Shrirasthu Shubhamasthu: ಅವಿ ಬಳಿ ತುಳಸಿ ಕೈ ಮುಗಿದು ಕೇಳಿಕೊಂಡಿದ್ದು ಏನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಎಷ್ಟು ಕಡೆ ಕೆಲಸ ಹುಡುಕಿದರೂ ಸಿಗುತ್ತಿಲ್ಲ. ಕೆಲಸಕ್ಕಾಗಿ ಅಲೆದು ಅಲೆದು ಸಮರ್ಥ್‌ಗೂ ಸುಸ್ತಾಗಿದೆ. ಇದರ ಜೊತೆಗೆ ಸಿರಿ ಬೇರೆ ತವರು ಮನೆಗೆ ಹೋಗಿದ್ದಾಳೆ. ಇದರಿಂದ ಸಮರ್ಥ್‌ಗೆ ಈಗ ಮನೆಯಲ್ಲಿ ಎಲ್ಲರಿಗೂ ಅಡುಗೆ ಮಾಡುವ ಕೆಲಸ ಬಂದು ಸೇರಿದೆ.
ದಿನಾ ದೋಸೆ ಹಾಗೂ ಚಟ್ನಿ ಮಾಡಿ ದತ್ತ ತಾತನ ಬಾಯಿ ಕೆಡಿಸಿದ್ದಾನೆ. ದತ್ತ ತಾತ ಇದಕ್ಕೆ ತಮಾಷೆ ಕೂಡ ಮಾಡಿಕೊಂಡು ಮೊಮ್ಮಗನ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇನ್ನು ಮೊದಲೇ ಸಮರ್ಥ್‌ಗೆ ಕೆಲಸವಿಲ್ಲ. ಇದರಿಂದ ಜೇಬು ಖಾಲಿ ಮಾಡಿಕೊಂಡು ಒದ್ದಾಡುತ್ತಿದ್ದಾನೆ. ಹೀಗಿರುವಾಗ ಸಂಧ್ಯಾ ಬೇರೆ ಪದೇ ಪದೇ ಸಮರ್ಥ್ ಜೇಬಿಗೆ ದೊಡ್ಡ ದೊಡ್ಡ ಮೊತ್ತದ ಕತ್ತರಿ ಹಾಕುತ್ತಿರುತ್ತಾಳೆ.

ಸಂಧ್ಯಾ ಬೇಕಂತಲೇ ದಿನಸಿ ಹಾಗೂ ಮೆಡಿಸಿನ್ಸ್ ಅನ್ನು ರಾಶಿ ರಾಶಿ ತರಿಸಿದ್ದು, ಸಾವಿರಾರು ರೂಪಾಯಿ ಬಿಲ್ ಮಾಡಿದ್ದಾಳೆ. ಇದೆಲ್ಲಾ ತಿನ್ನಬೇಕು ಎಂದು ವೈದ್ಯರು ಹೇಳಿದ್ದಾರೆ. ಮಗುವಿನ ಆರೋಗ್ಯಕ್ಕೆ ಇದೆಲ್ಲಾ ಬೇಕು ಎಂದಿದ್ದಾರೆ ಎನ್ನುತ್ತಾಳೆ. ಇನ್ನು ಇದಕ್ಕೆಲ್ಲಾ ಹಣವನ್ನು ಅಣ್ಣನೇ ಕೊಡಬೇಕು ಎಂದು ಹೇಳುತ್ತಾಳೆ.
ಅಣ್ಣನಿಗೆ ಜವಾಬ್ದಾರಿ ಪಾಠ
ದತ್ತ ತಾತ, ಸಮರ್ಥ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಹಣ ಕೊಟ್ಟು ಕಳಿಸುತ್ತಾರೆ. ಬಳಿಕ ಸಮರ್ಥ್‌ಗೆ ಜವಾಬ್ದಾರಿ ನನ್ನದು ಎಂದು ಕರೆದುಕೊಂಡು ಬರುವುದಲ್ಲ. ಈ ಎಲ್ಲಾ ಹೊರೆಯನ್ನು ಹೊರ ಬೇಕಾಗುತ್ತದೆ ಎಂದು ತಾತ ಬುದ್ಧಿ ಹೇಳುತ್ತಾನೆ. ಒಟ್ನಲ್ಲಿ ಸಂಧ್ಯಾ ಅಣ್ಣನಿಗೆ ಮನೆಯ ಜವಾಬ್ದಾರಿ ಎಂದರೆ ಏನು ಎಂಬುದನ್ನು ಸದ್ದಿಲ್ಲದೇ ಅರ್ಥ ಮಾಡಿಸಿಕೊಡುತ್ತಿದ್ದಾಳೆ.
ಅವಿ ಬಳಿ ಕೈ ಮುಗಿದು ಕೇಳಿಕೊಂಡ ತುಳಸಿ
ಮಾಧವ್ ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಕೈ ಬಿಡಲು ತನ್ನನ್ನು ಮದುವೆಯಾಗಿದ್ದೇ ಕಾರಣ ಎಂಬುದು ಈಗ ತುಳಸಿಗೆ ಗೊತ್ತಾಗಿದೆ. ಆದರೆ, ಈ ವಿಷಯ ಮಾಧವ್‌ಗೆ ತಿಳಿದಿಲ್ಲ. ಹೀಗಾಗಿ ಮಾಧವ್, ತುಳಸಿ ಬಳಿ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಇದರಿಂದ ತುಳಸಿ, ಮಾಧವ್‌ಗೆ ಬಹಳ ಬೇಸರವಾಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಹೀಗಾಗಿ ತುಳಸಿ ಪೂರ್ಣಿ ಹಾಗೂ ಅವಿನಾಶ್ ಬಳಿ ಬಂದು ಕೈ ಮುಗಿದು ಕೇಳಿಕೊಂಡಿದ್ದಾಳೆ. ಒಗ್ಗರಣೆ ಡಬ್ಬಿ ಕಾರ್ಯಕ್ರಮ ಮತ್ತೆ ಮಾಧವ್ ನಡೆಸಿಕೊಡುವಂತೆ ಮಾಡಿಕೊಡಿ ಎಂದು ಕೇಳಿದ್ದಾಳೆ. ಅವಿ ಏನೂ ಮಾತನಾಡದೇ ಬಂದಿದ್ದಾನೆ.

