Shravani Subramanya serial:ಶ್ರಾವಣಿ ಸಂಸಾರ ಹಾಳು ಮಾಡಲು ಸಂಚು.. ವಿಜಯಾಂಬಿಕಾ ಪ್ಲ್ಯಾನ್ ಏನು?
ಶ್ರಾವಣಿ, ವರಲಕ್ಷ್ಮೀ ಮದುವೆ ಮಾಡಿ ಖುಷಿಯಲ್ಲಿ ಇದ್ದಾಳೆ. ವರಲಕ್ಷ್ಮೀ ಒಳ್ಳೆಯದಾಗಬೇಕು ಅನ್ನೋ ಆಸೆ. ತಾನು ಸುಬ್ಬು ಜೊತೆ ಮದುವೆ ಮಾಡಿಕೊಂಡೆ ಬಂದೆ. ಆದರೆ ವರಲಕ್ಷ್ಮೀಗೆ ಯಾಕೆ ಈ ಶಿಕ್ಷೆ. ಆಕೆ ಚೆನ್ನಾಗಿರಬೇಕು ಅಂದುಕೊಂಡು ವರಲಕ್ಷ್ಮೀ ಇಷ್ಟಪಟ್ಟ ಹುಡುಗ ವರದನ ಜೊತೆ ಮದುವೆ ಮಾಡಿಸುತ್ತಾಳೆ. ಈ ಮದುವೆ ಯಾರಿಗೆ ಇಷ್ಟ ಆಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ವರಲಕ್ಷ್ಮೀ ಮನೆಯವರಿಗೆ ಬಹಳ ಖುಷಿಯಾಗಿದೆ. ವರಲಕ್ಷ್ಮೀಗೆ ಇದೀಗ ಪ್ರಿಯಕರನ ಜೊತೆ ಬಾಳುವ ಅವಕಾಶ ಸಿಕ್ಕಿದೆ.
ಶ್ರಾವಣಿ ಮಾಡಿದ ಈ ಕೆಲಸಕ್ಕೆ ಸುಬ್ಬು ಬೇಸರ ಪಟ್ಟರೂ ಮನೆಯವರೆಲ್ಲ ಖುಷಿಯಾಗಿದ್ದಾರೆ. ಆದರೆ, ಶ್ರಾವಣಿಗೆ ಇರೋ ಒಂದು ಬೇಸರ. ಅದೇನಂದರೆ, ತನ್ನ ಮಾವ ಯಾರ ಜೊತೆಯೂ ಹೇಳದೆ ಆಟೋ ರಿಕ್ಷಾ ಓಡಿಸುತ್ತಿರುವುದು. ಆಟೋ ಚಾಲಕರಾಗಿ ತನ್ನ ಮಾವ ಯಾಕೆ ದುಡಿಯುತ್ತಿದ್ದಾರೆ. ಅವರಿಗೆ ಅಂತಹ ಕಷ್ಟ ಏನು ಕೊಟ್ಟಿದ್ದೇನೆ? ಎಂದು ನೊಂದುಕೊಂಡಿದ್ದಾಳೆ. ಆದರೆ ಶ್ರಾವಣಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆ ಅಡ ಇಟ್ಟಿರುವ ಉಂಗುರವನ್ನು ಬಿಡಿಸಿಕೊಡಬೇಕು ಅಂತ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಇಷ್ಟೆಲ್ಲ ಕಾರಣಕ್ಕೆ ದುಡಿಯಬೇಕು. ಇಲ್ಲವಾದರೆ ಖಂಡಿತವಾಗಿಯೂ ಶ್ರಾವಣಿಯವರಿಗೆ ಏನು ತೆಗೆದು ಕೊಡಲಾಗುವುದಿಲ್ಲ. ಹಾಗೆಯೇ ಮನೆಯನ್ನು ನಿಭಾಯಿಸಲು ಸುಲಭವಾಗುತ್ತದೆ ಎಂದು ಕೆಲಸಕ್ಕೆ ಹೋಗುತ್ತಿದ್ದಾರೆ. ಶ್ರಾವಣಿಗೆ ಮಾವ ಆಟೋ ರಿಕ್ಷಾ ಓಡಿಸುತ್ತಿರುವ ವಿಚಾರ ತಿಳಿದು ಅವರನ್ನು ಅಪ್ಪಿಕೊಂಡು ಪ್ರಶ್ನೆ ಮಾಡುತ್ತಾಳೆ. ಆದರೆ ಸುಬ್ಬು ತಂದೆ ಮಾತ್ರ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾನೆ. ಇತ್ತ ವಿಜಯಂಬಿಕಾ ಶ್ರಾವಣಿ ಮನೆಗೆ ಬರುತ್ತಾಳೆ. ಆಕೆಗೆ ಎಲ್ಲಿ ಹೋದರೂ ಬತ್ತಿ ಇಡುವ ಕೆಲಸವನ್ನು ಮಾಡುತ್ತಿರುತ್ತಾಳೆ.
