Shrirasthu Shubhamasthu: ದೀಪಿಕಾ-ಅಭಿ ಮದುವೆಗೆ ಸಿಕ್ತು ಗ್ರೀನ್ ಸಿಗ್ನಲ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಅತ್ತಿಗೆ ಸಿರಿ ಒಡವೆಗಳನ್ನು ಕದ್ದು, ಅಡವಿಟ್ಟಿದ್ದಾಳೆ. ಅದರಿಂದ ಬಂದ ಹಣವನ್ನು ನಂದಿನಿ ಬಾಯಿಗೆ ಹಾಕಿದ್ದಾಳೆ.
ಡಬಲ್ ಸೈಟ್ ತೆಗೆದುಕೊಳ್ಳುವ ಆಸೆಗೆ ಮನೆಯವರಿಗೆ ಮೋಸ ಮಾಡಿದ್ದಾಳೆ. ಆದರೆ, ನಂದಿನಿ ತನಗೆ ಮೋಸ ಮಾಡುತ್ತಿದ್ದಾಳೆ ಎಂಬುದು ಮಾತ್ರ ಇನ್ನೂ ಅರ್ಥವಾಗಿಲ್ಲ.

ಒಡವೆಗಳನ್ನು ಕದ್ದು, ಅಡವಿಡುವಾಗ ಅಂತಹದ್ದೇ ರೀತಿಯ ಡುಪ್ಲಿಕೇಟ್ ಒಡವೆಗಳನ್ನು ಮಾಡಿಸಿ ಮತ್ತದೇ ಜಾಗದಲ್ಲಿ ತಂದು ಇಟ್ಟು ತಾನು ಕದ್ದೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾಳೆ.
ಸಂಧ್ಯಾ ಕೊರಳಿಗೆ ಉರುಳಾಗುತ್ತಾ ಒಡವೆಗಳು..?
ಈಗ ಸಮರ್ಥ್‌ಗೆ ಎಲ್ಲೂ ಕೆಲಸ ಸಿಗದ ಕಾರಣ ಸಿರಿ ಸ್ವಂತ ಉದ್ಯಮ ಶುರು ಮಾಡಲು ಐಡಿಯಾ ಕೊಟ್ಟಿದ್ದಾಳೆ. ಬಂಡವಾಳಕ್ಕೆ ತನ್ನ ಒಡವೆಗಳನ್ನು ಬಳಸಿಕೊಳ್ಳುವಂತೆ ಹೇಳಿದ್ದಾಳೆ. ಸಮರ್ಥ್‌ಗೆ ಹೆಂಡತಿಯ ಒಡವೆಗಳನ್ನು ಬಳಸಿಕೊಳ್ಳಲು ಇಷ್ಟವಿಲ್ಲದಿದ್ದರೂ ಕೂಡ ಒಪ್ಪುತ್ತಾನೆ. ಅದೂ ಕೂಡ ಸಿರಿಗೆ ಬಡ್ಡಿ ಕೊಡುವುದಾಗಿ ಹೇಳಿ ಆ ಒಡವೆಗಳನ್ನು ತೆಗೆದುಕೊಳ್ಳಲು ಒಪ್ಪಿದ್ದಾನೆ.

