Shri Renuka Yellamma: ನೀಲಕಂಠನೇನೋ ರೇಣುಕೆಯನ್ನು ಕಾಪಾಡಿದ.. ಆದರೆ ಯಲ್ಲಮ್ಮ?

By ಎಸ್ ಸುಮಂತ್

ಯಲ್ಲಮ್ಮ ಮತ್ತು ರೇಣುಕೆ‌ ಮತ್ತೆ ಮುಖಾ ಮುಖಿಯಾಗುವ ಸಮಯ ಬಂದಿದೆ. ಯಲ್ಲಮ್ಮನನ್ನು ನೋಡುವ ಕಾತುರದಿಂದಾನೇ ರೇಣುಕೆ ಹಳ್ಳಿಗೆ ಹೊರಟಿದ್ದಳು. ಗಂಗೆ ಪೂಜೆಯನ್ನು ಮಾಡಿದ್ದಳು. ಆದರೆ ಎಲ್ಲಿ ನೋಡಿದರೂ ಯಲ್ಲಮ್ಮ ಮಾತ್ರ ಕಾಣಲೇ ಇಲ್ಲ. ಹೋಮಕ್ಕೆ‌ ಕುಂತಾಗಲೂ ರೇಣುಕೆಗೆ ಯಲ್ಲಮ್ಮನದ್ದೇ ಚಿಂತೆ. ಆದರೂ ಯಲ್ಲಮ್ಮ ಬರಲೇ ಇಲ್ಲ. ಯಲ್ಲಮ್ಮನಿಗೋ ಮೊದಲು ಅರಸರ ಪ್ರಾಣ ಉಳಿಸುವ ಚಿಂತೆಯಾಗಿತ್ತು. ಅದಕ್ಕೆ ಕಾರ್ತವೀರ್ಯಾರ್ಜುನನ ಕೆಟ್ಟತನವನ್ನು ತಿಳಿಸಲು ಒಂದೇ ಸಮನೇ ಓಡಿದ್ದಾಳೆ.

ಯಲ್ಲಮ್ಮನಿಗೂ ಕುತೂಹಲ. ರೇಣುಕೆ ತಾನೇ ರಾಜಕುಮಾರಿ ಎಂದರೂ ಅವಳು ನಂಬುತ್ತಿಲ್ಲ. ಅದೇ ಕುತೂಹಲದಿಂದ ಹಳ್ಳಿಗೆ ಬಂದ ರೇಣುಕೆಯನ್ನು ನೋಡಬೇಕೆಂದುಕೊಂಡು ಬಂದಿದ್ದಳು. ಅಮ್ಮನ ಜೊತೆ ಜೊತೆಗೆ ಗಂಗಾ ಪೂಜೆ ನಡೆಯುವ ಸ್ಥಳಕ್ಕೆ ಹೋಗಲು ಹೆಜ್ಜೆ ಹಾಕುತ್ತಿದ್ದಳು. ಆದರೆ ಅರಸರ ಜೀವಕ್ಕೆ ಹಾನಿಯಾಗುತ್ತಿದೆ ಎಂದು ಗೊತ್ತಾದಾಗಲೇ ರೇಣುಕೆಯನ್ನು ಮರೆತು ಅರಸರನ್ನು ಹುಡುಕಿಕೊಂಡು ಹೊರಟಿದ್ದಾಳೆ.

Shri Renuka Yellamma Written Update on April 5th episode.

ಮಹರ್ಷಿಗಳು ಬಂದಿದ್ದಕ್ಕೆ ಪ್ರಾಣ ಉಳಿಯಿತು

ರೇಣು ಮಹಾರಾಜರನ್ನು ಕೊಲ್ಲಲು ಕಾರ್ತವೀರ್ಯಾರ್ಜುನ ಶತಸಿದ್ಧನಾಗಿ ಬಂದು ನಿಂತಿದ್ದಾನೆ. ರೇಣು ಮಹಾರಾಜರ ಮನೆಯಲ್ಲಿ ಅವನ ಕೊಲ್ಲುವ ಕೂಸೊಂದು ಹುಟ್ಟಿದೆ ಎಂದು ಗೊತ್ತಾದ ಮೇಲೆ ಸಂಹಾರ ಮಾಡಲೆಂದೇ ಬಂದಿದ್ದ. ಹಳ್ಳಿಗೆ ಅರಸರು ಗಂಗಾ ಪೂಜೆಗೆಂದು ಬರುತ್ತಿದ್ದಾರೆಂದು ತಿಳಿದು, ಅಲ್ಲಿಗೆ ಬಂದಿದ್ದಾನೆ. ದೇವಸ್ಥಾನದಲ್ಲಿ ಕಾವಲಿದ್ದ ಎಲ್ಲಾ ಸೈನಿಕರನ್ನೆಲ್ಲ ಕಳುಹಿಸಿದ್ದಾನೆ. ಆದರೆ ಅಪಾಯದಲ್ಲಿದ್ದ ಅರಸರನ್ನು ಮಹರ್ಷಿಗಳು ಕಾಪಾಡಿದ್ದಾರೆ.

