ಸಾಫ್ಟ್ ವೇರ್ ಕೆಲಸ ಬಿಟ್ಟು ಶ್ರೀ ವಿಷ್ಣು ಪಾತ್ರ ಮಾಡಿದ ನಟ
ಕನ್ನಡ ಕಿರುತೆರೆಯಲ್ಲಿ ಈಗ ಮತ್ತೊಂದು ಅದ್ಧೂರಿ ಧಾರಾವಾಹಿ ಬರುತ್ತಿದೆ. ಈಗಾಗಲೇ 'ಶನಿ', 'ಮಹಾ ಕಾಳಿ', 'ಉಘೇ ಉಘೇ ಮಾದೇಶ್ವರ' ಹಾಗೂ 'ಜೈ ಹನುಮಾನ್' ಧಾರಾವಾಹಿಗಳು ದೊಡ್ಡ ಯಶಸ್ಸು ಕಂಡಿದ್ದು, ಅದರ ಹಿಂದೆ ಶ್ರೀ ವಿಷ್ಣುವಿನ ಬಗ್ಗೆ ಧಾರಾವಾಹಿ ಮೂಡಿ ಬರುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚಿಗಷ್ಟೆ 'ಉಘೇ ಉಘೇ ಮಾದೇಶ್ವರ' ಧಾರಾವಾಹಿ ಶುರುವಾಗಿದೆ. ಅದರ ಬಳಿಕ 'ಶ್ರೀ ವಿಷ್ಣು ದಶಾವತಾರ' ಎಂಬ ಹೊಸ ಧಾರಾವಾಹಿ ಪ್ರಾರಂಭ ಆಗುತ್ತಿದೆ. ನಿನ್ನೆ ಈ ಧಾರಾವಾಹಿಯ ಕುರಿತು ಸುದ್ದಿಗೋಷ್ಟಿ ನಡೆದಿದ್ದು, ಅನೇಕ ಕುತೂಹಲಕಾರಿ ವಿಷಯಗಳನ್ನು ಸೀರಿಯಲ್ ಟೀಂ ಹಂಚಿಕೊಂಡಿದೆ.
ಮತ್ತೊಂದು ಅಚ್ಚರಿ ಎಂದರೆ, ನಟನೆಯ ಆಸೆಯಿಂದ ಸಾಫ್ಟ್ ವೇರ್ ಕೆಲಸ ಬಿಟ್ಟಿದ್ದ ಯುವಕ ಈಗ ಶ್ರೀ ವಿಷ್ಣು ಪಾತ್ರದಲ್ಲಿ ನಟಿಸಿದ್ದಾರೆ. ಮುಂದೆ ಓದಿ..

ಅಕ್ಟೋಬರ್ 15 ರಿಂದ ಪ್ರಾರಂಭ
ಜೀ ಕನ್ನಡ ವಾಹಿನಿಯಲ್ಲಿ ಈಗ 'ಶ್ರೀ ವಿಷ್ಣು ದಶಾವತಾರ' ಎಂಬ ಹೊಸ ಸೀರಿಯಲ್ ಪ್ರಾರಂಭ ಆಗುತ್ತಿದೆ. ಅಕ್ಟೋಬರ್ 15 ರಿಂದ ರಾತ್ರಿ 8 ಗಂಟೆಗೆ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ವಿಷಯವನ್ನು ಜೀ ಕನ್ನಡ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹಂಚಿಕೊಂಡಿದ್ದಾರೆ.

ಸಾಫ್ಟ್ ವೇರ್ ನ ನಟನೆಯ ಕನಸು
ಧಾರಾವಾಹಿಯಲ್ಲಿ ಶ್ರೀ ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್ ನಟಿಸಿದ್ದಾರೆ. ವಿಶೇಷ ಅಂದರೆ, ಈ ಹಿಂದೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಇವರು ಕೆಲಸ ಬಿಟ್ಟು ನಟನೆಯ ಕನಸಿನ ಹಿಂದೆ ಹೊರಟಿದ್ದಾರೆ. ಲಕ್ಷ್ಮಿಯ ಪಾತ್ರದಲ್ಲಿ ನಿಶಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು.

ಧಾರಾವಾಹಿ ತಂಡ
ಆರ್ಯ ಸೂರ್ಯ, ಹರ್ಷ ಅರ್ಜುನ್, ವಂದನ, ಕಾವ್ಯ ಮಹಾದೇವ್ ಧಾರಾವಾಹಿಯ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ನಂದೀಶ್ ಸುರೇಶ್ ಪಿಂಗಾಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಧೀರಜ್ ಕುಮಾರ್ ಈ ಧಾರಾವಾಹಿಯನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ
ಶ್ರೀ ವಿಷ್ಣುವಿನ ದಶಾವತಾರದ ಕಥೆ ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆಯಂತೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪೌರಾಣಿಕ ಕಥಾವಸ್ತುವಿನ ಧಾರಾವಾಹಿ ಏಕಕಾಲಕ್ಕೆ ಎರಡು ಭಾಷೆಗಳಲ್ಲಿ ಬರುತ್ತಿದೆ.

50 ಸಂಚಿಕೆಗಳ ಚಿತ್ರೀಕರಣ
ಈಗಾಗಲೇ ಈ ಧಾರಾವಾಹಿಯ ಚಿತ್ರೀಕರಣ ಆಗಿದೆಯಂತೆ. 400 ಸಂಚಿಕೆಗಳನ್ನು ಮಾಡುವ ತಯಾರಿಯಲ್ಲಿ ತಂಡ ಇದೆ. ಧಾರಾವಾಹಿಯ ಚಿತ್ರೀಕರಣ ಮುಂಬೈನ ಸ್ಟುಡಿಯೋದಲ್ಲಿ ನಡೆಯುತ್ತಿದೆಯಂತೆ.


Click it and Unblock the Notifications











