Shrirasthu Shubhamasthu: ಪೂರ್ಣಿಮಾ ಬಾಳಲ್ಲಿ ಜನಾರ್ಧನ್ ಚೆಲ್ಲಾಟ; ಮಾಧವ ಕಪಾಳ ಮೋಕ್ಷ

By Poorva

ಜನಾರ್ಧನ್, ಮಾಧವನ ಮನೆಗೆ ಬಂದಿದ್ದಾನೆ. ಪೂರ್ಣಿಮಾ ನನ್ನ ಮಗಳು ಆಕೆ ಯಾವತ್ತಿದ್ದರೂ ನನ್ನ ಮಗಳೇ, ಆಕೆಯನ್ನು ಚಿಕ್ಕ ವಯಸ್ಸಿನಿಂದ ನಾನು ದೇವಾಲಯದಲ್ಲಿ ಬಿಟ್ಟು ಹೋಗಿದ್ದೆ. ಇದೀಗ ಮಾಧವ ನಿನ್ನ ಮನೆಯ ಸೊಸೆಯಾಗಿ ಬಂದಿದ್ದಾಳೆ ಎಂದು ಬಹಳ ನಾಟಕೀಯವಾಗಿ ಖುಷಿ ವ್ಯಕ್ತ ಪಡಿಸುತ್ತಾನೆ.

ಜನಾರ್ಧನ್ ಮಾತು ನಿಜ ಎಂದು ನಂಬಿದ್ದ ಮಾಧವಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ಮಾಧವನ ಮನೆಗೆ ವಕೀಲರ ಆಗಮನವಾಗಿದೆ. ಅದರ ಜೊತೆಗೆ ದತ್ತ ತಾತ ಕೂಡ ಆಗಮಿಸಿದ್ದಾನೆ. ದತ್ತನನ್ನು ನೋಡಿ ಖುಷಿ ಪಟ್ಟ ಮಾಧವ, ದತ್ತ ಯಾಕೆ ಇಲ್ಲಿಗೆ ಬಂದರು, ಜನಾರ್ಧನ್ ಏನಾದರು ಮೋಸ ಮಾಡುತ್ತಿದ್ದಾನಾ ಎನ್ನುವ ಅನುಮಾನ ಶುರುವಾಗಿತ್ತು.

Shrirasthu Shubhamasthu kannada serial 22th may episode written update

ಮಾವನನ್ನು ನೋಡಿ ತುಳಸಿ ಬಹಳ ಖುಷಿ ಪಡುತ್ತಾಳೆ. ಅರೆ ಮಾವ ಹೇಗಿದ್ದೀರಾ ಎಂದು ಕೇಳುತ್ತಾಳೆ. ದತ್ತ ಎಲ್ಲರ ಜೊತೆ ಖುಷಿಯಾಗಿ ಮಾತನಾಡುತ್ತಾನೆ. ಕೊನೆಗೆ ಲಾಯರ್ ಮಾತನಾಡುವಾಗ ದತ್ತ ಮಧ್ಯೆ ಬಾಯಿ ಹಾಕುತ್ತಾನೆ. ಇದನ್ನು ನೋಡಿದ ಜನಾರ್ಧನ್‌ಗೆ ಕೋಪ ಬರುತ್ತದೆ. ಇವರು ಯಾಕೆ ಮಧ್ಯೆ ಪ್ರವೇಶ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದುಕೊಳ್ಳುತ್ತಾನೆ.

