For Quick Alerts
  ALLOW NOTIFICATIONS  
  For Daily Alerts

  ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವ ಭೀಷ್ಮ ಪಾತ್ರ ಖ್ಯಾತಿಯ ಸುನೀಲ್ ನಗರ್

  |

  ಕೊರೊನಾ ಲಾಕ್ ಡೌನ್ ನಿಂದ ಅನೇಕರ ಬದುಕು ಬೀದಿಗೆ ಬಂದಿದೆ. ಕಳೆದ ವರ್ಷದ ಲಾಕ್ ಡೌನ್ ನಿಂದನೇ ಇನ್ನು ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ಮತ್ತೆ ಹೇರಿರುವ ಲಾಕ್ ಡೌನ್ ಅನೇಕರನ್ನು ಕಷ್ಟದ ಕೂಪಕ್ಕೆ ತಳ್ಳಿದೆ.

  ಒಂದೆದೆ ಜನ ಆಸ್ಪತ್ರೆ, ಬೆಡ್, ಆಕ್ಸಿಜನ್ ಅಂತ ಪರದಾಡುತ್ತಿದ್ದರೆ ಮತ್ತೊಂದೆದೆ ಒಂದೊತ್ತಿನ ಊಟಕ್ಕಾಗಿ ಒದ್ದಾಡುತ್ತಿದ್ದಾರೆ. ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸುನಿಲ್ ನಗರ್ ಬದುಕು ಕೂಡ ಬೀದಿಗೆ ಬಂದಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಟ ಸುನಿಲ್ ಬಾಡಿಗೆ ಕಟ್ಟಲಾಗದೆ ಕಷ್ಟಪಡುತ್ತಿದ್ದಾರೆ. ದಿನನಿತ್ಯದ ಖರ್ಚಿಗೆ ಹಣವಿಲ್ಲದೆ ಸುನಿಲ್ ಕಣ್ಣೀರಿಡುತ್ತಿದ್ದಾರೆ. ಮುಂದೆ ಓದಿ..

  ಕುಟುಂಬದವರು ಕೈ ಬಿಟ್ಟಿದ್ದಾರೆ

  ಕುಟುಂಬದವರು ಕೈ ಬಿಟ್ಟಿದ್ದಾರೆ

  ಹಿಂದಿಯ ಪ್ರಸಿದ್ಧ ಶ್ರೀ ಕೃಷ್ಣ ಧಾರಾವಾಹಿಯಲ್ಲಿ ಭೀಷ್ಮ ಪಾತ್ರದ ಮೂಲಕ ಸುನಿಲ್ ನಗರ್ ಪ್ರಖ್ಯಾತಿ ಗಳಿಸಿದ್ದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಸುನಿಲ್ ಈಗ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಟುಂಬದವರು ಸಹ ಅವರನ್ನು ನೋಡಿಕೊಳ್ಳದೆ ದೂರ ತಳ್ಳಿದ್ದಾರೆ.

  ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದೆ, ನನ್ನ ಸ್ಥಿತಿ ಹೀಗಾಗಿದೆ

  ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದೆ, ನನ್ನ ಸ್ಥಿತಿ ಹೀಗಾಗಿದೆ

  ಸಂಕಷ್ಟದ ಪರಿಸ್ಥಿತಿ ಬಗ್ಗೆ ನಟ ಸುನಿಲ್ ಮಾಧ್ಯಮದ ಜೊತೆ ಮಾಡಿದ್ದಾರೆ. 'ಕುಟುಂಬದವರು ನನ್ನನ್ನು ದೂರ ತಳ್ಳಿದ್ದಾರೆ. ನನ್ನ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದೆ. ಕಾನ್ವೆಂಟ್ ಶಾಲೆಯಲ್ಲಿ ಓದಿಸಿದೆ. ಆದರೆ ನನ್ನ ಪರಿಸ್ಥಿತಿ ಈಗ ಹೀಗಾಗಿದೆ. ನನಗೆ ಒಡಹುಟ್ಟುದವರು ಇದ್ದಾರೆ. ಆದರೆ ಸಹಾಯಕ್ಕೆ ಬಂದಿಲ್ಲ. ಅದೃಷ್ಟ ನನಗೆ ಕೊರೊನಾ ಇಲ್ಲ. ಆದರೆ ಬೇರೆ ಆರೋಗ್ಯ ಸಮಸ್ಯೆಗಳಿವೆ. ಜೀವನ ನನಗೆ ಉತ್ತಮವಾದ ದಿನ ತೋರಿಸುತ್ತೆ ಎಂದು ಭಾವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  ರೆಸ್ಟೋರೆಂಟ್ ನಲ್ಲಿ ಹಾಡುತ್ತಿದ್ದೆ, ಈಗ ಮುಚ್ಚಿದ್ದಾರೆ

  ರೆಸ್ಟೋರೆಂಟ್ ನಲ್ಲಿ ಹಾಡುತ್ತಿದ್ದೆ, ಈಗ ಮುಚ್ಚಿದ್ದಾರೆ

  'ನಾನು ಗಾಯಕ. ಕೆಲವು ದಿನಗಳ ಹಿಂದೆ ನನ್ನ ದಿನನಿತ್ಯದ ಖರ್ಚುಗಳನ್ನು ನೋಡಿಕೊಳ್ಳಲು ನಾನು ರೆಸ್ಟೋರೆಂಟ್ ನಲ್ಲಿ ಹಾಡಲು ಪ್ರಾರಂಭಿಸಿದೆ. ಆದರೀಗ ಲಾಕ್ ಡೌನ್ ಆಗಿದೆ. ರೆಸ್ಟೋರೆಂಟ್ ಮುಚ್ಚಿದ್ದಾರೆ. ಕಳೆದ ತಿಂಗಳಿಂದ ನನಗೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.

  ಸಿನಿ ಮತ್ತು ಟಿವಿ ಕಲಾವಿದರ ಸಂಘದ ಮೊರೆ ಹೋಗಿರುವ ನಟ

  ಸಿನಿ ಮತ್ತು ಟಿವಿ ಕಲಾವಿದರ ಸಂಘದ ಮೊರೆ ಹೋಗಿರುವ ನಟ

  ನಟ ಸುನಿಲ್ ಸದ್ಯ ಸಿನಿಮಾ ಮತ್ತು ಟಿವಿ ಆರ್ಟಿಸ್ಟ್ ಅಸೋಸಿಯೇಶನ್ ಯಿಂದ ಸಹಾಯ ಕೇಳಿದ್ದಾರೆ. ಸಹಾಯ ಮಾಡುವುದಾಗಿ ಹೇಳಿದ್ದಾರೆ, ಇನ್ನು ಎಷ್ಟು ಸಮಯ ತೆಗೆದುಕೊಳ್ಳುತ್ತೆ ಎನ್ನುವುದು ಗೊತ್ತಿಲ್ಲ ಎಂದು ಸುನಿಲ್ ಹೇಳಿದ್ದಾರೆ.

  ನಟ ಸುನಿಲ್ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲು ನಟಿಸಿದ್ದಾರೆ. ತಾಲ್, ಯು ಆರ್ ಮೈ ಜಾನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಓಂ ನಮಃ ಶಿವಾಯ, ಶ್ರೀಗಣೇಶ್, ಕಬೂಲ್ ಹೈ ಸೇರಿದಂತೆ ಮುಂತಾದ ಸಿರೀಸ್ ಗಳಲ್ಲಿ ನಟಿಸಿದ್ದಾರೆ.

  English summary
  Shri Krishna Serial Actor Sunil Nagar Facing Financial Problems Due to Covid-19 Lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X