Shri Renuka Yellamma: ರೇಣುಕೆಗಾಗಿ ಹೋದ ಯಲ್ಲಮ್ಮ ಸಂಕಷ್ಟದಲ್ಲಿ ಸಿಲುಕುತ್ತಾಳಾ..?
ರೇಣುಕೆಗೆ ಅದ್ಯಾಕೋ ಏನೋ ಆರೋಗ್ಯವೇ ಸುಧಾರಿಸುತ್ತಿಲ್ಲ. ಮಲಗಿದ್ದಲ್ಲಿಯೇ ಜ್ವರ ಮತ್ತಷ್ಟು ಬಿಗಾಡಾಯಿಸುತ್ತಿದೆ. ವೈದ್ಯರು ಎಷ್ಟೇ ಪರೀಕ್ಷೆ ಮಾಡಿದರೂ ಏನು ಎಂಬುದು ಮಾತ್ರ ಅರ್ಥವೇ ಆಗುತ್ತಿಲ್ಲ. ದಿನೇ ದಿನೆ ರೇಣುಕೆಯ ಆರೋಗ್ಯ ಇಂಥ ಸ್ಥಿತಿ ತಲುಪಿರುವುದನ್ನು ಕಂಡು ರಾಜರು ಗಾಬರಿಯಾಗಿದ್ದಾರೆ.
ನೀಲಕಂಠ ಕೂಡ ರೇಣುಕೆಯ ಜೀವ ಉಳಿಸಲು ಹರಸಾಹಸ ಪಟ್ಟಿದ್ದಾನೆ. ಮಂಕಾಳಮ್ಮನ ಬಳಿ ಹೋಗಿ ಔಷಧವನ್ನು ಕೇಳಿದ್ದಾನೆ. ಮಂಕಾಳಮ್ಮ ಹೇಳಿದ ಔಷಧ ನೀಲಕಂಠನಿಗೆ ಸಿಗಲೇ ಇಲ್ಲ. ಬರೀ ಗೈನಲ್ಲಿ ಅರಮನೆಗೆ ಬಂದ ನೀಲಕಂಠ, ಬಳಿಕ ರಾಜರ ಬಳಿ ಆ ಔಷಧದ ಬಗ್ಗೆ ಹೇಳಿದ್ದಾನೆ. ಈಗ ಸೈನಿಕರ ಜೊತೆಗೆ ಯಲ್ಲಮ್ಮನು ಕೂಡ ಔಷಧ ಹುಡುಕಿ ಹೊರಟಿದ್ದಾಳೆ.

ರೇಣುಕೆಗೆ ಬೇಕಿರುವುದು ಏನು..?
ಹಳ್ಳಿಯಿಂದ ಗಂಗಾ ಪೂಜೆ ಮುಗಿಸಿಕೊಂಡು ಬಂದ ಮೇಲಿಂದ ರೇಣುಕೆ ಆರೋಗ್ಯ ತಪ್ಪಿದ್ದಾಳೆ. ಎಷ್ಟೇ ಔಷಧ ನೀಡಿದರು ರೇಣುಕೆ ಸರಿಯಾಗುತ್ತಿಲ್ಲ. ಮಹಾರಾಣಿ, ಮಹಾರಾಜರಿಗೆ ಗಾಬರಿಯಾಗಿದೆ. ಅಷ್ಟೇ ಅಲ್ಲ ಇಡೀ ಅರಮನೆ ಗಾಬರಿಯಿಂದ ನೋಡುತ್ತಿದೆ. ರೇಣುಕೆಗೆ ಬೆಟ್ಟದ ಮೇಲೊಂಡು ಬೆಳೆದಿರುವ ಗಿಡದಲ್ಲಿ ಔಷಧ ತಂದರೆ ಅವಳ ಆರೋಗ್ಯ ಸರಿಯಾಗುತ್ತದೆ. ಆದರೆ ಅದು ಸಿಗದೆ ರೇಣುಕೆಯ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ.
ನೀಲಕಂಠನಿಗೂ ಆ ಔಷಧ ಸಿಕ್ಕಿಲ್ಲ. ಆದರೆ, ರೇಣುಕೆ ಸರಿಯಾಗಬೇಕೆಂದರೆ ಆ ಔಷಧ ಬೇಕೆ ಬೇಕು. ಹೀಗಾಗಿ ರಾತ್ರಿ ಐದು ಜನ ಸೈನಿಕರನ್ನು ರಾಜರು ಕಾಡಿಗೆ ಕಳುಹಿಸಿದ್ದಾರೆ. ರಾತ್ರಿಯೆಲ್ಲಾ ಕಾಡಿನಲ್ಲಿ ಆ ಔಷಧ ಎಲ್ಲಿ ಸಿಗುತ್ತದೆ ಎಂದು ಸೈನಿಕರು ಅರಸಿ ಹೊರಟಿದ್ದಾರೆ. ಜೀವದ ಮೇಲಿನ ಭಯದಿಂದಾನೇ ಹೊರಟಿದ್ದಾರೆ. ಎಲ್ಲಿ ಕಾಡು ಪ್ರಾಣಿಗಳು ಬರುತ್ತವೋ ಎಂದು ಹೆದರಿ ಸೈನಿಕನೊಬ್ಬ ವಾಪಾಸ್ ಹೋಗೋಣಾ ಎಂದಾಗ, ಇನ್ನುಳಿದ ಸೈನಿಕರು ಅನ್ನ ತಿಂದಿರುವ ಋಣಕ್ಕಾದರೂ ನಾವೂ ರಾಜಕುಮಾರಿಯವರಿಗೆ ಔಷಧ ತರಬೇಕು ಎಂದು ಮುಂದೆ ಸಾಗಿದ್ದಾರೆ.
ಯಲ್ಲಮ್ಮನ ಶಕ್ತಿ ಪ್ರದರ್ಶನವಾಗುತ್ತಾ..?
ರೇಣುಕೆ ಎಂದರೆ ಯಲ್ಲಮ್ಮನಿಗೆ ಅದೆಷ್ಟು ಇಷ್ಟ ಎಂಬುದು ನೋಡಿದವರಿಗೆ ತಿಳಿಯುತ್ತದೆ. ರೇಣುಕೆಗಾಗಿ ಯಲ್ಲಮ್ಮ ಯಾವ ಸಾಹಸಕ್ಕೆ ಬೇಕಾದರೂ ಕೈ ಹಾಕುತ್ತಾಳೆ. ಈಗ ಅವಳ ಆರೋಗ್ಯ ಸರಿಯಾಗಲೂ ಕಾಡಿಗೆ ಒಬ್ಬಳೆ ಹೊರಟಿದ್ದಾಳೆ. ಎಲ್ಲರೂ ಮಲಗಿರುವಾಗ, ಬೆಳಕೊಂದನ್ನು ತೆಗೆದುಕೊಂಡು, ಕಾಡಿನ ಹಾದಿಯಲ್ಲಿ ಒಂಟಿ ಹೆಜ್ಜೆ ಹಾಕಿದ್ದಾಳೆ. ತೆಪ್ಪದಲ್ಲಿ ಒಬ್ಬಳೆ ದಡ ದಾಟುತ್ತಿದ್ದಾಳೆ. ಅದರ ನಡು ನಡುವೆ ನಿದ್ದೆ ಬಂದಂತೆ ಭಾಸವಾದರೂ ರೇಣುಕೆಯನ್ನು ನೆನಪಿಸಿಕೊಂಡು ಔಷಧವಿರುವ ಜಾಗ ತಲುಪಿದ್ದಾಳೆ.

