Shri Renuka Yellamma: ರೇಣುಕೆಯ ಜಾತಕ ಕಂಡು ಹೆದರಿರೋದೇಕೆ ರೇಣು ಮಹಾರಾಜರು?
ಅರಮನೆಗೆ ಒಬ್ಬಳೆ ಯುವರಾಣಿ. ದೊಡ್ಡ ಕನಸು ಕಂಡು ಮಗಳನ್ನು ಸಾಕಿ ಸಲಹಿದ್ದಾರೆ. ಮಗಳಿಗೆ ಯಾವುದೇ ಕುಂದು ಕೊರತೆ ಬರದಂತೆ. ರೇಣುಕೆ ಅರಮನೆಯಲ್ಲಿ ನೆಮ್ಮದಿಯಾಗಿದ್ದಾಳೆ ಎಂದುಕೊಂಡರೆ ಅದು ಸುಳ್ಳಾಗಿದೆ. ರೇಣುಕೆಗೆ ಬೇಕಿರುವ ಪ್ರಪಂಚವೇ ಬೇರೆಯದ್ದಾಗಿದೆ.
ರೇಣುಕೆ ಚಿಕ್ಕ ಮಗುವೇ ಬರಬಹುದು. ಆದರೆ ಅವಳು ಬಯಸುವ ಲೋಕವೇ ಬೇರೆಯದ್ದಾಗಿದೆ. ಒಮ್ಮೆ ತನ್ನಿಷ್ಟದ ಲೋಕವನ್ನು ನೋಡಿಕೊಂಡು ಬಂದ ರೇಣುಕೆಗೆ ಈಗ ಅರಮನೆಯಲ್ಲಿರುವುದು ಸಂಕಟವಾಗುತ್ತಿದೆ. ಆದರೆ ಅದನ್ನು ಎಲ್ಲಿಯೂ ತೋರಿಸಿಕೊಳ್ಳುತ್ತಿಲ್ಲ. ಸುಮ್ಮನೆ ಇದ್ದಾಳೆ. ಅರಮನೆಯಲ್ಲಿ ಅದರದ್ದೇ ಆದಂತ ನೀತಿ-ನಿಯಮಗಳಿವೆ ಎಂದು ರೇಣುಕೆಯ ಅಮ್ಮ ಸುಮ್ಮನೆ ಇರಿಸಿದ್ದಾಳೆ.

ರೇಣುಕೆಯ ಜಾತಕ ಕೇಳಿದ ಮಹಾರಾಜನಿಗೆ ಶಾಕ್
ರೇಣು ಮಹಾರಾಜರಿಗೆ ಮಗಳೆಂದರೆ ದೊಡ್ಡ ಕನಸು. ಅದಕ್ಕಾಗಿಯೇ ಅವಳಿಗೆ ಎಲ್ಲಾ ರೀತಿಯ ಪ್ರೀತಿ ತೋರುತ್ತಾರೆ, ಕಾಳಜಿ ಮಾಡುತ್ತಾರೆ. ಅಕ್ಷರಾಭ್ಯಾಸವನ್ನು ಆರಂಭಿಸಿದ್ದಾರೆ. ಆದರೆ ರೇಣುಕೆಯ ಆಲಸ್ಯ ಕಂಡು ರೇಣು ಮಹಾರಾಜರಿಗೆ ಗಾಬರಿಯಾಗಿದೆ. ಅವಳ ಜಾತಕವನ್ನು ಅರಮನೆಯ ಜ್ಯೋತಿಷ್ಯರಿಗೆ ತೋರಿಸಿದ್ದಾರೆ. ಆಗ ಜ್ಯೋತಿಷ್ಯರು, ರೇಣುಕೆಯ ಬಗ್ಗೆ ಶಾಕ್ ಆಗುವಂತ ವಿಚಾರ ತಿಳಿಸಿದ್ದಾರೆ. "ರೇಣುಕೆ ಹರಿವ ನೀರು. ನಿಂತ ನದಿಯಲ್ಲ. ನಿನ್ನ ಕೈಗೆ ಅವಳು ಸಿಗುವುದಿಲ್ಲ" ಎಂದಿದ್ದಾರೆ. ಇದನ್ನು ಕೇಳಿದ ರೇಣು ಮಹಾರಾಜರಿಗೆ ಆಕಾಶವೇ ಬಿದ್ದಂತೆ ಆಗಿದೆ.

