ಅಭಿಮಾನಿಯ ಪತ್ರ ಕಂಡು ಸಂತಸಗೊಂಡ ನೇತ್ರಾ ಜಾಧವ್ ಅಲಿಯಾಸ್ ಶಾರ್ವರಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಪಾತ್ರ ಎಲ್ಲರನ್ನೂ ಇಂಪ್ರೆಸ್ ಮಾಡಿದೆ. ಧಾರಾವಾಹಿ ಏನೋ ಅದ್ಭುತವಾಗಿ ಮೂಡಿ ಬರುತ್ತಿದೆ.

ಇತರೆ ಧಾರಾವಾಹಿಗಳಿಗಿಂತಲೂ ಇದರಲ್ಲಿ ಮೂಡಿ ಬರುವ ಪಾತ್ರಗಳು ಕೂಡ ಅದ್ಭುತವಾಗಿವೆ. ಈ ಧಾರಾವಾಹಿಯಲ್ಲಿ ಅಣ್ಣ-ತಮ್ಮರಾದ ಮಾಧವ್ ಮತ್ತು ಮಹೇಶ ಒಂದೇ ಮನೆಯಲ್ಲಿದ್ದು, ಅಪಘಾತವೊಂದರಲ್ಲಿ ಮಾಧವ್ ಹೆಂಡತಿ ತೀರಿಕೊಂಡಿರುತ್ತಾಳೆ.

Shrirasthu Shubhamasthu fame actress Netraa Jaadhav shares handwritten fan letter she received

ಮಾಧವ್ ಸಹೋದರ ಮಹೇಶ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿಡುತ್ತಾನೆ. ಇದರಿಂದ ಮಹೇಶನ ಪತ್ನಿ ಶಾರ್ವರಿ ದ್ವೇಷ ಸಾಧಿಸುತ್ತಿರುತ್ತಾಳೆ.

ನೇತ್ರಾ ನಟನೆಯ ಧಾರಾವಾಹಿಗಳು

ಮಾಧವ್ ಕುಟುಂಬ ನೆಮ್ಮದಿಯಾಗಿ ಇರಬಾರದು. ನನ್ನ ಸಂಸಾರವನ್ನು ಹಾಳು ಮಾಡಿದವರು, ಎಂದು ವಿಷ ಕಾರುತ್ತಿರುತ್ತಾಳೆ. ನಿಮ್ಮ ತಂದೆಯೇ ನಿಮ್ಮ ತಾಯಿಯನ್ನು ಕೊಂದಿದ್ದು, ಎಂದು ಅವಿ ಹಾಗೂ ಅಭಿ ಅನ್ನು ಶಾರ್ವರಿ ದ್ವೇಷದಿಂದಲೇ ಬೆಳೆಸಿರುತ್ತಾಳೆ. ಶಾರ್ವರಿ ಪಾತ್ರಧಾರಿ ನೇತ್ರಾ ಜಾಧವ್ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ, ಯಾವುದು ಒಳ್ಳೆಯ ಬ್ರೇಕ್ ಸಿಕ್ಕಿರಲಿಲ್ಲ.

ಈ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ 'ರಥ ಸಪ್ತಮಿ' ಧಾರಾವಾಹಿಯಲ್ಲಿ ನೇತ್ರಾ ನಟಿಸಿದ್ದರು. ಈ ಧಾರಾವಾಹಿಯಲ್ಲೂ ಸುಧಾರಾಣಿ, ಜ್ಯೋತಿ ರೈ, ಜಯಶ್ರೀ ಸೇರಿದಂತೆ ಹಲವು ನಟಿಯರು ಇದ್ದರು. ಇದಾದ ಬಳಿಕ 'ಸುಂದರಿ', 'ಸಾಗುತ ದೂರ ದೂರ' ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. 'ಆಕೃತಿ' ಎಂಬ ಹಾರರ್ ಧಾರಾವಾಹಿಯಲ್ಲೂ ನೇತ್ರಾ ಜಾಧವ್ ಸೌಮ್ಯ ಸ್ವಾಭಾವದ ಪಾತ್ರವನ್ನು ಮಾಡಿದ್ದರು.

