ಈ ಬಾರಿಯ ಮಜಾ ಟಾಕೀಸ್‌ನಲ್ಲಿ ಶ್ರೀಭವ್ಯಾ.. ಈಕೆ ಯಾರು ಗೊತ್ತಾ?

By ಅನಿತಾ ಬನಾರಿ

ಕನ್ನಡ ವೆಬ್ ಸೀರೀಸ್ ಪ್ರಿಯರಿಗೆಲ್ಲಾ 'ಅಮೃತಾಂಜನ್' ವೆಬ್ ಸೀರೀಸ್ ತಿಳಿದೇ ಇರುತ್ತದೆ. ಹಾಗೆಯೇ ನಟಿ ಶ್ರೀಭವ್ಯ ಅವರ ಪರಿಚಯವೂ ಇರುತ್ತದೆ. ಸುಮಾರು 20 ಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ಇಲ್ಲಿಯ ತನಕ ಕಾಣಿಸಿಕೊಂಡಿರುವ ಶ್ರೀ ಭವ್ಯ ಇದೀಗ ಕಲರ್ಸ್ ಕನ್ನಡದಲ್ಲಿ ಮೂಡಿಬರಲಿರುವ ಹೊಸ ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಲು ಸಜ್ಜಾಗುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೇ ಆರಂಭವಾಗಿರುವ ಮಜಾ ಟಾಕೀಸ್‌ನಲ್ಲಿ ನಟಿ ಭವ್ಯ ಕಾಣಿಸಿಕೊಳ್ಳಲಿದ್ದಾರೆ.

ಕಿರುತೆರೆ, ವೆಬ್‌ ಸೀರೀಸ್‌, ಸಿನಿಮಾ ಹೀಗೇ ಎಲ್ಲದರಲ್ಲೂ ನಟನೆಯ ಅನುಭವವಿರುವ ನಟಿ ಇದೀಗ ಹೊಸ ಪ್ರಯೋಗವೊಂದಕ್ಕೆ ತಯಾರಾಗುತ್ತಿದ್ದಾರೆ. ಅಂದ ಹಾಗೆ ಇವರೇನು ನಟಿಯಾಗಬೇಕೆನ್ನುವ ಮಹತ್ತರ ಆಸೆಯನ್ನು ಇಟ್ಟುಕೊಂಡು ಅಭಿನಯಕ್ಕೆ ಇಳಿದವರಲ್ಲ. ಅನಿರೀಕ್ಷಿತವಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಇವರು ಇಂದು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

Shreebhavya will participate in Maja Talkies this time do you know who is she

ಧಾರಾವಾಹಿಯಲ್ಲಿ ನಟಿಸಬೇಕು ಎಂಬ ಕನಸಿತ್ತು. 'ಅಮೃತಾಂಜನ್' ಎಂಬ ವೆಬ್‌ ಸೀರೀಸ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟೆ. ಮೊದಲನೆಯ ಪ್ರಾಜೆಕ್ಟ್ ತುಂಬ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಅಲ್ಲಿಂದ ಶುರುವಾದ ನಟನಾ ಪಯಣ ಬ್ರೇಕ್‌ ಇಲ್ಲದೆ ಸಾಗುತ್ತಿದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.

ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಶ್ರೀಭವ್ಯ ಅವರಿಗೆ ಅನುಭವ ಮತ್ತು ಪ್ರಶಂಸೆ ಎರಡು ಹೆಚ್ಚಿರುವುದು ನೆಗೆಟಿವ್ ರೋಲ್ ಗಳಲ್ಲಿ. ಇದೆಲ್ಲದರ ನಡುವೆ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂರ್ಯವಂಶ ಧಾರವಾಹಿಯಲ್ಲಿ ಸಿಕ್ಕ ಅಪರೂಪದ ಒಂದು ಅವಕಾಶವೆಂದರೆ ಅದರಲ್ಲಿನ ಮುಖ್ಯಪಾತ್ರವನ್ನು ನಿಭಾಯಿಸುವುದು. ಈ ಪಾತ್ರದಿಂದ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿರುವ ನಟಿ ಮನೆ ಮಗಳಾಗಿ ಅಭಿನಯಿಸುವ ಪಾತ್ರಗಳತ್ತ ಒಲವು ತೋರಿಸುತ್ತಾರೆ.

