Shrigowri: ಅತ್ತ ಗಂಡು ನೋಡಲು ಹೊರಟ ಗೌರಿ; ಇತ್ತ ಮದುವೆ ನಿರಾಕರಿಸಿದ ಮಂಗಳಮ್ಮ ಆಪತ್ತಿನಲ್ಲಿ!
ಶ್ರೀಗೌರಿ ಧಾರಾವಾಹಿಯಲ್ಲಿ ಅಜ್ಜಿಗೆ ಮೊಮ್ಮಗಳನ್ನು ಕಂಡರೆ ಆಗುವುದಿಲ್ಲ. ಅವಳನ್ನು ಅನಿಷ್ಠ ಎಂದೇ ಭಾವಿಸಿದ್ದಾಳೆ. ಹೇಗಾದರೂ ಮಾಡಿ ಅವಳನ್ನು ಮನೆಯಿಂದ ಹೊರಗೆ ಕಳುಹಿಸಿಬಿಡಬೇಕು ಎಂದೇ ಯೋಚಿಸುತ್ತಿದ್ದಾಳೆ. ಗೌರಿಗೆ ರಾತ್ರಿ ನಿದ್ರೆಯಲ್ಲಿ ನಡೆಯುವ ಕಾಯಿಲೆಯಿದೆ. ಅದು ಬರೀ ಕಾಯಿಲೆಯಲ್ಲ, ಅದೊಂದು ಶಾಪವೇ ಎಂಬಂತೆ ನೋಡುತ್ತಾಳೆ. ಮನೆಯಲ್ಲಿ ಗೌರಿಗೆ ಅಜ್ಜಿಯ ಕಾಟವೇ ದೊಡ್ಡದಾಗಿದೆ.
ಗೌರಿಯ ಅಮ್ಮನನ್ನು ಯಾವಾಗಲೂ ನಿಂದಿಸುತ್ತಾ ಇರುತ್ತಾಳೆ ಅಜ್ಜಿ. ಗೌರಿಗೆ ಮನೆಯವರೆಲ್ಲರ ಜೊತೆ ಕೂತು ಊಟ ಮಾಡುವ ಆಸೆ, ತಾನೇ ಅಡುಗೆ ಮಾಡಿ ಬಡಿಸುವ ಆಸೆ. ಆದರೆ ಅದಕ್ಕೆ ಅಜ್ಜಿ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಎಲ್ಲವನ್ನು ಸಹಿಸಿಕೊಳ್ಳುವ ಗೌರಿಗೆ ಅಮ್ಮನ ವಿಚಾರಕ್ಕೆ ಬಂದರೆ ಗೌರಿ ಯಾವತ್ತಿಗೂ ಸುಮ್ಮನೆ ಇರುವವಳೇ ಅಲ್ಲ. ತಾಯಿಯ ಸೀರೆ ವಿಚಾರಕ್ಕೆ ಅಜ್ಜಿಗೆ ಎದುರಾಡಿದ್ದಾಳೆ.