ಪೂರ್ಣಿಮಾ ಅಜ್ಜಿಯ ಆಭರಣ ಸ್ವಲ್ಪ ಕೇಸ್‌ನಲ್ಲಿ ಇದೆ. ಆದ ಕಾರಣ ಪೂರ್ಣಿಮಾ ನನ್ನ ಹಿರಿಯ ಮಗಳು. ಆಕೆಗೆ 25 ವರುಷ ತುಂಬುವ ವೇಳೆ ಅದನ್ನು ಬಿಡಿಸಿಕೊಳ್ಳಬೇಕು, ಇಲ್ಲವಾದರೆ ಅದು ಅನಾಥ ಆಶ್ರಮದ ಪಾಲಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ನೋಡಿ ಏನಯ್ಯ ಈ ಪಾಟಿ ಸುಳ್ಳು ಹೇಳುತ್ತಿದ್ದೀಯಾ. ಚಿನ್ನಕ್ಕಾಗಿ ಇದೀಗ ಪೂರ್ಣಿಮಾಳನ್ನು ದಾಳವಾಗಿಸಿಕೊಳ್ಳಲು ಸಾಧ್ಯವೇ ಇಲ್ಲ ಜನಾರ್ಧನ್, ನೀನು ಆಸ್ತಿಗಾಗಿ ಪೂರ್ಣಿಮಾಳನ್ನು ಉಪಯೋಗಿಸುತ್ತಿದ್ದಿಯಾ ಎಂದು ದತ್ತ ಹೇಳಿದಾಗ ಪೂರ್ಣಿಮಾ ಕುಸಿದು ಹೋಗಿ ಬಿಡುತ್ತಾಳೆ.

ತನಗೆ ಸುಮಾರು ವರುಷಗಳ ಬಳಿಕ ನನ್ನ ಕುಟುಂಬ ಸಿಕ್ಕಿತು ಎಂದು ಬಹಳ ಖುಷಿಯಲ್ಲಿ ಇದ್ದ ಪೂರ್ಣಿಮಾಗೆ ಜರ್ನಾಧನ್ ಅಸಲಿ ಮುಖದ ದರ್ಶನವಾಗಿದೆ. ತನ್ನ ಕುಟುಂಬ ನನ್ನ ಜೊತೆ ಇರುತ್ತದೆ ಎನ್ನುವ ಕನಸನ್ನೇ ನುಚ್ಚು ನೂರು ಮಾಡಿದೆ. ಏನಯ್ಯ ನಿನ್ನ ಮಾವ ಇದ್ದ ಬದ್ದ ಆಸ್ತಿಯನ್ನು ನಿನ್ನ ಮೊದಲ ಮಗುವಿನ ಹೆಸರಿನಲ್ಲಿ ಬರೆದಿದ್ದಾರೆ ಎಂದು ದತ್ತ ತಾತ ಹೇಳುತ್ತಾನೆ.

Shrirasthu Shubhamasthu kannada serial 22th may episode written update

ಜನಾರ್ಧನ್ ಅಸಲಿ ಮುಖ ಅನಾವರಣ

ಈ ಪುಟ್ಟ ಹುಡುಗಿಗೆ ಇಲ್ಲಸಲ್ಲದ ಆಸೆಯನ್ನು ತೋರಿಸುತ್ತೀಯಾ. ನೀನು ನನ್ನ ಮಗಳು ಎಂದು ಹೇಳಿ ಆಸ್ತಿಯನ್ನು ಆಕೆಯ ಹೆಸರಿಗೆ ಬರುವ ಹಾಗೆ ಮಾಡುವ ಪ್ಲಾನ್ ಅಲ್ವಾ ಜನಾರ್ಧನ್? ಎಂದಾಗ ಆತನಿಗೆ ಶಾಕ್ ಆಗುತ್ತದೆ. ಏನು ಹೇಳಬೇಕು ಎಂದು ತಿಳಿಯದಾಗುತ್ತದೆ. ದತ್ತನ ಮಾತು ಕೇಳಿ ಮನೆ ಮಂದಿಯೆಲ್ಲ ಶಾಕ್ ಆಗುತ್ತಾರೆ. ಮಾಧವ ಮಾತ್ರ ಜನಾರ್ಧನ್‌ನನ್ನು ಬಹಳ ಕೋಪದಿಂದ ನೋಡುತ್ತಾನೆ.