ಶ್ರಾವಣಿ ಮನೆಗೆ ದಿಢೀರ್ ಭೇಟಿ ನೀಡಿದ ಅತ್ತೆ
ವಿಜಯಾಂಬಿಕಾ ಕಿತಾಪತಿ ಕೆಲಸಕ್ಕೆ ವೀಕ್ಷಕರು ಆಗಾಗ ಕಾಮೆಂಟ್ ಮಾಡುತ್ತಿರುತ್ತಾರೆ. ಆಕೆಗೆ ಮಾಡೋಕೆ ಬರೋದು ಇದೊಂದೇ ಕೆಲಸ ಅಂತ ದೂರುತ್ತಿರುತ್ತಾರೆ. ಇತ್ತ ಶ್ರಾವಣಿಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಿದೆ. ಯಾಕೆಂದರೆ ವರು ಮದುವೆ ಆಯಿತು. ಇನ್ನು ಮನೆಯವರ ಮನಸನ್ನು ಗೆಲ್ಲುವುದೊಂದೇ ಬಾಕಿ ಎನ್ನುವುದು ಆಕೆಯ ಮನಸ್ಸಿನಲ್ಲಿರುತ್ತದೆ. ಈಗಾಗಲೇ ವಿಜಯಂಬಿಕಾ ಮನೆಯವರ ಮನಸ್ಸನ್ನು ಕೆಡಿಸಲು ಪ್ರಾರಂಭಿಸಿದ್ದಾಳೆ. ಆದರೆ, ವಿಜಯಾಂಬಿಕಾ ಮಾತಿಗೆ ಶ್ರಾವಣಿ ಖಡಕ್ ಉತ್ತರವನ್ನು ನೀಡಿದ್ದಾಳೆ.
ಶ್ರಾವಣಿ ಸಂಸಾರವನ್ನು ಹಾಳು ಮಾಡಲು ಹುನ್ನಾರ
ವಿಜಯಂಬಿಕಾ ಮೆತ್ತಗೆ ಶ್ರಾವಣಿ ಮನೆಗೆ ಬಂದು, ಶ್ರಾವಣಿ ಜೊತೆ ಮಾತನಾಡಲು ತೊಡಗುತ್ತಾಳೆ. "ಅಲ್ಲಮ್ಮ ಶ್ರಾವಣಿ, ನೀನೇನೋ ಮನೆ ಬಿಟ್ಟು ನೇರವಾಗಿ ಬಂದೆ. ನೀನು ಸೊಸೆಯಾಗಿ ಬಂದಿರುವ ಮನೆ ನರಕವಾಗಿದೆ" ಎಂದು ವಿಜಯಂಬಿಕಾ ಹೇಳಿದಾಗ ಅದಕ್ಕೆ ಶ್ರಾವಣಿ ತಕ್ಕ ಉತ್ತರ ನೀಡುತ್ತಾಳೆ. "ನೋಡಿ ಅತ್ತಿಗೆ ಇದು ನನ್ನ ಮನೆ. ನನ್ನ ಮನೆಯ ಕಷ್ಟ ಸುಖ ನನಗೆ ಮಾತ್ರ ಗೊತ್ತಿದೆ. ನನಗೆ ಅದೆಲ್ಲ ಅನುಭವಿಸುವ ತಾಕತ್ತು ಇದೆ. ಕಷ್ಟಗಳನ್ನು ಅನುಭವಿಸಿ, ಸುಖ ಹಂಚಿಕೊಳ್ಳಬೇಕು ಎಂದು ಈ ಮನೆಗೆ ಬಂದೆ" ಎಂದಾಗ ವಿಜಯಂಬಿಕಾ ತೆಪ್ಪಗಾಗುತ್ತಾಳೆ.

