Shrirasthu Shubhamasthu: ಜನಾರ್ಧನ್ ಮಸಲತ್ತಿಗೆ ಪೂರ್ಣಿಮಾ ಬಲಿಪಶು; ತಂದೆ ಮಾತಿಗೆ ದೀಪಿಕಾ ಖುಷ್

By Poorva

ಜನಾರ್ಧನ್ ಮೋಸದ ಆಟಕ್ಕೆ ಪೂರ್ಣಿಮಾ ಬಲಿಪಶು ಆಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಪೂರ್ಣಿಮಾ ಬಳಿ ದೀಪಿಕಾ ಬಹಳ ನಯವಾಗಿ ಮಾತನಾಡುತ್ತಾಳೆ. ಅಕ್ಕ ನಾನು ನಿನ್ನನ್ನು ಸಾಕಷ್ಟು ನಿಂದನೆ ಮಾಡಿದ್ದೇನೆ. ನಿನ್ನ ಬಗ್ಗೆ ಬಹಳ ತುಚ್ಚವಾಗಿ ಮಾತನಾಡಿರುವೆ ನನ್ನ ಕ್ಷಮಿಸಿ ಬಿಡಿ ಎಂದು ಹೇಳುತ್ತಾಳೆ.

ದೀಪಿಕಾ ಮಾತಿಗೆ ಪೂರ್ಣಿಮಾ ನನ್ನ ಅಕ್ಕ ಎಂದು ಬಾಯಿತುಂಬಾ ಕರೆದು ಬಿಟ್ಟೆಯಲ್ಲ ನನಗೆ ಅಷ್ಟೇ ಸಾಕು. ನನಗೆ ನೀನೆಂದರೆ ಬಹಳ ಇಷ್ಟ. ನಿನ್ನ ಜೊತೆ ನಾನು ಯಾವತ್ತೂ ಜಗಳ ಆಡುವುದು ಇಲ್ಲ. ನೀನೇ ನನ್ನ ಪ್ರಪಂಚ. ಒಂಟಿಯಾಗಿದ್ದ ನನಗೆ ತಂಗಿ ಸಿಕ್ಕಿಬಿಟ್ಟಳು ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ತುಳಸಿಗೆ ಬಹಳ ಖುಷಿ ಆಗುತ್ತದೆ.

Shrirasthu Shubhamasthu kannada serial 18th may episode written update

ದೀಪಿಕಾ ಸದಾ ಪೂರ್ಣಿಮಾಗೆ ನೋವಾಗುವ ಹಾಗೆ ನಡೆದುಕೊಂಡಿದ್ದಳು. ಈ ಬಗ್ಗೆ ತುಳಸಿ ಅದೆಷ್ಟೇ ಬಾರಿ ತಿಳಿಸಿ ಹೇಳಿದರು ಆಕೆ ಮಾತನ್ನು ದೀಪಿಕಾ ಕೇಳುತ್ತಿರಲಿಲ್ಲ. ಇನ್ನೂ ಅಕ್ಕ ತಂಗಿಯ ಬಾಂಧವ್ಯ ನೋಡಿದ ಅಭಿ ಕಳೆದು ಹೋಗಿದ್ದಾನೆ. ಯಾವಾಗಲೂ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡು ಇದ್ದರು. ಇದೀಗ ಬಹಳ ಒಗ್ಗಟ್ಟಾಗಿ ಬಿಟ್ಟಿದ್ದಿರಾ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪೂರ್ಣಿಮಾ ಹಾಗೂ ದೀಪಿಕಾ ಕೊಂಚ ಜೋರಾಗಿ ನಗುತ್ತಾರೆ.

ಪೂರ್ಣಿಮಾ ಅನಾಥೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಪೂರ್ಣಿಮಾ ಅನಾಥೆ ಅಲ್ಲ ಆಕೆಗೆ ಕೂಡ ಅಪ್ಪ ಅಮ್ಮ ಇದ್ದಾರೆ. ಅವರೇ ಜನಾರ್ಧನ್ ಹಾಗೂ ವನಜಾ. ಜನಾರ್ಧನ್ ನಿಜವಾದ ಮಗಳೇ ಪೂರ್ಣಿಮಾ ಆದರೆ ಆ ವಿಚಾರ ಆತನಿಗೆ ತಿಳಿದೇ ಇರುವುದಿಲ್ಲ. ಆತ ಆಸ್ತಿ ಎಲ್ಲಿ ನನ್ನ ಕೈ ಬಿಟ್ಟು ಹೋಗುತ್ತದೆ ಎನ್ನುವ ಭಯದಲ್ಲಿ ಇರುತ್ತಾನೆ.

ಆಸ್ತಿಗಾಗಿ ಜನಾರ್ಧನ್ ಷಡ್ಯಂತ್ರ

ಬೇರೆ ಯಾರನ್ನಾದರು ಮಗಳು ಎಂದು ಹೇಳಿದರೆ ಅವರು ಮತ್ತೆ ಆಸ್ತಿ ನಮಗೆ ಕೊಡಲಿಲ್ಲ ಎಂದಾದರೆ, ಅದಕ್ಕೆ ಪೂರ್ಣಿಮಾ ನನ್ನ ಮಗಳು ಎಂದರೆ ಆಸ್ತಿಯೆಲ್ಲ ಮುಂದೆ ನನ್ನ ಪಾಲಾಗಬಹುದು ಎಂದು ಜನಾರ್ಧನ್ ಡ್ರಾಮ ಮಾಡುತ್ತಾನೆ. ಜನಾರ್ಧನ್‌ಗೆ ಆಕೆಯ ಮಗಳು ದೀಪಿಕಾ ಸಾಥ್ ನೀಡುತ್ತಾಳೆ. ವನಜಾಗೆ ಪೂರ್ಣಿಮಾ ಎಂದರೆ ಬಹಳ ಪ್ರೀತಿ. ಆಕೆಗೆ ತನ್ನ ಮಗಳನ್ನು ಕಳೆದುಕೊಂಡ ನೋವು ಒಂದು ಕಡೆ ಆದರೆ ಮತ್ತೊಂದು ಕಡೆ ಜನಾರ್ಧನ್ ನಾಟಕದ ಮಾತುಗಳನ್ನಾಡುತ್ತಾನೆ ಎನ್ನುವುದು. ಇನ್ನೂ ಪೂರ್ಣಿಮಾ ಖುಷಿಯಲ್ಲಿ ಇರುತ್ತಾಳೆ.

