Shrirasthu Shubhamasthu: ಸಮರ್ಥ್ ಮಾತಿಗೆ ಬೇಸರಗೊಂಡ ತುಳಸಿಗೆ ಮಾಧವ್ ಸಮಾಧಾನ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾಳಿಗೆ ತಾನು ಹೇಗಾದರೂ ಮಾಡಿ ತನ್ನ ತಾಯಿಯ ಮನೆಯಲ್ಲಿ ಸ್ಥಾನ ಪಡೆಯಬೇಕು. ಆಗ ತಾನೂ ಶ್ರೀಮಂತಳಾಗಬಹುದು ಎಂದು ಬಯಸಿದ್ದಾಳೆ.

ಅಮ್ಮ ಈ ವಯಸ್ಸಿನಲ್ಲಿ ಮದುವೆಯಾಗಿದ್ದನ್ನು ದಿಕ್ಕರಿಸಿದ್ದ ಸಂಧ್ಯಾ ಈಗ ಅದೇ ಅಮ್ಮನ ಮನೆಯಲ್ಲಿದ್ದಾಳೆ. ಇಲ್ಲೇ ಇರಬೇಕು ಎಂದು ಕೂಡ ಕೇಳುತ್ತಿದ್ದಾಳೆ. ಆದರೆ, ಸಮರ್ಥ್ ತಾಯಿಯ ಮದುವೆಯನ್ನು ಒಪ್ಪಿಕೊಳ್ಳದ ಕಾರಣ ಸಂಧ್ಯಾಳನ್ನು ಅವರ ಮನೆಯಿಂದ ವಾಪಸ್ ಕರೆದುಕೊಂಡು ಬರಲು ಹೊರಟಿದ್ದಾನೆ.

ಮನೆಗೆ ಹೋಗೋಣ ಬಾ ಸಂಧ್ಯಾ ಎಂದು ಸಮರ್ಥ್ ಕರೆದಾಗ, ಮಾಧವ್ ಊಟ ಮಾಡೋಣ ಎಂದು ಕೇಳುತ್ತಾನೆ. ಆಗ ಸಮರ್ಥ್ ನಾನು ಶ್ರೀಮಂತರ ಮನೆಯಲ್ಲಿ ಊಟ ಮಾಡೋದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾನೆ. ಸಂಧ್ಯಾ ಊಟ ರುಚಿಯಾಗಿದೆ, ಇಲ್ಲೇ ಊಟ ಮಾಡೋಣ ಎನ್ನುತ್ತಾಳೆ.

Shrirasthu-Shubhamasthu-serial

ಸಂಧ್ಯಾಳಿಗೆ ಬೈದ ಸಮರ್ಥ್

ಇದು ನಿನ್ನ ತಾಯಿಯ ಮನೆ ಸಮರ್ಥ್, ನೀನು ಯಾವಾಗ ಬೇಕಿದ್ದರೂ ಬರಬಹುದು ಎಂದು ಮಾಧವ್ ಎನ್ನುತ್ತಾನೆ. ಆಗ ಸಮರ್ಥ್ ನಮ್ಮ ತಾಯಿ ಇಲ್ಲ. ಅವರು ಕಾಣೆ ಆಗಿ ಬಹಳ ದಿನಗಳಾಯ್ತು. ನಾವು ಅನಾಥರು ಎಂದು ಸ್ವಾಭಿಮಾನದಿಂದ ಮಾತನಾಡುತ್ತಾನೆ. ಈ ಮಾತು ತುಳಸಿಗೆ ಬಹಳ ನೋವುಂಟು ಮಾಡುತ್ತದೆ. ಪಾಪು ಹಾಗೆಲ್ಲಾ ಮಾತನಾಡಬೇಡ ಎಂದರೂ ಕೇಳದೇ ಸಮರ್ಥ್, ಸಂಧ್ಯಾಳನ್ನು ಕರೆದುಕೊಂಡು ಹೊರಗೆ ಬರುತ್ತಾನೆ.

