Shri Renuka Yellamma: ರೇಣುಕೆಗೆ ಇರುವ ಶಕ್ತಿ ತಂದೆಗೂ ತಿಳಿದೇ ಬಿಡ್ತು..!
ಅರಮನೆಯಿಂದ ಹೊರಟಾಗ ರೇಣುಕೆಯ ಪ್ರಾಣಕ್ಕೆ ಕುತ್ತು ಬರುತ್ತೆ ಎಂಬ ಅರಿವು ಮಹಾರಾಜರಿಗಾಗಲಿ, ಇಂದುಮತಿಗಾಗಲೀ, ರೇಣುಕೆಗಾಗಲೀ ಇರಲಿಲ್ಲ. ಆದರೆ, ಮನೆಯಲ್ಲಿಯೇ ಇದ್ದ ಶತ್ರುಪಡೆಗಳಿಗೆ ಅದರ ಸಂಪೂರ್ಣ ಮಾಹಿತಿ ಇತ್ತು. ಯಾಕಂದ್ರೆ, ಕೊಲ್ಲುವ ಸಂಚು ರೂಪಿಸಿದ್ದವರು ಅವರೇ ಅಲ್ಲವೇ. ಹೀಗಾಗಿ ರೇಣುಕೆಯ ಎಲ್ಲಾ ನಡೆ ನುಡಿಗಳನ್ನು ಗಮನಿಸುತ್ತಿದ್ದರು.
ಈ ಬಾರಿ ರೇಣುಕೆಯನ್ನು ಕೊಲ್ಲುವುದಕ್ಕೆ ಅರಮನೆಯ ಮೊದಲ ಪತ್ನಿ ಸರಿಯಾಗಿಯೇ ಪ್ಲ್ಯಾನ್ ಮಾಡಿದ್ದಳು. ಅದಕ್ಕೆ ತಕ್ಕನಾಗಿಯೇ ರೇಣುಕೆ ಹಳ್ಳಿಗೆ ಹೋದಾಗ ತಮ್ಮ ಪ್ಲ್ಯಾನ್‌ನಂತೆಯೇ ಎಲ್ಲವೂ ನಡೆದಿತ್ತು. ಆದರೆ, ರೇಣುಕೆ ಯಲ್ಲಮ್ಮ ತಾಯಿಯ ಸ್ವರೂಪ. ಹೀಗಾಗಿ ಅವಳ ಸಾವು ಬೇಗ ಬರುವುದಕ್ಕೆ ಸಾಧ್ಯವಾಗುತ್ತದೆ ಹೇಳಿ. ದೇವರ ರೂಪಾದಲ್ಲಿ ನೀಲಕಂಠ ಬಂದು ಎಲ್ಲವನ್ನು ಸರಿ ಮಾಡಿದ್ದ, ರೇಣುಕೆಯ ಪ್ರಾಣವನ್ನು ಉಳಿಸಿದ್ದ.

ರೇಣು ಮಹಾರಾಜರಿಗೆ ತಿಳಿಯಿತು ಸತ್ಯ
ಹಳ್ಳಿಗೆ ಹೋದಾಗ ರೇಣು ಮಹಾರಾಜರಿಗೂ ವಿಚಿತ್ರ ಅನುಭವವೇ ಆಗಿದೆ. ಕಾರ್ತವೀರ್ಯಾರ್ಜುನನ ದರ್ಶನವಾಗಿದೆ. ಅವನು ಅಲ್ಲಿಗೆ ಬಂದಿದ್ದು ರೇಣುಕೆಯನ್ನು ಕೊಲ್ಲುವುದಕ್ಕೆ. ಆದರೆ ಅದಕ್ಕೂ ಮುನ್ನ ರೇಣು ಮಹಾರಾಜರನ್ನು ಕೊಲ್ಲುವ ಯೋಜನೆ ರೂಪಿಸಿದ್ದ. ಅದಕ್ಕೆಂದೇ ದೇವಸ್ಥಾನದಲ್ಲಿದ್ದ ಎಲ್ಲಾ ಸೈನಿಕರನ್ನು ಬೇರೆಡೆಗೆ ಕಳುಹಿಸಿದ್ದ. ರೇಣು ಮಹಾರಾಜರು ಇಕ್ಕಟ್ಟಿಗೆ ಸಿಲುಕಿದ್ದಾಗ ಮಹರ್ಷಿಗಳು ಕಾಪಾಡಿದರು. ಆದರೆ ರೇಣು ಮಹಾರಾಜರಿಗೆ ಅವರ ಮಗಳ ಶಕ್ತಿಯನ್ನು ಹೇಳಿದರು. ಈಗ ಮಹಾರಾಜರಿಗೆ ಅದರದ್ದೇ ದೊಡ್ಡ ಚಿಂತೆಯಾಗಿದೆ.
