Shrirasthu Shubhamasthu: ತುಳಸಿಗೆ ನೋವು ಕೊಟ್ಟು ಸಂತಸ ಅನುಭವಿಸಿದ ಅಭಿ: ಸಮರ್ಥ್ ಈಗ ಸರ್ವರ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ತವರು ಮನೆಗೆ ಹೋಗಿ ಬಹಳ ದಿನಗಳಾಗಿದೆ. ಹಾಗಾಗಿ ಮನೆಯಲ್ಲಿ ಸಮರ್ಥ್‌ನದ್ದೇ ನಳಪಾಕ. ಇನ್ನು ಸಂಧ್ಯಾ ಒಂದು ಕೆಲಸವನ್ನೂ ಮಾಡೊಲ್ಲ.
ಬಡ ಕುಟುಂಬದ ಗರ್ಭಿಣಿರಿಗೆ ಸರ್ಕಾರದಿಂದ ಆರೋಗ್ಯಕರವಾದ ಆಹಾರವನ್ನು ನೀಡಲಾಗುತ್ತದೆ. ಇದಕ್ಕೆ ದತ್ತ ತಾತ, ಸಂಧ್ಯಾಳಿಗೆ ಅರ್ಜಿ ತುಂಬಲು ಹೇಳಿದರೆ ಅವಳು ಒಪ್ಪುತ್ತಿಲ್ಲ.
ಈಗ ದತ್ತ ತಾತ ಬೇಕಂತಲೇ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ. ಯಾಕೆಂದರೆ, ಸಂಧ್ಯಾ ಗರ್ಭಿಣಿ ಎಂಬುದನ್ನೇ ದತ್ತ ತಾತ ನಂಬುತ್ತಿಲ್ಲ.

ಪಪ್ಪಾಯ ತಿಂದು ಪೇಚಿಗೆ ಸಿಲುಕಿದ ಸಂಧ್ಯಾ
ದಾರಿಯಲ್ಲಿ ನಡೆಯುತ್ತಾ ಸಾಗುವಾಗ ಸಂಧ್ಯಾ, ದತ್ತ ತಾತನಿಗೆ ಪಕೋಡ ಕೊಡಿಸಿ ಸುಸ್ತಾಗುತ್ತಿದೆ ಎಂದು ನಾಟಕ ಮಾಡುತ್ತಾಳೆ. ದತ್ತ ತಾತ ಹಣ್ಣು ಒಳ್ಳೆಯದು, ಎಂದು ಹಣ್ಣಿನಂಗಡಿಗೆ ಕರೆದುಕೊಂಡು ಬರುತ್ತಾರೆ. ಅಲ್ಲಿ ಸಂಧ್ಯಾ ಪಪ್ಪಾಯ ಹಣ್ಣನ್ನು ತಿನ್ನುತ್ತಾಳೆ. ಇದರಿಂದ ಗಾಬರಿಗೊಂಡ ದತ್ತ ತಾತ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ವೈದ್ಯರು ನಾಡಿ ನೋಡಿ ಗರ್ಭಿಣಿ ಎಂಬುದೇ ತಿಳಿಯುತ್ತಿಲ್ಲ ಎಂದಾಗ ದತ್ತ ತಾತ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆದರೆ, ರಿಪೋರ್ಟ್ ಬಂದರೆ ಸಂಧ್ಯಾ ಬಣ್ಣವೆಲ್ಲಾ ಬಯಲಾಗುತ್ತದೆ. ಸಂಧ್ಯಾ ಈಗ ದತ್ತ ತಾತನ ಎದುರು ಸಿಕ್ಕಿ ಬೀಳುತ್ತಾಳಾ ಎಂದು ಕಾದು ನೋಡಬೇಕಿದೆ.
ಅಭಿಗಾಗಿ ಊಟ ತಂದ ತುಳಸಿ
ಇನ್ನು ಅಭಿ ಇತ್ತೀಚೆಗೆ ತುಳಸಿ ಬಳಿ ಬಹಳ ಸಲುಗೆಯಿಂದ ಮಾತನಾಡುತ್ತಿದ್ದಾನೆ. ಇದು ಎಲ್ಲರಿಗೂ ಶಾಕ್ ನೀಡಿದ್ದರೆ ತುಳಸಿಗೆ ಖುಷಿಯಾಗಿದೆ. ಆದರೆ ಶಾರ್ವರಿಗೆ ಅಭಿ ಕೂಡ ತುಳಸಿಯನ್ನು ಒಪ್ಪಿಕೊಂಡನಲ್ಲಾ ಎಂದು ಬೇಸರ ಮಾಡಿಕೊಂಡಿದ್ದಾಳೆ. ದಿನ ತುಳಸಿಯನ್ನು ಮಾತನಾಡಿಸುವ ಅಭಿ ತಿಂಡಿ ಏನು ಎಂದು ಕೇಳಿ ಬಡಿಸಿಕೊಂಡು ತಿಂದಿದ್ದಾನೆ. ನನಗೂ ಮಧ್ಯಾಹ್ನ ಆಫೀಸಿಗೆ ಊಟ ತಂದು ಕೊಡಿ ಎಂದು ಹೇಳಿ ಹೋಗಿದ್ದಾನೆ. ಖುಷಿಯಲ್ಲಿರುವ ತುಳಸಿ, ಅಭಿಗಾಗಿ ಪಲಾವ್ ಮಾಡಿಕೊಂಡು ಆಫೀಸ್‌ಗೆ ಬಂದಿದ್ದಾಳೆ.

