Renuka Yellamma: ಶತ್ರುಗಳು ಕೊಲ್ಲಲು ನೋಡುತ್ತಿದ್ದಂತೆ ರೇಣುಕಾ -ಯಲ್ಲಮ್ಮನ ಶಕ್ತಿ ಗೊತ್ತಾಯ್ತು!
ರೇಣುಕಾ ಮತ್ತು ಯಲ್ಲಮ್ಮ ದೇವರ ಆಶೀರ್ವಾದಿಂದ ಹುಟ್ಟಿರುವವರು. ರೇಣುಕೆ ಅರಮನೆಯಲ್ಲಿ ಬೆಳೆಯುತ್ತಿದ್ದರೆ, ಯಲ್ಲಮ್ಮ ಮಾತ್ರ ಅದೇ ಅರಮನೆಯ ಸೈನಿಕನ ಮಗಳಾಗಿದ್ದಾಳೆ. ಅದ್ಯಾವುದೋ ಸಮಯದಲ್ಲಿ ಇಬ್ಬರು ಒಂದಾಗಿದ್ದರು. ರೇಣುಕೆ ಮತ್ತು ಯಲ್ಲಮ್ಮ ಬೆಸ್ಟ್ ಫ್ರೆಂಡ್ಸ್ ಆದರು. ಆದರೆ, ಪ್ರತಿ ದಿನವೂ ನೋಡುವುದಕ್ಕೆ ಆಗುವುದಿಲ್ಲ ಎಂಬ ಬೇಸರ ಇಬ್ಬರದ್ದು.
ಇತ್ತೀಚೆಗೆ ಇಬ್ಬರು ಭೇಟಿ ಮಾಡುವ ಯೋಜನೆ ರೂಪಿಸಿಕೊಂಡರು. ಆದರೆ, ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ. ರೇಣುಕೆ ಅರಮನೆಯಿಂದ ಬರುವುದಕ್ಕೆ ಆಗಲಿಲ್ಲ. ಯಲ್ಲಮ್ಮ ಕಾಡಿನೊಳಗೆ ಬಂದರೂ, ಅಪ್ಪನ ಸ್ಥಿತಿ ಕಂಡು ಮುಂದೆ ಸಾಗಲು ಆಗಲಿಲ್ಲ. ಅಪ್ಪ ಕೆಲಸ ಕಳೆದುಕೊಂಡಿದ್ದನ್ನು ಕೇಳಿ, ಅಪ್ಪನಿಗೆ ಸಮಾಧಾನ ಮಾಡುತ್ತಾ ಕುಳಿತಳು. ಅಪ್ಪ ಕೆಲಸ ಹೋದ ಮೇಲೆ ಕಾಡಿಗೆ ಬಂದು ದಿನ ಕಳೆಯುವ ಅಪ್ಪನನ್ನು ಕಂಡು, ಯಲ್ಲಮ್ಮ ಕೂಡ ಕಣ್ಣೀರು ಹಾಕಿದಳು. ಆದರೆ, ಅಪ್ಪನ ಈ ಸ್ಥಿತಿಗೆ ರೇಣುಕೆ ಕೊಟ್ಟ ಆ ಪದಕವೇ ಕಾರಣ ಎಂಬುದು ತಿಳಿಯಲೇ ಇಲ್ಲ.

ಯಲ್ಲಮ್ಮನನ್ನು ಕಾಣಲು ರೇಣುಕೆ ಕಾತರ
ರೇಣುಕೆಗೆ ಹಳ್ಳಿಯ ವಾತಾವರಣ, ಅಲ್ಲಿನ ಹಸು ಕರುಗಳ ಮೇಲಿನ ಆಕರ್ಷಣೆ ಜಾಸ್ತಿ. ಅದಾಗಲೇ ಜ್ಯೋತಿಷ್ಯರು ರೇಣುಕೆಯ ಭವಿಷ್ಯವನ್ನು ನುಡಿದಿದ್ದಾರೆ. ರೇಣುಕೆ ಹರಿವ ನದಿಯಂತೆ. ಆಕೆ ಅರಮನೆಯೊಳಗೆ ಇರಲ್ಲ ಅಂತ. ರೇಣು ಮಹಾರಾಜನಿಗೆ ಇದು ಆತಂಕ. ಹೀಗಾಗಿ ರೇಣುಕೆಗೆ ನಾವೇ ಅವಳಿಷ್ಟದ ಪ್ರಪಂಚ ತೋರಿಸೋಣಾ ಎಂದುಕೊಂಡಿರುವ ಮಹಾರಾಜರು, ಹಳ್ಳಿಯ ಗಂಗೆ ಪೂಜೆಗೆ ರೇಣುಕೆಯನ್ನು ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ.
ರೇಣುಕೆ ಮತ್ತು ಯಲ್ಲಮ್ಮ ಭೇಟಿಯಾಗಲು ಗಂಗೆ ಪೂಜೆಯ ನೆಪ ಸಿಕ್ಕಿದೆ. ಆದರೆ ಇಲ್ಲಿ ಅಪಾಯವೂ ಹೆಚ್ಚಾಗಿದೆ. ಯಾಕಂದ್ರೆ, ಅರಮನೆಯಲ್ಲಿಯೇ ಅದಾಗಲೇ ರೇಣುಕೆಯ ಪ್ರಾಣ ತೆಗೆಯಲು ಯೋಜನೆ ರೂಪಿಸಲಾಗಿದೆ. ಗಂಗಾ ಪೂಜೆಯ ವೇಳೆ ರೇಣುಕೆಯನ್ನು ಕೊಲ್ಲಲು ಸೈನಿಕರ ರೂಪದಲ್ಲಿ ಕಳ್ಳರನ್ನು ಮಂಗಳಾದೇವಿ ಕಡೆಯಿಂದ ತಯಾರಾಗಿದೆ ಜೊತೆಗೆ ಕಾಂತಾವೀರ್ಯ ರಾಕ್ಷಸ ಕೂಡ ಭೂಮಿಗೆ ಬಂದಿದ್ದಾನೆ. ಅವನ ಟಾರ್ಗೆಟ್ ರೇಣು ಮಹಾರಾಜರೇ ಆಗಿದ್ದಾರೆ.

