Shrirasthu Shubhamasthu: ದತ್ತ ತಾತನ ಮನೆಯಲ್ಲಿ ಮಾಧವ್ ಫ್ಯಾಮಿಲಿ: ಒಳಗೊಳಗೆ ಕುದಿಯುತ್ತಿರುವ ಶಾರ್ವರಿ!
ಶಾರ್ವರಿ ಮಗಳು ಖುಷಿಯಲ್ಲಿ ಇದ್ದಾಳೆ. ನನ್ನ ಗೆಳೆಯರೆಲ್ಲರೂ ರಜಾ ಸಮಯದಲ್ಲಿ ಅಜ್ಜಿ ಮನೆ ಎಂದಿಲ್ಲ ಸುತ್ತಾಡುತ್ತಿರುತ್ತಾರೆ. ಆದರೆ ನಾನು ಎಲ್ಲಿಯೂ ಹೋಗದೆ ಮನೆಯಲ್ಲಿ ಇರುತ್ತಿದ್ದೆ. ಈಗ ಒಳ್ಳೆಯ ಸಮಯ ಬಂದಿದೆ. ತಾತ ನಮ್ಮೆಲ್ಲರನ್ನು ಮನೆಗೆ ಕರೆದಿದ್ದು ಒಳ್ಳೆದಾಯಿತು ಎಂದು ಖುಷಿಯಾಗಿರುತ್ತಾಳೆ.
ಇನ್ನು ಶಾರ್ವರಿ ಆತಂಕದಲ್ಲಿ ಇರುತ್ತಾಳೆ. ಆಮೇಲೆ ಶಾರ್ವರಿಯ ಮಗಳು ಮೆತ್ತಗೆ ಅಮ್ಮನ ಬಳಿ ಕೇಳುತ್ತಾಳೆ. ಅಮ್ಮ ನಿನಗೆ ನಿನ್ನ ತಾಯಿಯ ನೆನಪು ಆಗುವುದಿಲ್ಲ, ನಾನು ಹುಟ್ಟಿದಾಗಿನಿಂದ ಅಜ್ಜಿಯ ಮನೆಗೆ ಹೋದ ನೆನಪೇ ಆಗುತ್ತಿಲ್ಲ, ಆ ಕಾರಣದಿಂದಾಗಿ ನಾನು ನಿಮ್ಮ ಬಳಿ ಕೇಳುತ್ತಿದ್ದೇನೆ ನಿಮಗೆ ತಂದೆ ತಾಯಿ ಇಲ್ಲವೇ ಎಂದು ಕೇಳಿದಾಗ ಶಾರ್ವರಿ ಇಲ್ಲ ಎಂದು ಹೇಳುತ್ತಾಳೆ.

ಶಾರ್ವರಿಯ ಮಗಳು ಮತ್ತೆ ಕೇಳುತ್ತಾಳೆ. ಹಾಗಾದರೆ ನಿಮಗೆ ಅಕ್ಕತಂಗಿಯರು ಎಂದು ಕೇಳುತ್ತಾಳೆ. ಆಗ ಕೂಡ ಶಾರ್ವರಿ ಇಲ್ಲ ಎಂದು ಹೇಳುತ್ತಾಳೆ. ಆಗ ಶಾರ್ವರಿಯ ಮಗಳು ಹೇಳುತ್ತಾಳೆ, ನೀನು ಕೂಡ ಪೂರ್ಣಿ ಅತ್ತಿಗೆ ಹಾಗೇನಾ? ನಿನಗೂ ಯಾರು ಇಲ್ಲ ಅಲ್ವಾ? ಎಂದು ಹೇಳಿದಾಗ ಶಾರ್ವರಿಗೆ ಬಹಳ ಕೋಪಗೊಂಡು ಮಗಳಿಗೆ ಬೈಯುತ್ತಾಳೆ.
ಮಾಧವನನ್ನು ನೆನೆದು ಕೋಪಗೊಂಡ ಶಾರ್ವರಿ
ಆ ಬಳಿಕ ಮನದಲ್ಲಿ ಮಾಧವನಿಗೆ ಹಲ್ಲು ಮಸೆಯುತ್ತಾ ಇರುತ್ತಾಳೆ. ನಿನ್ನಿಂದ ಆಗಿಯೇ ನಾನು ನನ್ನ ಹೆತ್ತವರನ್ನು ಕಳೆದುಕೊಳ್ಳಬೇಕಾಯಿತು ಎಂದು ಕೋಪ ಮಾಡಿಕೊಂಡು ಇರುತ್ತಾಳೆ. ಇನ್ನು ದತ್ತನ ಮನೆಗೆ ಎಲ್ಲರೂ ಹೋಗುತ್ತಾರೆ . ಎಲ್ಲರನ್ನೂ ಕಂಡ ದತ್ತ ಮಾತ್ರ ಬಹಳ ಖುಷಿಯಲ್ಲಿ ಇರುತ್ತಾನೆ.

