Shrirasthu Shubhamasthu:ಮೂವರು ಮಕ್ಕಳ ಭವಿಷ್ಯವೀಗ ತುಳಸಿ ಕೈಯಲ್ಲಿ; ಆಕೆಯ ನಿರ್ಧಾರವೇನು?

By ಪೂರ್ವ

ಸಿರಿ ತಂದೆ ಈಗಾಗಲೇ ಆಕ್ಸಿಡೆಂಟ್‌ನಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರ ದತ್ತನಿಗೆ ತಿಳಿದಿರಲಿಲ್ಲ. ಆದರೆ ಜುಗ್ಗನಿಂದಾಗಿ ದತ್ತಣ್ಣನಿಗೆ ತಿಳಿಯುವ ಸಂಭವ ಹೆಚ್ಚಾಗಿತ್ತು. ಆದರೂಹೇಗೋ ದತ್ತಣ್ಣನಿಗೆ ನಿಜವಾದ ವಿಚಾರವೆಲ್ಲವೂ ತಿಳಿಯಿತು . ರವೀಂದ್ರ ಇನ್ಮೇಲೆ ನಮ್ಮ ಜೊತೆ ಇರಲ್ಲ ಎಂದಾಗ ದತ್ತಣ್ಣ ಕುಸಿದು ಕುಳಿತುಕೊಳ್ಳುತ್ತಾರೆ. ಆದರೆ ಮನೆಯ ಮಗನಾಗಿ ಎಲ್ಲಾ ಕೆಲಸವನ್ನು ನಿಂತು ಮಾಡಬೇಕಾಗಿದ್ದ ಸಮರ್ಥ್ ಈಗ ಜೈಲು ಪಾಲಾಗಿದ್ದಾನೆ.

ಸಮರ್ಥ ತಂಗಿಗಾಗಿ ತಾನು ಏನು ಬೇಕಾದರೂ ಮಾಡುತ್ತೇನೆ ಎಂದು ಪಣ ತೊಟ್ಟಿರುತ್ತಾನೆ. ಆದ ಕಾರಣ ಆತ ಎಲ್ಲೂ ಕೂಡ ನಿಧಿ ಮಾಡಿರುವ ಆಕ್ಸಿಡೆಂಟ್ ಬಗ್ಗೆ ಹೇಳಿಕೊಳ್ಳುವುದಿಲ್ಲ. ಆದರೆ ಈ ಆಕ್ಸಿಡೆಂಟ್‌ನಿಂದ ತನ್ನ ಮಾವನ ಸಾವಾಗಿದೆ ಎಂದು ತಿಳಿದಾಗ ಸಹಿಸಲಾರದಷ್ಟು ನೋವಾಗುತ್ತದೆ. ಈ ವೇಳೆ ಸಿರಿಗೆ ತಾನು ಸಮಾಧಾನ ಹೇಳಲಾಗುತ್ತಿಲ್ಲ ಎನ್ನುವ ನೋವು ಆತನಿಗೆ ಕಾಡುತ್ತದೆ. ಸಮರ್ಥ್ ಅನ್ನು ಭೇಟಿ ಮಾಡಲು ಬಂದ ತುಳಸಿಗೆ ಮಗನ ಸ್ಥಿತಿಯನ್ನು ನೋಡಿ ಬಹಳ ಕಷ್ಟವಾಗುತ್ತದೆ. ಮಗನ ಬಳಿಗೆ ಬಂದ ತುಳಸಿ, "ನಿಜವಾಗಿಯೂ ನೀನು ತಪ್ಪು ಮಾಡಿದ್ದೀಯ ಎಂದು ನನ್ನಾಣೆ ಹಾಕಿ ಹೇಳು" ಎಂದಾಗ ಸಮರ್ಥ್‌ಗೆ ಏನು ಮಾಡಲು ಸಾಧ್ಯವಾಗದೇ ನಡೆದ ವಿಚಾರವನ್ನೆಲ್ಲ ತಿಳಿಸುತ್ತಾನೆ.

Shrirasthu Shubhamasthu January 29th episode What is Tulsi s decision regarding children

ಸಮರ್ಥ್ ಮಾಡಿದ ಬಹುದೊಡ್ಡ ತ್ಯಾಗಕ್ಕೆ ತುಳಸಿ ಮಾತೆ ನಿಂತು ಹೋಗುತ್ತದೆ. ತುಳಸಿಗೆ ಬಹಳಷ್ಟು ನೋವು ಆಗುತ್ತದೆ. ತನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಗೊತ್ತಾದ ತುಳಸಿಗೆ ಏನು ಮಾಡಬೇಕೆಂದು ದಿಕ್ಕೇ ತೋಚದಾಗುತ್ತದೆ. ಮನೆಯಲ್ಲಿ ಆಕೆ ತನ್ನ ಮಗನ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿಕೊಂಡು ನಿದ್ದೆಗೆ ಜಾರುತ್ತಾಳೆ. ಆಗ ಕನಸಲ್ಲಿ ಕೂಡ ಸಮರ್ಥ್, ಸಿರಿ ಹಾಗು ನಿಧಿ ಕಾಣಿಸಿಕೊಳ್ಳುತ್ತಾರೆ. ಒಂದು ಕಡೆ ಸಮರ್ಥ್ ತಾನೇನು ಅಪರಾಧ ಮಾಡಿಲ್ಲ. ಆದರೆ ನಾನು ಯಾತಕ್ಕಾಗಿ ಅಪರಾಧಿ ಸ್ಥಾನದಲ್ಲಿ ನಿಂತಿದ್ದೇನೆ ಎನ್ನುವುದು ನಿನಗೆ ಗೊತ್ತಿದೆ ಅಲ್ವಾ ಅಮ್ಮ ಎಂದಾಗ ತುಳಸಿಗೆ ಬಹಳ ನೋವಾಗುತ್ತದೆ.

ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ

ಮತ್ತೊಂದೆಡೆ ಸಿರಿ ತನ್ನ ತಂದೆಯ ಸಾವಿನ ನಿಜವಾದ ಕಾರಣ ನಿಮಗೆ ತಿಳಿದಿದೆ. ನೀವು ದಯವಿಟ್ಟು ಈ ನಿಜವನ್ನು ಎಲ್ಲರಿಗೆ ಹೇಳಿ ಎಂದು ಹೇಳುತ್ತಾಳೆ. ನಿಧಿ ಬಂದು ದೊಡ್ಡಮ್ಮ ನನ್ನನ್ನು ನೀವೇ ಕಾಪಾಡಬೇಕು ಎಂದಾಗ ತುಳಸಿ ಚೀರಿಕೊಂಡು ನಿದ್ದೆಯಿಂದ ಎದ್ದೇಳುತ್ತಾಳೆ. ತುಳಸಿ ಚೀರಾಡಿದ್ದನ್ನು ಕೇಳಿಸಿಕೊಂಡ ಮಾಧವ ಓಡೋಡಿ ಬರುತ್ತಾನೆ. ತುಳಸಿ ಕೆಟ್ಟ ಕನಸು ಬಿತ್ತು ಎಂದು ಗಂಡನ ಬಳಿ ಹೇಳಿ ಬೇಸರದಿಂದ ತನ್ನ ಮಗ ಸಮರ್ಥ್ ಬಗ್ಗೆ ಮಾತಿಗಿಳಿಯುತ್ತಾಳೆ.

ತುಳಸಿಗೆ ಸಮಾಧಾನ ಹೇಳಿದ ಮಾಧವ

ಆ ಕೂಡಲೇ ಮಾಧವ "ನಿಮ್ಮ ಮಗನಿಗೆ ಏನು ಆಗುವುದಿಲ್ಲ ಖಂಡಿತವಾಗಿಯೂ ನಾನು ಕರೆದುಕೊಂಡು ಬರುತ್ತೇನೆ" ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ತುಳಸಿ ಕೊಂಚ ನಿರಾಳಲಾಗುತ್ತಾಳೆ. ನಿಧಿ ಕೂಡ ಮೌನಿಯಾಗಿರುವುದನ್ನು ಕಂಡ ದೀಪಿಕಾ ಹಾಗೂ ಪೂರ್ಣಿಮಾ ಆಕೆಗೆ ಹೇಗಾದರೂ ಮಾಡಿ ಒಳ್ಳೆಯ ಎಂಟರ್ಟೈನ್ಮೆಂಟ್ ಅನ್ನು ಕೊಡಬೇಕು. ಹಾಗೆ ಯಾವತ್ತೂ ಖುಷಿಯಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾರೆ. ನಿಧಿ ಯಾವತ್ತೂ ಕೂಡ ಸುಮ್ಮನೆ ಕುಳಿತವಳಲ್ಲ ಎಲ್ಲರೂ ಜೊತೆ ಮಾತನಾಡಿಕೊಂಡು ಖುಷಿಯಿಂದ ಇರುವವಳು. ಆದರೆ ಇತ್ತೀಚಿನ ದಿನಗಳಲ್ಲಿ ನಿಧಿ ಸಿಕ್ಕಾಪಟ್ಟೆ ಮಂಕಾಗಿದ್ದಾಳೆ.

ಭಯದಲ್ಲಿ ಚೀರಿದ ನಿಧಿ

ನಿಧಿಗಾಗಿ ಸಿನಿಮಾ ನೋಡಲು ದೀಪಿಕಾ ಹಾಗೂ ಪೂರ್ಣಿಮಾ ಇಬ್ಬರು ಕೂಡ ಒಟ್ಟಿಗೆ ಬರುತ್ತಾರೆ. ಸಿನಿಮಾದಲ್ಲಿ ಕೂಡ ಆಕ್ಸಿಡೆಂಟ್ ಸೀನ್ ಬಂದಾಗ ನಿಧಿಗೆ ಬಹಳಷ್ಟು ಭಯವಾಗುತ್ತದೆ. ಆಕೆಗೆ ತಾನು ಮಾಡಿದ ತಪ್ಪು ಇನ್ನೊಮ್ಮೆ ಜ್ಞಾಪಕಕ್ಕೆ ಬಂದು ನಿಧಿ ಒಮ್ಮೆಲೆ ಚೀರಿಕೊಳ್ಳುತ್ತಾಳೆ. ಇದೆಲ್ಲವನ್ನು ನೋಡಿ ಪೂರ್ಣಿಮಾ ಹಾಗೂ ದೀಪಿಕಾಗೆ ಸಿಕ್ಕಾಪಟ್ಟೆ ಗಾಬರಿಯಾಗುತ್ತೆ.

More from Filmibeat

English summary
Shrirasthu Shubhamasthu serial January 29th episode. What is Tulsi's decision regarding children?:
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X