Shrirasthu Shubhamasthu: ದತ್ತ ತಾತನ ಮನೆಯಲ್ಲಿ ಸಂಭ್ರಮ: ಶಾರ್ವರಿಯ ಕೊಂಕು ಮಾತಿಗೆ ತುಳಸಿ ಪೆಟ್ಟು!

By Poorva

ತುಳಸಿ ಮನೆಗೆ ಶಾರ್ವರಿಯ ಎಂಟ್ರಿ ಆಗಿದೆ. ಶಾರ್ವರಿಗೆ ತುಳಸಿಯನ್ನು ಕಂಡರೆ ಅಷ್ಟಕಷ್ಟೇ ಹೇಗಾದರೂ ಮಾಡಿ ತುಳಸಿ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲೇಬೇಕು ಎಂದೆಲ್ಲ ಯೋಚನೆ ಮಾಡುತ್ತಿರುತ್ತಾಳೆ. ಇನ್ನು ತುಳಸಿ ಮಾತ್ರ ಬಹಳ ಖುಷಿಯಲ್ಲಿ ಇರುತ್ತಾಳೆ. ತುಳಸಿ ಹಬ್ಬದ ಸಂಭ್ರಮದಲ್ಲಿ ತೇಲುತ್ತಿರುತ್ತಾಳೆ.

ಇನ್ನು ದತ್ತನ ಮನೆಗೆ ಬಂದ ಅಭಿ, ಸಮರ್ಥ್ ಬಳಿ ಕೊಂಕು ಮಾತುಗಳನ್ನು ಆಡುತ್ತಾನೆ. ಇದನ್ನು ಕೇಳಿದ ಸಮರ್ಥ್ ಮಾತ್ರ ಕೊಂಚ ಕೋಪಗೊಂಡರು ದತ್ತ ಮಾತ್ರ ಅಭಿ ಬಳಿ ಹೇಳುತ್ತಾರೆ. ಅಭಿ ನೀನು ಸಮರ್ಥಗೆ ಆಫೀಸ್‌ನಲ್ಲಿ ಮಾತ್ರ ಬಾಸ್, ಇಲ್ಲಿ ನಾನೇ ಬಾಸ್ ಎಂದು ಹೇಳಿ ಆತನನ್ನು ಸುಮ್ಮನಾಗಿಸುತ್ತಾನೆದ. ಆ ಬಳಿಕ ಸಂಧ್ಯಾ ಕೂಡ ಒಂದು ಹೊಸ ಕ್ಯಾತೆ ತೆಗೆಯುತ್ತಾಳೆ. ಅಣ್ಣ ನನಗೂ ಒಂದು ಕುರ್ಚಿ ಬೇಕಾಗಿತ್ತು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಮರ್ಥ್ ಸಂಧ್ಯಾ ಮೇಲೆ ಕೋಪ ಪ್ರದರ್ಶಿಸಿದರೂ ಬಳಿಕ ಆಕೆ ಗರ್ಭಿಣಿ ಎಂದು ಮನದಲ್ಲಿ ಅರಿತುಕೊಂಡು ಆಕೆಗೂ ಒಂದು ಕುರ್ಚಿ ತರುತ್ತಾನೆ.

shrirasthu-shubhamasthu-kannada-serial

ಎಲ್ಲರೂ ಖುಷಿಯಿಂದ ಮಾತನಾಡುತ್ತಾ ಇರುವಾಗ ದತ್ತ ತಾತನ ಮಾತು ಶುರುವಾಗುತ್ತದೆ. ಇವತ್ತಿನ ಸ್ಪೆಷಲ್ ಗೆಸ್ಟ್ ತುಳಸಿ ಹಾಗೂ ಮಾಧವ ಉಳಿದವರು ಎಲ್ಲರೂ ಕೆಲಸ ಮಾಡಬೇಕು ಎಂದಾಗ ಎಲ್ಲರೂ ಮುಖ ಮುಖ ನೋಡಿದರೆ ಪೂರ್ಣಿಮಾ ಮಾತ್ರ ನಾನು ಕೂಡ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾಳೆ. ಆ ವೇಳೆ ದತ್ತ, ಶಾರ್ವರಿ ಬಳಿ ನೀನು ಅಡಿಗೆ ಮಾಡುತ್ತೀಯಾ ಅಡಿಗೆ ಕೋಣೆಗೆ ಹೋಗಿ ಸ್ವಲ್ಪ ಸಹಾಯ ಮಾಡು ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಾರ್ವರಿ ಅಡುಗೆ ಮನೆಯತ್ತ ಹೋಗುತ್ತಾಳೆ.

