Shrirasthu Shubhamasthu: ಮನೆಗೆ ಎಂಟ್ರಿ ಕೊಟ್ಟ ಸಂಧ್ಯಾ.. ಪಾಠ ಕಲಿಸುತ್ತಾರಾ ದತ್ತ?
ಇದೀಗ ದತ್ತನಿಗೆ ತುಳಸಿ ಇಲ್ಲದೆ ಮನೆ ಎಲ್ಲಾ ಬಿಕೋ ಎನ್ನುವ ಹಾಗೆ ಆಗುತ್ತಿದೆ. ತುಳಸಿ ಇದ್ದಿದ್ದರೆ ನನಗೆ ಟೈಮ್ ಟೈಮ್‌ಗೆ ಕಷಾಯ ಎಲ್ಲಾ ಕೊಟ್ಟಿರುವಳು. ಆದರೆ ಇದೀಗ ಅವಳೇ ಇಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಅಷ್ಟರಲ್ಲೇ ಅಲ್ಲಿಗೆ ಸಿರಿ ಬಂದು ತಾತನಿಗೆ ಕಷಾಯ ಕೊಡುತ್ತಾಳೆ.
ದತ್ತ ಏನೇನೆಲ್ಲ ಕೇಳುತ್ತಾರೋ ಅದೆಲ್ಲವನ್ನೂ ತಾತನಿಗೆ ಕೊಡುತ್ತಾಳೆ. ಇತ್ತ ದತ್ತ, ಶೇಷನ ಮನೆಗೆ ಹೋಗಲು ರೆಡಿ ಆಗುತ್ತಾರೆ. "ಸಿರಿ ಬಳಿ ಶೇಷನ ಮನೆಗೆ ಹೋಗುತ್ತೇನೆ" ಎಂದು ಹೇಳಿ ಅಲ್ಲಿಂದ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ಎದುರು ಸಂಧ್ಯಾ ನಿಂತು ಇರುತ್ತಾಳೆ . ಸಂಧ್ಯಾ ಅಹಂಕಾರದ ಮಾತುಗಳನ್ನು ಕೇಳಿಸಿಕೊಂಡ ದತ್ತನಿಗೆ ಬಹಳ ಕೋಪ ಬರುತ್ತದೆ.

