Shrirasthu Shubhamasthu: ಅಪ್ಪ ಮಗನ ನಡುವೆ ಜಗಳ ತಂದಿಟ್ಟ ಜನಾರ್ಧನ್; ಮುಂದೇನು?
ಜನಾರ್ಧನ್ ದುರಾಸೆಗೆ ಪೂರ್ಣಿಮಾ ಬಲಿಯಾಗಿದ್ದು ಆಯಿತು. ಇದೀಗ ಮಾಧವನ ಮನೆಯ ನೆಮ್ಮದಿಯನ್ನು ಕೆಡಿಸಲು ಜನಾರ್ಧನ್ ಪ್ಲಾನ್ ಮಾಡುತ್ತಾನೆ. ಅದಕ್ಕೆ ದಾಳವಾಗಿ ಅಭಿಯನ್ನು ಬಳಸಿಕೊಂಡಿದ್ದಾನೆ. ಈ ವಿಚಾರ ವನಜಾಳಿಂದ ತುಳಸಿಯ ಕಿವಿಗೆ ಬಿದ್ದಿದೆ. ತುಳಸಿ ಶಾಕ್‌ನಲ್ಲಿ ಇರುತ್ತಾಳೆ. ಆಕೆಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ.
ಯಾರ ಜೊತೆಯೂ ಈ ಬಗ್ಗೆ ಮಾತನಾಡದೇ ಇರಲು ಸಾಧ್ಯವಾಗಲಿಲ್ಲ. ಕೊನೆಗೆ ಮಾಧವ ಜೊತೆ ತುಳಸಿ ಮಾತನಾಡುತ್ತಾಳೆ . ವನಜಾ ಅವರು ಕಾಲ್ ಮಾಡಿದ್ದರು. ಅವರು ಮುಖ್ಯವಾದ ವಿಚಾರವೊಂದನ್ನು ಹೇಳಿದ್ದಾರೆ. ನಾವು ವಿಕಲ ಚೇತನರಿಗೆ ಶಾಲೆ ಕಟ್ಟಿ ಕೊಡುವ ಸ್ಥಳದಲ್ಲಿಯೇ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಕಟ್ಟುತ್ತಿದ್ದಾರೆ ಎಂದು ಹೇಳಿದರು ಎನ್ನುತ್ತಾಳೆ.

ತುಳಸಿ ಮಾತು ಕೇಳಿ ಮಾಧವಗೆ ಶಾಕ್ ಆಗುತ್ತದೆ. ತುಳಸಿ ಅವರೇ ನೀವು ಏನು ಹೇಳುತ್ತಿರುವುದು. ನಾನು ಅದಕ್ಕೆಲ್ಲ ಪರ್ಮಿಷನ್ ನೀಡಿಲ್ಲ ಅಂದ ಮೇಲೆ ಅಲ್ಲಿ ಅದನ್ನು ನಿರ್ಮಾಣ ಮಾಡಲು ಹೇಗೆ ಸಾಧ್ಯ. ಅದು ನನ್ನ ಹೆಸರಲ್ಲಿ ಇರುವ ಜಾಗ. ನಾನು ಆ ಜಾಗದಲ್ಲಿ ಏನಾದರು ಜನರಿಗೆ ಸಹಾಯ ಆಗುವ ಹಾಗೆ ಮಾಡಬೇಕು ಎಂದು ಅಂದುಕೊಂಡು ಇದ್ದೇನೆ. ಬನ್ನಿ ನಾವು ಅಭಿ ಬಳಿ ಇದನ್ನೆಲ್ಲ ಕೇಳೋಣ ಎಂದುಕೊಂಡು ನೇರವಾಗಿ ಅಭಿ ಬಳಿಗೆ ಬರುತ್ತಾನೆ. ಮಾಧವನ ಕಿರುಚಾಟ ನೋಡಿ ಮಹೇಶ, ದೀಪಿಕಾ ಹಾಗೆಯೇ ಅವಿನಾಶ್ ಬರುತ್ತಾರೆ.
ಅಭಿ ನಮ್ಮ ಕಂಪನಿ ಜಾಗದಲ್ಲಿ ಜನಾರ್ಧನ್ ರೆಸಾರ್ಟ್ ಮಾಡುತ್ತಿದ್ದಾರೆ, ಇದು ನಿಜಾನಾ? ಎಂದು ಮಾಧವ ಕಿರುಚಿದಾಗ ಅಭಿಗೆ ಕೊಂಚ ಶಾಕ್ ಆಗುತ್ತದೆ. ಆತನಿಗೆ ಏನು ಹೇಳಬೇಕು ತಿಳಿಯದಾಗಿತ್ತು. ಮಾಧವ ಮತ್ತೆ ಅಭಿಯನ್ನ ಪ್ರಶ್ನೆ ಮಾಡುತ್ತಾನೆ. ಹೇಳು ಅಭಿ, ಜನಾರ್ಧನ್ ನಮ್ಮ ಜಾಗದಲ್ಲಿ ಪಬ್ ರೆಸಾರ್ಟ್ ಮಾಡುತ್ತಿದ್ದಾನಾ, ಎಂದು ಕೇಳಿದಾಗ ಅಭಿ ಗರಂ ಆಗುತ್ತಾನೆ.
