'ಸರಿಗಮಪ ಸೀಸನ್ 17'; ವಿನ್ನರ್ ಆಗಿ ಹೊರಹೊಮ್ಮಿದ ಶ್ರೀನಿಧಿ ಶಾಸ್ತ್ರಿ

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ 17ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ನಿನ್ನೆ (ಡಿಸೆಂಬರ್20) ಸರಿಗಮಪ ಸೀಸನ್ 17 ಫಿನಾಲೆ ಅದ್ದೂರಿಯಾಗಿ ನಡೆದಿದೆ. ಗ್ರ್ಯಾಂಡ್ ಫಿನಾಲೆಯಲ್ಲಿ ಈ ಬಾರಿ ವಿನ್ನರ್ ಆಗಿ ಶ್ರೀನಿಧಿ ಶಾಸ್ತ್ರಿ ಹೊರಹೊಮ್ಮಿದ್ದಾರೆ.

ಅಶ್ವಿನ್ ಶರ್ಮಾ, ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ, ಕಂಬದ ರಂಗಯ್ಯ ಮತ್ತು ಶಾರದಾ ಪಾಟೀಲ್ ಟಾಪ್ 5ನಲ್ಲಿ ಸ್ಥಾನ ಪಡೆದು, ಫೈನಲ್ ಪ್ರವೇಶ ಮಾಡಿದ್ದರು. ಎಲ್ಲಾ ಪ್ರತಿಭಾವಂತ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿತ್ತು. ಅಂತಿಮವಾಗಿ ಶ್ರೀನಿಧಿ ಶಾಸ್ತ್ರಿ ಸೀಸನ್ 17 ಪಟ್ಟವನ್ನು ಗೆದ್ದು ಬೀಗಿದ್ದಾರೆ.

ಫಿನಾಲೆಯಲ್ಲಿ ಶ್ರೀನಿಧಿ ಶಾಸ್ತ್ರಿ ಜೀವನ ಚೈತ್ರಾ ಸಿನಿಮಾ ನಾದಮಯ ಹಾಡನ್ನು ಮತ್ತು ನಟನವಿ ಶಾರದ ನಟಶೇಖರ ಹಾಡನ್ನು ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಶ್ರೀನಿಧಿ ಟ್ರೋಪಿ ಜೊತೆ 10 ಲಕ್ಷ ರೂ.ಗಳನ್ನು ಶ್ರೀನಿಧಿ ಬಹುಮಾನವಾಗಿ ಪಡೆದಿದ್ದಾರೆ.

Shrinidhi Shastry winner of Saregamapa season 17

ಇನ್ನು ಮೊದಲ ರನ್ನರ್ ಅಪ್ ಆಗಿ ಅಶ್ವಿನ್ ಶರ್ಮಾ ಹೊರಹೊಮ್ಮಿದ್ದಾರೆ. ಅವರಿಗೆ 5 ಲಕ್ಷ ರೂ. ನಗದು ಬಹುಮಾನ ದೊರಕಿದೆ. ಕಂಬದ ರಂಗಯ್ಯ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಸರಿಗಮಪ ಸೀಸನ್ 17ವಿನ್ನರ್ ಆಗಿ ಹೊರಹೊಮ್ಮಿರುವ ಶ್ರೀನಿಧಿಗೆ ಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇನ್ನೂ ಜಡ್ಜ್ ಸ್ಥಾನದಲ್ಲಿದ್ದ ಗಾಯಕ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಹಾಗೂ ಹಂಸಲೇಖ ಕೂಡ ಫಿನಾಲೆ ವೇದಿಕೆಯಲ್ಲಿದ್ದು ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸಿದರು. ವಿಶೇಷ ಎಂದರೆ ಈ ವರ್ಷ ಫಿನಾಲೆಯನ್ನು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂಗೀತ ನಮನ ಸಲ್ಲಿಸಲಾಯಿತು.

More from Filmibeat

English summary
Shrinidhi Shastry winner of Saregamapa season 17.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X