ಕಾರ್ತವೀರ್ಯಾರ್ಜುನನಿಗೆ ರೇಣು ಮಹಾರಾಜರ ಮೇಲಿನ ಕೋಪ ಹೋಗುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಅವರ ಮನೆಯಲ್ಲಿಯೇ ತನ್ನ ಪ್ರಾಣ ತೆಗೆಯುವ ಮಗು ಹುಟ್ಟಿದೆ ಎಂಬುದು ಆತನಿಗೆ ತಿಳಿದಿದೆ. ಹೀಗಾಗಿ ಸಾಯಿಸಲೇಬೇಕೆಂದು ಪಣ ತೊಟ್ಟಿದ್ದಾನೆ. ಮಹರ್ಷಿಗಳು ಅದಕ್ಕೆ ಅಡ್ಡಿಯಾದಾಗಲೂ ರಾಕ್ಷಸ ಬುದ್ದಿ ಕಲಿತಿಲ್ಲ. ಈಗ ಕಾಡಿಗೆ ಔಷಧ ತರಲು ಹೋದವರ ಹಿಂದೆ ದೊಡ್ಡ ಹಾವನ್ನು ಬಿಟ್ಟಿದ್ದಾನೆ. ಯಲ್ಲಮ್ಮ ಔಷಧಿ ತೆಗೆದುಕೊಂಡು ಕಾಡಿನ ಮಧ್ಯೆ ಬರುವಾಗ ಈ ಹಾವು ಅವಳನ್ನು ತಡ ಹಾಕಿದೆ. ಅಲ್ಲಿಂದ ತಪ್ಪಿಸಿಕೊಂಡು ಬರುವುದಕ್ಕೆ ಹೋದಾಗಲೂ ಹಾವು ಯಲ್ಲಮ್ಮನ ದೇಹವನ್ನು ಸುತ್ತು ಹಾಕಿದೆ. ತನ್ನ ಬಾಲದಿಂದ ಯಲ್ಲಮ್ಮನನ್ನು ಕಟ್ಟಿ ಹಾಕಿದೆ. ಕಾಡಿನ ನಡುವೆ ಸಹಾಯಕ್ಕೆಂದು ಯಾರು ಇಲ್ಲ. ಈಗ ಯಲ್ಲಮ್ಮ ತನ್ನ ಕನಸಿನಲ್ಲಿ ಕಂಡ ಶಕ್ತಿಯನ್ನು ಉಪಯೋಗಿಸಲೇಬೇಕಿದೆ. ತನ್ನ ಗೆಳತಿಯನ್ನು ಔಷಧ ನೀಡಿ ಕಾಪಾಡಿಕೊಳ್ಳಲೇಬೇಕಿದೆ.


Click it and Unblock the Notifications