ಏನು ನಮ್ಮ ಜಾಗದಲ್ಲಿ ಪಬ್ ರೆಸಾರ್ಟ್, ಅದನ್ನೆಲ್ಲ ಅವರಿಗೆ ಅಲ್ಲಿ ಮಾಡಲು ಪರ್ಮಿಷನ್ ಕೊಟ್ಟವರು ಯಾರು? ಅದನ್ನು ಅಲ್ಲಿ ಯಾರು ಮಾಡುತ್ತಿದ್ದಾರೆ ಎನ್ನುತ್ತಾನೆ.. ಮಾಡುತ್ತಿದ್ದಾರೆ ಅಲ್ಲ, ಮಾಡುತ್ತಿದ್ದಾನೆ. ನಾನು ಈಗಾಗಲೇ ನಮ್ಮ ಸ್ಟಾಪ್ ಹತ್ರ ಮಾತನಾಡಿದ್ದೇನೆ ಅವರು ಎಲ್ಲಾ ವಿಚಾರ ಹೇಳಿದ್ದಾರೆ ಎನ್ನುತ್ತಾನೆ.

ಮಾಧವ ಮಾತಿಗೆ ಅಭಿ ಫುಲ್ ಸೈಲೆಂಟ್
ಅವನು ಈಗಾಗಲೇ ಕನ್ಸ್ಟ್ರಕ್ಷನ್ ಶುರು ಮಾಡಿ ಆಗಿದೆಯಂತೆ ಎಂದು ಹೇಳಿದಾಗ ಮಹೇಶ ಕೂಡ ಕೋಪ ಮಾಡಿಕೊಳ್ಳುತ್ತಾನೆ. ಹಾಗೆಯೇ ಜನಾರ್ಧನ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಅಭಿ ಬಳಿ ನೇರವಾಗಿಯೇ ಕೇಳುತ್ತಾನೆ ಮಹೇಶ, ಅಭಿ ಇಲ್ಲಿ ಏನು ನಡೆಯುತ್ತಿದೆ? ನಮ್ಮ ಜಾಗದಲ್ಲಿ ಪಬ್ ರೆಸಾರ್ಟ್ ಮಾಡಲು ಎಷ್ಟು ಧೈರ್ಯ ಬೇಕು ಆ ನೀಚನಿಗೆ. ಆ ಜಾಗದಲ್ಲಿ ನಾವು ಪವಿತ್ರವಾದ ಕಾರ್ಯ ಮಾಡಬೇಕು ಎಂದು ಇದ್ದೆವು. ಆದರೆ ಅಂತಹ ಜಾಗದಲ್ಲಿ ಈಗ ಪಬ್ ರೆಸಾರ್ಟ್ ಮಾಡಲಾಗುತ್ತಿದೆ. ನಾನು ಅಲ್ಲಿಗೆ ಹೋಗಿ ಒದ್ದು ಬುದ್ದಿ ಕಲಿಸುತ್ತೇನೆ ಇಲ್ಲವಾದರೆ ಅವರಿಗೆ ಬುದ್ದಿ ಬರುವುದು ಇಲ್ಲ ಎಂದಾಗ ದೀಪಿಕಾ ಮೆತ್ತಗೆ ಮಾತನಾಡಲು ಶುರು ಮಾಡುತ್ತಾಳೆ.
