Shri Renuka Yellamma: ರೇಣುಕೆಯನ್ನು ಜಲಕಂಟಕದಿಂದ ಕಾಪಾಡುತ್ತಾನಾ ನೀಲಕಂಠ..?
ಹಳ್ಳಿಗೆ ಗಂಗಾಪೂಜೆಗೆಂದು ಅರಸರ ಕುಟುಂಬಸ್ಥರು ಬಂದಿದ್ದಾರೆ. ಹಳ್ಳಿ ಜನ ಕೂಡ ಅರಸರ ಕುಟುಂಬಸ್ಥರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಅರಸರೆಂದರೆ ಹಳ್ಳಿಯ ಜನಕ್ಕೂ ಬಹಳ ಗೌರವ. ಯಾಕಂದ್ರೆ ಹಳ್ಳಿ ಮಂದಿಗೆ ಅಷ್ಟು ಸಹಾಯ ಮಾಡಿದ್ದಾರೆ. ಕಷ್ಟ-ಸುಖಕ್ಕೆ ಆಗಿದ್ದಾರೆ. ಹೀಗಾಗಿ ಅರಸರ ಮನೆಯವರು ಎಂದರೆ ಹಳ್ಳಿ ಜನರಿಗೆ ಗೌರವ.
ಅರಸರ ಮನೆಯವರಿಗೆ ಹಳ್ಳಿಯವರ ಪ್ರೀತಿ ಎಷ್ಟಿದೆಯೋ ಶತ್ರುಗಳು ಅಷ್ಟೇ ಜನ ಇದ್ದಾರೆ. ಮನೆಯಲ್ಲಿಯೇ ಶತ್ರುಗಳನ್ನು ಅರಸರು ಇಟ್ಟುಕೊಂಡಿದ್ದಾರೆ. ಮೊದಲನೇ ಹೆಂಡತಿ, ಎರಡನೇ ಹೆಂಡತಿಯೇ ದೊಡ್ಡ ಶತ್ರುಗಳು. ಮಗಳನ್ನೇ ಕೊಲ್ಲಲು ಎಲ್ಲಾ ತಯಾರಿ ಮಾಡಿದ್ದಾರೆ. ಆದರೆ ಈಗ ರೇಣುಕೆಯನ್ನು ಕಾಪಾಡುವ ಜವಾಬ್ದಾರಿ ನೀಲಕಂಠನ ಮೇಲಿದೆ.

ನೀಲಕಂಠನಿಗೆ ತಿಳಿಯಿತು ರೇಣುಕೆಯ ಅಪಾಯ
ರೇಣುಕೆಯನ್ನು ಕೊಲ್ಲಲೇಬೇಕೆಂದು ಮಂಗಳಾದೇವಿ ಮತ್ತು ಸ್ವರ್ಣಲತಾ ಇಬ್ಬರು ಕಾಯುತ್ತಿದ್ದಾರೆ. ಈ ಇಬ್ಬರು ರಾಜರ ಹೆಂಡತಿಯರೇ. ಆದರೆ ಇಬ್ಬರಿಗೂ ಮಕ್ಕಳಿಲ್ಲ. ಮೂರನೇಯ ಹೆಂಡತಿ ಇಂದುಮತಿಗೆ ಒಬ್ಬ ಮಗಳಿದ್ದಾಳೆ. ಅವಳೆ ರೇಣುಕೆ. ಈ ರೇಣುಕೆಯನ್ನು ಕೊಲ್ಲಲು ಅರಮನೆಯ ಕೆಲಸದಾಕೆ ಮಂಜಮ್ಮನನ್ನು ಬಳಸಿಕೊಳ್ಳುತ್ತಿದ್ದಾರೆ. ಮಂಜಮ್ಮ ಕೊಲ್ಲುವ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಕೊಲ್ಲವವರನ್ನು ಕರೆಸಿದ್ದಾಳೆ. ಇವರು ಕೊಲ್ಲುವ ಬಗ್ಗೆ ಮಾತನಾಡುವಾಗ ನೀಲಕಂಠನಿಗೆ ಕೇಳಿಸಿದೆ.
ಹಳ್ಳಿಯಲ್ಲಿ ರೇಣು ಮಹಾರಾಜರ ಕುಟುಂಬವೆಲ್ಲಾ ಗಂಗಾ ಪೂಜೆಗೆ ಹೋಗಿದ್ದಾರೆ. ರಾಜರು ಬಂದಾಗ ಎಲ್ಲಾ ರೀತಿಯ ಭದ್ರತೆಯನ್ನು ಮಾಡುತ್ತಾರೆ. ಈ ಬಾರಿ ಹಳ್ಳಿಗೆ ಅರಸರು ಬಂದಾಗ ಈಗಾಗಲೇ ಎಲ್ಲಾ ಭದ್ರತೆ ಮಾಡಲಾಗಿದೆ ಎಂದುಕೊಳ್ಳಲಾಗಿತ್ತು. ಆದರೆ ಅರಸರು ದೇವಸ್ಥಾನಕ್ಕೆ ಬಂದಾಗಲೇ ತಿಳಿದಿದ್ದು, ಅಲ್ಲಿ ಯಾವ ಸೈನಿಕರು ಇಲ್ಲ ಎಂಬುದು. ಅಲ್ಲಿ ಏನೋ ಯಡವಟ್ಟು ಆಗಿದೆ ಎಂಬುದಂತು ಗೊತ್ತಾಗಿದೆ. ರಾಕ್ಷಸನೊಬ್ಬ ಬಂದಿರುವುದು ಇನ್ನು ಅವರ ಗಮನಕ್ಕೆ ಬಂದಿಲ್ಲ.

