಕತೆ ಎಂದಿದ್ದಾರೆ. ಮದುವೆ ಫಿಕ್ಸ್ ಆಗಿದ್ದೆ ಆಗಿದ್ದು ವರದ ಹಾಗೂ ವರು ರೊಮ್ಯಾಂಟಿಕ್ ಮೂಡಿನಲ್ಲಿದ್ದಾರೆ.
ವರಲಕ್ಷ್ಮೀ ರಿಯಲ್ ಪತಿ ಯಾರು?
ಇನ್ನು 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ನಟಿಸಿರುವ ವರಲಕ್ಷ್ಮೀಯ ನಿಜವಾದ ಹೆಸರು ಪ್ರಜ್ಞಾ ಭಟ್. ಸೋಷಿಯಲ್‌ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ವರುಗೆ ರಿಯಲ್ ಲೈಫ್‌ನಲ್ಲೂ ಮದುವೆಯಾಗಿದೆ. ಮದುವೆಯಾಗಿ ವರ್ಷ ತುಂಬಿದೆ ಅಷ್ಟೆ. ಅವರ ಪತಿಯ ಹೆಸರು ನಾಗಶ್ರೀತ್ ಭಟ್ ಎಂದು. ಇತ್ತೀಚೆಗಷ್ಟೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಆಪ್ತರು, ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ.
ಕನ್ನಡ ಪ್ರೇಮಿ ಈ ವರಲಕ್ಷ್ಮೀ
ಪ್ರಜ್ಞಾ ಭಟ್ ಮಲೆನಾಡಿನವರು. ಜೊತೆಗೆ ಅಪ್ಪಟ ಕನ್ನಡ ಪ್ರೇಮಿ ಎಂದರು ತಪ್ಪಾಗುವುದಿಲ್ಲ. ಅವರ ಸೋಷಿಯಲ್ ಮೀಡಿಯಾವನ್ನು ನೋಡಿದರೇನೆ ಅದು ಅರ್ಥವಾಗುತ್ತದೆ. ಅವರು ಹಾಕುವ ಒಂದೊಂದು ಪೋಸ್ಟ್ ಗಳಿಗೂ ಒಳ್ಳೊಳ್ಳೆ ಕ್ಯಾಪ್ಶನ್ ನೀಡುತ್ತಾರೆ. ಕನ್ನಡದಲ್ಲಿ ಕವನವನ್ನೇ ಬರೆಯುತ್ತಾರೆ. ಅವರ ಕನ್ನಡದ ಸಾಲುಗಳನ್ನು ನೋಡುವುದಕ್ಕೇನೆ ಖುಷಿಯಾಗುತ್ತದೆ. ಆ ಕನ್ನಡದ ಸಾಲುಗಳಿಗೆ ಅಭಿಮಾನಿಗಳಿದ್ದಾರೆ.

ವರಲಕ್ಷ್ಮೀಗಿದ್ದಾರೆ ಸಿಕ್ಕಾಪಟ್ಟೆ ಫ್ಯಾನ್ಸ್
ವರಲಕ್ಷ್ಮೀ ಅಲಿಯಾಸ್ ಪ್ರಜ್ಞಾ ಭಟ್ ಅವರಿಗೇನು ಫ್ಯಾನ್ ಫಾಲೋವರ್ಸ್ ಕಡಿಮೆ ಇಲ್ಲ. ಅವರ ಸೋಷಿಯಲ್ ಮೀಡಿಯಾದಲ್ಲಿ ಈಗಷ್ಟೇ ಫಾಲೋವರ್ಸ್ ಹೆಚ್ಚಾಗುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು, ಫಾಲೋವರ್ಸ್ ಆಗಾಗ ನಟಿಯರ ವಿಚಾರಕ್ಕೆ ಬೇಸರ ಮಾಡಿಕೊಳ್ಳುತ್ತಾರೆ. ನಾವೂ ಅತ್ಯದ್ಭುತವಾಗಿ ಕಮೆಂಟ್ ಹಾಕಿದರೂ ನಮಗೆ ಪ್ರತ್ಯುತ್ತರ ನೀಡುವುದಿಲ್ಲ ಎಂದು. ಆದರೆ ಪ್ರಜ್ಞಾ ಭಟ್ ಆ ರೀತಿ ಅಲ್ಲ. ತನ್ನೆಲ್ಲಾ ಫಾಲೋವರ್ಸ್ ಗೂ ತಾಳ್ಮೆಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಪ್ರಜ್ಞಾ ಭಟ್ ತಮ್ಮ ಫೋಟೋಗಳಿಗೆ ಬಂದಂತ ಕಮೆಂಟ್ ಗಳಿಗೆ ಉತ್ತರ ನೀಡುತ್ತಾರೆ. ಇದೇ ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡಿರುವುದು.


Click it and Unblock the Notifications











