Shrirasthu Shubhamasthu: ತಾನು ಗರ್ಭಿಣಿ ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡ ಸಂಧ್ಯಾ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಹೇಶ ಸ್ವಲ್ಪ ಸ್ವಲ್ಪವೇ ಮನೆಯವರಿಗೆ ರೆಸ್ಪಾನ್ಸ್ ಮಾಡಲು ಪ್ರಾರಂಭಿಸಿದ್ದಾನೆ. 20 ವರ್ಷದಿಂದ ಮಾತನಾಡದ ಮಹೇಶ ಈಗ ಒಂದೊಂದೇ ಪದಗಳನ್ನು ಮಾತನಾಡಲು ಶುರು ಮಾಡಿದ್ದಾನೆ.
ಮಹೇಶ ಮಾತನಾಡುತ್ತಿರುವುದು ಶಾರ್ವರಿಗೆ ಆತಂಕವನ್ನು ಸೃಷ್ಟಿ ಮಾಡಿದೆ. ಯಾಕೆಂದರೆ ಶಾರ್ವರಿ ಮಾಡಿದ ತಪ್ಪುಗಳೆಲ್ಲವೂ ಮಹೇಶನಿಗೆ ತಿಳಿದಿದೆ. ಹೀಗಾಗಿ ಆತ ಹುಷಾರಾದರೆ, ಶಾರ್ವರಿ ಬಣ್ಣ ಬಯಲಾಗುತ್ತದೆ.
ಈಗ ತುಳಸಿ ತಿಂಡಿ ತಿನ್ನಲು ಮಹೇಶನನ್ನು ಕೂಡ ಡೈನಿಂಗ್ ಹಾಲ್‌ಗೆ ಕರೆದುಕೊಂಡು ಬರುತ್ತಾನೆ. ಇದು ಶಾರ್ವರಿಯ ಆತಂಕವನ್ನು ಹೆಚ್ಚು ಮಾಡುತ್ತದೆ.

ತಾನು ಗರ್ಭಿಣಿ ಅಲ್ಲ ಎಂದ ಸಂಧ್ಯಾ
ಇತ್ತ ಪ್ರಸಾದ್, ದತ್ತ ತಾತನ ಮನೆಯಲ್ಲಿ ಇರುತ್ತಾನೆ. ಸಂಧ್ಯಾ ಗಂಡ ಎದುರಿಗಿದ್ದರೂ ರೀಲ್ಸ್ ನೋಡುತ್ತಾ ಸಮಯ ಕಳೆಯುತ್ತಿರುತ್ತಾಳೆ. ಪ್ರಸಾದ್‌ಗೆ ಬೇಸರವಾಗುತ್ತದೆ. ಸಂಧ್ಯಾಳನ್ನು ಮಾತಿಗೆ ಎಳೆಯುತ್ತಾನೆ. ಆಗ ಸಂಧ್ಯಾ ತಾನು ಗರ್ಭಿಣಿ, ಈ ಸಮಯದಲ್ಲಿ ಅರಾಮಾಗಿರಬೇಕು ಎನ್ನುತ್ತಾಳೆ. ಆಗ ಪ್ರಸಾದ್ ನೀನು ಗರ್ಭಿಣಿ ಅಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ರಿಪೋರ್ಟ್ ತೋರಿಸಿದ್ರೂ, ಆಸ್ಪತ್ರೆಯಲ್ಲಿ ವೈದ್ಯರೇ ಹೇಳಿದರೂ ನಾನು ನಂಬಲ್ಲ ಎಂದು ಹೇಳುತ್ತಾನೆ. ಅದಕ್ಕೆ ಸಂಧ್ಯಾ ನಾನು ಗರ್ಭಿಣಿ ಅಲ್ಲ. ಈ ಸುಳ್ಳು ಹೇಳದಿದ್ದರೆ, ಈ ಮನೆಯಲ್ಲಿ ನನಗೆ ಜಾಗ ಸಿಗುತ್ತಿರಲಿಲ್ಲ. ನಿಮ್ಮ ಮನೆಯಲ್ಲಿ ಇರುವುದಕ್ಕಿಂತಲೂ ಇಲ್ಲಿ ಆರಾಮಾಗಿದ್ದೀನಿ ಎಂದು ಹೇಳುತ್ತಾಳೆ. ಪ್ರಸಾದ್ ಏನೂ ಮಾತನಾಡಲಾಗದೇ ಸುಮ್ಮನಾಗುತ್ತಾನೆ.
ಪಾಸಿಟಿವ್ ಆಗಿರುವ ಪೂರ್ಣಿ
ಇನ್ನು ಪೂರ್ಣಿಮಾಳಿಗೆ ಆಯುರ್ವೇದ ಔಷಧಿಯನ್ನು ತೆಗೆದುಕೊಳ್ಳಲು ಶುರು ಮಾಡಿದಾಗಿನಿಂದಲೂ ಮಗುವಿನ ಮೇಲಿನ ಆಸೆ ಹೆಚ್ಚಾಗುತ್ತಿದೆ. ಪೂರ್ಣಿಮಾ ಪಾಸಿಟಿವ್ ಆಗಿರುವುದನ್ನು ಕಂಡು ಅವಿಗೂ ಖುಷಿಯಾಗುತ್ತಿರುತ್ತದೆ. ಪೂರ್ಣಿಮಾ ಬಳಿ ಅವಿ ತನಗೆ ಬಿದ್ದ ಮಗುವಿನ ಕನಸನ್ನು ಹೇಳಿಕೊಂಡು ಖುಷಿ ಪಡುತ್ತಾನೆ. ನನಗೆ ನನ್ನ ಅಮ್ಮ ಹುಟ್ಟಿ ಬರಬೇಕು ಎನ್ನುತ್ತಾನೆ. ಇದೇ ಮಾತನ್ನು ಹೇಳುವಾಗ ತುಳಸಿ ಅಮ್ಮ ನನ್ನ ತಾಯಿಯಂತೆಯೇ ಬೇರೆಯವರ ಖುಷಿಗಾಗಿ ತಾಳ್ಮೆಯಿಂದ ಇರುತ್ತಿದ್ದರು ಎಂದು ತುಳಸಿಯನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದಾನೆ. ಇದನ್ನು ಗಮನಿಸಿದ ಪೂರ್ಣಿಮಾಳಿಗೂ ಖುಷಿಯಾಗುತ್ತದೆ.

