Shreerastu Shubhamastu ; ಉಂಡ ಮನೆಗೆ ಎರಡು ಬಗೆದ ಜುಗ್ಗ, ಮನೆಯಿಂದ ಹೊರ ದಬ್ಬಿದ ದತ್ತ ತಾತ..!

By ಪೂರ್ವ

ದತ್ತನ ಮುಂದೆ ಜುಗ್ಗ ಬಾಲ ಬಿಚ್ಚುತ್ತಲೇ ಇರುತ್ತಾನೆ. ಆತನಿಗೆ ದತ್ತ ಎಂದರೆ ಅಸಡ್ಡೆ. ದತ್ತ ತಾನು ಕಷ್ಟ ಪಟ್ಟು ಮಾಡಿದ ಮನೆಯನ್ನು ಬಿಟ್ಟು ಬೇರೆ ಎಲ್ಲೋ ಬಿಡಾರವನ್ನು ಹಾಕಿ ಜೀವನ ನಡೆಸುತ್ತಿದ್ದ. ತನ್ನ ಮೊಮ್ಮಗಳು ಸಂಧ್ಯಾ ಮಾಡಿದ ತಪ್ಪಿಗೆ ದತ್ತ ಬಹಳ ದೊಡ್ಡ ಬೆಲೆಯನ್ನು ತೆರಬೇಕಾಯಿತು. ಆದರೆ ಮೊಮ್ಮಗಳು ಬದಲಾಗಿದ್ದಾಳೆ. ಆಕೆ ಬೇಕೂಂತ ಹೀಗೆಲ್ಲ ಮಾಡಿರಲು ಸಾಧ್ಯವಿಲ್ಲ ಎಂದು ದತ್ತ ಅಂದುಕೊಳ್ಳುತ್ತಾನೆ. ತಾತನ ಮನೆಯನ್ನು ರಾಮ್ ಬ್ಯಾಂಕ್ ನವರಿಗೆ ಹಣ ಕೊಟ್ಟು ಪಡೆದುಕೊಂಡಿರುತ್ತಾನೆ.

ಮನೆಯನ್ನು ದತ್ತನಿಗೆ ಹ್ಯಾಂಡ್ ಓವರ್ ಮಾಡುತ್ತಾನೆ. ದತ್ತ ಈ ಮನೆ ನಿಮ್ಮ ಜೊತೆ ಇದ್ದರೇನೆ ಚೆಂದ. ನೀವು ಇನ್ನೂ ಮೇಲೆ ನಿಮ್ಮ ಮನೆಯಲ್ಲಿಯೇ ಖುಷಿಯಿಂದ ಇರಬಹುದು ಎಂದು ಹೇಳುತ್ತಾರೆ. ಇದೆಲ್ಲವನ್ನೂ ಕೇಳಿದ ದತ್ತನಿಗೆ ಬಹಳ ಖುಷಿಯಾಗುತ್ತದೆ. ಮೊಮ್ಮಗನ ಹಾಗೆ ನೀನು ಇವತ್ತು ನನಗೆ ಸಹಾಯ ಮಾಡಿದೆ ಖಂಡಿತವಾಗಿಯೂ ನೀನು ಇದನ್ನು ಮರೆಯಲ್ಲ ಎಂದು ದತ್ತ ರಾಮ್ ಗೆ ಧನ್ಯವಾದ ತಿಳಿಸುತ್ತಾರೆ. ಇದೀಗ ದತ್ತನ ಮನೆಯಲ್ಲಿ ಇದ್ದುಕೊಂಡು ಜುಗ್ಗ ಆತನಿಗೆ ಎರಡು ಬಗೆಯುವ ಕೆಲಸವನ್ನು ಮಾಡುತ್ತಿದ್ದಾನೆ.

shreerastu-shubhamastu-serial-8th-march-written-update

ಮಿತಿ ಮೀರಿದ ಜುಗ್ಗನ ವರ್ತನೆ ಕಂಡು ದತ್ತಗೆ ಕೆಂಡದಂಥ ಕೋಪ ಬರುತ್ತದೆ. ದತ್ತ ಯಾವತ್ತೂ ಕೂಡ ಯಾರನ್ನು ನೋಯಿಸಿದವರಲ್ಲ. ಆತನ ಬಳಿ ಯಾರೆ ಏನೇ ಸಹಾಯ ಕೇಳಿದರೂ ದತ್ತ ಮಾಡುತ್ತಾರೆ. ಜುಗ್ಗ ಆಶ್ರಯ ಇಲ್ಲದೆ ದತ್ತನ ಮನೆಯಲ್ಲಿ ಠಿಕಾಣಿ ಹೂಡಿದ್ದಾನೆ. ಹಾಗೆಯೇ ದತ್ತನಿಗೆ ಎದುರಾಗಿ ನಿಂತಿದ್ದಾನೆ. ಶಾರ್ವರಿ ಹೇಳಿದ ಕೆಟ್ಟ ಕೆಲಸಗಳನ್ನು ಮಾಡುತ್ತಾ ಆಕೆಯ ಜೊತೆಗೆ ಕೈ ಜೋಡಿಸುತ್ತಿದ್ದಾನೆ. ಈ ವಿಚಾರ ದತ್ತನಿಗೆ ತಿಳಿದಿರಲಿಲ್ಲ. ಆದರೆ ಜುಗ್ಗ ಮಾತನಾಡುತ್ತಿರುವ ಧಾಟಿಯಲ್ಲಿ ದತ್ತನಿಗೇ ಎಲ್ಲಾ ಮನವರಿಕೆ ಆಯಿತು.