ಮಾಧವ-ತುಳಸಿ ಕಂಡು ಖುಷಿ ಪಟ್ಟ ತಾತ
ದತ್ತ ತಾತ ಮಾಧವ ಹಾಗೂ ತುಳಸಿಯನ್ನು ಕಂಡು ಹೆಮ್ಮೆ ಪಡುತ್ತಾ ಇರುತ್ತಾನೆ. ಮಾಧವ ಹಾಗೂ ತುಳಸಿಗೆ ಆರತಿ ಎತ್ತಿ ಮನೆಯೊಳಗೆ ಕರೆದುಕೊಳ್ಳಲಾಗುತ್ತದೆ. ಹಾಗೆಯೇ ಮನೆ ಒಳಗೆ ಬಂದವರಿಗೆಲ್ಲ ಆರತಿ ಎತ್ತಿ ಮನೆ ಒಳಗೆ ಕರೆದುಕೊಂಡು ಬಂದ ದತ್ತ ಎಲ್ಲರನ್ನು ಕೂರಿಸಿ ಮಾತನಾಡಿಸುತ್ತಿರುತ್ತಾನೆ. ಇನ್ನು ಮಾಧವ ಹಾಗೂ ತುಳಸಿ ಇವತ್ತಿನ ನಮ್ಮ ಸ್ಪೆಷಲ್ ಗೆಸ್ಟ್ ಎಂದೆಲ್ಲ ಹೇಳುತ್ತಾರೆ.
ಮಾಧವನ ಮನೆಗೆ ಆಗಮಿಸಿದ ಅತಿಥಿಗಳು
ಶಾರ್ವರಿಯ ಮಗಳು ನಾವೆಲ್ಲ ಏನು? ಎಂದೆಲ್ಲ ಕೇಳಿದಾಗ ನೀವೆಲ್ಲಾ ನಮ್ಮ ಮನೆಯ ಮಕ್ಕಳು ಎಂದು ಹೇಳುತ್ತಾನೆ. ಇವತ್ತಿನ ಎಲ್ಲಾ ಪೂಜೆ ಹಾಗೂ ಕೈಂಕರ್ಯ ನೀವೇ ನೋಡಿಕೊಳ್ಳಬೇಕು ಎಂದಾಗ ಪೂರ್ಣಿಮಾ ಮಾತ್ರ ನಾನು ರೆಡಿ ಎಂದು ಹೇಳಿದರೆ ಶಾರ್ವರಿ ಮೂಗು ಮುರಿಯುತ್ತಾ ಇರುತ್ತಾಳೆ.
ಮೊಮ್ಮಗನ ಮಾತು ಕೇಳದ ದತ್ತ
ಮಾಧವ ಹಾಗೂ ತುಳಸಿ ಮನೆಯವರು ಬರುವ ಮುನ್ನವೇ ತಾತನ ಬಳಿ ಸಮರ್ಥ್ ಮಾತನಾಡಿರುತ್ತಾನೆ. ಅವರು ಬಹಳ ದೊಡ್ಡವರು ನಾವು ಎಷ್ಟೇ ಅವರಿಗೆ ವಿಚಾರಿಸಿಕೊಂಡರು ಅವರು ಒಂದಲ್ಲ ಒಂದು ಕುಂದು ಕೊರತೆ ಹೇಳುತ್ತ ಇರುತ್ತಾರೆ . ಅವರಿಗೆ ಮನೆಗೆ ಕರೆದು ಯಾಕೆ ದುಂದು ವೆಚ್ಚ ಮಾಡುತ್ತೀಯಾ . ಇದೆಲ್ಲ ಸರಿ ಇಲ್ಲ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ದತ್ತ ಮಾತ್ರ ಮಾಧವ ಹಾಗೂ ತುಳಸಿ ಫ್ಯಾಮಿಲಿಯನ್ನು ಮನೆಗೆ ಕರೆದು ಔತಣ ನೀಡುತ್ತಿದ್ದಾರೆ.


Click it and Unblock the Notifications