ಸಂಧ್ಯಾಳನ್ನು ಕಂಡು ಕೋಪಗೊಂಡ ದತ್ತ
ಆದರೂ, ಅದೆಲ್ಲವನ್ನೂ ಸಹಿಸಿಕೊಂಡು ಕೊಂಚ ಜೋರಾಗಿಯೇ ದತ್ತ ಮಾತನಾಡುತ್ತಾರೆ . ಆ ಬಳಿಕ ಅಲ್ಲಿಂದ ಸೀದಾ ಸಂಧ್ಯಾ ಒಳಗೆ ಹೋಗುತ್ತಾಳೆ . ತನಗೆ ತನ್ನ ಮಾವ ಮಾಡಿದ ಮೋಸವನ್ನು ದತ್ತನ ಬಳಿ ಹೇಳುತ್ತಾಳೆ. ಸಂಧ್ಯಾ ಬಂದಿರುವ ಕಾರಣ ಮಾತ್ರ ದತ್ತನಿಗೆ ಇನ್ನೂ ತಿಳಿದೇ ಇಲ್ಲ. ಇನ್ನು ದತ್ತ ಸಂಧ್ಯಾಳನ್ನು ಮನೆಯಿಂದ ಆಚೆ ಹೋಗಲು ಹೇಳುತ್ತಾನೆ.
ಆದರೆ, ಸಂಧ್ಯಾ ಮುಖ ನೋಡಿದ ಸಿರಿ ಮಾತ್ರ "ಅವಳು ಇಲ್ಲಿಯೇ ಇರಲಿ. ತಾತ, ತುಳಸಿ ಅಮ್ಮನಿಗೆ ನೋವಾಗದೆ ಇರಲಿ. ಅದಕ್ಕಾದರೂ, ಆಕೆ ಇಲ್ಲಿಯೇ ಇರಲಿ" ಎಂದು ಹೇಳುತ್ತಾರೆ. ಇದನ್ನು ಕೇಳಿದ ದತ್ತ ಏನು ಮಾತನಾಡದೆ ಶೇಷನ ಮನೆಗೆ ಹೋಗುತ್ತಾರೆ. ಆ ಬಳಿಕ ಸಂಧ್ಯಾ ಕೊಂಚ ಅಹಂಕಾರದಿಂದ ಸಿರಿ ಜೊತೆ ಮಾತನಾಡುತ್ತಾ ಕಾಲ ಮೇಲೆ ಕಾಲು ಹಾಕಿಕೊಂಡು ತಿಂಡಿ ತಿನ್ನುತ್ತಾ ಕೂರುತ್ತಾಳೆ.
ಸಂಧ್ಯಾ ಮಾತಿಗೆ ಕೋಪಗೊಂಡ ಸಿರಿ
ಇದನ್ನು ನೋಡಿದ ಸಿರಿಗೆ ಕೋಪ ನೆತ್ತಿಗೇರುತ್ತೆ. ಆದರೆ ಆಕೆ ಮಾತ್ರ ತುಳಸಿಗಾಗಿ ಎಲ್ಲವನ್ನೂ ತಡೆದುಕೊಂಡು ಇರುತ್ತಾಳೆ . ತಿಂದ ತಟ್ಟೆಯನ್ನು ಕೂಡ ತೊಳೆಯದೆ ಹೋಗುತ್ತಾ ಇರುವ ವೇಳೆ ಮನೆಗೆ ದತ್ತ ಬರುತ್ತಾರೆ. ಇದನ್ನೆಲ್ಲ ನೋಡಿದ ದತ್ತ, "ಸಂಧ್ಯಾ ನಾನು ಊಟಕ್ಕೆ ಬರುವ ವೇಳೆ ಅಡುಗೆ ರೂಮ್ ಎಲ್ಲಾ ಕ್ಲೀನ್ ಆಗಿ ಇರಬೇಕು" ಎಂದು ಕೊಂಚ ಜೋರಾಗಿ ಹೇಳುತ್ತಾರೆ.

ಇದನ್ನು ಕೇಳಿದ ಸಂಧ್ಯಾ ಕೋಪಾಗೊಳ್ಳುತ್ತಾಳೆ. ಆದರೆ ದತ್ತನ ಎದುರು ಏನು ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾಳೆ . ಬಳಿಕ ಅಡುಗೆ ರೂಮ್‌ಗೆ ಹೋಗುತ್ತಾಳೆ. ಇದನ್ನೆಲ್ಲ ನೋಡಿದ ಸಿರಿ ಮಾತ್ರ ಜೋರಾಗಿ ನಗುತ್ತಾಳೆ. ಇನ್ನು ಮಾಧವ ಅವರ ಕೆಫೆಗೆ ಪತ್ರಕರ್ತ ಒಬ್ಬರು ಬರುತ್ತಾರೆ. ಅವರನ್ನು ಸರಿಯಾಗಿ ಟ್ರೀಟ್ ಮಾಡದ ಕಾರಣ ಮೊದಲಿಗೆ ಕೋಪ ಬಂದರೂ ತುಳಸಿ ಮಾಡಿದ ಅಡುಗೆಯನ್ನು ತಿಂದು ಬಹಳ ಖುಷಿ ಪಡುತ್ತಾರೆ. ಆತ ಹೊರಡುವ ಸಮಯದಲ್ಲಿ ಮಾಧವ ಬಂದು ಅವರ ಕ್ಷೇಮ ಸಮಾಚಾರವನ್ನು ವಿಚಾರಣೆ ಮಾಡುತ್ತಾ ಇರುವಾಗ, ಮಾಧವನ ಕೆಫೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಮುಂದಿನ ಸಂಚಿಕೆಯಲ್ಲಿ ದತ್ತ, ಸಂಧ್ಯಾ ನಡುವೆ ಏನಾಗುತ್ತೆ ಅನ್ನೋದು ಇಂಟ್ರೆಸ್ಟಿಂಗ್.


Click it and Unblock the Notifications











