Shrirasthu Shubhamasthu: ತುಳಸಿ ಮೇಲೆ ಕೋಪ ಮಾಡಿಕೊಂಡ ಅಭಿ ಮಾಡಿದ್ದೇನು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ಸಪ್ಪಗೆ ಕುಳಿತಿರುತ್ತಾಳೆ. ಅವಿ ಹೆಂಡತಿಯನ್ನು ನೋಡಿ ಯಾಕಿಷ್ಟು ಸಪ್ಪಗಿದ್ದೀಯಾ? ಮನೆಯಲ್ಲಿ ಹೀಗೆಲ್ಲಾ ಆಗುತ್ತಿದೆ. ಅಭಿ ಬಗ್ಗೆ ನಿನಗೂ ಬೇಸರವಿದೆ ಅಂತ ಗೊತ್ತು. ಪಾಪ ಅಭಿ ಯಾಕೋ ಅವನ ಟೈಮ್ ಸರಿಯಿಲ್ಲ. ನೀನು ಸಪ್ಪಗಿರಬೇಡ ಎಂದು ಅವಿ, ಪೂರ್ಣಿಮಾಳನ್ನು ಮಾತನಾಡಿಸುತ್ತಾನೆ.
ಪೂರ್ಣಿಮಾ ಪಾಪ ತುಳಸಿ ಅಮ್ಮ. ಅವರಿಗೆ ಈ ಮನೆಯಲ್ಲಿ ಹೊಂದಿಕೊಳ್ಳಲು ನಾವು ಸಮಯ ಕೊಡುತ್ತಿಲ್ಲ. ರಾತ್ರಿಯೆಲ್ಲಾ ಕೂತು ಒಬ್ಬರೇ ಅಳುತ್ತಿದ್ದರು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಅವಿ, ಪೂರ್ಣಿಮಾಳನ್ನು ಬೈಯುತ್ತಾನೆ.
ಮೊದಲು ಮನೆಯವರ ಬಗ್ಗೆ ಯೋಚಿಸು. ಆಮೇಲೆ ಬೇರೆಯವರು ಎಂದು ಹೇಳಿ ಹೋಗುತ್ತಾನೆ. ಹಿಂದಿನ ದಿನ ಅಭಿ ತನ್ನ ಜೊತೆಗೆ ಕ್ಲೋಸ್ ಆಗಿದ್ದ ಎಂದು ಮಾಧವ್ ತಾನೇ ಮಗನಿಗೆ ಕಾಫಿ ತೆಗೆದುಕೊಂಡು ಹೋಗಿ ಎಬ್ಬಿಸುತ್ತಾನೆ.

ಮತ್ತೆ ಜಗಳ ಮಾಡಿದ ಅಭಿ
ಅಭಿ ಎದ್ದ ಕೂಡಲೇ ಮಾಧವ್ ಮುಖ ನೋಡಿ ಜಗಳ ಮಾಡುತ್ತಾನೆ. ನನ್ನ ರೂಮಿಗೆ ಬರೋದಕ್ಕೆ ನಿನಗೆ ಹಕ್ಕಿಲ್ಲ. ನಿನ್ನಿಂದಾನೆ ದೀಪಿಕಾ ವಿದೇಶಕ್ಕೆ ಹೋಗೋ ಹಾಗಾಯ್ತು ಎಂದೆಲ್ಲಾ ದೂರುತ್ತಾನೆ. ಈ ಮಾತುಗಳನ್ನೆಲ್ಲಾ ಕೇಳಿದ ಮಾಧವ್‌ಗೂ ಮುಜುಗರವಾಗುತ್ತದೆ. ಅಷ್ಟೊತ್ತಿಗೆ ರೂಮಿನ ಬಳಿ ಅವಿ, ಶಾರ್ವರಿ, ನಿಧಿ ಹಾಗೂ ತುಳಸಿ ಬಂದು ಸೇರಿರುತ್ತಾರೆ. ಮಾಧವ್ ಬೇಸರ ಮಾಡಿಕೊಂಡು ಹೊರಟು ಹೋಗುತ್ತಾನೆ.
ಚಾಡಿ ಹೇಳಿದ ಶಾರ್ವರಿ
ಆಗ ಶಾರ್ವರಿ ಸಂದರ್ಭವನ್ನು ಬಳಸಿಕೊಂಡು ಅಭಿಗೆ ಸಮಾಧಾನ ಮಾಡುವಂತೆ ಚಾಡಿ ಹೇಳುತ್ತಾಳೆ. ಭಾವನದ್ದು ಇದರಲ್ಲಿ ತಪ್ಪಿಲ್ಲ. ಈ ಹಿಂದೆಯೂ ಸಮಸ್ಯೆ ಆದಾಗ ಭಾವ ದೀಪಿಕಾ ಮನೆಗೆ ಹೋಗಿ ಎಲ್ಲಾ ಸರಿ ಮಾಡಿದ್ದರು. ಈ ಸಲವೂ ಹಾಗೆ ಮಾಡಿದ್ದಾರೆ. ಆದರೆ, ಅವರ ಜೊತೆಗೆ ತುಳಸಿ ಅವರು ಹೋಗಿದ್ದರಿಂದ ಹೀಗಾಗಿದೆ ಎಂದು ಹೇಳುತ್ತಾಳೆ. ಆಗ ಅಭಿ ಸಿಟ್ಟೆಲ್ಲಾ ತುಳಸಿ ಮೇಲೆ ಹೋಗುತ್ತದೆ. ಹೊಡೆಯುವುದಕ್ಕೆ ಹೋಗುವಂತೆ ಎದ್ದೇಳುತ್ತಾನೆ. ಅಷ್ಟರಲ್ಲಿ ಅವಿ ಮತ್ತು ಶಾರ್ವರಿ ಇಬ್ಬರೂ ಅಭಿಯನ್ನು ತಡೆಯುತ್ತಾರೆ. ಇದು ತುಳಸಿಗೆ ತೀರಾ ಮುಜುಗರ ತರುತ್ತದೆ. ಪಾಪಮ್ಮ ಕೂಡ ತುಳಸಿ ಬಗ್ಗೆ ನೊಂದುಕೊಳ್ಳುತ್ತಾಳೆ.