ಅರಸನ ಮಗಳನ್ನು ನೀಲಕಂಠನೇ ಕಾಪಾಡಬೇಕು
ಆ ಕಡೆ ರೇಣು ಮಹಾರಾಜರು ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಕಡೆ ಬಾಗಿನ ಬಿಡುವುದಕ್ಕೆ ಎಲ್ಲಾ ತಯಾರಿ ನಡೆಯುತ್ತಿದೆ. ಇಂದುಮತಿ ಮೊದಲ ಹೆಂಡತಿಗೆ ಬಾಗಿನ ಬಿಡುವುದಕ್ಕೆ ಹೇಳಿದ್ದಾಳೆ. ಹೀಗಾಗಿ ಮಂಗಳಾದೇವಿ ಹಾಗೂ ಸ್ವರ್ಣ ಲತಾ ಬಾಗಿನ ಅರ್ಪಿಸಿದ್ದಾರೆ. ಈಗ ರೇಣುಕೆಯ ಸರದಿ ಬಂದಿದೆ. ಇಂದುಮತಿ ಮತ್ತು ರೇಣುಕೆ ಬಾಗಿನ ಬಿಡಬೇಕಾಗಿದೆ. ರೇಣುಕೆಗೆ ಈ ಸಂದರ್ಭ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಆದರೆ ಅವಳ ಗಮನವೆಲ್ಲಾ ಯಲ್ಲಮ್ಮನ ಕಡೆಗೆ ಇದೆ. ತುಂಬಾ ನಂಬಿಕೆ ಇಟ್ಟಿದ್ದಳು. ಯಲ್ಲಮ್ಮ ಬಂದೇ ಬರುತ್ತಾಳೆ ಅಂತ. ಆದರೆ ಯಲ್ಲಮ್ಮ ಬರಲೇ ಇಲ್ಲ. ಯಲ್ಲಮ್ಮನಿಗೆ ರಾಜರ ಪ್ರಾಣ ಉಳಿಸುವ ಆತಂಕ. ಹೀಗಾಗಿ ದೇವಸ್ಥಾನದ ಕಡೆಗೆ ಓಡಿದ್ದಾಳೆ.
ನೀಲಕಂಠನಿಗೆ ಸತ್ಯ ಗೊತ್ತಾಗಿದ್ದೆ ತಡ, ತಾನು ಸೈನಿಕ ಸ್ಥಾನದಿಂದ ವಜಾಗೊಂಡಿದ್ದೇನೆ ಎಂಬುದನ್ನು ಮರೆತು, ಮೊದಲು ರೇಣುಕೆಯನ್ನು ಕಾಪಾಡಬೇಕೆಂದುಕೊಂಡು ಓಡಿದ್ದಾನೆ. ಬಾಗಿನ ಅರ್ಪಿಸುವ ಸಮಯದಲ್ಲಿ ಮಹಾರಾಜರ ಹೆಸರನ್ನು ಕೂಗಿದ್ದಾರೆ. ನೀಲಕಂಠ ಕೂಡ ಅಲ್ಲಿಗೆ ಬಂದಿದ್ದಾನೆ. ಆಗ ರಾಜಕುಮಾರಿ ನೀರಿಗೆ ಇಳಿಯಬೇಡಿ ಎಂದು ಕಿರುಚಿದರು ಅದು ಕೇಳಿಸುತ್ತಿಲ್ಲ. ರೇಣುಕೆ ಮುಂದಕ್ಕೆ ಬಂದು ಬಾಗಿನ ಬಿಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾಳೆ. ಈಗ ರೇಣುಕೆಯನ್ನು ನೀಲಕಂಠನೇ ಕಾಪಾಡಬೇಕಾದ ಸ್ಥಿತಿ ಇದೆ. ಆ ಕಡೆ ಮಹಾರಾಜರನ್ನು ಕಾಪಾಡುವುದಕ್ಕೆ ಯಲ್ಲಮ್ಮ ಪ್ರಯತ್ನ ಪಡುತ್ತಿದ್ದಾಳೆ. ಈಗ ರೇಣುಕೆಯನ್ನು ಜಲಕಂಟಕದಿಂದ ನೀಲಕಂಠನೇ ಕಾಪಾಡಬೇಕಾಗಿದೆ.


Click it and Unblock the Notifications