Shreebhavya will participate in Maja Talkies this time do you know who is she

ಒಟ್ಟಿನಲ್ಲಿ ಈ ಬಾರಿಯ ಸೃಜಾ ವೀಕೆಂಡ್ ನಲ್ಲಿ ಶ್ರೀಭವ್ಯ ಕಾಣಿಸುವುದಂತೂ ಪಕ್ಕಾ ಆಗಿದೆ. ಸದಾ ನೆಗೆಟಿವ್‌ಗಳನ್ನು ಪಾತ್ರಗಳನ್ನು ಮಾಡುತ್ತಾ ಬಂದಿರುವ ನಟಿಗೆ ಎಲ್ಲರನ್ನು ನಗಿಸುವ ಸವಾಲಂತೂ ಇದ್ದೇ ಇದೆ. ಈ ಬಗ್ಗೆ ಮಾತನಾಡುವ ಅವರು ಸೀರೀಸ್‌ ಹಾಗೂ ಸಿನಿಮಾದಲ್ಲಿ ನಾನು ಹೆಚ್ಚಾಗಿ ನೆಗೆಟಿವ್‌ ರೋಲ್‌ನಲ್ಲೇ ಕಾಣಿಸಿಕೊಂಡಿದ್ದೇನೆ. ಅಂತಹ ಪಾತ್ರಗಳಲ್ಲಿ ನಾನು ಬಹಳ ಕಂಫರ್ಟಬಲ್ ಆಗಿ ನಟಿಸಬಲ್ಲೆ. ಅದಕ್ಕೆಲ್ಲಾ ಹೋಲಿಸುವಾಗ ರಿಯಾಲಿಟಿ ಶೋ ಬಹಳ ವಿಭಿನ್ನ ಹಾಗೂ ಚಾಲೆಂಜಿಂಗ್‌ ಆಗಿ ಕಾಣುತ್ತದೆ ಎಂದಿದ್ದಾರೆ.

ಇದರ ಜೊತೆಗೆ ನಾವು ಅಭಿನಯಿಸುವ ರೀತಿ, ನಿರರ್ಗಳವಾಗಿ ಕಾಮಿಡಿ ಮಾಡುವುದು, ಸ್ಕ್ರಿಪ್ಟ್‌ನಲ್ಲಿ ಇಲ್ಲದೇ ಇರುವುದನ್ನು ಹೇಳುವುದು, ಇವೆಲ್ಲವೂ ನನಗೆ ಹೊಸ ಸವಾಲುಗಳು. ರಿಯಾಲಿಟಿ ಶೋಗಳಲ್ಲಿ ಸ್ಕ್ರಿಪ್ಟ್‌ ಇದ್ದರೂ ಕೆಲವೊಮ್ಮೆ ಹಠಾತ್ತಾಗಿ ಮಾತನಾಡಬೇಕು. ಅನುಭವಿ ಕಲಾವಿದರ ಜತೆಗೆ ನಟಿಸುವಾಗ ಅವರ ಎನರ್ಜಿ ಲೆವೆಲ್‌ ಮ್ಯಾಚ್‌ ಮಾಡಬೇಕು ಎನ್ನುತ್ತಾರೆ. ಇವರ ಮಾತು, ಪ್ರತಿಭೆ ಮತ್ತು ಎನರ್ಜಿ ಎಲ್ಲವನ್ನೂ ಗಮನಿಸಿದರೆ ಮಜಾ ಟಾಕೀಸ್‌ಗೆ ಇನ್ನೊಂದು ಪ್ರತಿಭಾವಂತ ಕಲಾವಿದೆ ಸಿಕ್ಕಿರುವುದಂತೂ ನಿಜ.

ಕಾಮಿಡಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಬೇಗ ಸೆಳೆಯುತ್ತವೆ ಎನ್ನುವ ಅಭಿಪ್ರಾಯ ನಟಿಯದು. ಇಲ್ಲಿಯವರೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಶ್ರೀಭವ್ಯರಿಗೆ ಇನ್ನಷ್ಟು ವೆರೈಟಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸಿದೆ. ಧಾರಾವಾಹಿಗಳಿಗೆ ಫ್ಯಾಮಿಲಿ ಪ್ರೇಕ್ಷಕರು ಕನೆಕ್ಟ್ ಆದರೆ, ವೆಬ್ ಸೀರೀಸ್‌ನಿಂದ ಯುವ ಜನತೆ ಆಕರ್ಷಿತರಾಗುತ್ತಾರೆ. ಸಿನಿಮಾದಿಂದ ಬೇರೆ ಬೇರೆ ಆಡಿಯನ್ಸ್‌ ಕನೆಕ್ಟ್ ಆಗುತ್ತಾರೆ. ಈ ಮೂರು ಫೀಲ್ಡ್‌ನಲ್ಲಿ ನಟಿಸುವುದರಿಂದ ಅಷ್ಟೂ ರೀತಿಯ ಆಡಿಯನ್ಸ್‌ ನನ್ನ ನಟನೆಯನ್ನು ನೋಡುವಂತಾಗುತ್ತದೆ ಎಂಬುದು ನಟಿಯ ಮಹದಾಸೆ.

ಸದ್ಯ ಮಜಾ ಟಾಕೀಸ್ ಅಲ್ಲದೆ ನಟಿ ಅಜಯ್ ರಾವ್‌ ಅಭಿನಯದ ಫ್ಯಾಮಿಲಿ ಮ್ಯಾನ್‌ ಹಾಗೂ ಓಂ ಪ್ರಕಾಶ್‌ ರಾವ್ ನಿರ್ದೇಶನದ ಫೀನಿಕ್ಸ್‌ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಸದ್ಯ ತಯಾರಿಯ ಹಂತದಲ್ಲಿದೆ.

More from Filmibeat

English summary
Shreebhavya will participate in Maja Talkies this time do you know who is she?
Read more about: actress reality show tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X