ಸಂಧ್ಯಾಗೆ ಪೀಕಲಾಟ
ಒಡವೆ ವಿಚಾರ ಸಂಧ್ಯಾಳಿಗೆ ಪೀಕಲಾಟವಾಗಿದೆ. ಇನ್ನೂ ಒಂದು ವರ್ಷವಾದರೂ ಸಿರಿ ಒಡವೆ ನೋಡದೇ ಇದ್ದಿದ್ದರೆ ಯಾಮಾರಿಸಬಹುದಿತ್ತು. ಆದರೆ, ಈಗ ತಾನು ಎಲ್ಲಿ ಸಿಕ್ಕಿಬೀಳುತ್ತೇನೋ ಎಂದು ಗಾಬರಿಯಾಗಿದ್ದಾಳೆ. ಹೀಗಾಗಿ ಪದೇ ಪದೇ ಒಡವೆಗಳನ್ನು ಕಳೆದುಕೊಳ್ಳಬೇಡಿ ಎಂದು ತಾನು ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾಳೆ. ಒಡವೆಗಳೆಲ್ಲವೂ ಡುಪ್ಲಿಕೇಟ್ ಆಗಿವೆ ಎಂಬುದು ತಿಳಿದರೆ, ಸಂಧ್ಯಾ ಮೇಲೆ ಎಲ್ಲರೂ ಅನುಮಾನ ಪಡುವುದು ಪಕ್ಕಾ ಆಗಿದೆ. ಹೀಗಾಗಿ ಸಂಧ್ಯಾ ಒಳಗೊಳಗೇ ಒದ್ದಾಡುತ್ತಿದ್ದಾಳೆ.
ಮಗಳ ಆತಂಕ ಕೊನೆಗೊಳಿಸಿದ ವನಜಾ
ಇತ್ತ ಜನಾರ್ಧನ್ ಮಗಳು ದೀಪಿಕಾಳನ್ನು ಹೆದರಿಸಿದ್ದಾನೆ. ನೀನೇನಾದರೂ ಅಭಿ ಅನ್ನು ಮದುವೆಯಾಗಲು ಒಪ್ಪಿದರೆ, ನಿನ್ನ ಅಮ್ಮನಿಗೆ ಮದುವೆಯಾದ ಮರುಕ್ಷಣವೇ ಡಿವೋರ್ಸ್ ಕೊಡುತ್ತೇನೆ. ಹೇಗಿದ್ದರೂ ನಿನ್ನ ತಾಯಿಗೆ ನನ್ನ ಅವಶ್ಯಕತೆ ಇಲ್ಲ. ನನ್ನ ಮಾತು ಮೀರಿ ನಿನ್ನನ್ನು ಅಭಿ ಮನೆಯವರು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಳೆ. ಮಗಳ ಮದುವೆ ಮಾಡಲು ಓಡಾಡುತ್ತಿದ್ದಾಳೆ ಎಂದು ಜನಾರ್ಧನ್ ಹೆದರಿಸುತ್ತಾನೆ. ಆದರೆ, ದೀಪಿಕಾ ಎಷ್ಟೇ ಕೇಳಿಕೊಂಡರೂ ಜನಾರ್ಧನ್ ಕೇಳುವುದಿಲ್ಲ. ಇದೇ ಆತಂಕದಲ್ಲಿರುವ ದೀಪಿಕಾಳಿಂದ ಸತ್ಯ ಬಾಯಿ ಬಿಡಿಸಿಕೊಂಡ ವನಜಾ ಅದಕ್ಕೆಲ್ಲಾ ಹೆದರಬೇಡ ಎಂದು ಧೈರ್ಯ ತುಂಬಿದ್ದಾಳೆ.
ಕೊನೆಗೂ ಮದುವೆಗೆ ಸಿಕ್ತು ಗ್ರೀನ್ ಸಿಗ್ನಲ್
ತಾಂಬೂಲ ಬದಲಾಯಿಸುವ ಶಾಸ್ತ್ರ ಮಾಡಲು ಅಭಿ ಮನೆಯವರೆಲ್ಲಾ ದೀಪಿಕಾ ಮನೆಗೆ ಬಂದಿದ್ದಾರೆ. ಆದರೆ ತುಳಸಿಗೆ ದೀಪಿಕಾಳ ಮೌನ ಅನುಮಾನ ಮೂಡಿಸಿದೆ. ತಾಂಬೂಲ ಬದಲಾಯಿಸುವ ಮುನ್ನ ಎಲ್ಲರೂ ಈ ಮದುವೆಗೆ ಒಪ್ಪಿದ್ದೀರಾ ಎಂದು ಪುರೋಹಿತರು ಕೇಳಿದ್ದಾರೆ. ಆಗ ಎಲ್ಲರೂ ಈ ಮದುವೆಗೆ ಸಂಪೂರ್ಣವಾಗಿ ಒಪ್ಪಿಗೆ ಇದೆ ಎಂದು ಹೇಳಿದ್ದಾರೆ. ಆದರೆ, ದೀಪಿಕಾ ಮಾತ್ರವೇ ಮೌನವಾಗಿದ್ದಾರೆ. ಯಾರ ಮಾತಿಗೂ ಏನೂ ಹೇಳದೇ ಮೌನವಾಗಿದ್ದಾಳೆ. ಇದು ಎಲ್ಲರನ್ನು ಕೆಲಕಾಲ ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತದೆ. ಬಳಿಕ ದೀಪಿಕಾ ಈ ಮದುವೆಗೆ ನನಗೆ ಒಪ್ಪಿಗೆ ಇದೆ ಎನ್ನುತ್ತಾಳೆ.
ಶಾರ್ವರಿ-ಜನಾರ್ಧನ್ ಪ್ಲಾನ್ ಉಲ್ಟಾ
ಅಭಿಯನ್ನು ಬಿಟ್ಟು ತಾನು ಇನ್ನು ಯಾರನ್ನೂ ಮದುವೆಯಾಗುವುದಿಲ್ಲ ಎಂದು ಕೂಡ ಹೇಳುತ್ತಾಳೆ. ಈ ಮಾತನ್ನು ಕೇಳಿದ ಎಲ್ಲರೂ ಖುಷಿ ಪಡುತ್ತಾರೆ. ಆದರೆ, ಶಾರ್ವರಿಗೆ ಕೋಪ ಬರುತ್ತದೆ. ಜನಾರ್ಧನ್ ಮತ್ತು ತನ್ನ ಪ್ಲಾನ್ ಉಲ್ಟಾ ಹೊಡೆಯಿತ್ತಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಆದರೆ, ತನ್ನ ಬೇಸರವನ್ನು ತೋರಿಸಿಕೊಳ್ಳಲಾಗದೇ, ಖುಷಿಯಾಗಿ ನಟನೆ ಮಾಡುತ್ತಾಳೆ. ಇದನ್ನು ನೋಡಿದ ಜನಾರ್ಧನ್ ಶಾರ್ವರಿಯಿಂದ ದೂರ ಉಳಿಯಬೇಕು. ಅವಳ ಮಾತುಗಳನ್ನು ನಂಬಿದರೆ ಯಾವಾಗ ಬೇಕಿದ್ದರೂ ಉಲ್ಟಾ ಹೊಡೆಯುತ್ತಾರೆ ಎಂದು ಅಂದುಕೊಳ್ಳುತ್ತಾನೆ.


Click it and Unblock the Notifications











