Shrirasthu Shubhamasthu: ಸಂಧ್ಯಾ ಪ್ಲ್ಯಾನ್ ಸಂಪೂರ್ಣ ಉಲ್ಟಾ ಆಗುತ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಅಮ್ಮನ ಮನೆಗೆ ಬಂದು ಸುಮಾರು ಹೊತ್ತು ಕಳೆದಿದೆ. ಆಸ್ಪತ್ರೆಗೆ ಹೋಗೋಣ ಅಂದರೆ ಮಾತ್ರವೇ ತಲೆ ಸುತ್ತು, ಸುಸ್ತು ಎನ್ನುವ ಸಂಧ್ಯಾ ಅಮ್ಮನ ಮನೆಯಲ್ಲಿ ಎಂಜಾಯ್ ಮಾಡುತ್ತಿದ್ದಾಳೆ.
ಎಲ್ಲರನ್ನೂ ಆಡಿಕೊಳ್ಳುತ್ತಾ, ತಾನೇ ಗ್ರೇಟ್ ಎಂಬಂತೆ ಸಂಧ್ಯಾ ಜಂಭ ಕೊಚ್ಚಿಕೊಳ್ಳುತ್ತಿದ್ದಾಳೆ. ಸಂಧ್ಯಾಳನ್ನು ಸಹಿಸಿಕೊಳ್ಳಲಾಗದಿದ್ದರೂ, ವಿಧಿಯಿಲ್ಲದೇ ಶಾರ್ವರಿ ಸುಮ್ಮನಿದ್ದಾಳೆ.

ಇತ್ತ ದತ್ತ ಮನೆಗೆ ಸಂಧ್ಯಾಳನ್ನು ಹುಡುಕಿಕೊಂಡು ಪ್ರಸಾದ್ ಬಂದಿದ್ದಾನೆ. ಈಗ ಸತ್ಯ ತಿಳಿದುಕೊಳ್ಳಲು ದತ್ತ ತಾತ ಪ್ಲಾನ್ ಮಾಡಿದ್ದು ಪ್ರಸಾದ್‌ನನ್ನು ಪ್ರಶ್ನೆ ಮಾಡಿದ್ದಾರೆ.
ಸತ್ಯ ತಿಳಿದ ದತ್ತ ತಾತ
ಪ್ರಸಾದ್‌ಗೆ ಸಂಧ್ಯಾ ಗರ್ಭಿಣಿ ಅನ್ನೋ ವಿಚಾರ ಗೊತ್ತಾಗಿದ್ದೇ ಇತ್ತೀಚೆಗೆ ಅಂದರೆ, ಸಂಧ್ಯಾ ಸುಳ್ಳು ಹೇಳಿರಬಹುದು ಎಂದು ದತ್ತ ತಾತ ಗೆಸ್ ಮಾಡುತ್ತಾರೆ. ಇನ್ನು ಸಿರಿ, ಸಂಧ್ಯಾಳಿಗೆ ಫೋನ್ ಮಾಡಿ ಚೆಕಪ್ ಆಯ್ತಾ..? ಡಾಕ್ಟರ್ ಏನ್ ಹೇಳಿದ್ರು ಎಂದು ಕೇಳಿದ್ದಕ್ಕೆ ನಾನಿನ್ನೂ ಹೋಗಿಲ್ಲ ಅಮ್ಮನ ಮನೆಯಲ್ಲಿದ್ದೀನಿ. ನನ್ನ ಬಟ್ಟೆಗಳನ್ನೆಲ್ಲಾ ಪ್ಯಾಕ್ ಮಾಡಿ ಕಳ್ಸು ನಾನು ಇಲ್ಲೇ ಇರ್ತೀನಿ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಮೇಲೆ ದತ್ತ ತಾತನಿಗೆ ಸೂಕ್ಷ್ಮತೆ ಅರ್ಥವಾಗುತ್ತದೆ. ಹೀಗಾಗಿ ಸಮರ್ಥ್‌ಗೆ ಸಂಧ್ಯಾಳನ್ನು ಕರೆದುಕೊಂಡು ಬಾ ಎಂದು ಹೇಳುತ್ತಾನೆ. ಸಮರ್ಥ್‌ಗೆ ಇಷ್ಟವಿಲ್ಲದಿದ್ದರೂ ಹೋಗಲು ಒಪ್ಪಿಕೊಳ್ಳುತ್ತಾನೆ.
ಪೂರ್ಣಿಮಾ ಬಗ್ಗೆ ಅವಿ ಕಾಳಜಿ
ಅವಿ ಆಫಿಸಿನಿಂದ ಮನೆಗೆ ಬಂದ ಕೂಡಲೇ ಶಾರ್ವರಿ ಕಿವಿ ಚುಚ್ಚುತ್ತಾಳೆ. ಸಂಧ್ಯಾ ಪ್ರೆಗ್ನೆಂಟ್ ಆಗಿದ್ದಾಳೆ. ಮನೆಗೆ ಬಂದಿದ್ದು, ಪೂರ್ಣಿಮಾಳನ್ನು ಬೇಕಂತಲೇ ಬೇಡದ ಪ್ರಶ್ನೆಗಳನ್ನು ಕೇಳಿ ನೋವು ಮಾಡುತ್ತಿದ್ದಾಳೆ. ಇದರಿಂದ ಪೂರ್ಣಿಮಾಗೆ ನೋವಾಯ್ತು. ಭಾವ ಅವಳಿಗೆ ಸಮಾಧಾನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನೀನು ಪೂರ್ಣಿಮಾ ಜೊತೆಗೆ ಇರಬೇಕು. ಹೋಗಿ ಸಮಾಧಾನ ಮಾಡು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಅವಿಗೆ ಕೋಪ ಬರುತ್ತದೆ. ಅಪ್ಪನ ರೂಮ್‌ಗೆ ಹೋಗಿ ಪೂರ್ಣಿಮಾಳನ್ನು ಕರೆದುಕೊಂಡು ಬರುತ್ತಾನೆ. ಏನಾದರೂ ನೋವಾಯ್ತಾ..? ಸಂಧ್ಯಾ ಏನಾದರೂ ಹೇಳಿ ನೋವು ಮಾಡಿದಳಾ ಎಂದು ಕೇಳುತ್ತಾನೆ. ಅದಕ್ಕೆ ಪೂರ್ಣಿಮಾ ಹಾಗೆಲ್ಲಾ ಏನಿಲ್ಲ ಎಂದು ಹೇಳಿ ಊಟಕ್ಕೆ ಕರೆದುಕೊಂಡು ಹೋಗುತ್ತಾಳೆ.