ಜನಾರ್ಧನ್‌ನನ್ನು ಪ್ರಶ್ನಿಸಿದ ಅವಿ

ಅವಿಗೆ ಜನಾರ್ಧನ್ ಏನು ಎನ್ನುವುದು ಚೆನ್ನಾಗಿ ತಿಳಿದಿರುತ್ತದೆ. ಆತ ತನ್ನ ಹೆಂಡತಿಯನ್ನು ಹೀಗೆಲ್ಲ ಬಳಸಿಕೊಳ್ಳುತ್ತಾರೆ ಎನ್ನುವುದು ತಿಳಿದಿರಲಿಲ್ಲ. ತನ್ನ ಹೆಂಡತಿ ಇಷ್ಟೆಲ್ಲ ಖುಷಿಯಲ್ಲಿ ಇದ್ದಾಳಲ್ಲ. ಇಲ್ಲವಾದರೆ ಬಾಡಿದ ಮುಖದಿಂದ ಇದ್ದಳು, ಇದೀಗ ಖುಷಿಯಾಗಿ ಇದ್ದಾಳೆ ಎಂದು ಬಹಳ ಸಂತಸ ವ್ಯಕ್ತಪಡಿಸಿದ್ದ ಅವಿಗೆ ಮಾತ್ರ ಜನಾರ್ಧನ್ ಮಾಡಿದ ತಂತ್ರ ಬಹಳ ಕೋಪ ತರಿಸುತ್ತದೆ. ದತ್ತನ ಮಾತುಗಳನ್ನು ಕೇಳಿದ ಜನಾರ್ಧನ್ ಪಿತ್ತ ನೆತ್ತಿಗೇರಿ ಬಿಡುತ್ತದೆ.

ವನಜಾ ಬಳಿ ಪ್ರಶ್ನೆ ಮಾಡಿದ ತುಳಸಿ

ರೀ ವಕೀಲರೆ ನಾನು ನನ್ನ ಮಗಳನ್ನು ಕರೆದುಕೊಂಡು ಬರುತ್ತೇನಾ ಅಥವಾ ಬೇರೆಯವರನ್ನು ಕರೆದುಕೊಂಡು ಬರುತ್ತೇನಾ ಇದೆಲ್ಲ ಇವರಿಗೆ ಯಾಕೆ, ನನ್ನ ಮಾವನ ಆಸ್ತಿ ನನಗೆ ಕೊಡಲು ಇವರ ಉಸಾಬರಿ ಬೇಕಾ? ನನ್ನ ಮಾವನ ಆಸ್ತಿಯೆಲ್ಲ ಅನಾಥ ಆಶ್ರಮಕ್ಕೆ ಹೋಗುವುದಕ್ಕಿಂತ ಈ ಹುಡುಗಿಗೆ ಬರಲಿ ಎಂದುಕೊಂಡೆ ಎನ್ನುತ್ತಾನೆ. ಆಗ ಅವಿ ಕೊಂಚ ಜೋರಾಗಿ ಹೇಳುತ್ತಾನೆ. ಏನ್ರೀ ಹಾಗಂದ್ರೆ ಈ ಹುಡುಗಿಗೆ ಬರಲಿ ಎಂದರೆ ಏನು ಅರ್ಥ ಎಂದು ಕೇಳುತ್ತಾನೆ. ಈ ಹುಡುಗಿಗೆ ಬರಲಿ ಅಂದ್ರೆ ಅನಾಥ ಆಶ್ರಮ ಪಾಲಾಗುವ ಬದಲು ಈ ಹುಡುಗಿಗೆ ಸಿಕ್ಕರೆ ಒಳ್ಳೆಯದಲ್ಲ ಎಂದುಕೊಂಡೆ, ಬೇರೆ ಯಾರನ್ನೋ ನಂಬಿ ಹಾಳಾಗುವುದರಿಂದ ಈ ಹುಡುಗಿಯನ್ನು ಬಳಸಿಕೊಂಡು ಆಸ್ತಿಯನ್ನು ಉಳಿಸಿಕೊಳ್ಳಬಹುದು ಎಂದುಕೊಂಡೆ ಎಂದಾಗ ಪೂರ್ಣಿಮಾ ಕೊಂಚ ಜೋರಾಗಿ ಅಳುತ್ತಾಳೆ. ದತ್ತ ಹೇಳುತ್ತಾನೆ ನನಗೆ ಈತನ ಮಾತು ಕೇಳುವುದು ಸುಳ್ಳು ಎನ್ನುವುದು ಗೊತ್ತಾಯಿತು. ಈತ ಮಾತು ನಾನು ನಂಬಲಿಲ್ಲ. ಇನ್ನೂ ಈತನಿಂದ ಈ ಮನೆಯವರಿಗೆ ಅನ್ಯಾಯ ಆಗುವುದು ನನಗೆ ಇಷ್ಟ ಇಲ್ಲ ಎಂದು ಹೇಳುತ್ತಾನೆ.

