Shrirasthu Shubhamasthu: ಶಾರ್ವರಿ ಆಟವನ್ನು ಕೊನೆಯಾಗಿಸುತ್ತಾ ಮಹೇಶನ ಮಾತುಗಳು?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತವರು ಮನೆಗೆ ಹೋಗಿದ್ದ ಸಿರಿ ಈಗ ವಾಪಸ್ ಬಂದಿದ್ದಾಳೆ. ದತ್ತ ತಾತನ ಮನೆಯಲ್ಲಿ ಅಡುಗೆ ಮಾಡುವ ತೊಂದರೆ ತಪ್ಪಿದೆ. ಆದರೆ, ದತ್ತ ತಾತನಿಗೆ ಸಂಧ್ಯಾ ಮೇಲಿನ ಅನುಮಾನಗಳು ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಒಂದು ಕಡೆ ಅವಳು ಗರ್ಭಿಣಿ ಅನ್ನೋದನ್ನೇ ನಂಬೋದಕ್ಕೆ ಆಗುತ್ತಿಲ್ಲ.
ಪದೇ ಪದೆ ಸಂಧ್ಯಾಳಿಗೆ ಪುಸ್ತಕ ಓದು, ದೇವರ ನಾಮ ಹೇಳು, ನನ್ನ ಮರಿಮೊಮ್ಮೊಗನಿಗೆ ಒಳ್ಳೆಯದಾಗಬೇಕು ಅಂದರೆ, ಇದನ್ನೆಲ್ಲಾ ಮಾಡಲೇಬೇಕು ಎಂದು ತಲೆ ತಿನ್ನುತ್ತಿರುತ್ತಾರೆ.

ಇತ್ತ ಮಾಧವ್ ಎಷ್ಟು ಹೊತ್ತಾದರೂ ಮನೆಗೆ ಬಂದಿರುವುದಿಲ್ಲ. ಹಾಗಾಗಿ ತುಳಸಿ ಮಾಧವ್‌ಗಾಗಿ ಕಾಯುತ್ತಾ ತಾನೂ ಊಟ ಮಾಡದೇ ಕಾಯುತ್ತಿರುತ್ತಾಳೆ. ಆದರೆ, ಮಾಧವ್ ರಾತ್ರಿ ತಡವಾಗಿ ಬರುತ್ತಾನೆ. ತುಳಸಿ ತನಗಾಗಿ ಕಾಯುತ್ತಿರುವುದನ್ನು ನೋಡಿ ಖುಷಿ ಪಡುತ್ತಾನೆ. ನನಗಾಗಿ ಒಬ್ಬರು ಕಾಯುತ್ತಿದ್ದಾರೆ ಎಂದರೆ ಮನಸ್ಸಿಗೆ ಏನೋ ಸಂತಸವಾಗುತ್ತೆ ಎಂದು ಹೇಳುತ್ತಾನೆ.
ಮಹೇಶ್ ಬಗ್ಗೆ ಕೇಳಿ ಖುಷಿಪಟ್ಟ ಮಾಧವ್
ಮಾಧವ್‌ಗೆ ತುಳಸಿ ಊಟ ಬಡಿಸಿ ತಾನೂ ಕೂಡ ಊಟ ಮಾಡುತ್ತಿರುತ್ತಾಳೆ. ಆಗ ನಿಮಗೆ ಇಂದು ಎರಡು ಖುಷಿ ವಿಷಯ ಇದೆ ಎಂದು ಹೇಳುತ್ತಾಳೆ. ಮೊದಲನೆಯದು ಅವಿ ತಾನಾಗಿಯೇ ನನ್ನ ಜೊತೆ ಮಾತನಾಡಿದ. ಎರಡನೇಯದು ಮಹೇಶ್ ಅವರು ನನ್ನ ಬಳಿ ಮಾತನಾಡಿದರು. ಅವಳು ಸರಿಯಿಲ್ಲ, ಕರ್ಜೂರ ಎಂದು ಹೇಳಿದರು ಎನ್ನುತ್ತಾಳೆ. ಈ ಮಾತನ್ನು ಕೇಳಿದ ಮಾಧವ್‌ಗೆ ಬಹಳ ಖುಷಿಯಾಗುತ್ತದೆ.