ಅಮ್ಮನ ಮನೆಯಲ್ಲಿ ಸಂಧ್ಯಾ ಠಿಕಾಣಿ?
ಸಂಧ್ಯಾ ಅಮ್ಮನ ಮನೆಯಲ್ಲೇ ಠಿಕಾಣಿ ಹೂಡಲು ಮುಂದಾಗಿದ್ದಾಳೆ. ಇದಕ್ಕಾಗಿ ಅಮ್ಮನ ಬಳಿ ಬಲವಂತ ಮಾಡಿದ್ದಾಳೆ. ಡೈನಿಂಗ್ ಹಾಲ್‌ನಲ್ಲಿ ಕುಳಿತಿರುವಾಗಲೇ ಏನೇನೋ ಮಾತನಾಡಿ ಎಲ್ಲರಿಗೂ ಮುಜುಗರ ಉಂಟು ಮಾಡುತ್ತಾಳೆ. ಮಾಧವ್‌ನನ್ನು ಅಪ್ಪ ಎಂದು ಕರೆಯುತ್ತಾಳೆ. ಅಮ್ಮನಿಗೆ ಸನ್ನೆ ಮಾಡಿದಾಗ ಶಾರ್ವರಿ ನೋಡಿ ತುಳಸಿಯನ್ನು ಸೈಡ್‌ಗೆ ಕರೆಯುತ್ತಾಳೆ. ಅಮ್ಮ-ಮಗಳದ್ದು ಏನು ಪ್ಲಾನ್. ಇಲ್ಲೇ ಸಂಧ್ಯಾ ಇರುತ್ತಾಳೆ ಎಂದರೆ ನಾನು ಸಹಿಸೊಲ್ಲ. ಅಮ್ಮ ಮಗಳು ಸೇರಿಕೊಂಡು ಮನೆಯನ್ನು ಗುಡಿಸಿ ಗುಂಡಾಂತರ ಮಾಡುತ್ತೀರಾ ಎಂದು ಅವಮಾನಿಸುತ್ತಾಳೆ. ಇದರಿಂದ ಮುಜುಗರಗೊಂಡ ತುಳಸಿ, ಶಾರ್ವರಿ ಬಳಿ ಸಮಾಧಾನವಾಗಿ ಮಾತನಾಡುತ್ತಾಳೆ. ಬಳಿಕ ಸಂಧ್ಯಾ ಬಳಿ ಹೋಗಿ ನೀನು ಇಲ್ಲಿ ಇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಅರ್ಥ ಮಾಡಿಸುತ್ತಿರುತ್ತಾಳೆ.
ಸಮರ್ಥ್‌ಗೆ ಅವಮಾನಿಸಿದ ಅಭಿ
ಸಮರ್ಥ್, ಸಂಧ್ಯಾಳನ್ನು ಕರೆದುಕೊಂಡು ಹೋಗಲು ಮಾಧವ್ ಮನೆಗೆ ಬರುತ್ತಾನೆ. ಆಗ ಅಭಿ, ಸಮರ್ಥ್ ಅನ್ನು ಅವಮಾನಿಸುತ್ತಾ ಸ್ವಾಗತ ಮಾಡುತ್ತಾನೆ. ನಿನಗೆ ಕೆಲಸವಿಲ್ಲ. ಇನ್ನು ನಿನ್ನ ತಂಗಿಯನ್ನು ನೋಡಿಕೊಳ್ಳುವುದಕ್ಕೆ ಆಗೊಲ್ಲ ಎಂದು ಇಲ್ಲಿಗೆ ಕಳಿಸಿದ್ದೀಯಾ? ಎಂದೆಲ್ಲಾ ಅವಮಾನಿಸುತ್ತಾನೆ. ಮಾಧವ್ ಎಷ್ಟು ಹೇಳಿದರೂ ಅಭಿ ಸುಮ್ಮನಾಗುವುದಿಲ್ಲ. ಕೋಪದಲ್ಲಿ ಸಮರ್ಥ್, ಸಂಧ್ಯಾಳನ್ನು ಕರೆಯುತ್ತಾನೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.


Click it and Unblock the Notifications











