Amogh: ಸುಬ್ಬು ಬಾಳಲ್ಲಿ ಶ್ರಾವಣಿ ಪ್ರೇಯಸಿನಾ? ಸ್ನೇಹಿತೆಯಾ?

By ಎಸ್ ಸುಮಂತ್

ಜೀ ಕನ್ನಡದಲ್ಲಿ ಬರುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ತಂದೆ-ಮಗಳ ಸಂಬಂಧ ಸರಿಯಾಗ್ಲಿ ಅಂತ ಬಯಸುವವರು ಒಂದು ಕಡೆ.. ಮತ್ತೊಂದು ಕಡೆ ಶ್ರಾವಣಿ ಪ್ರೀತಿಯನ್ನ ಒಪ್ಪಿಕೊಳ್ಳಲಿ ಎಂದು ಹಾರೈಸುವ ವರ್ಗ ಮತ್ತೊಂದು ಕಡೆ. ಸಾಲಿನ ಗ್ರಾಮಕ್ಕೆ ಹೋದ ದಿನಗಳು, ಅಜ್ಜಿಯ ಜೊತೆಗೆ ಶ್ರಾವಣಿ ಕಳೆದ ದಿನಗಳು, ತನ್ನ ತಾಯಿಯ ಬಗ್ಗೆ ತಿಳಿದ ಸತ್ಯಗಳು ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.

ಈಗ ಶ್ರಾವಣಿ ಪ್ರೀತಿಯ ಅಲೆಯಲ್ಲಿ ತೇಲುತ್ತಿದ್ದಾಳೆ. ಸುಬ್ಬುಗೆ ಪ್ರೀತಿ ಹೇಳಿಕೊಳ್ಳುವ ಎಲ್ಲಾ ತಯಾರಿಯು ನಡೆದಿದೆ. ಪಾಸ್ ಬೇರೆ ಆಗಿದ್ದಾಳೆ. ಇನ್ನು ಓದುವ ಸಹವಾಸವೇ ಮುಗೀತು ಎಂದು ಖುಷಿ ಪಡುತ್ತಿರುವ ಶ್ರಾವಣಿಗೆ ದಿನವೆಲ್ಲ ಸುಬ್ಬುದೇ ಧ್ಯಾನವಾಗಿದೆ. ಸುಬ್ಬುಗೆ ಶ್ರಾವಣಿ ಮೇಲೆ ಅಷ್ಟೊಂದು ಪ್ರೀತಿ ಇದ್ಯಾ..? ಇದೆಲ್ಲವನ್ನು ಫಿಲ್ಮಿ ಫಸ್ಟ್ ನಡೆಸಿರುವ ಸಂದರ್ಶನದಲ್ಲಿ ಅಮೋಘ್ ಹಂಚಿಕೊಂಡಿದ್ದಾರೆ.

Shravani subramanya serial fame amogh opens up about his role and journey

'ಶ್ರಾವಣಿ ಸುಬ್ರಮಣ್ಯ'ಗೆ ಆಯ್ಕೆ

ಅಮೋಘ್ ಈ ಮೊದಲು 'ಸತ್ಯ', 'ಅಂತರಪಟ', 'ಲಕ್ಷ್ಮೀ ಟಿಫನ್ ರೂಮ್' ಎಂಬ ಧಾರಾವಾಹಿಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದರು. ಮೂರರಲ್ಲೂ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದರು. ಆದರೆ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಗೆ ಲೀಡ್ ರೋಲ್ ಆಗಿ ಕರೆದಾಗ, ಆ 3 ಧಾರಾವಾಹಿಗಳ ಪ್ರೊಡಕ್ಷನ್ ಬಳಿ ಮನವಿ ಮಾಡಿದ್ದರಂತೆ. ನಂಗೆ ಲೀಡ್ ರೋಲ್ ಸಿಕ್ಕಿದೆ. ನನಗೆ ರಿಲೀವ್ ಮಾಡಿ ಎಂದು.