ಜಗಳಕ್ಕೆ ಕೊನೆ ಆಡಿದ ಸಿರಿ-ಸಮರ್ಥ್
ದತ್ತ ತಾತನಿಗೆ ತನ್ನ ಕೆಲಸ ಹೋಗಿರುವ ವಿಚಾರ ತಿಳಿದಿದ್ದಕ್ಕೆ ಸಮರ್ಥ್, ಸಿರಿಗೆ ಬೈದಿರುತ್ತಾನೆ. ಆದರೆ, ಮಾರನೇ ದಿನ ದತ್ತ ತಾತ ನಿನಗೆ ಗಂಡನ ಕೆಲಸ ಹೋಗಿರುವುದು ಗೊತ್ತಿದ್ದರೂ ನಮಗೆ ಹೇಳಲಿಲ್ಲ. ಗಂಡನ ಬಗ್ಗೆ ನಿನಗೆಷ್ಟು ಕಾಳಜಿ ಇದೆ ಸಿರಿ ಎಂದು ದತ್ತ ತಾತ ಹೊಗಳುತ್ತಿರುತ್ತಾರೆ. ಈ ಮಾತನ್ನು ಸಮರ್ಥ್ ಕೂಡ ಕೇಳಿಸಿಕೊಳ್ಳುತ್ತಾನೆ. ಸಿರಿಗೋಸ್ಕರ ಹೂವಿನ ಬೊಕ್ಕೆಯನ್ನು ತಂದು ಸಮರ್ಥ್ ಕ್ಷಮೆ ಕೇಳುತ್ತಾನೆ. ನಿನ್ನನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ ಸ್ವಾರಿ ಎನ್ನುತ್ತಾನೆ. ಇಬ್ಬರೂ ತಮ್ಮ ನಡುವಿನ ಜಗಳಕ್ಕೆ ಈ ಮೂಲಕ ಕೊನೆ ಹಾಡಿದ್ದಾರೆ.
ಮಾವ-ಸೊಸೆ ಹೋಗಿದ್ದೆಲ್ಲಿಗೆ..?
ಇನ್ನು ಮಾಧವ್‌ಗೆ ಬೇಸರವಾಗಿ ಮನೆಯಿಂದ ಹೊರಗೆ ಹೊರಟಿರುತ್ತಾನೆ. ಮಾವನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪೂರ್ಣಿಮಾ ನಾನು ಜೊತೆಗೆ ಬರ್ತೀನಿ ಎಂದು ಹೇಳುತ್ತಾಳೆ. ಮಾಧವ್ ಬೇಡ ಎಂದರೂ ಕೇಳದೇ ಪೂರ್ಣಿಮಾ ಕೂಡ ಹಠ ಮಾಡಿ ನಾನು ಹೊರಗೆ ಹೋಗಬೇಕು ಎಂದು ಹೇಳುತ್ತಾಳೆ. ಕೊನೆಗೆ ಮಾಧವ್ ಬೇರೆ ದಾರಿ ಇಲ್ಲದೇ ಕರೆದುಕೊಂಡು ಹೋಗುತ್ತಾನೆ. ಆದರೆ ಇಬ್ಬರೂ ಎಲ್ಲಿಗೆ ಹೋದರು ಎಂಬುದನ್ನು ನಾಳಿನ ಸಂಚಿಕೆಯಲ್ಲಿ ನೋಡಬೇಕಿದೆ.


Click it and Unblock the Notifications











