Shri Renuka Yellamma: ರೇಣುಕೆಯೇ ನಿಜವಾದ ರಾಜಕುಮಾರಿ ಎಂಬ ಸತ್ಯ ಯಲ್ಲಮ್ಮನಿಗೆ ಗೊತ್ತಾಗೋ ಸಮಯ ಬಂತು!

By ಎಸ್ ಸುಮಂತ್

ರೇಣುಕೆ ಗಂಗಾ ಪೂಜೆಗೆಂದು ಹಳ್ಳಿಗೆ ಹೋದಾಗ ಅವಳ ಪ್ರಾಣಕ್ಕೆ ಆಪತ್ತು ಬಂದಿತ್ತು. ಮನೆಯೊಳಗಿರುವ ಅದರಲ್ಲೂ ದೊಡ್ಡಮ್ಮ ಮತ್ತು ಚಿಕ್ಕಮ್ಮನೇ ಸೇರಿ ಪ್ರಾಣ ತೆಗೆಯುವುದಕ್ಕೆ ಸಕಲ ಸಿದ್ಧತೆಗಳು ನಡೆದಿತ್ತು. ಆದ್ರೆ, ಅದೃಷ್ಟವಶಾತ್ ಅಲ್ಲಿಯೇ ಇದ್ದ ನೀಲಕಂಠನಿಂದ ಪ್ರಾಣ ಉಳಿಯಿತು. ಇದು ಮರು ಜನ್ಮವೆಂದುಕೊಂಡೇ ಅರಸನ ಮನೆಯವರೆಲ್ಲಾ ಆ ಹಳ್ಳಿಯಿಂದ ವಾಪಾಸ್ಸಾದರೂ. ಅರಮನೆಗೆ ಬಂದರು.

ಈ ವೇಳೆ ನೀಲಕಂಠನ ಧೈರ್ಯಕ್ಕೆ ಎಲ್ಲರೂ ಕೊಂಡಾಡಿದರು. ರಾಜಕುಮಾರಿಯನ್ನು ಉಳಿಸಿಬಿಟ್ಟಿರಿ ಎಂದು ಊರಿನವರೆಲ್ಲರೂ ಧನ್ಯವಾದ ಅರ್ಪಿಸಿದರು. ಜೊತೆಗೆ ಮಹಾರಾಜರಿಂದಾನೂ ಶಬ್ಬಾಶ್ ಗಿರಿ ಸಿಕ್ತು. ಹೋದ ಕೆಲಸ ಮರಳಿ ಬಂತು. ನೀಲಕಂಠ ಮತ್ತೆ ಅರಮನೆಗೆ ಕೆಲಸಕ್ಕೆ ಹೋದ. ಈ ಬಾರಿ ಬರೀ ಸೈನಿಕನಾಗಿ ಅಲ್ಲ. ಬದಲಿಗೆ ರಾಜಕುಮಾರಿಯ ಅಂಗರಕ್ಷಕನಾಗಿ.

Shri Renuka Yellamma Written Update on April 18th episode.

ರೇಣುಕೆಯನ್ನು ನೋಡಲು ಬಂದ ಯಲ್ಲಮ್ಮ

ಯಲ್ಲಮ್ಮನಿಗೆ ರೇಣುಕೆಯೇ ನಿಜವಾದ ರಾಜಕುಮಾರಿ ಅಂತ ಇಲ್ಲಿಯ ತನಕ ಗೊತ್ತೇ ಆಗಿಲ್ಲ. ಅರಮನೆಯ ಅಂಗಳಕ್ಕೆ ಬಂದರೂ ಆ ಸತ್ಯ ಗೊತ್ತಾಗುವ ರೀತಿಗೆಲ್ಲಾ ಕೊಕ್ಕೆ ಬೀಳುತ್ತಿದೆ. ಇತ್ತ ರೇಣುಕೆಯನ್ನು ನೋಡಿ, ನೋಡಿದ್ಯಾ ನೀನು ಸುಳ್ಳು ರಾಜಕುಮಾರಿ ಎಂಬುದನ್ನು ಪ್ರೂವ್ ಮಾಡಿ ಬಿಟ್ಟೆ ಎಂದಿದ್ದಾಳೆ. ಜೊತೆಗೆ ರಾಜಕುಮಾರಿಯನ್ನು ರಕ್ಷಿಸಿದ್ದು ನನ್ನ ಅಪ್ಪನೇ ಎಂದು ರೇಣುಕೆಯ ಜೊತೆಗೇನೆ ಹೇಳಿದ್ದಾಳೆ.

