Shrirasthu Shubhamasthu: ಅಭಿ ಪ್ಲ್ಯಾನ್ ಠುಸ್; ಸಮರ್ಥ್ ಜಾಣ್ಮೆಗೆ ಅಭಿ ಸುಸ್ತೋ ಸುಸ್ತು

By Poorva

ಸಮರ್ಥ್ ಹಾಗೂ ಅಭಿ ಗಲಾಟೆ ದಿನದಿಂದ ದಿನಕ್ಕೆ ಬಹಳ ಜೋರಾಗುತ್ತಲೇ ಇದೆ. ಅಭಿಗೆ ಸಮರ್ಥನನ್ನು ಬಹಳ ಕೀಳಾಗಿ ನೋಡಿ ಅಭ್ಯಾಸ. ಆದರೆ ತುಳಸಿ ಆ ಮನೆಯ ಸೊಸೆಯಾದ ಬಳಿಕ ಎಲ್ಲಿ ಸಮರ್ಥ್ ಆಸ್ತಿಯಲ್ಲಿ ಭಾಗ ಕೇಳಿ ಬಿಡುತ್ತಾನೋ ಎನ್ನುವ ಭಯ ಅಭಿಗೆ ಶುರುವಾಗಿದೆ. ಯಾಕೆಂದರೆ ತುಳಸಿ ಮಕ್ಕಳನ್ನು ಅಣ್ಣ ತಂಗಿ ಎಂದು ಒಪ್ಪಿಕೊಂಡಿಲ್ಲ.

ಸಮರ್ಥ್ ತನ್ನ ಪಾಡಿಗೆ ತಾನು ಒಬ್ಬನೇ ಇದ್ದು ಯಾರ ತಂಟೆಗೆ ಹೋಗದೆ ಇದ್ದರೂ ಕೂಡ ಅಭಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾನೆ. ಅದಕ್ಕೆ ಸಮರ್ಥ್ ಬಹಳ ಜಾಣ್ಮೆಯಿಂದ ಉತ್ತರ ಕೂಡ ಕೊಟ್ಟಿದ್ದಾನೆ.ಚಅಭಿಯ ಮುಂಗೋಪಕ್ಕೆ ಸಮರ್ಥನ ಜಾಣ್ಮೆಯೇ ಬಹಳ ದೊಡ್ಡ ಉತ್ತರವಾಗಿದೆ. ಸಮರ್ಥನನ್ನು ಕಂಡರೆ ಮುಂಚಿನಿಂದಲೂ ಅಭಿಗೆ ಬಹಳ ಸಿಟ್ಟು. ಅದಕ್ಕಾಗಿ ಆಫೀಸಿನಲ್ಲಿ ಸಮರ್ಥ್‌ಗೆ ಹಿಂಸೆ ಕೊಟ್ಟಿದ್ದ. ಆತನಿಗೆ ಹೇಗೆ ಬೇಕು ಹಾಗೆ ಸಮರ್ಥನನ್ನು ಬಳಸಿಕೊಂಡಿದ್ದಾನೆ.

Shrirasthu Shubhamasthu kannada serial 12th March written update

ಇದೀಗ ಸಮರ್ಥ್ ಬಹಳ ಜಾಣ್ಮೆಯಿಂದ ವರ್ತಿಸುತ್ತಿದ್ದಾನೆ. ಅಭಿ ಕೋಪಗೊಂಡು ಮನೆಯವರ ಮುಂದೆ ಬಂದು ಜೋರಾಗಿ ಹೇಳುತ್ತಾನೆ. ಈ ಮನೆ ಮಂಡಿಯನ್ನು ಮಾತ್ರ ಅಲ್ಲದೇ ಬೇರೆಯವರಿಗೂ ನಮ್ಮ ಮನೆಯ ಆಸ್ತಿಯಲ್ಲಿ ಹಕ್ಕು ಇದೆಯಂತೆ ಅವರಿಗೆ ಭಾಗ ಬೇಕಂತೆ ಎಂದು ಹೇಳಿದಾಗ ಆತಂಕಗೊಂಡ ಮಾಧವ ಏನಾಯಿತು ಎಂದು ಪ್ರಶ್ನೆ ಮಾಡುತ್ತಾನೆ.

ಸಮರ್ಥ್ ಹೇಳಿದ ಮಾತುಗಳನ್ನು ಮಾಧವನ ಬಳಿ ಹೇಳಿದಾಗ ಅವಿಗೆ ಬಹಳ ಸಿಟ್ಟು ಬರುತ್ತದೆ. ಏನು ಮಾತನಾಡುತ್ತಿದ್ದಾನೆ ಸಮರ್ಥ್, ಒಂದು ವೇಳೆ ಸಮರ್ಥ್ ಹಾಗೆ ಮಾತನಾಡಿದ್ದರೆ ಆತನ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿ ತುಳಸಿ ಅವಿಯನ್ನು ತಡೆಯುತ್ತಾಳೆ. ದಯವಿಟ್ಟು ನೀವು ಯಾರು ಮಾತನಾಡಬೇಡಿ ನಾನೇ ಮಾತನಾಡುತ್ತೇನೆ ಎಂದು ಹೊರಗಡೆ ಇದ್ದ ಮಗನನ್ನು ಕರೆಯುತ್ತಾಳೆ.