ಶ್ರಾವಣಿ- ಸುಬ್ಬು ಮೊದಲ ಭೇಟಿ

ಶ್ರಾವಣಿಯನ್ನ ಭೇಟಿ ಮಾಡಿದ್ದು ಮಾತ್ರ ಸೆಟ್‌ನಲ್ಲಿಯೇ ಎಂದಿರುವ ಅಮೋಘ್, ಈ ಮೊದಲು ಕಲರ್ಸ್ ಕನ್ನಡದಲ್ಲಿ ನೋಡಿದ್ದೆ. ಅವರು ಆಗ ಸೀರಿಯಲ್ ಒಂದರಲ್ಲಿ ಲೀಡ್ ರೋಲ್ ಮಾಡಿದ್ದರು. ನಾನು ಆಗಿನ್ನು ಹೊಸಬ. ಆಟಿಟ್ಯೂಡ್ ತೋರಿಸ್ತಾರೇನೋ ಎಂದುಕೊಂಡಿದ್ದೆ. ಆದರೆ ಸೆಟ್‌ಗೆ ಹೋದಾಗಲೇ ಗೊತ್ತಾಗಿದ್ದು, ಎಲ್ಲರ ಜೊತೆಗೂ ತುಂಬಾ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅಂತ' ಎಂದಿದ್ದಾರೆ.

ರಿಹರ್ಸಲ್ ಮಾಡುವ ಜೋಡಿ

'ಸೆಟ್ ಗೆ ಹೋದ ಕೂಡಲೇ ಇಬ್ಬರು ರಿಹರ್ಸಲ್ ಮಾಡ್ತೇವೆ. ಯಾವತ್ತು ಅವ್ರು ನನಗೆ ಎಲ್ಲಾ ಗೊತ್ತು ಅನ್ನಲ್ಲ. ಸೀನ್ ಶೀಟ್ ತೆಗೆದುಕೊಂಡು ಡೈಲಾಗ್ ಎಲ್ಲಾ ನೋಡಿಕೊಂಡು ಇಬ್ಬರು ರಿಹರ್ಸಲ್ ಮಾಡ್ತೀವಿ' ಎಂದು ಅಮೋಘ್ ಹೇಳಿದ್ದಾರೆ. ಈ ಮುಂಚೆ ಹಿರಿಯ ನಟ ಮೋಹನ್ ಕೂಡ ಅದೇ ಮಾತನ್ನ ಹೇಳಿದ್ದರು. ಶ್ರಾವಣಿ, ಸೀರಿಯಲ್ ಆರಂಭವಾದಾಗಿನಿಂದಲೂ ತುಂಬಾ ಡೆಡಿಕೇಷನ್‌ನಿಂದ ಮಾಡ್ತಾಳೆ. ಬೆಳಗ್ಗೆಯಿಂದಾನೂ ರಿಹರ್ಸಲ್ ಮಾಡ್ತಾನೆ ಇರ್ತಾಳೆ. ಆ ಮಗು ಡೆಡಿಕೇಷನ್ ನಂಗೆ ತುಂಬಾ ಇಷ್ಟ ಎಂದಿದ್ದರು.

ಶ್ರಾವಣಿ ಮೇಲೆ ಸುಬ್ಬುಗೆ ಲವ್?

ಇನ್ನು ಈಗಾಗಲೇ ಧಾರಾವಾಹಿ ನೋಡೋರಿಗೆ ಗೊತ್ತೆ ಇರುತ್ತೆ. ಶ್ರಾವಣಿಗೆ ಸುಬ್ಬು ಮೇಲೆ ಇರುವ ಫೀಲಿಂಗ್ಸ್ ಪ್ರೀತಿ ಎಂಬುದಿ ಅರ್ಥವಾಗಿದೆ. ಆದರೆ ಆ ಪ್ರೀತಿಯನ್ನ ಸುಬ್ಬು ಒಪ್ಪಿಕೊಳ್ಳುವುದಕ್ಕೆ ಅಸಾಧ್ಯವೇ ಸರಿ. ಆ ಬಗ್ಗೆ ಮಾತನಾಡಿರುವ ಅಮೋಘ್, ಶ್ರಾವಣಿ ಎಂದಿಗೂ ನಂಗೆ ಮೇಡಂ. ನಮ್ಮ ಯಜಮಾನರ ಮಗಳು. ಸದ್ಯಕ್ಕೆ ಅವರ ಮೇಲೆ ಪ್ರೀತಿ ಅಂತೆಲ್ಲ ಆಗಿಲ್ಲ ಎಂದಿದ್ದಾರೆ. ಮುಂದೆ ಆದರೂ ಡೌಟಿಲ್ಲ. ಯಾಕಂದ್ರೆ ವೀರೇಂದ್ರನದ್ದು ಇದೇ ಥರದ ಪ್ರೀತಿನೆ.

More from Filmibeat

English summary
Zee kannada serial shravani subramanya serial; Subbu Aka amogh interesting comments on his role;
Read more about: tv sumanth kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X