Shrirasthu Shubhamasthu: ಹಿರಿ ಸೊಸೆಯ ಗತ್ತು ತೋರಿಸಿದ ತುಳಸಿ: ಶಾರ್ವರಿ ಅಂತ್ಯ ಆರಂಭವಾಯ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ರೇಷನ್ ಅಂಗಡಿಗೆ ಕೊಡಲು ಹಣವಿಲ್ಲದ ಕಾರಣ ಮೂಟೆ ಹೊತ್ತಿದ್ದಾನೆ. ಇದನ್ನು ನೋಡಿದ ಅಭಿ ಕೆಲಸ ಕೊಡ್ತೀನಿ ಬಾ ಎಂದು ಕರೆದಿದ್ದಾನೆ. ಹೀಗಾಗಿ ದತ್ತ ತಾತ ಮತ್ತು ಸಂಧ್ಯಾ ಇಬ್ಬರೂ ಅಭಿಯ ಮನಸ್ಸು ಬದಲಾಗಿರಬಹುದು. ಅವನ ಬಳಿ ಹೋಗು ಕೆಲಸ ಸಿಕ್ಕರೂ ಆಶ್ಚರ್ಯವಿಲ್ಲ. ಅವಕಾಶ ಬಿಡಬೇಡ ಎಂದು ಹೇಳಿದ್ದಾರೆ.
ಅಭಿ ಬಳಿ ಕೆಲಸಕ್ಕೆ ಹೋಗುವುದು ಸಮರ್ಥ್‌ಗೆ ಕೊಂಚವೂ ಇಷ್ಟವಿಲ್ಲ. ಅಭಿ ದುರಂಹಕಾರದಿಂದ ಕರೆದಿದ್ದಾನೆ. ಅಲ್ಲಿಗೆ ಹೋದ ಮೇಲೆ ನನಗೆ ಮತ್ತೆ ಅವಮಾನ ಮಾಡಬಹುದು ಎಂದು ಆಲೋಚಿಸಿದ್ದಾನೆ.

ಮಾಧವ್ ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಈಗಾಗಲೇ ನಿತ್ಯ ಮಾಧವ್ ಅಭಿಮಾನಿಗಳು ಚಾನೆಲ್ ಬಳಿ ಹೋಗಿ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆ.
ಮಾಧವ್ ಗಾಗಿ ಮಿಡಿದ ಅಭಿಮಾನಿಗಳು
ಅಭಿಮಾನಿಗಳು ನಮಗೆ ಒಗ್ಗರಣೆ ಡಬ್ಬಿ ಕಾರ್ಯಕ್ರಮವನ್ನು ಮಾಧವ್ ಸರ್ ನಡೆಸಿಕೊಡಬೇಕು ಎಂದು ಕೇಳಿದ್ದಾರೆ. ಹೀಗಿರುವಾಗ ತುಳಸಿ, ಪೂರ್ಣಿ ಹಾಗೂ ಅವಿನಾಶ್ ಕೂಡ ಇದೇ ಬೇಡಿಕೆಯನ್ನಿಟ್ಟು ಬಂದಿದ್ದಾರೆ. ಇದರಿಂದ ಗಾಬರಿಯಾದ ವಾಹಿನಿಯಾತ ಶಾರ್ವರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸುತ್ತಾನೆ. ಅವಿನಾಶ್ ಕೋರ್ಟ್‌ಗೆ ಹೋಗಬೇಕಾಗುತ್ತದೆ. ಲಾಯರ್ ಅನ್ನು ಕರೆಸುತ್ತೇನೆ ಎಂದೆಲ್ಲಾ ಹೇಳಿದಾಗ ಶಾರ್ವರಿಗೂ ಗಾಬರಿಯಾಗುತ್ತದೆ.
ಲಾಯರ್ ನೋಟೀಸ್ ನೀಡಿದ ಶಾರ್ವರಿ
ಹೀಗೆ ಬಿಟ್ಟರೆ ಕಷ್ಟವಾಗುತ್ತದೆ ಎಂದು ತಿಳಿದ ಶಾರ್ವರಿ, ತಾನೇ ಖುದ್ದಾಗಿ ಸ್ಥಳಕ್ಕೆ ಹೋಗುತ್ತಾಳೆ. ಚಾನೆಲ್‌ನವರಿಗೆ ಲಾಯರ್ ನೋಟೀಸ್ ಕೊಟ್ಟು, ಇನ್ನು ಮುಂದೆ ಮಾಧವ್ ಅವರೇ ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂದು ಹೇಳುತ್ತಾಳೆ. ಇದಕ್ಕೆ ವಾಹಿನಿಯವರೂ ಒಪ್ಪುತ್ತಾರೆ. ಅಭಿಮಾನಿಗಳೂ ಖುಷಿ ಪಡುತ್ತಾರೆ. ತುಳಸಿ ಹಾಗೂ ಪೂರ್ಣಿಗೆ ಸಮಾಧಾನವಾಗುತ್ತದೆ. ಇದೇ ಖುಷಿಯಲ್ಲಿ ಎಲ್ಲರೂ ಮನೆಗೆ ಬರುತ್ತಾರೆ.