Shrirasthu Shubhamasthu kannada serial 12th March written update

ತಾಯಿ ಧ್ವನಿ ಕೇಳಿ ಬಂದ ಸಮರ್ಥ್

ಸಮರ್ಥ್ ಮೇಡಂ ಏನು ಎಂದು ಕೇಳುತ್ತಾನೆ. ಇದನ್ನು ಕೇಳಿದ ತುಳಸಿ, ಸಮರ್ಥ್ ಬಳಿ ಕೇಳುತ್ತಾಳೆ ನೀನು ಈ ಮನೆಯ ಭಾಗ ಬೇಕೆಂದು ಕೇಳಿದ್ದಿಯಾ? ಯಾಕೆ ಹಾಗೆ ಮಾಡಲು ಹೋದೆ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸಮರ್ಥ್ ನಾನು ಆ ತರ ಏನು ಮಾತನಾಡಿಲ್ಲ. ಅಭಿಗೆ ನನ್ನ ನೋಡಿದರೆ ಮೊದಲಿನಿಂದ ಆಗುತ್ತಿಲ್ಲ. ಅದಕ್ಕೆ ಈ ರೀತಿ ಹೇಳುತ್ತ ಇದ್ದಾನೆ ಎಂದಾಗ ಅಭಿಗೆ ಶಾಕ್ ಆಗುತ್ತದೆ. ಅಭಿ ಎಷ್ಟೇ ಅರಚಾಡಿದರೂ ಕೊನೆಗೆ ಮಾತ್ರ ಅಭಿ ಬಗ್ಗೆ ಎಲ್ಲರೂ ಕೆಟ್ಟದಾಗಿ ಭಾವಿಸುತ್ತಾರೆ.

ತುಳಸಿಯನ್ನು ಟಾರ್ಗೆಟ್ ಮಾಡಿದ ಶಾರ್ವರಿ

ಈ ಘಟನೆ ದೀಪಿಕಾಗೆ ಸಹಿಸಲು ಆಗಲಿಲ್ಲ. ಆಕೆಗೆ ಬಹಳ ಬೇಸರ ಆಗುತ್ತದೆ. ಆದರೆ ಸಮರ್ಥ್‌ಗೆ ಮಾತ್ರ ಒಳಗೊಳಗೆ ನಗು ಬರುತ್ತದೆ. ಅವಿ ಹಾಗೂ ಮಾಧವ್, ಸಮರ್ಥ್ ಬಳಿ ಸಾರಿ ಕೇಳುತ್ತಾರೆ. ಇನ್ನೂ ದೀಪಿಕಾ ಮೆತ್ತಗೆ ಅತ್ತೆಯ ಬಳಿ ಬಂದು ಹೇಳುತ್ತಾಳೆ, ನೋಡಿದ್ರಾ ಅತ್ತೆ ಹೇಗೆಲ್ಲ ಆ ಸಮರ್ಥ್ ಆಟ ಆಡುತ್ತಾನೆ? ಎಂದು. ನನಗೆ ಮಾತ್ರ ನನ್ನ ಗಂಡ ತಪ್ಪು ಮಾಡಿದ್ದಾನೆ ಎಂದು ಅನ್ನಿಸುತ್ತಿಲ್ಲ ಎನ್ನುತ್ತಾಳೆ.

ತಿನ್ನುವ ಅನ್ನ ಹಾಳು ಮಾಡಿದ ದೀಪಿಕಾ

ಶಾರ್ವರಿ ಕೂಡ ಮೆತ್ತಗೆ ಹೇಳುತ್ತಾಳೆ. ನನಗೆ ಆ ತುಳಸಿಯಿಂದಲೇ ಇಷ್ಟೆಲ್ಲ ಆಯಿತು, ಅವಳದ್ದು ಅತಿಯಾಯಿತು ಅನ್ನಿಸುತ್ತಿದೆ. ತುಳಸಿಗೆ ಕೂಡ ಈ ಉತ್ತಮ ಸ್ಥಾನಮಾನವಿದೆ. ಅದೆಲ್ಲವನ್ನು ಆಕೆಯಿಂದ ಕಸಿದುಕೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ಈ ಮನೆಯ ಸಂಪತ್ತನ್ನು ಆಕೆಯ ಮಕ್ಕಳಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ, ಅದರಿಂದ ತುಳಸಿಯಿಂದ ಆದಷ್ಟು ಬೇಗ ನಾವು ಅಧಿಕಾರವನ್ನು ಕಿತ್ತುಕೊಳ್ಳಬೇಕು ಎನ್ನುತ್ತಾಳೆ. ದೀಪಿಕಾಗೆ ತುಳಸಿ ಮೇಲೆ ಇದ್ದ ದ್ವೇಷವನ್ನು ಮತ್ತಷ್ಟು ಹೆಚ್ಚು ಮಾಡುತ್ತಾಳೆ.

More from Filmibeat

English summary
Shrirasthu Shubhamasthu today episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X