ಜನಾರ್ದನ್ ಮಾತಿಗೆ ಕಣ್ಣೀರಿಟ್ಟ ಪೂರ್ಣಿಮಾ

ಇದನ್ನು ಕೇಳಿದ ತುಳಸಿ, ವನಜಾರನ್ನು ಪ್ರಶ್ನೆ ಮಾಡುತ್ತಾಳೆ. ಯಾಕೆ ವನಜಾ ಅವರೇ ಹೀಗೆಲ್ಲ ಆಗುತ್ತಿದೆ. ನೀವೇ ಹೇಳುತ್ತಿದ್ದೀರಿ ಅಲ್ವಾ, ಪೂರ್ಣಿಮಾ ನನ್ನ ಮಗಳು ಎಂದು. ಈ ಕಾರಣಕ್ಕೆ ನೀವು ಹೀಗೆ ಹೇಳುತಿದ್ರಾ? ಎಂದು ಕೇಳಿದಾಗ ವನಜಾ ಕಣ್ಣೀರು ಹಾಕುತ್ತಾಳೆ. ಆಗ ವನಜಾ ಹಿಂದಿನ ಕತೆಯನ್ನು ಮಾಧವನ ಮನೆಯವರಿಗೆ ಹೇಳುತ್ತಾಳೆ. ಇದನ್ನು ಕೇಳಿ ಎಲ್ಲರಿಗೂ ಬಹಳ ನೋವು ಆಗುತ್ತದೆ. ಜನಾರ್ಧನ್ ಮಾಡಿದ ಕೆಲಸಕ್ಕೆ ಎಲ್ಲರೂ ಬೆಲೆ ತೆರುವ ಪರಿಸ್ಥಿತಿ ಬಂದಿದೆ.

ಜನಾರ್ಧನ್‌ಗೆ ಕಪಾಳಮೋಕ್ಷ

ಜರಾಸಂಧ ನಿನಗೆ ಇಷ್ಟಾದರೂ ಬುದ್ದಿ ಬರಲಿಲ್ಲ ಅಲ್ವಾ? ಹೀಗೆಲ್ಲ ಏನಾದರು ಮಾಡಿಯೇ ಮಾಡುತ್ತಾನೆ ಎಂದು ತಿಳಿದು ವನಜಾ ತಂದೆ ನನ್ನ ಬಳಿ ಅವರ ನೋವನ್ನು ತೋಡಿಕೊಂಡರು. ಆಗ ನಾನೇ ಅವರಿಗೆ ಸಾಂತ್ವನ ಕೂಡ ಹೇಳಿದ್ದೆ. ಹಾಗೆಯೇ ಆ ಜವಾಬ್ದಾರಿಯನ್ನು ನಾನು ತೆಗೆದುಕೊಂಡೆ ಎಂದು ಹೇಳುತ್ತಾರೆ. ಹೆತ್ತ ಮಗುವನ್ನು ಅನಾಥೆ ಮಾಡಿದೆ. ಈಗ ಇನ್ನೊಂದು ಜೀವದ ಜೊತೆ ಆಟ ಆಡಲು ಹೊರಟಿದ್ದಿಯಾ? ಏನು ನಿನ್ನ ಕಥೆ ಎಂದೆಲ್ಲ ಕೇಳುತ್ತಾನೆ. ನೀವು ಬಂದು ಎಲ್ಲಾ ನೀವು ಹಾಳು ಮಾಡಿ ಬಿಟ್ಟೀರಿ, ನಿಮಗೆ ನನ್ನ ಜೊತೆ ಬಂದು ಮಾತನಾಡಲು ಆಗಲಿಲ್ವಾ, ಎರಡು ಕೋಟಿ ಹಣ ನಾನು ನಿಮಗೆ ಕೊಡುತ್ತಿದ್ದೆ ಎಂದು ಜನಾರ್ಧನ್ ಹೇಳುತ್ತಾನೆ. ಆಗ ಮಾಧವಗೆ ಕೋಪ ಬಂದು ಜನಾರ್ಧನ್ ಕಪಾಳಕ್ಕೆ ಹೊಡೆಯುತ್ತಾನೆ.

More from Filmibeat

English summary
Shrirasthu Shubhamasthu kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X