Shri Renuka Yellamma: ಕಡೆಗೂ ಜೊತೆಯಾದ್ರೂ ರೇಣುಕೆ - ಯಲ್ಲಮ್ಮ.. ಆದರೆ ಇಬ್ಬರಿಗೂ ಇದೆ ಗಂಡಾಂತರ?
ಗಂಗಾ ಪೂಜೆಗೆಂದು ರೇಣುಕೆ ಮತ್ತು ಅರಸರ ಕುಟುಂಬಸ್ಥರು ಹಳ್ಳಿಗೆ ಬಂದಿದ್ದರು. ಅದರಲ್ಲೂ ರೇಣುಕೆಗೆ ಅರಮನೆಯಲ್ಲಿದ್ದು ಇದ್ದು ಬೇಸರವಾಗಿತ್ತು. ಸದಾ ಕಾಲ ಯಲ್ಲಮ್ಮನನ್ನು ನೋಡಬೇಕೆಂಬ ಕಾತುರತೆ ರೇಣುಕೆಯಲ್ಲಿ ಇತ್ತು. ಅದೇ ಆಸೆಯಲ್ಲಿ ರೇಣುಕೆ ಬಂದಿದ್ದಳು. ಆದರೆ ರೇಣುಕೆಯ ಆಸೆ ನಿರಾಸೆಯಾಗಿತ್ತು. ಪೂಜೆಯೆಲ್ಲಾ ಮುಗಿಸಿ, ಹಳ್ಳಿಯಲ್ಲಿ ಗಂಗಾ ಪೂಜೆ ಮುಗಿಸಿ, ದೇವಸ್ಥಾನಕ್ಕೆ ಹೊರಟಿದ್ದಳು. ಆ ವೇಳೆ ಯಲ್ಲಮ್ಮನ ದರ್ಶನವಾಗಿದೆ.
ರೇಣುಕೆಯ ಜೀವಕ್ಕೆ ಅರಮನೆಯಲ್ಲಿಯೇ ಕಂಟಕವಿತ್ತು. ದೊಡ್ಡಮ್ಮ ಮತ್ತು ಚಿಕ್ಕಮ್ಮನೇ ಇಲ್ಲಿ ಶತ್ರುಗಳಾಗಿದ್ದಾರೆ. ಅರಸರಿಗೆ ಮೂವರು ಹೆಂಡತಿಯರಿದ್ದಾರೆ. ಆದರೆ ಇರುವುದು ಇಂದುಮತಿಗೆ ಮಾತ್ರ ಮಗು ಇದೆ. ರೇಣುಕೆಯಿಂದಾನೇ ತನ್ನ ಪ್ರಾಣಕ್ಕೆ ಅಪಾಯವಿದೆ ಎಂದುಕೊಂಡಿರೋ, ಕಾರ್ತವೀರ್ಯಾರ್ಜುನ ಅವಳ ಪ್ರಾಣ ತೆಗೆಯಲು ಬಂದಿದ್ದಾನೆ.

ಯಲ್ಲಮ್ಮ - ರೇಣುಕೆ ಭೇಟಿ ಆಗೋಯ್ತು
ರೇಣುಕೆ ಹಳ್ಳಿಗೆ ಬಂದಿದ್ದೇ ಯಲ್ಲಮ್ಮನನ್ನು ನೋಡುವುದಕ್ಕೆ. ಆದರೆ ಹಳ್ಳಿಯವರೆಲ್ಲ ಬಂದರೂ ಯಲ್ಲಮ್ಮ ಮಾತ್ರ ಕಾಣಲೇ ಇಲ್ಲ. ರೇಣುಕೆಯ ಮನಸ್ಸು ಮಾತ್ರ ಯಲ್ಲಮ್ಮ ಇಲ್ಲೆ ಎಲ್ಲೋ ಇದ್ದಾಳೆ ಅಂತಾನೇ ಹೇಳುತ್ತಾ ಇತ್ತು. ಅದಕ್ಕಾಗಿಯೇ ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಳು. ಕಡೆಗೂ ಪೂಜೆ- ಪುನಸ್ಕಾರವನ್ನೆಲ್ಲಾ ಮುಗಿಸಿ, ತಂದೆಯ ಬಳಿಗೆ ಹೊರಟಾಗ ರೇಣುಕೆ ಮತ್ತು ಯಲ್ಲಮ್ಮ ಭೇಟಿಯಾಗಿದ್ದಾರೆ.
ರೇಣುಕೆಗೆ ಪ್ರಾಣಾಪಾಯವಿದೆ ಎಂದು ಗೊತ್ತಾದ ಕೂಡಲೇ ನೀಲಕಂಠ ಓಡೋಡಿ ಹೋಗಿದ್ದ. ನೀರಿಗೆ ಬಿದ್ದ ರೇಣುಕೆಯನ್ನು ಕಾಪಾಡಿದ. ಅಲ್ಲಿದ್ದ ಎಲ್ಲರಿಂದ ಪ್ರಶಂಸೆ ಸಿಕ್ಕಿತು. ರೇಣುಕೆ ಅಂತು ನೀಲಕಂಠನನ್ನು ಅಪ್ಪನ ಬಳಿ ಕರೆದುಕೊಂಡು ಹೋಗುವುದಕ್ಕೆ ಕೇಳಿದ್ದಾಳೆ. ರೇಣುಕೆಯಿಂದಾಗಿ ನೀಲಕಂಠನ ಕೆಲಸ ಮತ್ತೆ ಮರಳುವಂತಾಗಿದೆ. ಈಗ ಮಗಳ ಪ್ರಾಣವನ್ನು ಉಳಿಸಿರುವ ನೀಲಕಂಠನನ್ನು ರೇಣು ಮಹಾರಾಜರು ಕ್ಷಮಿಸದೇ ಇರುವುದಿಲ್ಲ. ಮಗಳು ಎಂದರೆ ಅರಸರಿಗೆ ಪ್ರಾಣ. ಅವಳಿಗಾಗಿ ಏನು ಬೇಕಾದರೂ ಮಾಡುತ್ತಾರೆ ಇನ್ನು ನೀಲಕಂಠನನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲವಾ..?