ಚಿಂತೆಯಲ್ಲಿ ಮುಳುಗಿದ ಸಂಧ್ಯಾ
ಈಗ ಸಂಧ್ಯಾಳಿಗೆ ನಂದಿನಿಯ ಬಳಿ ಇರುವ ತನ್ನ ಹಣದ್ದೇ ಚಿಂತೆಯಾಗಿದೆ. ಅಷ್ಟು ಹಣ ವಾಪಸ್ ಬರಬೇಕು ಎಂದರೆ, ಈಗ ಸಂಧ್ಯಾ ಮತ್ತೆ ಒಂದು ಲಕ್ಷ ಹಣವನ್ನು ನೀಡಬೇಕಿದೆ. ಆದರೆ ಒಂದು ಲಕ್ಷ ರೂಪಾಯಿಯನ್ನು ಎಲ್ಲಿ ಹೊಂಚುವುದು, ನಂದಿನಿಗೆ ಹೇಗೆ ಕೊಡುವುದು ಎಂಬುದು ತಿಳಿಯದೇ ಯೋಚಿಸುತ್ತಿರುತ್ತಾಳೆ. ಸಿರಿ ಹೀಗೆ ಯಾಕೆ ಯೋಚಿಸುತ್ತಿದ್ದೀಯಾ ಎಂದು ಕೇಳುತ್ತಾಳೆ. ನಿನಗೆ ಈಗ ಅಭಿ ಅಂತ ತಮ್ಮ, ಅವಿ ಹಾಗೂ ಸಮರ್ಥ್ ಅಂತ ಅಣ್ಣಂದಿರಿದ್ದಾರೆ ಎಂದು ಮಾತಿಗೆ ಹೇಳುತ್ತಾಳೆ. ಆಗ ಸಂಧ್ಯಾ ತಲೆಗೆ ತಕ್ಷಣವೇ ಅಭಿಯ ನೆನಪಾಗಿ ಸುಮ್ಮನಾಗುತ್ತಾಳೆ.
ಅಭಿ ಆಫೀಸಿಗೆ ಬಂದ ಸಂಧ್ಯಾ
ಮಾರನೇಯ ದಿನವೇ ಸಂಧ್ಯಾ ನೇರವಾಗಿ ಯಾರಿಗೂ ಹೇಳದೆಯೇ ಅಭಿ ಆಫಿಸಿಗೆ ಹೋಗುತ್ತಾಳೆ. ಅಲ್ಲಿ ಸಮರ್ಥ್ ಕೂಡ ಪಾಟ್ನರ್, ಯಾವುದೋ ಮೀಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತಾನೆ ಎಂದು ಭಾವಿಸಿರುತ್ತಾಳೆ. ನಾನು ಅಭಿ ತಂಗಿ ಎಂದು ಹೇಳಿಕೊಂಡು ಕ್ಯಾಬಿನ್‌ಗೆ ಹೋಗಿ ಕೂರುತ್ತಾಳೆ. ಜ್ಯೂಸ್ ತರಿಸಲು ಹೇಳಿದಾಗ ಸಮರ್ಥ್ ಜ್ಯೂಸ್ ತಂದು ಕೊಡುತ್ತಾನೆ. ಆಗ ಇಬ್ಬರಿಗೂ ಶಾಕ್ ಆಗುತ್ತದೆ.
ಮ್ಯಾನೇಜರ್ ಬಳಿ ಹಣ ಕೇಳಿದ ಸಂಧ್ಯಾ
ಸಂಧ್ಯಾ, ಸಮರ್ಥ್ ಅನ್ನು ಅಣ್ಣ ಎಂದು ಕರೆದರೆ, ತನ್ನ ಗೌರವ ಕಡಿಮೆಯಾಗುತ್ತದೆ ಎಂದು ಸ್ನ್ಯಾಕ್ಸ್ ತೆಗೆದುಕೊಂಡು ಬಾ ಹೋಗು ಎಂದು ಹೇಳಿ ಕಳಿಸುತ್ತಾಳೆ. ಅಭಿ ಬರುವ ಮುನ್ನ ಹೋಗಬೇಕು ಎಂದು ಹೇಳಿ, ಮ್ಯಾನೇಜರ್ ಬಳಿ ನಾನು ನಿಧಿ, ಈಗಲೇ ಒಂದು ಲಕ್ಷ ಕ್ಯಾಶ್ ಬೇಕು ಎಂದು ಕೇಳುತ್ತಾಳೆ.
ಮಹೇಶ್ ಹೇಳಿದ ಮಾತೇನು..?
ಇನ್ನು ಮಹೇಶ್‌ಗೆ ತುಳಸಿ ಕರ್ಜೂರವನ್ನು ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಈ ವೇಳೆ ಶಾರ್ವರಿ ಬಂದು ತುಳಸಿಗೆ ಬೈಯುತ್ತಿರುತ್ತಾಳೆ. ಇದೇ ಸಮಯಕ್ಕೆ ಮಾಧವ್ ಬಂದು ಮಹೇಶ್‌ಗೆ ಕರ್ಜೂರವನ್ನು ತಿನ್ನಿಸಲು ಹೋದಾಗ ಮಹೇಶ್ ಸಾವು ಎಂದು ಮಾತನಾಡುತ್ತಾನೆ. ಬಳಿಕ ಅವಳು ಎಂದು ಹೇಳುತ್ತಾನೆ. ಆಗ ಮಾಧವ್ ಅವಳು ಎಂದರೆ, ಶಾರ್ವರಿನಾ ಎಂದು ಕೇಳುತ್ತಾನೆ. ಈ ಮಾತು ಕೇಳಿದ ಶಾರ್ವರಿಗೆ ಶಾಕ್ ಆಗುತ್ತದೆ. ಈ ಮನೆಯಲ್ಲಿ ತನ್ನ ಆಟ ಇಂದೇ ಮುಗಿದೋಯ್ತಾ? ಎಂದು ಗಾಬರಿಯಾಗುತ್ತಾಳೆ.


Click it and Unblock the Notifications