ಜುಗ್ಗನ ಮಾತು ಕೇಳಿ ಕೋಪಗೊಂಡ ದತ್ತ

ಜುಗ್ಗ ಮಾತು ಶುರು ಮಾಡುತ್ತಾನೆ ಅವನು ಯಾರೋ ಬಂದ ಇಷ್ಟು ಸುಂದರವಾದ ಮನೆಯನ್ನು ನಿಮ್ಮ ಕೈಗೆ ಕೊಟ್ಟ. ವಾಪಸ್ ಹೋದ ಎಂದಾಗ ದತ್ತ ಗೆ ಬಹಳ ಸಿಟ್ಟು ಬರುತ್ತದೆ. ದತ್ತ ಜುಗ್ಗನ ಕೆನ್ನೆಗೆ ಜೋರಾಗಿಯೇ ಹೊಡೆಯುತ್ತಾನೆ. ದತ್ತನ ಕೈಯಿಂದ ಹೊಡೆತ ತಿಂದ ಜುಗ್ಗ ಮಾತ್ರ ಅಮ್ಮಾ ಎಂದು ಜೋರಾಗಿಯೇ ಕಿರುಚಿಕೊಳ್ಳುತ್ತಾನೆ. ಕೂಡಲೇ ಮನೆ ಮಂದಿಯೆಲ್ಲ ಏನಾಯಿತು ಎಂದು ಓಡಿಕೊಂಡು ಬರುತ್ತಾರೆ. ಸಂಧ್ಯಾ ತನ್ನ ತಾತನ ಬಳಿಗೆ ಬಂದು ಯಾಕೆ ಹೀಗೆಲ್ಲ ಮಾಡಿದಿರಿ ತಾತ.ಇದರಿಂದ ನಿಮಗೆ ಸಿಕ್ಕಿದ್ದು ಎನು ಎಂದು ಜೋರಾಗಿಯೇ ಕೇಳುತ್ತಾಳೆ. ಆಗ ದತ್ತ ಜಗ್ಗನ ಬಂಡವಾಳವನ್ನು ಬಯಲು ಮಾಡುತ್ತಾರೆ. ಜುಗ್ಗನ ಶರ್ಟ್ ಕಿಸೆಯಲ್ಲಿ ಹಣದ ಕಂತು ಇತ್ತು. ಇದನ್ನು ಎಲ್ಲರಿಗೂ ತೋರಿಸಿ ಈತನ ಬಳಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಜೋರಾಗಿಯೇ ಕೇಳುತ್ತಾರೆ.

ಜುಗ್ಗನ ಬಳಿ ಹಣ ನೋಡಿ ಕುಪಿತಗೊಂಡ ದತ್ತ ಮಾಡಿದ್ದಾದರು ಏನು?

ಮನೆಯವರಿಗೆ ಇದೆಲ್ಲವನ್ನೂ ನೋಡಿ ಅನುಮಾನ ಶುರು ಆಗುತ್ತದೆ. ದತ್ತ ಜೋರಾಗಿಯೇ ಮಾತನಾಡಲು ಶುರು ಮಾಡುತ್ತಾನೆ. ಉಂಡು ಮನೆಗೆ ಕನ್ನ ಹಾಕುವ ಕೆಲಸ ಮಾಡುತ್ತಿಯಾ. ನಿನ್ನ ಕೊಂಡು ಹಾಕಿ ಬಿಡುತ್ತೇನೆ ಎಂದು ಜುಗ್ಗ ಗೆ ವಾರ್ನಿಂಗ್ ಮಾಡುತ್ತಾರೆ. ಹಾಗೆಯೇ ಸಂಧ್ಯಾ ತನ್ನ ಮಾವನ ಬಳಿ ಜೋರಾಗಿಯೇ ಮಾವ ನಿಮ್ಮ ಬಳಿ ಇಷ್ಟೊಂದು ಹಣ ಹೇಗೆ ಬರಲು ಸಾಧ್ಯ ಎಂದು ಕೇಳಿದಾಗ ಜುಗ್ಗ ಮಾತೆ ಬಾರದ ರೀತಿ ಮಾನಿಯಾಗಿ ಕುಳಿತಿರುತ್ತಾನೆ.ದತ್ತ ಮಾತ್ರ ಇಂತಹ ಮನೆ ಮುರುಕ ನಮ್ಮೊಂದಿಗೆ ಇರುವುದು ಬೇಡ ಎಂದು ಕತ್ತು ಹಿಡಿದು ಜುಗ್ಗ ನ ಮನೆಯಿಂದ ಹೊರಗೆ ಹಾಕುತ್ತಾರೆ . ಜುಗ್ಗ ತಪ್ಪು ಕೆಲಸ ಮಾಡಿ ಸಿಕ್ಕಿ ಬಿದ್ದು ಮನೆಯ ಹೊರಗೆ ಇರುವ ಹಾಗೆ ಆಗುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X