ವಿಜಯಂಬಿಕಾ ಮಾತಿಗೆ ವರು ತಿರುಗೇಟು
ತಾನು ನೆಮ್ಮದಿಯಾಗಿ ಇರಬಾರದು ಎಂದು ತೀರ್ಮಾನ ಮಾಡಿಕೊಂಡೆ ಬಂದಿದ್ದಾರೆ. ಇವರಿಗೆ ಹೇಗಾದರೂ ಪಾಠ ಕಲಿಸಬೇಕು ಎಂದುಕೊಂಡಿರುತ್ತಾಳೆ. ವಿಜಯಾಂಬಿಕಾ ಮಾತಿಗೆ ತುಪ್ಪ ಸುರಿಯಲು ಸುಬ್ಬು ತಾಯಿ ಯೋಚನೆ ಮಾಡುತ್ತಿರುತ್ತಾರೆ. ಸುಬ್ಬು ಜೊತೆ ಶ್ರಾವಣಿ ಮದುವೆಯಾಗಿದ್ದು ಆಕೆಗೆ ಸ್ವಲ್ಪವೂ ಇಷ್ಟ ಇರುವುದಿಲ್ಲ. ಶ್ರಾವಣಿ ಜೊತೆ ಸರಿಯಾಗಿ ಮಾತುಕತೆ ಆಡುತ್ತಿಲ್ಲ. ಇದೀಗ ವಿಜಯಂಬಿಕಾ ಮಾತಿಗೆ ಅತ್ತೆ ಪರೋಕ್ಷವಾಗಿ ಆಗಿ ಬಯ್ಯುತ್ತಾಳೆ. ಇದೆಲ್ಲವನ್ನೂ ನೋಡಿ ಶ್ರಾವಣಿ ಸುಮ್ಮನಾಗುತ್ತಾಳೆ. ಈ ವೇಳೆ ವರಲಕ್ಷ್ಮೀ ಬಂದು ತನ್ನ ಅತ್ತಿಗೆಯ ಬಗ್ಗೆ ವಕಾಲತ್ತು ವಹಿಸುತ್ತಾಳೆ. ವರಲಕ್ಷ್ಮೀ ಮಾತಿಗೆ ಪೆಚ್ಚು ಮೋರೆ ಹಾಕಿದ ವಿಜಯಂಬಿಕಾ, ಶ್ರಾವಣಿ ಮನೆಯಿಂದ ಹೊರ ನಡೆಯುತ್ತಾಳೆ. ಶ್ರಾವಣಿ ವಿಜಯಂಬಿಕಾಗೆ ಟಕ್ಕರ್ ಕೊಡುತ್ತಾಳೆ. "ತನ್ನ ಜೀವನ ಹಾಳು ಮಾಡಲು ಬಂದಿದ್ದೀರ. ಆದರೆ ಅದು ಯಾವತ್ತೂ ಸಾಧ್ಯವಿಲ್ಲ" ಎಂದು ಶ್ರಾವಣಿ ಹೇಳುತ್ತಾಳೆ.


Click it and Unblock the Notifications