ಮಹರ್ಷಿಗಳಿಗೆ ಕಾರ್ತವೀರ್ಯರ್ಜುನ ಹೆದರುತ್ತಾನೆ. ಅವರು ಹೇಳಿದ ಮಾತಿಗೆ ಎದುರು ಮಾತನಾಡುವುದಿಲ್ಲ. ಈಗ ಮಹಾರಾಜರನ್ನು ಉಳಿಸುವ ಸಲುವಾಗಿ, ನಾನು ಮತ್ತು ಧರ್ಮಪತ್ನಿ ನಿಮ್ಮ ಅರಮನೆಯಲ್ಲಿಯೇ ಇನ್ನು ಮುಂದೆ ವಾಸ ಎಂದಿದ್ದಾರೆ. ಜೊತೆಗೆ ಕಾರ್ತವೀರ್ಯಾರ್ಜುನಿಗೆ ಇನ್ಮುಂದೆ ನಾನು ಅವರ ಜೊತೆಗೆ ಇರುತ್ತೇನೆ. ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದೇ ಎಚ್ಚರಿಕೆ ನೀಡಿದ್ದಾರೆ. ಮಹರ್ಷಿಗಳ ಎಚ್ಚರಿಕೆಯಿಂದ ಕಾರ್ತವೀರ್ಯಾರ್ಜನ ದಂಗಾಗಿ ಹೋಗಿದ್ದಾನೆ.

Shri Renuka Yellamma Written Update on April 5th episode.

ಅರಸರ ಬಳಿಗೆ ನೀಲಕಂಠ

ಮಂಜಮ್ಮ, ರೇಣುಕೆಯ ಪ್ರಾಣ ತೆಗೆಯಲು ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಳು. ಅದರಂತೆಯೇ ರೇಣುಕೆ ಬಾಗಿನ ಬಿಡಲು ಹೋದ ತಕ್ಷಣ ಅವಳನ್ನು ನೀರಿಗೆ ಮುಳುಗಿಸಿದ್ದರು. ಇದನ್ನು ಕಂಡ ನೀಲಕಂಠ, ನೀರಿಗೆ ಹಾರಿ ರೇಣುಕೆಯ ಪ್ರಾಣ ಉಳಿಸಿದ್ದಾನೆ. ಈಗ ರೇಣುಕೆ,‌ಅಪ್ಪನ ಬಳಿಕ ನೀಲಕಂಠನನ್ನು ಕರೆದುಕೊಂಡು ಹೋಗುವ ಪ್ಲ್ಗಾನ್ ಮಾಡಿದ್ದಾಳೆ. ನೀಲಕಂಠ ಅವರೇ ನನ್ನ ಪ್ರಾಣ ಉಳಿಸಿದ್ದು ಎಂದು ಅಪ್ಪನ ಬಳಿ ಹೇಳಬೇಕು ಎಂದು ಹೊರಟಿದ್ದಾಳೆ‌. ನೀಲಕಂಠನಿಗೆ ತನ್ನಿಂದಾನೇ ಹೋದ ಕೆಲಸವನ್ನು ತಂದುಕೊಡುವ ಸಂತಸದಲ್ಲಿದ್ದಾಳೆ.

ಇತ್ತ ಯಲ್ಲಮ್ಮನನ್ನು ಹೇಗಾದರೂ ಮಾಡಿ ಯಲ್ಲಮ್ಮನನ್ನು ನಮ್ಮ ಸಂಘಕ್ಕೆ ಕರೆದುಕೊಂಡು ಹೋಗಬೇಕೆಂಬ ಹಠ ಅವಳದ್ದು. ಇದು ಅದಾಗಲೇ ಯಲ್ಲಮ್ಮ‌ನ ತಾಯಿಗೂ ಗೊತ್ತಾಗಿದೆ. ಸೌಗಂಧಿಕಳಿಂದ ದೂರ ಇರುವುದಕ್ಕೆ ಹೇಳಿದ್ದಾಳೆ. ಆದರೆ ಸೌಗಂಧಿಕಳಿಗೆ ಹಠ ಅಂದ್ರೆ ಹಠ. ಅವಳನ್ನು ಹೇಗಾದರೂ ಮಾಡಿ, ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ಅಮ್ಮನ ಮಾತನ್ನು ಯಲ್ಲಮ್ಮ ಕೂಡ ಮೀರಿಲ್ಲ. ಆದರೆ ಸೌಗಂಧಿಕ ತನ್ನ ಹಠ ಬಿಟ್ಟಿಲ್ಲ. ಎಲ್ಲರೂ ಗಂಗಾ ಪೂಜೆಯಲ್ಲಿ ಮಗ್ನರಾಗಿರುವ ಸಮಯದಲ್ಲಿ ಸೌಗಂಧಿಕ ಪ್ಲ್ಗಾನ್ ಮಾಡಿದ್ದಾಳೆ. ಅದಕ್ಕೆಂದೇ ರೌಡಿಗಳಿಂದ ಯಲ್ಲಮ್ಮನನ್ನು ಕಿಡ್ನ್ಯಾಪ್ ಮಾಡಿದ್ದಾಳೆ. ಈಗ ಯಲ್ಲಮ್ಮನನ್ನು ಕಾಪಾಡಲು ದೇವರೇ ಬರಲೇಬೇಕಾಗಿದೆ.

More from Filmibeat

English summary
Star Suvarna serial Shri Renuka Yellamma Written Update on April 5th episode. Here is the details about Yellamma kidnap,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X