ಶಾರ್ವರಿ ಮುಖವಾಡ ಕಳಚಲು ನಿರ್ಧರಿಸಿದ ತುಳಸಿ: ಸೊಸೆಯ ಆರೈಕೆ ಕಂಡು ಮರುಗಿದ ತಾಯಿ ಹೃದಯ
ತುಳಸಿಗೆ ಇದೀಗ ಶಾರ್ವರಿದ್ದೇ ಚಿಂತೆ. ಶಾರ್ವರಿಯಿಂದ ಮನೆ ಮಂದಿಗೆ ಬಹಳಷ್ಟು ತೊಂದರೆ ಇದೆ ಅನ್ನೋದು ತುಳಸಿಗೆ ಅರ್ಥವಾಗುತ್ತಿದೆ. ತನ್ನ ಅಕ್ಕನ ಸಾವಿಗೆ ಮಾಧವನೆ ಕಾರಣ ಎಂದು ಶಾರ್ವರಿ ಹಗೆ ಸಾಧಿಸುತ್ತಿದ್ದಾಳೆ. ಇದನ್ನು ಅರಿತ ತುಳಸಿ ಹೇಗಾದರೂ ಮಾಡಿ ಶಾರ್ವರಿ ಮಾಡುವ ಎಲ್ಲಾ ಖತರ್ನಾಕ್ ಕೆಲಸವನ್ನು ಬಯಲಿಗೆಳೆಯಬೇಕು ಎಂದು ನಿರ್ಧರಿಸಿದ್ದಾಳೆ. ತುಳಸಿ ಇತ್ತೀಚಿಗೆ ಇಷ್ಟೊಂದು ತಲೆ ಕೆಡಿಸಿಕೊಂಡಿರುವುದನ್ನು ಮಹೇಶ ನೋಡಿಯೇ ಇರಲಿಲ್ಲ. ಹಾಗೇ ಶಾರ್ವರಿ ತುಳಸಿಯ ಜೊತೆ ನಡೆದುಕೊಳ್ಳುವ ರೀತಿ ಮಹೇಶನಿಗೆ ಕೂಡ ಅನುಮಾನ ತರಿಸುತ್ತದೆ.
ತನ್ನ ಪತ್ನಿ ಶಾರ್ವರಿ ಒಳ್ಳೆಯತನದ ಮುಖವಾಡವನ್ನು ಹಾಕಿ ಮನೆ ಮಂದಿಯ ಮನಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾಳೆ ಎನ್ನುವುದು ಮಹೇಶನಿಗೂ ತಿಳಿದಿದೆ. ಆದರೆ ಅದನ್ನು ಯಾರ ಜೊತೆಯೂ ಹೇಳಿಕೊಳ್ಳದೆ ಸುಮ್ಮನೆ ಇದ್ದಾನೆ. ಇದೀಗ ಅತ್ತಿಗೆಯ ಎದುರಲ್ಲಿ ಅದೆಲ್ಲವನ್ನೂ ಹೇಳುವ ಸನ್ನಿವೇಶ ಬಂದಿದೆ. ಹಾಗೆಯೇ ಮಹೇಶನಿಗೆ ತನ್ನ ಅತ್ತಿಗೆ ಜೊತೆ ಸೇರಿ ನಾನು ಶಾರ್ವರಿಯನ್ನು ಮಟ್ಟ ಹಾಕಬಹುದು ಎಂಬ ಆಲೋಚನೆ ಬಂದಿದೆ. ಆದರೆ ಶಾರ್ವರಿ ಬಗ್ಗೆ ಕೆಟ್ಟದಾಗಿ ಎಲ್ಲಿಯೂ ಒಂದು ಮಾತನ್ನು ಯಾರ ಜೊತೆಯೂ ಹೇಳುತ್ತಿಲ್ಲ.

ಇತ್ತ ಮಾಧವ ತನ್ನ ಹೆಂಡತಿಯ ಬಗ್ಗೆ ಆಲೋಚನೆ ಮಾಡುತ್ತಾನೆ. ತುಳಸಿ ಇದೀಗ ಗರ್ಭಿಣಿ. ಅವರು ಆರೋಗ್ಯವಾಗಿ ಇರಬೇಕು ಎನ್ನುವ ಆಸೆ. ಚೆನ್ನಾಗಿರಬೇಕು, ಯಾವುದೇ ಕುಂದು ಕೊರತೆ ಇದ್ದರೂ ನಾನು ಅದೆಲ್ಲವನ್ನೂ ಈ ಸಮಯದಲ್ಲಿ ನೀಗಿಸಬೇಕು ಎಂದು ಮಾಧವ ಅಂದುಕೊಳ್ಳುತ್ತಾನೆ. ತುಳಸಿ ಏನೇ ಇದ್ದರೂ ಗಂಡನ ಜೊತೆಯೂ ಬಾಯಿ ಬಿಟ್ಟು ಒಂದು ದಿನವೂ ಏನು ಕೇಳಿದವರೆ ಅಲ್ಲ. ಆದರೆ ಮನೆ ಮಂದಿಯ ಪ್ರೀತಿಗೆ ತುಳಸಿ ಕರಗಿ ಹೋಗಿದ್ದಾಳೆ. ಇತ್ತ ತುಳಸಿ ಯೋಚನೆ ಮಾಡುತ್ತಾ ಕುಳಿತಿರಬೇಕಾದರೆ ಪೂರ್ಣಿಮಾ ಒಳಗಿನಿಂದ ಉಗುರು ಬೆಚ್ಚಗಿನ ನೀರನ್ನು ತನ್ನ ಅತ್ತೆಯ ಕಾಲ ಬಳಿಗೆ ತರುತ್ತಾಳೆ. ಇದನ್ನು ನೋಡಿದ ತುಳಸಿಗೆ ಆಶ್ಚರ್ಯ ಆಗುತ್ತದೆ.