ರೇಣುಕೆಗೆ ಸುತ್ತುವ ಬಯಕೆ
ಜ್ಯೋತಿಷ್ಯರು ಹೇಳಿದ್ದನ್ನು ರೇಣು ಮಹಾರಾಜರಿಗೆ ನಂಬಲು ಸಂಪೂರ್ಣವಾಗಿ ಆಗಲಿಲ್ಲ. ಅದಕ್ಕೆ ಮಗಳ ಬಳಿಯೇ ಕೇಳಿ ತಿಳಿದುಕೊಳ್ಳೋಣಾ ಎಂದು ಬರುತ್ತಾನೆ. ಆಗ ರೇಣುಕೆ ದೇವರ ಮುಂದೆ ಶಂಖ ಊದುತ್ತಾ ನಿಂತಿರುತ್ತಾಳೆ. ಅವಳನ್ನೆ ಕೇಳುತ್ತಾನೆ. ಸಾತ್ವಿಕ ಶಕ್ತಿ ಎಂದರೆ ಏನು ಎಂದು ಮಗಳನ್ನು ಕೇಳಿದಾಗ, ರೇಣುಕೆ "ಮರ, ಗಿಡ, ನೀರು, ಹಸು ಕರುಗಳು" ಎಂದು ಹೇಳುತ್ತಾಳೆ. ರೇಣು ಮಹಾರಾಜ ಮತ್ತಷ್ಟು ಕುಗ್ಗುತ್ತಾನೆ. ಬಳಿಕ "ಸಂಬಂಧ, ತಂದೆ, ತಾಯಿ, ಅರಮನೆ ಸಾತ್ವಿಕ ಶಕ್ತಿ ಎಂದು" ಹೇಳುವಾಗಲೇ ಶಂಖ ಊದುತ್ತಾಳೆ. ತಂದೆಯ ಮಾತನ್ನು ರೇಣುಕೆ ಕೇಳಿಸಿಕೊಳ್ಳುವುದೇ ಇಲ್ಲ.

ತಂದೆಯನ್ನು ಪ್ರಶ್ನೆ ಮಾಡಿದ ರೇಣುಕೆ
ಮಗಳ ಈ ವರ್ತನೆ ಕಂಡು ರೇಣು ಮಹಾರಾಜರು ದಂಗಾಗಿದ್ದಾರೆ. ಮಗಳಿಗೆ ಹೇಗೆ ತಿಳಿಸಿ ಹೇಳಬೇಕು ತಿಳಿಯುತ್ತಿಲ್ಲ. ಒಂದು ಕಡೆ ಜ್ಯೋತಿಷಿ ಹೇಳಿದ ಮಾತು ತಲೆಯಲ್ಲಿ ಗುಯ್ ಗುಡ್ತಾ ಇತ್ತು. ಮತ್ತೆ ಮಗಳ ಬಳಿ ಬಂದ ಮಹಾರಾಜರು "ಮಗಳೇ ರೇಣುಕೆ ಮುಂದೆ ದೊಡ್ಡವಳಾದ ಮೇಲೆ ಏನಾಗಬೇಕೆಂದು ನೀನು ಬಯಸಿರುವೆ" ಎಂದು ಕೇಳಿದ್ದಾರೆ. ಆಗ ಮಗಳು ಮೊದಲು ನನ್ನ ಪ್ರಶ್ನೆಗೆ ಉತ್ತರಿಸುವಂತೆ ಕೇಳಿ, "ನನ್ನನ್ನು ಹೊರಗೆ ಯಾಕೆ ಬಿಡುವುದಿಲ್ಲ" ಎಂದಿದ್ದಾಳೆ.

ಯಲ್ಲಮ್ಮನಿಗೆ ದ್ಯಾವಮ್ಮನ ಕಾವಲು..!
ಯಲ್ಲಮ್ಮ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಹುಡುಗಿ. ಕಾಡು ಮೇಡು ಅಂತ ಅಲೆದಾಡುತ್ತಿರುತ್ತಾಳೆ. ಯಲ್ಲಮ್ಮ ಮತ್ತು ರೇಣುಕೆ ಬೆಸ್ಟ್ ಫ್ರೆಂಡ್ಸ್. ಈ ಕಡೆ ಸೌಗಂಧಿಕೆ, ಯಲ್ಲಮ್ಮನನ್ನು ನನ್ನ ಜೊತೆ ಕಳುಹಿಸಿಕೊಡು ಅಂತ ಹೇಳ್ತಾನೆ ಇರ್ತಾಳೆ. ಇದು ದ್ಯಾವಮ್ಮನಿಗೆ ಭಯ ಹುಟ್ಟಿಸಿದೆ. ಈಗ ಆಟ ಆಡುವುದಕ್ಕೆ ಹೋದಂತ ಯಲ್ಲಮ್ಮನನ್ನು ನಿಲ್ಲಿಸಿ, ಪ್ರಶ್ನೆ ಮಾಡಿದ್ದಾಳೆ. ಆದರೆ ಯಲ್ಲಮ್ಮ ಹೊಟ್ಟೆ ಹಸಿದಿದ್ದರು ಸ್ವಾಭಿಮಾನ ಬಿಡುವ ಹೆಣ್ಣಲ್ಲ. ಅವ್ವನಿಗೂ ತಾನೇನು ತಪ್ಪು ಮಾಡಿಲ್ಲ ಎಂಬುದನ್ನೇ ತಿಳಿಸಿ ಹೇಳಿದ್ದಾಳೆ. ಆದರೆ, ಅಷ್ಟರಲ್ಲಿ ದ್ಯಾವಮ್ಮ ಬೆಂಕಿಯನ್ನು ತೋರಿಸಿ, ಹೆದರಿಸಿದ್ದಾಳೆ.


Click it and Unblock the Notifications