ಖಂಡಿಸಿದ ದೀಪಿಕಾ
ತನ್ನ ಎದುರೇ ತಂದೆಗೆ ಬೈದರೆ ದೀಪಿಕಾ ಸುಮ್ಮನಿರುತ್ತಾಳಾ? ಅದು ಅಲ್ಲದೇ ಆಕೆ ತಂದೆಯ ಮಾತನ್ನು ಯಾವತ್ತೂ ತೆಗೆದು ಹಾಕುವುದು ಇಲ್ಲ. ತಂದೆ ಎಂದರೆ ಬಹಳ ಇಷ್ಟ ಆಕೆಗೆ. ಮಾವ ಹಾಗೆಲ್ಲ ಮಾತನಾಡಬೇಡಿ, ಡ್ಯಾಡ್ ಹಾಗೂ ಅಭಿ ಇಬ್ಬರು ಮಾತನಾಡಿಕೊಂಡು ಈ ನಿರ್ಧಾರ ಮಾಡಿದ್ದಾರೆ ಎನ್ನುತ್ತಾಳೆ. ಈ ಜಾಗ ಅಣ್ಣನ ಹೆಸರಲ್ಲಿ ಇದೆ. ಅಂದರೆ ಇವರು ಯಾರಿಗೆ ಕೂಡ ಆ ಅಧಿಕಾರವನ್ನು ಇದುವರೆಗೂ ಕೊಟ್ಟಿಲ್ಲ, ನಿಮ್ಮ ಅಪ್ಪಂದು ಇತ್ತೀಚಿಗೆ ಅತಿಯಾಯಿತು, ಕೆಲವು ದಿನಗಳ ಹಿಂದೆ ಪೂರ್ಣಿಮಾಗೆ ಸಾಕಷ್ಟು ನೋವು ಕೊಟ್ಟಿದ್ದಾಯಿತು, ಇದೀಗ ಮನೆ ಮಂದಿಯ ನೆಮ್ಮದಿ ಹಾಳು ಮಾಡಲು ಹೊರಟಿದ್ದಾನೆ. ಆ ಜಾಗದಲ್ಲಿ ಪಬ್ ಮಾಡಲು ಅವನು ಯಾರು ಎಂದಾಗ ಅಭಿ, ಚಿಕ್ಕಪ್ಪನಿಗೆ ಎದುರು ಮಾತನಾಡುತ್ತಾನೆ. ಚಿಕ್ಕಪ್ಪ ಇಲ್ಲಿಗೆ ಸಾಕು, ಹೇಗಿದ್ದರೂ ಆ ಜಾಗ ಕಾಲಿ ಬಿದ್ದಿದೆ ಅಲ್ವಾ, ಅಲ್ಲಿ ಪಬ್ ರೆಸಾರ್ಟ್ ಮಾಡಿದರೆ ತಪ್ಪೇನು ಎಂದಾಗ ಮತ್ತಷ್ಟು ಕೋಪಗೊಂಡ ಮಾಧವ, ದುಡ್ಡು ದುಡಿಯಲು ಸಾಕಷ್ಟು ದಾರಿಗಳು ಇದೆ. ದುಡಿಯೋದರ ಜೊತೆಗೆ ಕೊಂಚ ಎಥಿಕ್ಸ್ ಕೂಡ ಇರಬೇಕು. ವಿಕಲ ಚೇತನರಿಗೆ ಶಾಲೆ ಕಟ್ಟಿಸಬೇಕು ಅಲ್ಲಿ ಎನ್ನುತ್ತಾನೆ.
ಯಾರ ಮಾತಿಗೆ ಬೆಲೆ ಕೊಡದ ಅಭಿ
ಅವಿ ಮಾತನಾಡಿ ಹೌದು ನನಗೆ ಕೂಡ ಇದು ಯಾಕೋ ಸರಿ ಕಾಣಿಸುತ್ತಿಲ್ಲ. ಇದನ್ನು ಈಗಲೇ ತಡೆಯುತ್ತೇನೆ ಎಂದು ಹೇಳಿದಾಗ ಅಭಿ ಮುಂದೆ ಬರುತ್ತಾನೆ. ನಾನು ಇದನ್ನು ಬಿಡುವುದು ಇಲ್ಲ, ಅಣ್ಣ ನೀನು ಅಲ್ಲಿಗೆ ಹೋಗುವ ಹಾಗಿಲ್ಲ . ನಾವು ಯಾರಿಗೂ ಧರ್ಮವಾಗಿ ಏನನ್ನು ನೀಡುವುದು ನನಗೆ ಸರಿ ಕಾಣುವುದು ಇಲ್ಲ. ಮಕ್ಕಳನ್ನೇ ಸರಿಯಾಗಿ ನೋಡಿಕೊಳ್ಳಲು ಆಗದ ಇವರಿಗೆ ಇದೀಗ ಇದೆಲ್ಲ ಬೇಕಾ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅವಿಗೆ ಬಹಳ ಸಿಟ್ಟು ಬರುತ್ತದೆ. ಆತನಿಗೆ ಏನು ಮಾಡಬೇಕು ತಿಳಿಯದಾಗುತ್ತದೆ. ಇತ್ತ ಅಭಿಯ ಮಾತು ಕೇಳಿ ಮಾಧವ ಬಹಳ ಕೋಪಗೊಂಡಿದ್ದಾನೆ.


Click it and Unblock the Notifications











