Shrirasthu Shubhamasthu: ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ 250ರ ಸಂಭ್ರಮ: ಪತಿ ಪರ ನಿಂತ ತುಳಸಿ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿ 250 ಸಂಚಿಕೆಯನ್ನು ಪೂರೈಸಿದೆ. ಮೌನವಾಗಿ ಕಷ್ಟಗಳನ್ನು ಎದುರಿಸುತ್ತಿದ್ದ ಹೆಣ್ಣು ಈಗ ಸಂಪೂರ್ಣವಾಗಿ ಬದಲಾಗುತ್ತಿದ್ದಾಳೆ. ಮನೆಯಲ್ಲಿ ಮಾವ ಹಾಗೂ ಮಗನ ಮಾತನ್ನೇ ಕೇಳುತ್ತಿದ್ದ ತುಳಸಿ, ಈಗ ನಿಧಾನವಾಗಿ ತಾನೂ ಕೂಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ.

ಈ ಧಾರಾವಾಹಿಯನ್ನು ಹಾಗೂ ಪಾತ್ರಗಳನ್ನು ಕೂಡ ಮೆಚ್ಚಿಕೊಂಡಿರುವ ವೀಕ್ಷಕರು ಸೀರಿಯಲ್ 250 ಸಂಚಿಕೆಗಳನ್ನು ಪೂರೈಸಿದ್ದಕ್ಕೆ ವಿಶ್ ಮಾಡಿ ಕಮೆಂಟ್ ಮಾಡಿದ್ದಾರೆ.

Shrirasthu-Shubhamasthu-Kannada-serial

ಧಾರಾವಾಹಿಯನ್ನು ಮೆಚ್ಚಿಕೊಂಡ ವೀಕ್ಷಕರು

ಪ್ರತಿ ದಿನವೂ ಪ್ರಸಾರವಾಗುವ ಪ್ರೋಮೋಗಳಲ್ಲಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ನಿಸ್ಸಂಕೋಚವಾಗಿ ಹಂಚಿಕೊಳ್ಳುತ್ತಿದ್ದಾರೆ. ತುಳಸಿ ಹಾಗೂ ಮಾಧವ್ ಮದುವೆಯನ್ನು ಸಾಕಷ್ಟು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಕಾಲದಲ್ಲಿ ಮಕ್ಕಳು ಹೆತ್ತವರನ್ನು ನೋಡಿಕೊಳ್ಳುವುದಿಲ್ಲ. ಸೂಕ್ತ ಸಂಗಾತಿಯನ್ನು ಹುಡುಕಿ ಮದುವೆಯಾಗಿರುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳುತ್ತಿದ್ದಾರೆ. ಒಟ್ನಲ್ಲಿ ಧಾರಾವಾಹಿಯ ಸಕ್ಸಸ್ ಗೆ ಕಥೆಯನ್ನು ವೀಕ್ಷಕರು ಮೆಚ್ಚಿಕೊಂಡಿರುವುದೇ ಸಾಕ್ಷಿ.

ಮಾವನ ಮಾತಿನಂತೆ ನಡೆಯುತ್ತಿದ್ದ ಸೊಸೆ

ದತ್ತ ಮಾವನ ಮಾತು ಕೇಳಿಕೊಂಡು ಬದುಕಿದ ತುಳಸಿ ಅವರ ಮಾತಿಗೆ ಎದುರಾಡದೇ ಮದುವೆಗೂ ಒಪ್ಪಿದಳು. ಈಗ ಅವರು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದಾಳೆ. ತನ್ನ ಮನೆಯಲ್ಲಿ ತನ್ನ ಸ್ಥಾನವನ್ನು ಅವಳೇ ಸೃಷ್ಟಿಸಿಕೊಳ್ಳುತ್ತಿದ್ದಾಳೆ. ಮನೆಗೆ ಬಂದಾಗ ಮೌನವಾಗಿದ್ದ ತುಳಸಿ, ಈಗ ತಾನು ಯಾರು? ಮದುವೆ ಯಾಕೆ ಆಗಿದ್ದು? ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಹೀಗಾಗಿ ಮನೆಯವರೆಲ್ಲರ ಎದುರಿಗೂ ಖಡಕ್ ಆಗಿ ಉತ್ತರ ಕೊಡುತ್ತಾ ಪತಿ ಮಾಧವ್ ಪರ ನಿಂತಿದ್ದಾಳೆ.