Shrirasthu Shubhamasthu kannada serial 18th may episode written update

ಹೆಂಡತಿ ಖುಷಿಯಲ್ಲಿ ಅವಿ ಭಾಗಿ

ಪೂರ್ಣಿಮಾಳನ್ನು ನೋಡಿದ ಅವಿ ಖುಷಿಗೆ ಪಾರವೇ ಇರುವುದಿಲ್ಲ. ಪೂರ್ಣಿಮಾ ಖುಷಿಯಾಗಿ ಇರುವುದನ್ನು ನೋಡಿ ಬಹಳ ದಿನ ಆಯಿತು. ದೀಪಿಕಾ ನಿನಗೆ ಧನ್ಯವಾದಗಳು. ನೀವು ಅಕ್ಕ ತಂಗಿ ಹೀಗೆಯೇ ಸದಾ ಕಾಲ ಖುಷಿಯಾಗಿ ಇರಿ ಎಂದು ಹೇಳುತ್ತಾನೆ. ಇತ್ತ ಜನಾರ್ಧನ್ ಪೂರ್ಣಿಮಾಗೆ ಕರೆ ಮಾಡುತ್ತಾಳೆ. ಪೂರ್ಣಿಮಾ ಮೊಬೈಲ್ ನೋಡಿದ ದೀಪಿಕಾ ಹೇಳುತ್ತಾಳೆ . ಇದೀಗ ನನಗೆ ಅಪ್ಪ ಕಾಲ್ ಮಾಡುವುದೇ ಮರೆತಿದ್ದಾರೆ. ಅಪ್ಪ ನಿನಗೆ ಕಾಲ್ ಮಾಡಿದ್ದಾರೆ ಮಾತನಾಡು ಎಂದೂ ಫೋನ್ ಕೊಡುತ್ತಾಳೆ.

ಪೂರ್ಣಿಮಾಗೆ ಕರೆ ಮಾಡಿದ ಜನಾರ್ಧನ್

ಜನಾರ್ಧನ್ ಜೊತೆ ಪೂರ್ಣಿಮಾ ಮಾತನಾಡುತ್ತಾಳೆ. ತನ್ನ ಮಗಳ ಕೈಯ್ಯಾರೆ ಮಾಡುವ ಹೋಳಿಗೆ ತಿನ್ನುವ ಬಯಕೆಯನ್ನು ವ್ಯಕ್ತ ಪಡಿಸುತ್ತಾನೆ ಜನಾರ್ಧನ್. ಈ ಮಾತು ಕೇಳಿ ಪೂರ್ಣಿಮಾಗೆ ಬಹಳ ಶಾಕ್ ಆಗುತ್ತದೆ. ಇದೇನಪ್ಪಾ ಹೀಗೆಲ್ಲ ಆಗುತ್ತಿದೆ. ಜನಾರ್ಧನ್ ಮುಂಚೆ ಎಲ್ಲಾ ಪೂರ್ಣಿಮಾ ಜೊತೆ ಬಹಳ ರೂಡ್ ಆಗಿ ಮಾತನಾಡುತ್ತಿದ್ದ. ಆದರೆ ಇದೀಗ ಬಹಳ ಖುಷಿಯಿಂದ ಮಾತನಾಡುತ್ತಿದ್ದಾನೆ. ಇದನ್ನು ನೋಡಿದ ಪೂರ್ಣಿಮಾಗೆ ಎಲ್ಲಿಲ್ಲದ ಖುಷಿ. ಹಾಗೆಯೇ ತನ್ನ ತಂದೆಗೆ ಹೋಳಿಗೆಯನ್ನು ಮಾಡಿ ಅಲ್ಲಿಗೆ ತೆಗೆದುಕೊಂಡು ಹೋಗುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಾಳೆ.

ನನಗೆ ನೀನು ಅಕ್ಕನಾ?

ಇದನ್ನೆಲ್ಲ ನೋಡಿದ ದೀಪಿಕಾ ಮಾತ್ರ ಮನದಲ್ಲಿಯೇ ಮಸಲತ್ತು ಮಾಡುತ್ತಿರುತ್ತಾಳೆ. ಆಸ್ತಿ ಕೈ ಸೇರುವ ತನಕ ಡ್ಯಾಡಿ ನಿನ್ನ ಜೊತೆ ಡ್ರಾಮ ಮಾಡುತ್ತಾರೆ ಆ ಮೇಲೆ ಖಂಡಿತವಾಗಿಯೂ ನಿನಗೆ ಇದರ ಹತ್ತು ಪಟ್ಟು ನೋವಾಗುತ್ತದೆ. ನನಗೆ ನೀನು ಅಕ್ಕನಾ? ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ನಾನು ಅದನ್ನು ಒಪ್ಪಿಕೊಳ್ಳುವುದು ಇಲ್ಲ ಎಂದು ಖಡಕ್ ಆಗಿ ಮನದಲ್ಲಿ ಯೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Shrirasthu Shubhamasthu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X