ಪರಭಾಷೆಯಲ್ಲಿ ನೇತ್ರಾ ನಟನೆ

ಇನ್ನು ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ಬಣ್ಣ ಹಚ್ಚಿದ್ದಾರೆ. ತೆಲುಗು ಧಾರಾವಾಹಿ 'ರಾವೋಯಿ ಚಂದಮಾಮ'ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಒಳ್ಳೆಯವರಿಗೆ ಒಳ್ಳೆಯವಳು, ಕೆಟ್ಟವರಿಗೆ ಕೆಟ್ಟವಳು ಎಂಬಂತೆ ನಟಿಸಿದ್ದರು. ಸ್ವಲ್ಪ ವಿಲನ್ ರೀತಿ ರೌಡಿ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿಯಾಗಿ ಮಿಂಚುತ್ತಿದ್ದಾರೆ. ಎಲ್ಲರ ಮುಂದೆ ಒಳ್ಳೆಯವರಂತೆ ನಟಿಸುತ್ತಾ, ಒಳಗೊಳಗೆ ಪಿತೂರಿ ಮಾಡುವ ಪಾತ್ರ ಇವರದ್ದಾಗಿದೆ.

ಖಳ ನಟಿ ನೇತ್ರಾ ಜಾಧವ್

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿನ ಶಾರ್ವರಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಖಳ ನಟಿ ಪ್ರಶಸ್ತಿಯನ್ನು ನೇತ್ರಾ ಜಾಧವ್ ಪಡೆದಿದ್ದರು. ಆಕೆ ಧಾರಾವಾಹಿಯಲ್ಲಿ ನಟಿಸಲು ಬಳಸುವ ಕಾಸ್ಟ್ಯೂಮ್, ಆಕ್ಟಿಂಗ್ ಎಲ್ಲವನ್ನೂ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಳ್ಳೊಳ್ಳೆಯ ಸೀರೆ ಉಡುತ್ತಾ, ಡಿಫರೆಂಟ್ ಆಗಿ ಜ್ಯುವೆಲರಿಗಳನ್ನು ಧರಿಸುತ್ತಿರುತ್ತಾರೆ. ಅಲ್ಲದೇ, ತಮ್ಮನ್ನು ತಾವು ಬಹಳ ಸ್ಟೈಲಿಶ್ ಆಗಿ ಮ್ಯಾನೇಜ್ ಮಾಡುತ್ತಾರೆ. ಇತರೆ ಖಳ ನಟಿಯರಿಗೆ ಹೋಲಿಸಿಕೊಂಡರೆ, ನೇತ್ರಾ ಬಹಳ ಡಿಸೆಂಟ್ ಆಗಿ ಕಾಣುವುದಲ್ಲದೇ, ಇವರ ಅಂದ ಗೌರವಿಸುವಂತಿದೆ.

ಅಭಿಮಾನಿಯ ಪತ್ರದಲ್ಲೇನಿದೆ..?

ಇನ್ನು ನೇತ್ರಾ ಅವರ ಪಾತ್ರವನ್ನು ಮೆಚ್ಚಿಕೊಂಡಿರುವ ವೀಕ್ಷಕರಲ್ಲಿ ಅಭಿಮಾನಿಯೊಬ್ಬರು, ತಮ್ಮ ನೆಚ್ಚಿನ ನಟಿ ಪುಟ್ಟ ಪತ್ರವನ್ನು ಬರೆದಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದ್ದು, ನಿಮ್ಮ ಅಭಿಮಾನಿ ನಾನು ಎಂದು ಚೇತನಾ ರಾವ್ ಎಂಬುವರು ಪತ್ರ ಬರೆದಿದ್ದಾರೆ. ನಿಮ್ಮ ಸೌಂದರ್ಯ, ಅಭಿನಯ ಹಾಗೂ ಕಾಸ್ಟ್ಯೂಮ್ ಅಂತೂ ಅದ್ಭುತ. ನಿಮಗೆ ಅವಾರ್ಡ್ ಸಿಕ್ಕಿದ್ದಕ್ಕೆ ಖುಷಿ ಇದೆ. ಸಿನಿಮಾಗಳಲ್ಲೂ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ವಿಶ್ ಮಾಡಿದ್ದಾರೆ. ಈ ಪತ್ರವನ್ನು ನೇತ್ರಾ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
TV Actress Netra jadhav received a lovely letter from fan;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X