ಜೀ‌ ಕನ್ನಡದಲ್ಲಿ ಬರುತ್ತಿರುವ ಶ್ರೀರಸ್ತು ಶುಭಮಸ್ತು ಯಾವ ಧಾರಾವಾಹಿಯ ರೀಮೇಕ್ ಗೊತ್ತಾ?

By ಶ್ರುತಿ ಹರೀಶ್ ಗೌಡ

ಜೀ ಕನ್ನಡದಲ್ಲಿ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳು ಎಲ್ಲರ ಮನಸೊರೆಗೊಳ್ಳುತ್ತಿದೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಒಂದು ಸುಂದರ ಕೌಟುಂಬಿಕ ಹಿನ್ನೆಲೆಯುಳ್ಳ ಧಾರಾವಾಹಿಯಾಗಿದ್ದು ಇದೂ ಸಹ ವೀಕ್ಷಕರ ಮನಗೆಲ್ಲುತ್ತಿದೆ.

ಆದರೆ 'ಶ್ರೀ ರಸ್ತು ಶುಭ ಮಸ್ತು' ಧಾರಾವಾಹಿ ಒರಿಜಿನಲ್ ಧಾರಾವಾಹಿಯಲ್ಲ ಬದಲಿಗೆ ರೀಮೇಕ್ ಧಾರಾವಾಹಿ. ಈ ಧಾರಾವಾಹಿ ಜೀ ಮರಾಠಿಯಲ್ಲಿ ಪ್ರಸಾರವಾಗುತ್ತಿದ್ದ ಮರಾಠಿ ಭಾಷೆಯ 'ಆಗ್ಗಾಬಾಯ್, ಸಾಸುಬಾಯ್' ಎಂಬ ಜನಪ್ರಿಯ ಧಾರಾವಾಹಿಯ ರೀಮೇಕ್ ಆಗಿದೆ.

ಸದ್ಯಕ್ಕೆ ಸೊಸೆ ಅತ್ತೆಗೆ ಮಗಳಾಗಿ ಬೆನ್ನೆಲುಬಾಗಿ ನಿಂತು ಅತ್ತೆಯ ಪರವಾಗಿ ನಿಂತಿರುವುದನ್ನು ಜನ ನೋಡುತ್ತಿದ್ದಾರೆ. ಇಲ್ಲಿ ಅತ್ತೆಯ ಪಾತ್ರವೇ ಮುಖ್ಯವಾಗಿದೆ. ಜೀ ಮರಾಠಿಯಲ್ಲಿ ಪ್ರಸಾರವಾಗುತ್ತಿರುವ 'ಆಗ್ಗಾಬಾಯ್, ಸಾಸುಬಾಯ್' ಧಾರಾವಾಹಿ ಹಲವು ಕಂತುಗಳನ್ನು ಪೂರೈಸಿದೆ.

ಮೊದಲ ಬಾರಿ ಕಿರುತೆರೆಯಲ್ಲಿ ಸುಧಾರಾಣಿ

ಮೊದಲ ಬಾರಿ ಕಿರುತೆರೆಯಲ್ಲಿ ಸುಧಾರಾಣಿ

'ಶ್ರೀ ರಸ್ತು ಶುಭ ಮಸ್ತು' ಧಾರಾವಾಹಿ ಮೂಲಕ ಸುಧಾರಾಣಿಯವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್‌ಗೆ ಮೊದಲು ನಟಿ ಮಾಲಾಶ್ರೀ ಹಾಗೂ ತಾರಾ ಅವರನ್ನು ಒಪ್ಪಿಸಲು ಯತ್ನ ನಡೆಸಲಾಗಿತ್ತು. ತದನಂತರ ಕೆಲವು ಕಾರಣಗಳಿಂದ ನಟಿ ಸುಧಾರಾಣಿ ಅವರನ್ನೇ ಫೈನಲ್ ಮಾಡಲಾಯಿತು ಎಂಬ ಸುದ್ದಿಯೂ ಇದೆ.

ಮರಾಠಿಯಲ್ಲಿ ಟಿಆರ್‌ಪಿ ಗಳಿಸಿರುವ ಧಾರಾವಾಹಿ

ಮರಾಠಿಯಲ್ಲಿ ಟಿಆರ್‌ಪಿ ಗಳಿಸಿರುವ ಧಾರಾವಾಹಿ

ಮರಾಠಿಯಲ್ಲಿಯೂ ಸಹ ಈ ಧಾರಾವಾಹಿ ಸಾಕಷ್ಟು ಟಿಆರ್‌ಪಿ ಗಳಿಸಿದೆ. ಜೀ ಕನ್ನಡದಲ್ಲೂ ಸಹ ಈ ಧಾರಾವಾಹಿ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಷಣ ಕ್ಷಣವೂ ಕುತೂಹಲವನ್ನು ಹೆಚ್ಚಿಸುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಇನ್ನೂ ಅತ್ತೆ ಸೊಸೆಯ ಪಾತ್ರ ಈ ಧಾರಾವಾಹಿಯಲ್ಲಿ ತುಂಬಾ ಚೆನ್ನಾಗಿ ಬರುತ್ತಿದೆ. ಮುಂದೆ ಸೊಸೆಯೇ ಅತ್ತೆಗೆ ಮದುವೆ ಮಾಡಿಸುತ್ತಾಳೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ.

ಭಿನ್ನವಾಗಿದೆ ಧಾರಾವಾಹಿಯ ಕತೆ

ಭಿನ್ನವಾಗಿದೆ ಧಾರಾವಾಹಿಯ ಕತೆ

ಇದಕ್ಕೆ ಮನೆಯ ಯಜಮಾನನಾಗಿರುವ ದತ್ತ ಒಪ್ಪುತ್ತಾನಾ ಇಲ್ವ ಎಂಬುದೇ ಇಲ್ಲಿ ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿದೆ. ಇನ್ನೂ ದತ್ತ ಒಪ್ಪಿದರೂ ಸಹ ಮನೆಯ ಮಗ ಅಮ್ಮನ ಮರು ಮದುವೆಗೆ ಒಪ್ಪುತ್ತಾನಾ ಎಂಬೆಲ್ಲಾ ಕುತೂಹಲಗಳು ಸಹ ಈ ಧಾರಾವಾಹಿ ಹಿಡಿದಿಟ್ಟುಕೊಂಡಿದೆ. 'ಪಾರು', 'ಹಿಟ್ಲರ್ ಕಲ್ಯಾಣ', 'ಪುಟ್ಟಕ್ಕನ ಮಕ್ಕಳು', 'ಗಟ್ಟಿಮೇಳ', 'ಜೊತೆ ಜೊತೆಯಲಿ', 'ಸತ್ಯ', 'ನಾಗಿಣಿ' ಧಾರಾವಾಹಿಗಳಿಗಿಂತ ಇದರ ಕಥೆ ಕೊಂಚ‌ ಭಿನ್ನವಾಗಿದೆ ಎಂದು ಪ್ರೇಕ್ಷಕರೇ ಮಾತನಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Shri Rasthu Shubha Mastu serial is remake of Marathi serial. famous Kannada actress Sudharani acting in serial for the first time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X