ತುಳಸಿಯನ್ನು ಮಾತನಾಡಿಸಿದ ಅಭಿ
ಮನೆಗೆ ಎಲ್ಲರೂ ಒಟ್ಟಿಗೆ ಬಂದಿದ್ದನ್ನು ನೋಡಿದ ಅಭಿ ಆಶ್ಚರ್ಯಗೊಳ್ಳುತ್ತಾನೆ. ಎಲ್ಲರೂ ಎಲ್ಲಿಗೆ ಹೋಗಿದ್ದೀರಿ. ಈಗೇನು ಒಟ್ಟಿಗೆ ಬರುತ್ತಿದ್ದೀರಾ ಎಂದಾಗ ಶಾರ್ವರಿ ಎಲ್ಲರಿಗೂ ಸುಸ್ತಾಗಿದೆ. ಫ್ರೆಶ್ ಆಗಿ ಬಂದು ಊಟ ಮಾಡಿ ಎಂದು ಹೇಳಿ ಹೊರಡುತ್ತಾಳೆ. ಆಗ ಅಭಿ, ತುಳಸಿಯನ್ನು ಎಲ್ಲಿಗೆ ಹೋಗಿದ್ದು, ಎಲ್ಲವೂ ಆರಾಮ ಎಂದು ವಿಚಾರಿಸುತ್ತಾನೆ. ತುಳಸಿ ಆಗ ಎಲ್ಲವೂ ಸರಿ ಇದೆ ಎಂದು ಹೇಳುವುದರ ಜೊತೆಗೆ ಆಶ್ಚರ್ಯಗೊಳ್ಳುತ್ತಾಳೆ. ಇದು ತುಳಸಿಗೆ ಖುಷಿ ಕೊಡುತ್ತದೆ. ಅಭಿ ತನ್ನನ್ನು ಮಾತನಾಡಿಸಿದ್ದಕ್ಕೆ ಸಂತಸ ಪಡುತ್ತಾಳೆ.
ಶಾರ್ವರಿಗೆ ಪ್ರಶ್ನೆ ಮಾಡಿದ ತುಳಸಿ
ಇನ್ನು ಪೂರ್ಣಿಮಾ, ತುಳಸಿಗೆ ಮಾಧವ್ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಕುಲ್ಫಿ ಕೊಡಿಸಿ. ಬಳಿಕ ಈ ಖುಷಿ ವಿಚಾರವನ್ನು ಹೇಳಿ ಎಂದು ಐಡಿಯಾ ಕೊಡುತ್ತಾಳೆ. ಇದಕ್ಕೊಪ್ಪಿದ ತುಳಸಿ ಮೊದಲು ಶಾರ್ವರಿ ಬಳಿ ಹೋಗುತ್ತಾಳೆ. ನಿಮ್ಮ ಜೊತೆಗೆ ಮಾತನಾಡಬೇಕು ಎಂದು ಹೇಳುತ್ತಾಳೆ. ಆಗ ಶಾರ್ವರಿ ಬಹುಶಃ ತುಳಸಿ ತನ್ನ ಬಳಿ ಧನ್ಯವಾದ ಮಾತುಗಳನ್ನಾಡಬಹುದು ಎಂದು ಊಹಿಸುತ್ತಾಳೆ. ಆದರೆ, ತುಳಸಿ ಒಗ್ಗರಣೆ ಡಬ್ಬಿ ಕಾರ್ಯಕ್ರಮದ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಮೊದಲೇ ಮಾಡಬಹುದಿತ್ತಲ್ವಾ. ಆದರೂ ನೀವ್ಯಾಕೆ ಹೀಗೆ ಮಾಡಿದ್ದು ಎಂದು ಪ್ರಶ್ನಿಸುತ್ತಾಳೆ. ಆದರೆ, ಶಾರ್ವರಿ ನೀನು ಹಿರಿ ಸೊಸೆ ಎಂದು ಪೂಜಾರಿ ಹೇಳಿರಬಹುದು ಹಾಗಂತ ಹೀಗೆಲ್ಲಾ ನಡೆದುಕೊಳ್ಳಬೇಡ ಎನ್ನುತ್ತಾಳೆ. ನಿನಗೆ ಈಗಲೇ ಉತ್ತರ ಕೊಡಲು ಸಾಧ್ಯವಿಲ್ಲ ಎನ್ನುತ್ತಾಳೆ. ಆಗ ತುಳಸಿ, ನಾನು ಹಿರಿ ಸೊಸೆ ಅನ್ನೋದು ಸತ್ಯವೇ, ಈಗ ಉತ್ತರ ಕೊಡದಿದ್ದರೂ ಪರವಾಗಿಲ್ಲ, ಸಮಯ ತೆಗೆದುಕೊಳ್ಳಿ. ಆದರೆ ನಾನು ಈ ಮನೆಯಲ್ಲೇ ಇರುತ್ತೇನೆ ಎಂದು ಖಡಕ್ ಆಗಿ ಹೇಳುತ್ತಾಳೆ.


Click it and Unblock the Notifications