ಒಂದು ಕಡೆ ಕಾರ್ತಾವಿರ್ಯಾರ್ಜುನ. ಮತ್ತೊಂದು ಕಡೆ ರೇಣುಕೆಯ ಭವಿಷ್ಯ, ಎಲ್ಲವೂ ಮಹಾರಾಜರನ್ನು ಚಿಂತೆಗೀಡು ಮಾಡಿದೆ. ಮೊದಲೇ ಜ್ಯೋತಿಷ್ಯರು ಕೂಡ ಈಗಾಗಲೇ ಸೂಚನೆ ನೀಡಿದ್ದಾರೆ. ರೇಣುಕೆ ನಿಂತ ನೀರಲ್ಲ. ಹರಿಯುವ ನದಿ ಇದ್ದಂತೆ ಅಂತ. ಈಗ ಶತ್ರುಗಳು ಹೆಚ್ಚಾಗಿದ್ದಾರೆ. "ರೇಣುಕೆಗೆ ಅವಳ ಶಕ್ತಿ ತಿಳಿಯಬೇಕೆಂದರೆ ಇನ್ನು ಹಲವು ವರ್ಷಗಳು ಬೇಕು. ಆದರೆ ಅವಳಿನ್ನು ತೀರಾ ಚಿಕ್ಕವಳು. ಅವಳಿಗೆ ಸ್ವಂತ ಶಕ್ತಿ ಬರುವ ತನಕ ತಾನು ಇನ್ನಷ್ಟು ಕಾಪಾಡಲೇಬೇಕು. ಮಹರ್ಷಿಗಳೇನೋ ಜೊತೆಯಲ್ಲಿರುತ್ತೀನಿ ಎಂದು ತಿಳಿಸಿದ್ದಾರೆ. ಆದರೂ ನನ್ನ ಎಚ್ಚರಿಕೆಯಲ್ಲಿ ನಾವಿರಬೇಕು" ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಾ ನಿಂತಿದ್ದರು. ಇದನ್ನು ಇಂದುಮತಿ ಗಮನಿಸಿದ್ದಾಳೆ. ಆದರೆ ಇನ್ನುಳಿದ ಇಬ್ಬರು ಪತ್ನಿಯರಿಗೆ ಇದರ ಅರಿವೇ ಇಲ್ಲ.
ಯಲ್ಲಮ್ಮನ ಭೇಟಿ ಬಳಿಕ ರೇಣುಕೆ ಖುಷಿ
ರೇಣುಕೆಗೆ ತಾನೂ ಸಾವು ಗೆದ್ದು ಬಂದಿದ್ದೀನಿ ಎಂಬ ಯಾವ ಭಯವೂ ಇಲ್ಲ. ಆ ಸಾವಿನ ನಡುವೆಯೂ ಸ್ನೇಹಿತೆಯನ್ನು ನೋಡಿದ ಖುಷಿಯೇ ಅವಳಲ್ಲಿ ಎದ್ದು ಕಾಣುತ್ತಿತ್ತು. ಅದರ ಜೊತೆಗೆ ಸ್ನೇಹಿತೆಯ ಕಷ್ಟ ಮತ್ತೆ ನೀಗಿದೆ ಎಂಬ ಸಂತಸವೂ ರೇಣುಕೆಗೆ ಸಮಾಧಾನ ತಂದಿತ್ತು. ನೀಲಕಂಠನಿಗೆ ಅರಮನೆಯಲ್ಲಿ ಮತ್ತೆ ಕೆಲಸ ಸಿಕ್ಕಿದೆ. ಇದರಿಂದ ಯಲ್ಲಮ್ಮನ ಮನೆಯಲ್ಲಿ ಮತ್ತೆ ನಗು ಅರಳಿದೆ. ಇದಕ್ಕೆಲ್ಲಾ ಕಾರಣ ರೇಣುಕೆ ಎಂಬುದು ಯಲ್ಲಮ್ಮನಿಗೆ ತಿಳಿದಿಲ್ಲ ಅಷ್ಟೆ. ಆದರೂ ಸ್ನೇಹಿತೆ ಯಲ್ಲಮ್ಮನನ್ನು ಭೇಟಿಯಾಗಿ ಬಂದಿರುವ ಖುಷಿ ರೇಣುಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ರೇಣು ಮಹಾರಾಜರ ಇಬ್ಬರು ಪತ್ನಿಯರಿಗೆ ಮಕ್ಕಳಿಲ್ಲ. ಮೂರನೇಯ ಪತ್ನಿ ಇಂದುಮತಿಗೆ ಒಬ್ಬಳೇ ಮಗಳು ಅದು ರೇಣುಕೆ. ಆದರೆ ಆ ಒಬ್ಬ ಮಗಳನ್ನು ಸಹಿಸುತ್ತಿಲ್ಲ ಇನ್ನುಳಿದ ಇಬ್ಬರು ಪತ್ನಿಯರು. ಅದಕ್ಕೆ ಕೊಲ್ಲುವ ಸಂಚು ರೂಪಿಸಿದ್ದರು. ಸದ್ಯ ಬದುಕಿ ಬಂದಾಗಿದೆ. ಆದರೆ ಕೊಲ್ಲಲು ಹೊರಟ ಕೈಗಳಿಂದಾನೇ ಈಗ ಆರತಿ ಮಾಡಿಸಿಕೊಂಡಿದ್ದಾಳೆ. ಮನಸ್ಸಲ್ಲಿ ಕೆಂಡದಂತ ಕೋಪವಿದ್ದರು, ಮಂಗಳಾದೇವಿ ಮೇಲ್ನೋಟಕ್ಕೆ ಕಂದ ಎಂದೇ ಕರೆದಿದ್ದಾಳೆ.


Click it and Unblock the Notifications