ರೇಣುಕೆ ನೀರಿಗೆ ಬಿದ್ದ ಮೇಲೆ ಜ್ವರದಿಂದ ನರಳುತ್ತಿದ್ದಳು. ಹಳ್ಳಿಗೆ ಹೋಗಲೇಬೇಕೆಂದು ಹಂಬಲಿಸುತ್ತಿದ್ದಳು. ಇದೇ ವೇಳೆ ಅರಮನೆಯ ಆವರಣದಲ್ಲಿಯೇ ಹಳ್ಳಿಯ ರೀತಿ ಗುಡಿಸಲು ನಿರ್ಮಾಣ ಮಾಡಿ, ಅಲ್ಲಿಯೇ ಇರಿಸಲಾಗಿದೆ. ಈ ವೇಳೆ ರಾಜಕುಮಾರಿ, ಯಲ್ಲಮ್ಮನ ಹೆಸರನ್ನು ಚಡಪಡಿಸುತ್ತಿದ್ದಳು. ಆಗ ನೀಲಕಂಠನಿಗೆ ಆತಂಕವಾಗಿದೆ. ಬಳಿಕ ನೀವೇ ರಾಜಕುಮಾರಿ ಎಂಬುದು ರೇಣುಕೆಗೆ ತಿಳಿಯಬಾರದು ಎಂದು ಮಾತು ತೆಗೆದುಕೊಂಡರೆ, ನಮ್ಮಿಬ್ಬರ ಸ್ನೇಹವನ್ನು ಅಗಲಿಸಬಾರದು ಎಂದು ರೇಣುಕೆ ಕೂಡ ಮಾತು ತೆಗದುಕೊಂಡಿದ್ದಾಳೆ.

ಮಂಗಳಾದೇವಿ ನಡೆಗೆ ಸ್ವರ್ಣಲತಾ ಕೋಪ

ಈಗ ರೇಣುಕೆಯೂ ಸತ್ಯ ಹೇಳುತ್ತಿಲ್ಲ. ನೀಲಕಂಠನು ಸತ್ಯ ಹೇಳುತ್ತಿಲ್ಲ. ಆದರೆ ರಾಜಕುಮಾರಿ ಮಾತಿಗೆ ಒಪ್ಪಿಗೆ ರಾಜಕುಮಾರಿ ಎಂದು ಹೇಳಲು ಹೋಗಿ ಸಿಕ್ಕಿ ಬೀಳುತ್ತಿದ್ದ. ಅಲ್ಲಿ ಇಬ್ಬರು ಬಚಾವ್ ಆಗಿದ್ದಾರೆ. ಆದರೆ, ಮಗಳು ರೇಣುಕೆಗೆ ರೇಣು ಮಹಾರಾಜರು ಮತ್ತು ಇಂದುಮತಿ ಕಷಾಯವನ್ನು ತರುತ್ತಿದ್ದಾರೆ. ಕಷಾಯವನ್ನು ಕುಡಿಸುವ ಸಮಯದಲ್ಲಾದರೂ ಇವಳೇ ರಾಜಕುಮಾರಿ ಎಂಬ ಸತ್ಯ ಗೊತ್ತಾಗುವ ಸಾಧ್ಯತೆಯೇ ಹೆಚ್ಚಾಗಿದೆ.

Shri Renuka Yellamma Written Update on April 18th episode.

ರೇಣು ಮಹಾರಾಜರ ಅರಮನೆಯಲ್ಲಿ ಮೂವರು ಹಿತ ಶತ್ರುಗಳಿದ್ದಾರೆ. ಒಂದು ಮಂಗಳಾದೇವಿ. ಇವರು ರೇಣು ಮಹಾರಾಜರ ಮೊದಲ ಹೆಂಡತಿ. ಸ್ವರ್ಣ ಲತಾ ಕೊನೆಯ ಹೆಂಡತಿ, ಮಂಜಮ್ಮ ಮನೆಯ ಕೆಲಸದಾಕೆ. ಈ ಮೂವರಿಗೂ ರೇಣು ಮಹಾರಾಜರ ವಂಶದ ಮೇಲೆಯೇ ಕಣ್ಣು. ಇರುವ ಒಬ್ಬ ಮಗಳನ್ನು ತಮ್ಮ ಮಗಳು ಎಂದು ಭಾವಿಸದೆ ಅವಳನ್ನು ಕೊಲ್ಲುವ ಆಲೋಚನೆಯಲ್ಲಿದ್ದಾಳೆ. ಅದಕ್ಕೆ ಈಗಾಗಲೇ ಸಾಹಸ ಮಾಡಿದ್ದರು. ಆದರೆ ಈಗ ಮಂಗಳಾ ದೇವಿ ಬದಲಾವಣೆಯಾಗಿದ್ದಾಳೆ. ರೇಣುಕೆಯ ಸೇವೆ ಮಾಡುವ ನಾಟಕವಾಡುತ್ತಿದ್ದಾಳೆ. ಅದು ಯಾಕೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಸ್ವರ್ಣ ಲತಾಗೆ ಇದು ಹಿಡಿಸುತ್ತಿಲ್ಲ. ಯಾರನ್ನು ಕೊಲ್ಲಬೇಕು ಎಂದುಕೊಂಡಿದ್ದೇವೋ ಅವರ ಸೇವೆಯಲ್ಲಿ ನೀವಿದ್ದೀರಿ ಎಂದು ಕೋಪಗೊಂಡಿದ್ದಾಳೆ. ಮಂಜಮ್ಮ ಕೂಡ ಇದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಆದರೆ ಮಂಗಳಾದೇವಿ, ನನಗೆ ರಾಜರಇಗೆ ಹತ್ತಿರವಾಗುವುದೇ ಬೇಕಾಗಿದೆ ಎಂದಿದ್ದಾರೆ.

More from Filmibeat

English summary
Star suvarna serial Shri Renuka yellamma Written Update on April 18th episode. Here is the details about Renuka and Yellamma met again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X