Shrirasthu Shubhamasthu:ಮಾವನ ಸಾವಿಗೆ ಕಾರಣ ನಿಧಿ ಎಂದು ಸಮರ್ಥ್‌ಗೆ ಗೊತ್ತಾದರೆ ಏನ್ ಗತಿ?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ದತ್ತ ಹಾಗೂ ಸಿರಿ ತಂದೆ ರವೀಂದ್ರ ರಾತ್ರಿಯ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಜೋರಾಗಿ ಬಂದ ಕಾರು ದತ್ತಗೆ ಗುದ್ದಿ ಬಿಡುತ್ತಿತ್ತು. ಆದರೆ, ರವೀಂದ್ರ ಅದನ್ನು ತಪ್ಪಿಸಿ ಆತನೇ ಕಾರಿನಡಿಗೆ ಬೀಳುತ್ತಾನೆ. ದತ್ತನನ್ನು ರವೀಂದ್ರ ತಳ್ಳಿದ ಕಾರಣ, ದತ್ತನಿಗೆ ಕೊಂಚ ಏಟು ಆಗುತ್ತದೆ. ಆದರೆ, ರವೀಂದ್ರ ಸ್ಪಾಟ್‌ನಲ್ಲಿ ಡೆತ್ ಆಗುತ್ತಾನೆ. ಇದನ್ನು ಮಾಡಿದ್ದು ಬೇರೆ ಯಾರು ಅಲ್ಲ ನಿಧಿ.
ನಿಧಿಗೆ ಮದುವೆ ಗೊತ್ತಾಗಿತ್ತು. ಎರಡು ದಿನ ಕಳೆದರೆ ಮದುವೆ. ಆದರೆ, ನಿಧಿ ಮಾಡಿದ ಕೆಲಸಕ್ಕೆ ರವೀಂದ್ರನ ಪ್ರಾಣ ಹಾರಿ ಹೋಗಿದೆ. ಕಾರು ನಿಲ್ಲಿಸದೆ ನಿಧಿ ಅಲ್ಲಿಂದ ನೇರವಾಗಿ ಮನೆಗೆ ಬಂದಿರುತ್ತಾಳೆ. ನಿಧಿಗೆ ಆಕ್ಸಿಡೆಂಟ್ ಮಾಡಿದ ದೃಶ್ಯ ರಾತ್ರಿ ಕನಸಲ್ಲಿ ಕೂಡ ಕಾಡುತ್ತಿರುತ್ತದೆ. ಮನೆ ಮಂದಿಯೆಲ್ಲ ನಿಧಿ ಎಲ್ಲಿಯೂ ಹೋಗಿರಲು ಸಾಧ್ಯ ಇಲ್ಲ. ಆಕೆ ಮನೆಯಲ್ಲಿ ಇದ್ದಾಳೆ ಅಂದುಕೊಂಡಿದ್ದರು. ಆದರೆ, ನಿಧಿ ಎಲ್ಲರ ಕಣ್ಣಿಗೆ ಮಣ್ಣೆರಚಿದ್ದಾಳೆ. ತಾನು ಆಕ್ಸಿಡೆಂಟ್ ಮಾಡಿದ್ದು ಸಿರಿ ತಂದೆ ರವೀಂದ್ರ ಹಾಗೂ ದತ್ತನಿಗೆ ಎನ್ನುವ ವಿಚಾರ ನಿಧಿಗೆ ಗೊತ್ತಿಲ್ಲ. ದತ್ತ ಹಾಗೂ ರವೀಂದ್ರ ಮನೆಗೆ ಬಾರದೆ ಇರುವುದನ್ನು ಗಮನಿಸಿದ ಜುಗ್ಗ ನೇರವಾಗಿ ಶಾರ್ವರಿಗೆ ಕರೆ ಮಾಡುತ್ತಾನೆ.

