ಸಮರ್ಥ್ ಬುದ್ದಿವಂತಿಕೆ ಬಗ್ಗೆ ಹೊಗಳಿದ ಅವಿ; ದೀಪಿಕಾ ಪ್ಲಾನ್ ಟುಸ್, ಶಾರ್ವರಿಗೆ ಶಾಕ್?

By ಪೂರ್ವ

ತುಳಸಿಗೆ ಮಗನ ಮೇಲೆ ನಂಬಿಕೆ, ಕಾಳಜಿ. ಹಾಗೆಯೇ ಸಮರ್ಥ್‌ಗೆ ತಾಯಿಯ ಮೇಲೆ ವಿಶೇಷವಾದ ಪ್ರೀತಿ. ತನ್ನ ತಾಯಿ ಮುಗ್ಧೆ, ಆಕೆಯನ್ನು ಯಾರು ಏನು ಅನ್ನಬಾರದು. ಅದನ್ನು ತಡೆದುಕೊಳ್ಳುವ ಶಕ್ತಿ ಸಮರ್ಥ್‌ಗೆ ಇಲ್ಲ. ಅವಿನಾಶ್ ಕಾಬೋರ್ಡ್‌ನಲ್ಲಿ ಇದ್ದ ಫೈಲ್ ಅನ್ನು ಯಾರೋ ಒಬ್ಬರಿಗೆ ಕೊಟ್ಟಿರುತ್ತಾರೆ ತುಳಸಿ. ಆದರೆ, ಅವಿನಾಶ್‌ಗೆ ಇದರಿಂದ ಬಹಳ ಕೋಪ ಬರುತ್ತದೆ. ಯಾಕೆಂದರೆ, ಸಾವಿರಾರು ಕೋಟಿ ರೂಪಾಯಿ ಟೆಂಡರ್ ಫೈಲ್ ಆಗಿರುತ್ತದೆ. ಅದನ್ನು ರೆಡಿ ಮಾಡಲು ಅವಿನಾಶ್ ಸುಮಾರು ಒಂದು ವಾರ ತೆಗೆದುಕೊಂಡಿದ್ದಾರೆ.

ಆದರೆ, ಅದನ್ನು ತುಳಸಿ ಬೇರೆಯವರಿಗೆ ಕೊಟ್ಟಿದ್ದಾರೆ ಎಂದು ತಿಳಿದು ಅವಿನಾಶ್ ಹರಿ ಹಾಯುತ್ತಾನೆ. ಇದನ್ನು ಕಂಡ ಸಮರ್ಥ್ ಅವಿಗೆ ಹೇಳುತ್ತಾನೆ ಅವಿನಾಶ್ ಸರ್ ನೀವು ಈ ರೀತಿ ಮೇಡಂ ಮೇಲೆ ಕೋಪ ಮಾಡಿಕೊಳ್ಳುವುದರಿಂದ ಏನು ಪ್ರಯೋಜನ ಇಲ್ಲ. ಫೈಲ್ ಇಲ್ಲ ಎನ್ನುವುದು ನಿಮಗೆ ಗೊತ್ತಾಗಿದೆ . ನಾಳೆಯೊಳಗೆ ಅದನ್ನು ತಯಾರಿ ಮಾಡಬಹುದಲ್ಲ ಎಂದಾಗ ಸಮರ್ಥ್ ಬಳಿಯೇ ಆ ಫೈಲ್ ರೆಡಿ ಮಾಡುವಂತೆ ಹೇಳುತ್ತಾರೆ ಅವಿನಾಶ್.

Shrirasthu Shubhamasthu march 19th episode

ಇದನ್ನು ಕೇಳಿದ ಸಮರ್ಥ್ ಆಯಿತು ಎಂದು ಒಪ್ಪಿಕೊಳ್ಳುತ್ತಾನೆ. ಸಮರ್ಥ್ ರಾತ್ರಿ ಇಡೀ ಕಷ್ಟ ಪಟ್ಟು ಕೆಲಸ ಮಾಡುತ್ತಿರುತ್ತಾರೆ. ಸಮರ್ಥ್ ತಾಯಿಯ ಬಳಿ ಅದೆಷ್ಟು ಬಾರಿ ಮಲಗಲು ಹೇಳಿದರು ತುಳಸಿ ಮಾತ್ರ ಮಗನ ಅಕ್ಕಪಕ್ಕ ಓಡಾಡುತ್ತಾ ಇರುತ್ತಾಳೆ. ಕೊನೆಗೆ ಮಗನ ತೊಡೆಯ ಮೇಲೆ ಮಲಗಿ ನಿದ್ದೆಗೆ ಜಾರುತ್ತಾಳೆ. ಬೆಳಗುತ್ತದೆ ಸಮರ್ಥ್ ತೊಡೆಯ ಮೇಲೆ ಗಾಢವಾಗಿ ತುಳಸಿ ನಿದ್ದೆಗೆ ಜಾರಿ ಇರುತ್ತಾಳೆ. ಮನೆಯವರೆಲ್ಲ ಮಹಡಿಯಿಂದ ಇಳಿದು ಸಮರ್ಥ್ ಬಳಿ ಬರುತ್ತಾರೆ.