ಅಭಿಗೆ ಥ್ಯಾಂಕ್ಸ್ ಹೇಳಿದ ತುಳಸಿ
ತುಳಸಿ ಕಾಫಿಯನ್ನು ತೆಗೆಕೊಂಡು ಅಭಿ ರೂಮಿಗೆ ಹೋಗಿ ಕೊಡುತ್ತಾಳೆ. ಆಗ ಅಭಿ ನಿಮಗೆ ಎಷ್ಟು ಅವಮಾನ ಮಾಡಿದರೂ ನೀವು ನಗುನಗುತಾ ಇರುತ್ತೀರಾ ಎಂದು ಕೇಳುತ್ತಾನೆ. ಅದಕ್ಕೆ ತುಳಸಿ ನೀನು ನಿನ್ನೆ ನನ್ನ ಮನೆಯಲ್ಲಿ ನಡೆದುಕೊಂಡ ರೀತಿ ಇಷ್ಟವಾಯ್ತು. ಜೊತೆಗೆ ಸಮರ್ಥ್ ಕೆಲಸದ ಬಗ್ಗೆ ಮಾತನಾಡದೇ ಇದ್ದಿದ್ದಕ್ಕೆ ಥ್ಯಾಂಕ್ಸ್ ಎಂದು ಹೇಳುತ್ತಾಳೆ. ಅಭಿ, ತುಳಸಿ ಮಾತಿಗೆ ಒತ್ತು ಕೊಡದೇ, ನಿಮ್ಮ ಮಗಳು ಸಂಧ್ಯಾಳಿಗೆ ಒಳ್ಳೆಯ ಬುದ್ಧಿ ಹೇಳಿಕೊಡಿ. ಸ್ಮಾರ್ಟ್ ಆಗಿ ಕೆಲಸ ಮಾಡಿದರೆ, ಸಮರ್ಥ್‌ಗೆ ಒಳ್ಳೆಯ ಕೆಲಸ ಸಿಗುತ್ತೆ ಎಂದು ಕೂಡ ಹೇಳಿಕೊಡುತ್ತಾನೆ.
ಸಮರ್ಥ್‌ಗೆ ಸಮಾಧಾನ ಮಾಡಿದ ತಾತ
ಇತ್ತ ಸಂಧ್ಯಾ ಬೇಕಂತಲೇ ಸಮರ್ಥ್ ಕೆಲಸದ ವಿಚಾರಕ್ಕೆ ಹೀಯಾಳಿಸುತ್ತಾಳೆ. ಆದರೆ, ಸಮರ್ಥ್ ಆಫೀಸಿನಲ್ಲಿ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಸಿರಿಗೆ ಗೊತ್ತಿರುವುದಿಲ್ಲ. ಸಿರಿ, ಸಮರ್ಥ್ ನನ್ನ ಬಳಿ ಯಾವ ವಿಚಾರವನ್ನು ಮುಚ್ಚಿಡುವುದಿಲ್ಲ ಎಂದಾಗ ಸಮರ್ಥ್ ಮನಸ್ಸಿಗೆ ಗಿಲ್ಟ್ ಫೀಲ್ ಆಗುತ್ತದೆ. ಸಮರ್ಥ್ ಈ ಬಗ್ಗೆ ಯೋಚಿಸುತ್ತಾ ಕುಳಿತಾಗ ದತ್ತ ತಾತ ಬಂದು ಸಮಾಧಾನ ಮಾಡುತ್ತಾರೆ. ನಿನಗೆ ಎಲ್ಲವೂ ಒಳ್ಳೆಯದೇ ಆಗುತ್ತೆ. ನೀನು ನಿಯತ್ತಿನಿಂದ ಕೆಲಸ ಮಾಡುತ್ತಿದ್ದೀಯಾ, ಸಂಧ್ಯಾ ರೀತಿ ಕೆಟ್ಟ ಕೆಲಸವನ್ನು ಮಾಡುತ್ತಿಲ್ಲ ಯೋಚಿಸಬೇಡ ಎಂದು ಹೇಳುತ್ತಾನೆ.


Click it and Unblock the Notifications