Shrirasthu-Shubhamasthu-Kannada-serial

ಪತ್ರಕರ್ತರಿಗೆ ಮದುವೆಯ ಅರ್ಥ ಹೇಳಿದ ತುಳಸಿ

ತುಳಸಿ ಹಾಗೂ ಮಾಧವ್ ಒಂದೇ ಮನಸ್ಥಿತಿಯವರಾಗಿದ್ದು, ಒಂಟಿಯಾಗಿರುವ ಕಾರಣ ಇಬ್ಬರೂ ಮದುವೆಯಾಗಿದ್ದಾರೆ. ಆದರೆ, ಈ ವಯಸ್ಸಿನಲ್ಲಿ ಇಬ್ಬರೂ ಮದುವೆಯಾಗಿರುವುದು ಎಲ್ಲರ ಎದುರು ಕೆಟ್ಟವರಾಗಿದ್ದಾರೆ. ಏನೇ ಆಗಲೀ ಮದುವೆ ಮಾಡಿಕೊಳ್ಳಲು ಒಂದು ವಯಸ್ಸಿದೆ ಎಂದು ಎಲ್ಲರೂ ಮಾಧವ್ ಮತ್ತು ತುಳಸಿಯನ್ನು ದೂಷಿಸುತ್ತಿದ್ದಾರೆ. ಇಬ್ಬರಿಗೂ ತಮ್ಮ ಅಭಿಪ್ರಾಯವನ್ನು ಕೇಳುವವರೂ ಇಲ್ಲ. ಅವರಿಬ್ಬರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಲೂ ಇಲ್ಲ. ಆದರೆ, ಈಗ ಅಂತಹ ಒಂದು ಅವಕಾಶ ಇಬ್ಬರಿಗೂ ಒದಗಿ ಬಂದಿದೆ.

ಮಾಧವ್ ಸೆಲಬ್ರಿಟಿ ಆಗಿರುವುದರಿಂದ ಪತ್ರಕರ್ತರು ಮಾಧವ್ ಬಳಿ ತಮ್ಮ ಮದುವೆಯ ಕುರಿತು ಪ್ರಶ್ನೆ ಮಾಡಿದ್ದಾರೆ. ಇದು ನನ್ನ ವೈಯಕ್ತಿಕ ಬದುಕು. ನಮ್ಮಿಬ್ಬರಿಗೂ ಹೊಂದಾಣಿಕೆಯಾಯ್ತು. ಇಬ್ಬರೂ ಒಂಟಿಯಾಗಿದ್ದೆವು. ಹಾಗಾಗಿ ಮದುವೆಯಾದೆವು ಎಂದು ಹೇಳಿದರೂ ಸುತ್ತಿ ಬಳಸಿ ಅದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಮಾಧವ್‌ಗೆ ಕೈ ಜೋಡಿಸಲು ಈಗ ತುಳಸಿಯೂ ಬಂದು ಎಲ್ಲರ ಎದುರು ಮಾತನಾಡಿದ್ದಾಳೆ. ತಾಳಿಗೆ ಇರುವ ಬೆಲೆಯ ಬಗ್ಗೆ ಹೇಳಿದ್ದಾಳೆ. ತಾಳಿ ಎಂದರೆ ಕೇವಲ ಅರಿಶಿಣದ ಕೊಂಬು ಅಥವಾ ಚಿನ್ನದ ಆಭರಣವೂ ಅಲ್ಲ. ಅಗ್ನಿಸಾಕ್ಷಿಯಾಗಿ ಕಟ್ಟಿರುವ ರಕ್ಷೆ ಇದು ಎಂದು ತುಳಸಿ ಹೇಳುತ್ತಾಳೆ. ತುಳಸಿಯ ಮಾತಿಗೆ ಮರು ಪ್ರಶ್ನೆ ಮಾಡಲಾಗದೇ ಪತ್ರಕರ್ತರು ಕೂಡ ಹೊರಟು ಹೋಗುತ್ತಾರೆ.

ಮಾಧವ್‌ನನ್ನು ವಹಿಸಿಕೊಂಡ ತುಳಸಿ

ಇದೇ ವೇಳೆಗೆ ಅಲ್ಲಿಗೆ ಅಭಿ ಕುಡಿದು ಬರುತ್ತಾನೆ. ಮಗನ ಮದುವೆಯನ್ನು ಮುರಿದು ಈಗ ನೀವು ಮದುವೆಯಾಗಿರುವುದರ ಬಗ್ಗೆ ಹೇಳಿಕೊಳ್ಳೋಕೆ ಮೀಡಿಯಾನ ಕರೆಸಿದ್ದೀರಾ? ಎಂದು ಕುಡಿದ ಮತ್ತಿನಲ್ಲಿ ಮಾತನಾಡುತ್ತಾನೆ. ಅವಿ ಕೋಪ ಮಾಡಿಕೊಂಡು ಈಗ ನಿಮ್ಮ ಮಗ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡಿ ಎಂದು ಮಾಧವ್‌ನನ್ನು ಜೋರು ಮಾಡುತ್ತಾನೆ. ಮದುವೆ ಅವರೊಬ್ಬರೇ ಆಗಿದ್ದಲ್ಲ, ನಾನೂ ಆಗಿರೋದ್ರಿಂದ ಇದಕ್ಕೆ ನಾನೇ ಉತ್ತರ ಕೊಡುತ್ತೀನಿ ಎನ್ನುವ ತುಳಸಿ, ಈ ಮದುವೆಯಲ್ಲಿ ಮಾಧವ್ ಅವರದ್ದು ಯಾವ ತಪ್ಪೂ ಇಲ್ಲ ಎಂದು ಹೇಳುತ್ತಾಳೆ.

More from Filmibeat

English summary
Kannada TV serial Shrirasthu Shubhamasthu crosses 250 Episode milestone;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X