ನನಗೆ ಅಮ್ಮನಿಲ್ಲ ನಾವು ಅನಾಥರು

ತುಳಸಿ ಹಿಂದೆಯೇ ಬಂದು ಪಾಪು ಹಾಗೆಲ್ಲಾ ಮಾತನಾಡಬೇಡ ನನಗೆ ಬಹಳ ಬೇಸರವಾಗುತ್ತದೆ ಎಂದು ಹೇಳುತ್ತಾಳೆ. ಆದರೂ ಸಮರ್ಥ್ ಮಾತು ಕೇಳದೇ ನನ್ನ ಪಾಲಿಗೆ ನೀವಿಲ್ಲ ಎಂದು ಹೇಳಿ ಹೊರಟು ಬಿಡುತ್ತಾನೆ. ಇದನ್ನೆಲ್ಲಾ ನೋಡಿದ ಶಾರ್ವರಿ ನಾನೇನು ಮಾಡುವಂತಿಲ್ಲ. ತುಳಸಿ ಹಾಗೂ ಮಾಧವ್‌ಗೆ ಬುದ್ಧಿ ಕಳಿಸಲು ಅವರಿಬ್ಬರ ಮಕ್ಕಳೇ ಸಾಕು. ಅಭಿ ಹಾಗೂ ಅವಿ ಒಂದು ರೀತಿ ನಡೆದುಕೊಂಡರೆ, ತುಳಸಿ ಮಕ್ಕಳು ಇನ್ನು ಹೆಚ್ಚು. ಇದರಿಂದ ನನ್ನ ಕೆಲಸ ಸುಲಭವಾಯ್ತು. ಅಪ್ಪ-ಅಮ್ಮನ ಕಥೆಯನ್ನು ಮುಗಿಸಲು ಮುದ್ದಾದ ಈ ನಾಲ್ಕು ಮಕ್ಕಳೇ ಸಾಕು ಎಂದು ಖುಷಿಪಡುತ್ತಾಳೆ. ಆದರೆ ನಿ,ಧಿ ಅಮ್ಮ ತುಳಸಿ ಆಂಟಿನಾ ಅಷ್ಟು ಸುಲಭವಾಗಿ ತೆಗೆದುಕೊಳ್ಳಬೇಡ ಎಂದು ಹೇಳುತ್ತಾಳೆ. ಆದರೆ ಈ ಮಾತು ಶಾರ್ವರಿಗೆ ಅರ್ಥವಾಗುವುದಿಲ್ಲ.

Shrirasthu-Shubhamasthu-serial

ಪಾಪು ಮಾತಿನಿಂದ ನೊಂದುಕೊಂಡ ತುಳಸಿ

ಮಗ ಆಡಿದ ಮಾತುಗಳಿಂದ ಬೇಸರ ಮಾಡಿಕೊಂಡ ತುಳಸಿ ಶವರ್ ಕೆಳಗೆ ನಿಂತು ಅಳುತ್ತಾಳೆ. ಆಗ ಮಾಧವ್ ಬಹಳ ಸಮಾಧಾನವಾಗಿ ಬುದ್ಧಿ ಹೇಳುತ್ತಾನೆ. ಮಕ್ಕಳು ತಂದೆ-ತಾಯಿಗೆ ಒದೆಯುವುದು, ನೋವು ಮಾಡುವುದು ಹೊಸತೇನಲ್ಲ. ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ನನಗೆ ನಿಮ್ಮ ಪರೀಸ್ಥಿತಿ ಅರ್ಥವಾಗುತ್ತದೆ. ನಾನು ನಿಮ್ಮ ಜೊತೆಗೆ ಇರುತ್ತೇನೆ. ಸಮರ್ಥ್‌ಗೆ ಎಲ್ಲವನ್ನೂ ಅರ್ಥ ಮಾಡಿಸುತ್ತೇನೆ ಎಂದು ಸಮಾಧಾನ ಮಾಡುತ್ತಾನೆ.

ತುಳಸಿ ಜೊತೆಗೆ ನಿಂತ ಮಾಧವ್

ತುಳಸಿ ನಾನು ನನ್ನ ಮಗನನ್ನು ನೋಡಬೇಕು ಎಂದು ಕೇಳುತ್ತಾಳೆ. ಅದಕ್ಕೆ ಮಾಧವ್ ಸರಿ ಆಯ್ತು ಹೋಗೋಣ. ನೀವು ಬಟ್ಟೆ ಬದಲಾಯಿಸಿ ಬನ್ನಿ ಎಂದು ಹೇಳುತ್ತಾನೆ. ನಂತರ ತುಳಸಿ, ಮಾಧವ್ ಬಳಿ ಕ್ಷಮೆ ಕೇಳುತ್ತಾಳೆ. ಆಗಲೇ ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಅದಕ್ಕೆ ಹಾಗೆ ನಡೆದುಕೊಂಡೆ ಎನ್ನುತ್ತಾಳೆ. ಆಗ ಮಾಧವ್ ಪರವಾಗಿಲ್ಲ. ಸಮರ್ಥ್ ನಿಮ್ಮನ್ನು ಒಪ್ಪಿಕೊಳ್ಳುವಂತೆ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳುತ್ತಾನೆ. ಆಗ ತುಳಸಿ, ಅಭಿ ಮತ್ತೆ ಅವಿ ನಿಮ್ಮನ್ನು ಒಪ್ಪಿಕೊಳ್ಳುವಂತೆ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳುತ್ತಾಳೆ. ಇಬ್ಬರೂ ಒಟ್ಟಿಗೆ ದತ್ತ ತಾತನ ಮನೆಗೆ ಹೊರಡುತ್ತಾರೆ.

More from Filmibeat

English summary
Shrirasthu Shubhamasthu kannada serial last episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X