ಮಾಧವ್‌ಗೆ ಸಮಾಧಾನ ಹೇಳಿದ ದತ್ತ ತಾತ
ಮಾಧವ್, ದತ್ತ ತಾತನ ಮನೆಗೆ ಬಂದು ಸಮರ್ಥ್ ಮಾಡಿದ ದೋಸೆ ತಿಂದಿದ್ದಾನೆ. ಬಳಿಕ ದತ್ತ ತಾತನ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾನೆ. ತುಳಸಿ ಬಳಿ ಸತ್ಯವನ್ನೂ ಹೇಳಲಾಗದೇ, ಮುಚ್ಚಿಡಲೂ ಆಗದೇ ಒದ್ದಾಡುತ್ತಿದ್ದೇನೆ ಎನ್ನುತ್ತಾನೆ. ಆಗ ದತ್ತ ತಾತ ಯಾವತ್ತಿದ್ದರೂ ಸತ್ಯ ತಿಳಿಯಲೇ ಬೇಕು. ಹಾಗಾಗಿ ಹೋಗಿ ಹೇಳು ಎಂದು ಹೇಳಿದ್ದಾನೆ. ಮಾಧವ್ ಸರಿ ನೀವು ಹೇಳಿದ ಹಾಗೆಯೇ ಮಾಡುತ್ತೇನೆ ಎಂದು ಹೇಳಿ ಮಾಧವ್ ಮನೆಗೆ ಹೊರಟಿದ್ದಾನೆ.
ತುಳಸಿ ಪರನಿಂತ ಅವಿನಾಶ್
ಇತ್ತ ತುಳಸಿ ಯಾರ ಸಹಾಯಕ್ಕೂ ಕಾಯದೇ ತಾನೇ ಒಗ್ಗರಣೆ ಡಬ್ಬಿ ಕಾರ್ಯಕ್ರಮದ ನಿರ್ದೇಶಕರ ಬಳಿ ಮಾತನಾಡಲು ಹೊರಟಿದ್ದಾಳೆ. ಇದನ್ನು ಗಮನಿಸಿದ ಪೂರ್ಣಿ, ಅವಿಯನ್ನು ಕರೆದುಕೊಂಡು ತುಳಸಿ ಹಿಂದೆಯೇ ಹೊರಟಿದ್ದಾಳೆ. ಅಲ್ಲಿ ವಾಚ್ ಮ್ಯಾನ್ ತುಳಸಿ ಅವರನ್ನು ಯಾರೋ ಎಂದು ತಿಳಿದು ದೂಡಿದಾಗ ಕೈ ಹಿಡಿಯುವ ಅವಿ, ತುಳಸಿಗೆ ಬೈಯುತ್ತಾನೆ. ಸ್ವಲ್ಪ ತಾಳ್ಮೆ ಇರಲಿ. ನನ್ನ ಕೈಲಾದಷ್ಟು ನಾನು ಪ್ರಯತ್ನಿಸುತ್ತೇನೆ ಎಂದು ತುಲಸಿಗೆ ಹೇಳುತ್ತಾನೆ. ಮಗನೇ ಅಪ್ಪನಿಗೆ ಒಗ್ಗರಣೆ ಡಬ್ಬಿ ಕಾರ್ಯಕ್ರಮವನ್ನು ಮತ್ತೆ ಕೊಡಿಸುತ್ತಾನಾ ಕಾದು ನೋಡಬೇಕಿದೆ.


Click it and Unblock the Notifications