ಯಲ್ಲಮ್ಮನನ್ನು ಕೊಲ್ಲಲು ಬಂದ ರಾಕ್ಷಸ
ಇತ್ತ ರೇಣುಕೆ ಬಂದಿದ್ದಾಳೆ ಎಂಬ ಖುಷಿಯಲ್ಲಿ ಯಲ್ಲಮ್ಮ ಒಬ್ಬಳೆ ಕಾಡಿನ ಒಳಗೆ ಬಂದಿದ್ದಾಳೆ. ಅವಳನ್ನು ಕಂಡ ರಾಕ್ಷಸ, ಹಿಂಬಾಲಿಸಿಕೊಂಡು ಬಂದಿದ್ದಾನೆ. ಇದನ್ನು ರೇಣುಕೆ ಕೂಡ ಕಂಡಿದ್ದಾಳೆ. ಯಲ್ಲಮ್ಮ ತನ್ನ ಪಾಡಿಗೆ ತಾನು ರೇಣುಕೆಯನ್ನು ಹುಡುಕಿಕೊಂಡು ಮುಂದೆ ಮುಂದೆ ಸಾಗಿದ್ದಾಳೆ. ರಾಕ್ಷಸನು ಆಕೆಯ ಹಿಂದೆ ಹಿಂದೆ ಹೋಗಿದ್ದಾನೆ. ಇದನ್ನು ಯಲ್ಲಮ್ಮ ಗಮನಿಸುವಷ್ಟರಲ್ಲಿ ರೇಣುಕೆ ಅವಳ ಸಹಾಯಕ್ಕೆ ಬಂದು ನಿಂತಿದ್ದಳು.
ರಾಕ್ಷಸನಿಗೆ ಯಲ್ಲಮ್ಮ ಟಾರ್ಗೆಟ್. ಅದಕ್ಕಾಗಿ ಅವಳನ್ನು ಹಿಂಬಾಲಿಸಿಕೊಂಡು ಬಂದು ಕೊಲ್ಲಲು ನೋಡಿದ. ಆದರೆ, ತಕ್ಷಣ ರೇಣುಕೆ ತನ್ನ ಶಕ್ತಿ ಬಳಸಿ, ಆ ರಾಕ್ಷಸನನ್ನು ಕೆಳಗೆ ಬೀಳುವಂತೆ ಮಾಡಿದಳು. ರೇಣುಕೆಯ ಒಬ್ಬಳ ಶಕ್ತಿಯಿಂದ ರಾಕ್ಷಸ ಸುಧಾರಿಸಿಕೊಂಡು ಮತ್ತೆ ಮತ್ತೆ ಎದ್ದೇಳುವುದಕ್ಕೆ ಪ್ರಯತ್ನ ಪಟ್ಟಿದ್ದಾನೆ. ರೇಣುಕೆಯ ಶಕ್ತಿಯನ್ನು ನೋಡಿ ಖುಷಿ ಪಡುತ್ತಿದ್ದ ಯಲ್ಲಮ್ಮ, ತನ್ನಲ್ಲೂ ಶಕ್ತಿ ಇದೆ ಎಂಬುದನ್ನು ಮರೆತು ನಿಂತಿದ್ದಳು. ಆದರೆ ಅದ್ಯಾವಾಗ ರಾಕ್ಷಸ ಮತ್ತೆ ಎದ್ದೇಳಲು ಯತ್ನಿಸಿದನೋ ಆಗ ಯಲ್ಲಮ್ಮ ಕೂಡ ತನ್ನ ಶಕ್ತಿ ತೋರಿಸಿದಳು. ರೇಣುಕೆ ಮತ್ತು ಯಲ್ಲಮ್ಮನ ಶಕ್ತಿಯಿಂದ ರಾಕ್ಷಸ ಸತ್ತು ಹೋದ.


Click it and Unblock the Notifications











