Shrigowri: ಗೌರಿಯ ಮಾತುಗಳನ್ನು ಕೇಳಿ ಅಜ್ಜಿಯ ಮನಸ್ಸು ಇನ್ನಾದರೂ ಬದಲಾಗುತ್ತಾ..?
ಗೌರಿ ಅಜ್ಜಿಗೆ ತನ್ನ ಅಮ್ಮನ ಮೇಲೆ ಸಿಕ್ಕಾಪಟ್ಟೆ ಕೋಪವಿದೆ. ಆ ಕೋಪವನ್ನು ಗೌರಿ ಮೇಲೂ ಯಾವಾಗಲೂ ತೀರಿಸಿಕೊಳ್ಳುತ್ತಾ ಇರುತ್ತಾಳೇ. ಅವಳೆ ಒಬ್ಬಳು ದರಿದ್ರ, ನಿನ್ನನ್ನು ಬೇರೆ ಬಿಟ್ಟು ಹೋಗಿ ಬಿಟ್ಟಳು ಎಂಬ ಮಾತನ್ನು ಹೇಳುತ್ತಾ ಇರುತ್ತಾಳೆ. ಅಜ್ಜಿಯ ಮಾತುಗಳಿಂದ ಗೌರಿಗೆ ಎಷ್ಟೇ ನೋವಾದರೂ ಅದನ್ನು ನುಂಗಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ. ಮನೆಯಲ್ಲಿ ಅಜ್ಜ ಗೌರಿಯ ಪರವಾಗಿ ಇದ್ದಾರೆ. ಆದರೆ ಅಜ್ಜಿಯ ಗಟ್ಟಿ ಮಾತಿನ ಮುಂದೆ ಅಜ್ಜನ ಬೆಂಬಲ ಅಷ್ಟಕ್ಕೆ ಅಷ್ಟೇ ಬೆಲೆ ಕಂಡುಕೊಳ್ಳುವುದು.
ಗೌರಿಗೆ ಎಷ್ಟೇ ನೋವಾದರೂ ಮನೆಯವರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಲ್ಲ. ಅಷ್ಟೇ ಅಲ್ಲ ಯಾರೇ ಮನೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಅದನ್ನು ಸಹಿಸಿಕೊಳ್ಳುವುದಿಲ್ಲ. ಸದಾ ದ್ವೇಷಿಸುವ ಅಜ್ಜಿ, ಗೌರಿಯ ಮಾತುಗಳಿಂದ ಇನ್ಮುಂದೆ ಆದರೂ ಬದಲಾಗುತ್ತಾರಾ ನೋಡಬೇಕಿದೆ.

ಗೌರಿಯ ಹುಡುಗನಿಗಾಗಿ ಎದುರು ನೋಡಿದ ಕುಟುಂಬ
ಗೌರಿಗೆ ರಾತ್ರಿ ನಡೆಯುವ ಕಾಯಿಲೆ ಇದೆ. ಕಾಯಿಲೆ ಎನ್ನುವುದಕ್ಕಿಂತ ಅದೊಂದು ಶಾಪ ಎಂದೇ ಹೇಳಬಹುದು. ಆ ಶಾಪದಿಂದಾಗಿ ಗೌರಿ ರಾತ್ರಿ ವೇಳೆ ಸರಪಳಿಗಳಿಂದ ಬಂಧಿಯಾಗುತ್ತಾಳೆ. ಇದರಿಂದ ಮುಕ್ತಿ ಪಡೆಯುವುದಕ್ಕೆ ಗೌರಿಯನ್ನು ಆದಷ್ಟು ಬೇಗ ಮದುವೆ ಮಾಡಿ ಕಳುಹಿಸಬೇಕು ಎಂದೇ ಅಜ್ಜಿ ಯೋಚನೆ ಮಾಡಿದ್ದಾರೆ. ಅದರಂತೆ ಗಂಡು ನೋಡುವುದಕ್ಕೂ ಬಂದಿದ್ದಾರೆ. ಆದರೆ ಅಲ್ಲಿ ಅಪ್ಪು ಕಂಡು ಶಾಕ್ ಆಗಿದ್ದಾರೆ.
ಶರಣನಿಗೆ ಗೌರಿ ಮನೆಯವರ ಮೇಲೆ ಕೋಪ
ಶರಣ, ಗೌರಿಗೆ ಸಂಬಂಧಿಕನೇ ಆಗಬೇಕು. ಆದರೆ ಆ ಮನೆಯಿಂದ ತನಗೇನೋ ಅನ್ಯಾಯವಾಗಿದೆ ಎಂದೇ ಭಾವಿಸಿದ್ದಾನೆ. ಜಗಳವಾಡುವುದಕ್ಕೆ ಕಾಯುತ್ತಾ ಇರುತ್ತಾನೆ. ಈಗ ಗೌರಿ ಇರುವ ಜಾಗಕ್ಕೆ ಬಂದ ಅಪ್ಪುವನ್ನು ಕಂಡು, ಗೌರಿ ನೋಡುವುದಕ್ಕೆ ಬಂದಿರುವುದು ಅಪ್ಪು ಎಂದು ತಿಳಿದು, ಮೆರವಣಿಗೆಯಲ್ಲಿ ಕರೆದು ತಂದಿದ್ದಾನೆ. ಕರೆ ತಂದ ಮೇಲೆ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾನೆ. ಗೌರಿ ಮೇಲೂ ಅಪ್ಪುನೇ ಗತಿ ನಿನಗೆ ಎಂದೆಲ್ಲಾ ಮಾತನಾಡಿದ್ದಾನೆ. ಗೌರಿಯ ಅಣ್ಣನ ಬಗ್ಗೆ ಮಾತನಾಡಲು ಹೋಗಿ, ಗೌರಿಯ ಕೋಪಕ್ಕೆ ತುತ್ತಾಗಿದ್ದಾನೆ.