ಪ್ಯಾಂಟ್ರಿ ಕೆಲಸದಲ್ಲಿ ಸಮರ್ಥ್
ಇನ್ನು ಸಮರ್ಥ್‌ಗೆ ಎಲ್ಲೂ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅಭಿ ಪ್ಯಾಂಟ್ರಿಯಲ್ಲಿ ಸರ್ವರ್ ಕೆಲಸ ಮಾಡುವ ಆಫರ್ ಅನ್ನು ನೀಡಿದ್ದಾನೆ. ಸಮರ್ಥ್‌ಗೆ ಅಭಿ ಮೇಲೆ ಕೋಪ ಬಂದರೂ ಕೂಡ ತನ್ನ ಮನೆಯ ಪರಿಸ್ಥಿತಿಗೆ ಈಗ ಈ ಕೆಲಸವನ್ನು ಮಾಡಲೇಬೇಕಾಗಿ ಬಂದಿದೆ. ಹಾಗಾಗಿ ಸಮರ್ಥ್ ಪ್ಯಾಂಟ್ರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಅಭಿಗೂ ಇದೇ ಬೇಕಾಗಿತ್ತು. ಅದಕ್ಕಾಗಿಯೇ ತುಳಸಿಯನ್ನು ಆಫೀಸಿಗೆ ಊಟ ತರಲು ಹೇಳಿದ್ದ. ತುಳಸಿ ಊಟ ತೆಗೆದುಕೊಂಡು ಆಫೀಸಿಗೆ ಬಂದಾಗ ಅಭಿ ಖುಷಿಯಾಗಿ ಮಾತನಾಡಿಸುತ್ತಾನೆ.
ಸಮರ್ಥ್ ಅನ್ನು ನೋಡಿ ತುಳಸಿ ಶಾಕ್
ತುಳಸಿ ಊಟ ಬಡಿಸುತ್ತೇನೆ ಮಾಡು ಎಂದಾಗ ಅಭಿ ಇಬ್ಬರೂ ಒಟ್ಟಿಗೆ ಊಟ ಮಾಡೋಣ. ಆದರೆ, ನನಗೊಂದು ಮಾತು ಕೊಡಿ, ನೀವು ನಗು ನಗುತ್ತಾ ನನ್ನ ಜೊತೆಯಲ್ಲಿ ಊಟ ಮಾಡಬೇಕು ಎಂದು ಮಾತು ತೆಗೆದುಕೊಳ್ಳುತ್ತಾನೆ. ಬೇಕೆಂದೇ ಸಮರ್ಥ್ ಕೈಯಲ್ಲಿ ತನ್ನ ಕ್ಯಾಬಿನ್‌ಗೆ ತಟ್ಟೆ ಹಾಗೂ ಸ್ಪೂನ್ ಅನ್ನು ತರಿಸಿಕೊಳ್ಳುತ್ತಾನೆ. ಸಮರ್ಥ್ ಅನ್ನು ಸರ್ವರ್ ಕೆಲಸದಲ್ಲಿ ನೋಡಿದ ತುಳಸಿಗೆ ನೋವಾಗುತ್ತದೆ. ವಿಧಿಯಿಲ್ಲದೆ, ಅಭಿ ಜೊತೆಗೆ ನಗುತಾ ಊಟ ಮಾಡುವ ತುಳಸಿ ಮನದಲ್ಲೇ ಕಣ್ಣೀರು ಹಾಕುತ್ತಿರುತ್ತಾಳೆ.
ತುಳಸಿಗೆ ನೋವು ಕೊಟ್ಟ ಸಮರ್ಥ್
ಮಾತು ಮಾತಿಗೂ ಅಭಿ ನೀರು ನಿಮ್ಮಪ್ಪ ತಂದು ಕೊಡುತ್ತಾನಾ? ತಟ್ಟೆ ನಿಮ್ಮಪ್ಪ ತೊಳೆಯುತ್ತಾನಾ? ಎಂದು ಸಮರ್ಥ್‌ಗೆ ಬೈಯುತ್ತಿರುತ್ತಾನೆ. ಸಮರ್ಥ್ ಬಳಿ ಹೋಗುವ ತುಳಸಿ, ಅಭಿ ಬುದ್ಧಿ ಗೊತ್ತಿದ್ದರೂ ಯಾಕೆ ಹೀಗೆ ಮಾಡಿದೆ ಎಂದು ಕೇಳುತ್ತಾಳೆ. ಆದರೆ ಸಮರ್ಥ್, ತುಳಸಿಯನ್ನು ಮೇಡಂ ಎಂದು ಮಾತನಾಡಿಸಿ ಇನ್ನಷ್ಟು ನೋವು ಕೊಡುತ್ತಾನೆ.


Click it and Unblock the Notifications