ಇದರಲ್ಲಿ ಏನಾದರೂ ಶಾರ್ವರಿ ಕೈವಾಡ ಇದೆಯೋ ಎನ್ನುವುದನ್ನು ಅರಿತುಕೊಳ್ಳುವ ಸಲುವಾಗಿ ಜುಗ್ಗ ಕರೆ ಮಾಡುತ್ತಾನೆ. ಆದರೆ ಜುಗ್ಗ ಕರೆ ಸ್ವೀಕರಿಸಿ ಮಾತನಾಡಿದ ಶಾರ್ವರಿಗೆ ಜುಗ್ಗನ ಮಾತುಗಳು ಬಹಳಷ್ಟು ಕೋಪ ತರಿಸಿತು. ಇನ್ನು ನಿಧಿ ಮದುವೆ ದಿನ ಹತ್ತಿರ ಬಂತು. ಗೌರಿ ಪೂಜೆ ದಿನ ನಿಧಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಳು. ಎಲ್ಲರ ಮೊಗದಲ್ಲಿ ಮಂದಹಾಸ ಮನೆ ಮಾಡಿರುವುದು ಮಾತ್ರ ಸತ್ಯವಾದ ಮಾತು. ಆದರೆ ನಿಧಿ ಬಹಳ ಡಲ್ ಆಗಿರುತ್ತಾಳೆ. ಇತ್ತ ಸಿರಿಗೆ ತನ್ನ ತಂದೆಗೆ ಆಕ್ಸಿಡೆಂಟ್ ಆಗಿರುವ ವಿಚಾರ ತಿಳಿಯುತ್ತದೆ. ಸಿರಿ ಓಡೋಡಿ ಆಸ್ಪತ್ರೆಗೆ ಬರುತ್ತಾಳೆ.
ತಂದೆಯ ಮೃತದೇಹ ನೋಡಿ ಅತ್ತ ಸಿರಿ
ತಂದೆಯ ಮೃತದೇಹ ಕಂಡು ಸಿರಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಆದರೆ, ರವೀಂದ್ರ ಮರಳಿ ಬಾರದ ಲೋಕಕ್ಕೆ ತೆರಳಿಬಿಟ್ಟಿದ್ದರು. ಸಿರಿಯನ್ನು ಸಂಧ್ಯಾ ಸಂತೈಸುತ್ತಾಳೆ. ಇತ್ತ ಗೌರಿ ಪೂಜೆ ನಡೆಯುತ್ತಿರುವಾಗ ಮಾಧವನ ಮನೆಗೆ ಪೊಲೀಸರು ಬರುತ್ತಾರೆ. ಪೊಲೀಸರನ್ನು ಕಂಡು ಅರೆರೆ ನಾಳೆ ಬರಲು ಹೇಳಿದ್ದು ಇವತ್ತಲ್ಲ ಎಂದು ಹೇಳುತ್ತಾನೆ ಅದಕ್ಕೆ ಉತ್ತರ ಕೊಟ್ಟ ಪೊಲೀಸರು ನಾವು ಇವತ್ತು ಬಂದಿದ್ದು ಕರ್ತವ್ಯದ ಮೇಲೆ ನಿಮ್ಮ ಫ್ಯಾಮಿಲಿಯವರನ್ನು ವಿಚಾರಣೆ ಮಾಡಬೇಕಾಗಿತ್ತು ಎಂದು ಹೇಳುತ್ತಾರೆ.
ಪೊಲೀಸರ ಮಾತು ಕೇಳಿ ದಂಗಾದ ಮಾಧವ
ನಿಮ್ಮ ಮನೆಗೆ ಸಂಬಂಧಪಟ್ಟ ಕಾರಿನಿಂದ ಒಂದು ಆಕ್ಸಿಡೆಂಟ್ ನಡೆದುಹೋಗಿದೆ. ಆ ಕಾರಣಕ್ಕೆ ನಾನು ಇಲ್ಲಿ ವಿಚಾರಣೆ ಮಾಡಲು ಬಂದಿದ್ದೇನೆ ಎಂದಾಗ ಮಾಧವನಿಗೆ ಹಾಗೆಯೇ ಮನೆಯವರಿಗೆ ಶಾಕ್ ಆಗುತ್ತದೆ. ಪೊಲೀಸರು ನೇರವಾಗಿ ನಿಧಿ ಬಳಿಗೆ ಬಂದಾಗ ಸಮರ್ಥ್ ಕೂಡಲೇ ಪೊಲೀಸರ ಬಳಿ ಬಂದು "ನಾನೇ ಆಕ್ಸಿಡೆಂಟ್ ಮಾಡಿದ್ದು ಎಂದು ಹೇಳುತ್ತಾನೆ. ಆದರೆ ಮನೆಯವರಿಗೆ ಎಲ್ಲರಿಗೂ ತಿಳಿದಿದೆ ಸಮರ್ಥ್ ಆಕ್ಸಿಡೆಂಟ್ ಮಾಡಲು ಸಾಧ್ಯವೇ ಇಲ್ಲ ಅಂತ. ಆದರೂ ಸಮರ್ಥ್ ಆರೋಪವನ್ನು ತನ್ನ ಮೇಲೆ ಹಾಕಿಕೊಂಡು ನಿಧಿಯನ್ನು ಸೇವ್ ಮಾಡುತ್ತಾನೆ.

ಪಾಪ ಪ್ರಜ್ಞೆ ಇಲ್ಲದೆ ಮದುವೆಗೆ ಸಿದ್ದಳಾದ ನಿಧಿ
ನಿಧಿಯ ಮದುವೆಗೆ ಯಾವುದೇ ವಿಘ್ನ ಆಗದ ಹಾಗೆ ಮಾಡುತ್ತಾನೆ. ಇತ್ತ ದತ್ತ ಕೂಡ ಬಹಳ ಸೀರಿಯಸ್ ಆಗಿದ್ದಾರೆ. ತನ್ನ ಮಾವನನ್ನು ಕೊಂದ ಪಾಪಿ ನಿಧಿ ಎಂದು ತಿಳಿಯದೇ ಸಮರ್ಥ್ ಜೈಲು ಪಾಲಾಗಿದ್ದಾರೆ. ಇತ್ತ ಸಿರಿಗೆ ತನ್ನ ತಂದೆಯು ಮುಖ ನೋಡಿ ಹೇಳಲಾಗದ ನೋವು ಆಕೆಯನ್ನು ಭಾದಿಸುತ್ತಿರುತ್ತದೆ. ಧಾರಾವಾಹಿಯಲ್ಲಿ ದತ್ತ ಹಾಗೂ ರವೀಂದ್ರ ಇಬ್ಬರ ಕಾಂಬಿನೇಶನ್ ಸಖತ್ ಆಗಿ ವರ್ಕ್ ಆಗುತ್ತಿತ್ತು. ಆದರೆ ರವೀಂದ್ರ ಅವರ ಪಾತ್ರ ಇನ್ನಿಲ್ಲ ಎಂದು ತಿಳಿದ ಸೀರಿಯಲ್ ಪ್ರೇಮಿಗಳು ಬಹಳ ಬೇಸರ ಮಾಡಿಕೊಂಡಿದ್ದಾರೆ.


Click it and Unblock the Notifications