ಅಡುಗೆ ಮನೆಯಲ್ಲಿ ಶಾರ್ವರಿ ತಕರಾರು

ಶಾರ್ವರಿ ಅಡುಗೆ ಮನೆಗೆ ಹೋಗಿ ನನಗೆ ಒಂದು ಗ್ಲಾಸ್ ನೀರು ಬೇಕು ಎಂದು ಕೇಳುತ್ತಾಳೆ. ಇದನ್ನು ಕೇಳಿದ ತುಳಸಿಯ ಗೆಳತಿ ಸಿರಿ ಬಳಿ ಹೇಳುತ್ತಾರೆ ನಾನು ಅವರಿಗೆ ನೀರು ಕೊಡುತ್ತೇನೆ ಎಂದು. ಒಂದು ಲೋಟದಲ್ಲಿ ನೀರು ಕೊಡುತ್ತಾಳೆ. ಇದನ್ನು ನೋಡಿದ ಶಾರ್ವರಿಗೆ ಬಹಳ ಹೇಸಿಗೆಯಾಗುತ್ತದೆ. ಇದೇನು ನೀವು ಇಲ್ಲಿ ಕೆಲಸ ಕೂಡ ಮಾಡುತ್ತಿದ್ದೀರಿ ನನಗೆ ನೀರನ್ನು ಕೂಡ ಅದೇ ಕೈಯಿಂದ ಕೊಡುತ್ತಿದ್ದೀರಿ ನನಗೆ ಈ ನೀರು ಬೇಡ ಎನ್ನುತ್ತಾಳೆ.

shrirasthu-shubhamasthu-kannada-serial

ಶಾರ್ವರಿ ಮನೆಯವರ ಮಾತಿಗೆ ಬೆಚ್ಚಿದ ಮನೆ ಮಂದಿ

ಸಿರಿ ಸ್ನೇಹಿತೆ ಏನು ಮಾಡಬೇಕು ಎಂದು ತಿಳಿಯದೆ ಸುಮ್ಮನಿರುತ್ತಾಳೆ. ಇನ್ನು ಸಿರಿಗೆ ಮಾತ್ರ ಶಾರ್ವರಿಯ ಮೇಲೆ ಬಹಳ ಸಿಟ್ಟು ಬರುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ ಮೆತ್ತಗೆ ಹೇಳುತ್ತಾಳೆ. ಏನಾಯಿತು ಎಂದು ಶಾರ್ವರಿಯ ಬಳಿ ಕೇಳಿದಾಗ ನಿಮ್ಮ ಮನೆಯಲ್ಲಿ ನೀರು ಕೂಡ ಸರಿ ಇಲ್ಲ, ಎಂದು ಹೇಳಿದಾಗ ತುಳಸಿ ಗೆಳತಿ ಹೇಳುತ್ತಾಳೆ ನಾನು ಫಿಲ್ಟರ್ ನೀರು ಕೊಟ್ಟೆ. ಆದರೆ ಅವರು ಬೇಡ ಎಂದರು ಎನ್ನುತ್ತಾಳೆ.

ತುಳಸಿ ಮಾತಿಗೆ ಕಕ್ಕಾಬಿಕ್ಕಿ ಆದ ಶಾರ್ವರಿ

ಇದೀಗ ಏನು ನಾನು ಮನೆಯಿಂದ ನೀರಿನ ಬಾಟಲ್ ತಂದಿದ್ದೇನೆ ಅದರಿಂದಲೇ ನೀವು ನೀರು ಕುಡಿಯಿರಿ ಎಂದು ಫ್ರಿಡ್ಜ್‌ನಿಂದ ಬಾಟಲ್ ತೆಗೆದು ಶಾರ್ವರಿಯ ಕೈಗೆ ಕೊಟ್ಟು ಹೇಳುತ್ತಾಳೆ. ಫಿಲ್ಟರ್ ನೀರು ಬಹಳ ಒಳ್ಳೆಯದು, ಇದರಿಂದ ನೀವು ಆಸ್ಪತ್ರೆ ಸೇರುವುದಿಲ್ಲ ನಾನು ಕೂಡ ಫಿಲ್ಟರ್ ನೀರು ಕುಡಿದೇ ಬಂದವಳು. ನಾನು ಗಟ್ಟಿಮುಟ್ಟಾಗಿದ್ದೇನೆ ಅದೇ ಪ್ಲಾಸ್ಟಿಕ್ ಬಾಟಲಿನಿಂದ ನೀರು ಕುಡಿದರೆ ದೇಹಕ್ಕೆ ಒಳ್ಳೆಯದು ಎಂದು ನೀವು ಹೇಳುತ್ತೀರಿ. ಪ್ಲಾಸ್ಟಿಕ್ ಬಾಟಲಿಂದಲೇ ನೀರು ಕುಡಿದು ಇದೀಗ ಎಲ್ಲರೂ ಆಸ್ಪತ್ರೆ ಸೇರಿರುವುದು ಎಂದು ಹೇಳುತ್ತಾರೆ. ತುಳಸಿ ಮಾತಿಗೆ ಏನು ಹೇಳದೇ ಶಾರ್ವರಿ ಸುಮ್ಮನಾಗುತ್ತಾಳೆ.

More from Filmibeat

English summary
Shrirasthu Shubhamasthu today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X