ಯಲ್ಲಮ್ಮನನ್ನು ಹುಡುಕಿ ಬಂದ ರಾಕ್ಷಸರು
ಸೌಗಂಧಿಕ ಯಲ್ಲಮ್ಮನನ್ನು ಅಪಹರಿಸುವ ಹುನ್ನಾರ ನಡೆಸಿದ್ದಳು. ಅದರಂತೆ ಎಲ್ಲಾ ಗಂಗಾ ಪೂಜೆ ಕಡೆಗೆ ಗಮನ ಕೊಟ್ಟಿದ್ದಾಗ, ಯಲ್ಲಮ್ಮನನ್ನು ಅಪಹರಿಸಿದ್ದಳು. ಆದರೆ ಯಲ್ಲಮ್ಮ ಆ ಕೆಟ್ಟ ರಾಕ್ಷಸರಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಅಲ್ಲಿಂದ ತಪ್ಪಿಸಿಕೊಂಡು ರೇಣುಕೆಯನ್ನು ಭೇಟಿ ಮಾಡಿದ್ದಾಳೆ. ರೇಣುಕೆಗೆ ಯಲ್ಲಮ್ಮನನ್ನು ನೋಡಿದ ಖುಷಿ. ಆದರೆ ಈಗಲೂ ರೇಣುಕೆಯೇ ನಿಜವಾದ ರಾಜಕುಮಾರಿ ಎಂಬುದು ತಿಳಿದಿಲ್ಲ. ರೇಣುಕೆ ಕೂಡ ಯಲ್ಲಮ್ಮನಿಗೆ ಮತ್ತೆ ಅದನ್ನೆಲ್ಲ ಹೇಳುವುದಕ್ಕೆ ಹೋಗಿಲ್ಲ. ಆದರೆ ಯಲ್ಲಮ್ಮನಿಗೆ ಆ ಜಾಗ ಸೇಫ್ ಅಲ್ಲ ಎನಿಸಿದೆ. ಅಲ್ಲಿಂದ ಇಬ್ಬರು ಹೊರಟಿದ್ದಾರೆ.
ಯಲ್ಲಮ್ಮನಿಗೆ ನಿಂತಿರುವಲ್ಲಿಯೇ ನಿಂತರೆ ಮತ್ತೆ ರಾಕ್ಷಸರ ಕೈನಲ್ಲಿ ತಗಲಾಕಿಕೊಳ್ಳುತ್ತೀವಿ ಎಂಬ ಅನುಮಾನ ಮೂಡಿ, ಅಲ್ಲಿಂದ ರೇಣುಕೆಯನ್ನು ಕರೆದುಕೊಂಡು ಹೊರಟಳು. ಅದರ ಹಿಂದೆನೇ ರಾಕ್ಷಸರು ಆ ಇಬ್ಬರನ್ನು ಹುಡುಕಿಕೊಂಡು ಬಂದರು. ಅಲ್ಲಿಂದ ಜಾಗ ಖಾಲಿ ಮಾಡಿದ್ದೆ ಬಚಾವ್ ಆದ್ರೂ. ಆದರೆ ತುಂಬಾ ದೂರಕ್ಕೆ ಹೋಗುವುದು ಅಷ್ಟು ಸುಲಭವಲ್ಲ. ಈಗಾಗಲೇ ರೇಣುಕೆಯನ್ನು ನೀಲಕಂಠ ಕಾಪಾಡಿದ್ದಾನೆ. ಯಲ್ಲಮ್ಮ ತಪ್ಪಿಸಿಕೊಂಡು ಬಂದಿದ್ದಾಳೆ. ಈಗ ಇಬ್ಬರನ್ನು ಕಾಪಾಡುವುದಕ್ಕೆ ಇಬ್ಬರ ಶಕ್ತಿ ಒಂದಾಗಬೇಕಿದೆ. ಇಬ್ಬರೂ ದೇವರ ಸ್ವರೂಪವಾಗಿರುವ ಕಾರಣ, ಶಕ್ತಿ ಹೊರ ಬರಲೇಬೇಕಿದೆ.


Click it and Unblock the Notifications