ಗೌರಿ ಮದುವೆಗೆ ಮನೆಯಲ್ಲಿ ಸಿದ್ಧತೆ
ಗೌರಿಯನ್ನು ಮದುವೆ ಮಾಡಿ ಮನೆಯಿಂದ ಕಳುಹಿಸಿ ಬಿಡಬೇಕೆಂದು ಅಜ್ಜಿಯ ಹಠ. ಹೀಗಾಗಿಯೇ ಅವಳೇ ಗಂಡು ಹುಡುಕಿ, ಮದುವೆಯ ಮೊದಲ ಶಾಸ್ತ್ರಕ್ಕೂ ಎಲ್ಲಾ ತಯಾರಿ ನಡೆಸಿದ್ದಾರೆ. ಇಂದು ಗಂಡು ನೋಡುವ ಶಾಸ್ತ್ರಕ್ಕೂ ಹೊರಟಿದ್ದಾರೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮದುವೆ ಮಾಡಿ ಕಳುಹಿಸಬಿಡಬೇಕು ಎಂದೇ ಅಜ್ಜಿಯ ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದಾರೆ.
ಅಜ್ಜಿಯ ಮಾತಿಗೂ ಬಗ್ಗದ ಗೌರಿ
ಗೌರಿಗೆ ಅಮ್ಮ ಎಂದರೆ ಹೆಚ್ಚು ಪ್ರೀತಿ. ಅಮ್ಮ ಇಲ್ಲ ಎನ್ನುವ ನೋವು ಇದ್ದರೂ ಅವಳ ವಸ್ತುಗಳಲ್ಲಿಯೇ ತೃಪ್ತಿ ಪಡುತ್ತಾಳೆ. ಪ್ರತಿದಿನ ತಾಯಿಯ ಸೀರೆಯಲ್ಲಿ ದುಪ್ಪಟ್ಟ ಮಾಡಿಕೊಂಡು ತಾಯಿಯ ನೆನಪಲ್ಲಿ ಕಾಲ ಕಳೆಯುವ ಗೌರಿ, ಈಗ ಗಂಡು ನೋಡುವ ಶಾಸ್ತ್ರಕ್ಕೂ ಅಮ್ಮನ ಸೀರೆಯನ್ನೇ ಹಾಕಿದ್ದಾಳೆ. ಅದಕ್ಕೆ ಅಜ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಗೌರಿ ನೋಡುವ ತನಕ ನೋಡಿದಳು, ಆದರೆ ಅದನ್ನು ವಿರೋಧಿಸಿದ ಗೌರಿ, ನೀವೂ ಏನೇ ಹೇಳಿದರೂ ಕೇಳುತ್ತೀನಿ. ಆದರೆ ಅಮ್ಮನ ವಿಚಾರದಲ್ಲಿ ನಾನು ಕೇಳುವುದಿಲ್ಲ ಎಂದೇ ಹೇಳಿ ಅದೇ ಸೀರೆಯಲ್ಲಿ ಗಂಡಿನ ಮನೆಗೆ ಹೊರಟಿದ್ದಾಳೆ.
ಮಂಗಳಮ್ಮನ ಸೊಸೆ ಎಲ್ಲಿದ್ದಾಳೋ
ಇನ್ನು ಆ ಕಡೆ ಮಂಗಳಮ್ಮನಿಗೆ ಮಗನ ಮದುವೆಯದ್ದೇ ಚಿಂತೆಯಾಗಿದೆ. ಹೇಗಾದರೂ ಮಾಡಿ ಮಗನಿಗೊಂದು ಹುಡುಗಿ ಕಟ್ಟಿ ಬಿಟ್ಟರೆ ಮುಗೀತು, ಊರು ಸುತ್ತುವ ಅಪ್ಪುನನ್ನು ಕಟ್ಟಿ ಹಾಕಿ ಬಿಡಬಹುದು ಎಂದೇ ಮಂಗಳಮ್ಮನ ಪ್ಲ್ಯಾನ್ ಆಗಿದೆ. ಹೀಗಾಗಿಯೇ ಅಪ್ಪುಗೂ ಇವತ್ತೇ ಹುಡುಗಿ ನೋಡುವ ಸಿದ್ಧತೆ ನಡೆಸಿದ್ದಾಳೆ. ಎಲ್ಲಾ ತಯಾರಿ ನಡೆಸಿ, ಸಿಕ್ಕ ಬಟ್ಟೆಯನ್ನ ಹುಡುಕಿ, ಅಪ್ಪುನನ್ನು ಮಗುವಿನಂತೆ ರೆಡಿ ಮಾಡಿಕೊಂಡು ಹೊರಟಿದ್ದಾಳೆ.

ತಂಗಿಗೋಸ್ಕರ ಹಠ ಮಾಡಿದ ಅಪ್ಪು
ಇನ್ನೇನು ಹೆಣ್ಣಿನ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ತಂಗಿಯ ವಿಚಾರ ಬಂದಿದೆ ಅಲ್ಲಿಗೆ ಹೆಣ್ಣು ನೋಡುವ ಪ್ಲ್ಯಾನ್ ಮುಗಿದೆ ಹೋಯಿತು. ತಂಗಿ ಮದುವೆ ಆಗುವ ತನಕ ನಾನು ಮದುವೆಯಾಗುವುದಿಲ್ಲ ಎಂದೇ ಹಠ ಮಾಡುತ್ತಿದ್ದಾನೆ. ಆದರೆ ಮಂಗಳಮ್ಮನಿಗೆ ಮಗನಿಗೆ ಮೊದಲು ಮದುವೆ ಮಾಡಬೇಕು ಎಂಬ ಆಸೆ. ಈಗ ಅಪ್ಪು ಮದುವೆಗೆ ವಿರೋಧಿಸಿದ್ದಕ್ಕೆ ಮಂಗಳಮ್ಮ ಸಾಯುವ ನಾಟಕ ಆಡುತ್ತಿದ್ದಾಳೆ. ನಾನು ಎಲ್ಲಾದರೂ ಹೋಗಿ ಬಿಡುತ್ತೀನಿ ನನ್ನ ಹಿಂದೆ ಬರಬೇಡ ಎಂದಿದ್ದಾಳೆ. ಅಪ್ಪುಗೆ ತಂಗಿ ಎಂದರೆ ಎಷ್ಟು ಇಷ್ಟವೋ, ಅಮ್ಮ ಎಂದರೆ ಅದಕ್ಕರ ಡಬಲ್. ಅಮ್ಮ ಎಂದರೆ ಅಪ್ಪುಗೆ ಪ್ರಾಣ. ಈಗ ಮಗನಿಗೆ ಹದರಿಸಲು ಹೋಗಿ, ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾಳೆ.


Click it and Unblock the Notifications