ಶರಣ್ ಬಾಯಿ ಮುಚ್ಚಿಸಿದ ಗೌರಿ
ಅಣ್ಣನ ಬಗ್ಗೆ ಮಾತನಾಡಿದ ಕೂಡಲೇ ಗೌರಿ ಎಚ್ಚರಿಕೆ ನೀಡಿದ್ದಾಳೆ. 'ನಿನ್ನ ತಂಗಿಯನ್ನೇ ನೀನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗಿಲ್ಲ. ಹೀಗಿರುವಾಗ ನಮ್ಮ ಅಣ್ಣನ ಬಗ್ಗೆ ಮಾತನಾಡುವುದಕ್ಕೆ ನಾಲಿಗೆ ಹೇಗೆ ಬರುತ್ತದೆ. ನಮ್ಮ ಅಣ್ಣ ಏನು ಅಂತ ನನಗೆ ಗೊತ್ತು. ಅಷ್ಟಕ್ಕೂ ಮದುವೆ ಆಗುತ್ತಿರುವುದು ನಾನು. ನಮ್ಮ ಮನೆಯವರಯ ಇದ್ದಾರೆ. ನನ್ನ ಲೈಫ್ ಬಗ್ಗೆ ಮಾತನಾಡುವುದಕ್ಕೆ ನೀನ್ಯಾರು. ಇಲ್ಲಿಂದ ಹೋಗ್ತಾ ಇರು' ಎಂದೇ ಎಚ್ಚರಿಕೆ ನೀಡಿದ್ದಾಳೆ.
ಗೌರಿಯ ಮಾತಿಗೆ ಅಜ್ಜಿಯ ಮನಸ್ಸು ಕರಗುತ್ತಾ..?
ಬಳಿಕ ಮನೆಯವರ ಬಗ್ಗೆ ಆರ್ರ್ಧಮಾತನಾಡಿ, 'ನಮ್ಮ ಮನೆಯವರ ಬಗ್ಗೆ ಮಾತನಾಡುವುದಕ್ಕೆ ನಿನಗೆ ಯೋಗ್ಯತೆ ಇಲ್ಲ. ನನ್ನನ್ನ ನಮ್ಮ ಮನೆಯವರು ತಲೆ ಮೇಲೆ ಇಟ್ಟು ಸಾಕಿದ್ದಾರೆ, ನೋಡಿಕೊಂಡಿದ್ದಾರೆ' ಎಂದು ಹೇಳಿ ಶರಣನ ಬಾಯಿ ಮುಚ್ಚಿಸಿದ್ದಾಳೆ. ಸದಾ ಕಾಲ ಮೊಮ್ಮಗಳನ್ನು ನಿಂದಿಸುವ ಅಜ್ಜಿ ಈಗ ಆ ಮಾತುಗಳನ್ನು ಕೇಳಿ ಸೈಲೆಂಟ್ ಆಗಿದ್ದಾರೆ. ಇದರ ಮಧ್ಯೆ ಶರಣ, ಮಂಗಳಮ್ಮ ತಂದಿದ್ದ ಸೀರೆಯನ್ನು ಕೋಪದಲ್ಲಿ ಮೇಲೆ ಎಸೆದಿದ್ದಾನೆ. ಅದು ಗೌರಿಯ ಹೆಗಲ ಮೇಲೆ ಹೋಗಿ ಕೂತಿದೆ. ಇದು ವಿಧಿಯೇ ನಿರ್ಧಾರ ಮಾಡಿದ ಜೋಡಿ ಎಂಬುದನ್ನು ಸೀರೆ ತೋರಿಸಿದೆ.


Click it and Unblock the Notifications