ಸಮರ್ಥ್ ಮಾಡಿದ ಕೆಲಸಕ್ಕೆ ಅವಿನಾಶ್ ಮೆಚ್ಚುಗೆ

ಆ ಕೂಡಲೇ ತುಳಸಿಗೆ ಕೂಡ ಎಚ್ಚರ ಆಗುತ್ತದೆ. ಸಮರ್ಥ್‌ನನ್ನು ಬಾಯಿ ತುಂಬಾ ಹೊಗಳಿದ ಅವಿ, ತುಳಸಿ ಜೊತೆ ಸಾರಿ ಕೂಡ ಕೇಳುತ್ತಾನೆ. ಹಾಗೆಯೇ ಸಮರ್ಥ್‌ನಲ್ಲಿ ಇರುವ ಹಾರ್ಡ್ ವರ್ಕ್ ಹಾಗೂ ಸ್ಮಾರ್ಟ್ ವರ್ಕ್‌ ಕಂಡು ಅವಿನಾಶ್ ಬಹಳ ಖುಷಿ ಆಗುತ್ತದೆ. ಆದರೆ, ದೀಪಿಕಾ ಮಾಡಿದ ಪ್ಲಾನ್ ಮಾತ್ರ ಎಲ್ಲಾ ಉಲ್ಟಾ ಆಗುತ್ತಿದೆ. ಶಾರ್ವರಿ ದೀಪಿಕಾ ಮುಖ ನೋಡಿ ಇದೆಲ್ಲ ಎನು ಎಂಬಂತೆ ಕಣ್ಣಲ್ಲೆ ಕೇಳುತ್ತಾಳೆ. ದೀಪಿಕಾ ಮಾತ್ರ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ . ಇತ್ತ ಅಭಿ , ಅವಿ ಆಫೀಸ್‌ಗೆ ಹೋಗುತ್ತಾರೆ.

Shrirasthu Shubhamasthu march 19th episode

ಮಗನ ಮಾತು ಕೇಳಿ ತುಳಸಿಗೆ ಸಮಾಧಾನ

ಮಗ ಮಾಡಿದ ಕೆಲಸಕ್ಕೆ ಬಹಳ ಖುಷಿ ವ್ಯಕ್ತ ಪಡಿಸುತ್ತಾರೆ ಮನೆ ಮಂದಿ. ತುಳಸಿ ಖುಷಿಗೆ ಮಾತ್ರ ಪಾರವೇ ಇಲ್ಲದ ಹಾಗೆ ಆಗಿದೆ . ಇನ್ನೂ ಅವಿ ಆಫೀಸ್‌ನಿಂದ ಬಹಳ ಖುಷಿಯಾಗಿಯೇ ಬರುತ್ತಾನೆ. ಪೂರ್ಣಿಮಾ ಓಡಿ ಬಂದು ಏನಾಯಿತು ಎಂದು ಕೇಳುತ್ತಾಳೆ. ಈ ಬಾರಿ ಟೆಂಡರ್ ನಮ್ಮ ಪಾಲಾಯಿತು ಎಂದು ಬಹಳ ಖುಷಿಯಿಂದ ಹೇಳುತ್ತಾನೆ. ಇದನ್ನು ಕೇಳಿದ ಮಹೇಶ್‌ಗೆ ಬಹಳ ಖುಷಿ ಆಗುತ್ತದೆ. ಆದರೆ ಶಾರ್ವರಿಗೆ ಬಹಳ ಶಾಕ್ ಆಗುತ್ತದೆ .

ಮನೆಯವರನ್ನು ಊಟಕ್ಕೆ ಕರೆದ ಅವಿ

ಇನ್ನೂ ಅವಿಯಂತು ಬಹಳ ಖುಷಿಯಲ್ಲಿ ಇರುತ್ತಾನೆ. ಹಾಗೆಯೇ ಸಮರ್ಥ್ ಕೆಲಸವನ್ನು ಹಾಡಿ ಹೊಗಳುತ್ತಾನೆ. ನಾನು ಮಾಡಿದ ಫೈಲ್‌ಗಿಂತ ಸಮರ್ಥ್ ರೆಡಿ ಮಾಡಿದ ಫೈಲ್ ಬಹಳ ಚೆನ್ನಾಗಿತ್ತು. ಯಾವುದನ್ನೂ ಹೇಳುವ, ವಿವರಿಸುವ ಅಗತ್ಯ ಇರಲಿಲ್ಲ ಎಂದು ಖುಷಿಯಿಂದ ಹೇಳುತ್ತಾನೆ. ಆದರೆ, ಆತ ಮಾಡುತ್ತಿರುವ ಕೆಲಸ ಏನು, ಆತನಿಗೆ ಸಿಗಬೇಕಾದ ಕೆಲಸ ಯಾವುದು ಎಂದು ಬೇಸರದಲ್ಲಿ ಇರುತ್ತಾರೆ. ಮಗ ಮಾಡಿದ ಕೆಲಸಕ್ಕೆ ಪ್ರತಿ ಫಲ ಸಿಕ್ಕಿದ್ದು ಕಂಡು ತುಳಸಿಗೆ ಮತ್ತಷ್ಟು ಖುಷಿ ನೀಡಿದೆ. ಪೂರ್ಣಿಮಾ ಬಳಿ ಸಮರ್ಥ್ ಫ್ಯಾಮಿಲಿಯನ್ನು ಮನೆಗೆ ಊಟಕ್ಕೆ ಬರಲು ಹೇಳುತ್ತೇನೆ. ಎಲ್ಲಾ ಏರ್ಪಾಟು ಮಾಡಿಕೊಂಡು ಇರಿ ಎಂದು ಹೇಳುತ್ತಾನೆ ಅವಿ. ಮುಂದೇನು ಕಾದು ನೋಡಬೇಕಾಗಿದೆ.

More from Filmibeat

English summary
Shrirasthu Shubhamasthu Kannada serial update on March 19th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X