ಅತ್ತೆಯ ಆರೈಕೆ ಮಾಡುತ್ತಿರುವ ಪೂರ್ಣಿಮಾ
ಏನಮ್ಮಾ ಇದೆಲ್ಲ ಎಂದಾಗ ಅತ್ತೆ ನಿಮ್ಮ ಕಾಲನ್ನು ಈ ಬೆಚ್ಚಗಿನ ನೀರಲ್ಲಿ 10 ನಿಮಿಷ ಇಡಿ. ನಿಮ್ಮ ಸ್ಟ್ರೆಸ್ ಬಹಳಷ್ಟು ಕಡಿಮೆ ಆಗುತ್ತದೆ ಎಂದು ಬಹಳ ಪ್ರೀತಿಯಿಂದ ಹೇಳುತ್ತಾಳೆ. ಆಗ ತುಳಸಿಗೆ ತನ್ನ ಬಗ್ಗೆ ಸೊಸೆ ಎಷ್ಟೊಂದು ಕೇರ್ ಮಾಡುತ್ತಿದ್ದಾಳೆ. ನಾನು ಖಂಡಿತ ಬಹಳಷ್ಟು ಪುಣ್ಯ ಮಾಡಿದ್ದೇನೆ ಎಂದುಕೊಳ್ಳುತ್ತಾಳೆ. ಹಾಗೆಯೇ ನನ್ನ ಮಗುವನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ಮಗು ಹುಟ್ಟಿದ ಕೂಡಲೇ ಆ ಮಗುವನ್ನು ಪೂರ್ಣಿಮಾಗೆ ಒಪ್ಪಿಸಬೇಕು. ಅಷ್ಟರವರೆಗೆ ಬಹಳ ಎಚ್ಚರಿಕೆಯ ನಡಿಗೆಯನ್ನು ನಾವು ಇಡಬೇಕು ಎಂದು ಹೇಳುತ್ತಾಳೆ. ಇಲ್ಲವಾದರೆ ಖಂಡಿತವಾಗಿ ನನ್ನ ಮಗು ಹಾಗೂ ನನಗೆ ಉಳಿಗಾಲ ಇಲ್ಲ ಎನ್ನುವುದು ತುಳಸಿಗೆ ಇತ್ತೀಚೆಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಪೂರ್ಣಿಮಾ ಮನದಲ್ಲಿ ನೂರಾರು ಯೋಚನೆ
ಇತ್ತ ಪೂರ್ಣಿಮಾಗೆ ತಾನು ತಾಯಿ ಆಗಲು ಸಾಧ್ಯವಿಲ್ಲ ಎನ್ನುವ ನೋವು ಬಹಳಷ್ಟು ಕಾಡುತ್ತಿದೆ. ಆದರೆ, ತನ್ನ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಆಕೆಯ ಮನದಲ್ಲಿ ತುಂಬಿದೆ. ತನ್ನ ಜೀವನದಲ್ಲಿ ತಾಯಿ ಆಗಬೇಕು ಎಂದು ಆ ದೇವರು ಬರೆದಿಲ್ಲ. ಆದರೆ ನಾನು ಖಂಡಿತವಾಗಿ ನನ್ನ ಅತ್ತೆಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಹೊಂದಿರುತ್ತಾಳೆ. ತುಳಸಿ ಮಗ ಸಮರ್ಥ್ ಕೂಡ ಇದೀಗ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾನೆ. ಸಂಧ್ಯಾ ಇದೀಗ ಸಂಪೂರ್ಣವಾಗಿ ಬದಲಾಗಿದ್ದಾಳೆ. ತಂಗಿಯ ವರ್ತನೆ ಕಂಡು ಹಿರಿ ಹಿರಿ ಹಿಗ್ಗಿದ್ದಾನೆ ಸಮರ್ಥ್.


Click it and Unblock the Notifications











