Shrirasthu Shubhamasthu: ಅವಿಗೆ ಸತ್ಯ ಗೊತ್ತಾಯ್ತು: ಸಮರ್ಥ್‌ಗೆ ಗ್ರಹಚಾರ ಬಿಡಿಸಿದ ದತ್ತ ತಾತ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಶಾರ್ವರಿ, ಮಾಧವ್ ಬಳಿ ಹೋಗುತ್ತಾಳೆ. ತುಳಸಿ ಅವರು ಇನ್ನೂ ಮನೆಗೆ ಬರಲಿಲ್ಲ. ಅವರು ಇಲ್ಲದಿರುವುದಕ್ಕೆ ನಿಮಗೆ ಕಷ್ಟ ಆಗುತ್ತಿರಬೇಕು. ಬೇಕಿದ್ದರೆ, ನಾನು ಒಮ್ಮೆ ಅವರ ಮನೆಗೆ ಹೋಗಿ ತುಳಸಿ ಅವರಿಗೆ ಸಮಾಧಾನ ಹೇಳಿ ಕರೆದುಕೊಂಡು ಬರಲಾ ಬಾವ ಎಂದು ಸಾಫ್ಟ್ ಆಗಿ ಮಾತನಾಡುತ್ತಾಳೆ.

ಏನೂ ಅರಿಯದ ಮಾಧವ್ ಹಾಗೆಲ್ಲಾ ಏನು ಬೇಡ ಶಾರ್ವರಿ. ಅವರ ಮನಸ್ಸು ತಿಳಿಯಾದ ಮೇಲೆ ಅವರೇ ಬರುತ್ತಾರೆ ಎಂದು ಹೇಳಿ, ಶಾರ್ವರಿ ಕೊಟ್ಟ ಪೇಪರ್ಸ್‌ಗಳಿಗೆ ಸೈನ್ ಹಾಕುತ್ತಾನೆ.

Shrirasthu Shubhamasthu serial 03rd October episode written update

ನಿಧಿ ಬೆಳಗೆದ್ದು, ರಾತ್ರಿ ನಡೆದ ಘಟನೆಯನ್ನು ನೆನೆಯುತ್ತಾ ಅಳುತ್ತಿರುತ್ತಾಳೆ. ಅವಿ ನಿಧಿ ಬಳಿ ಬಂದು ಮಾತನಾಡಿಸುತ್ತಾನೆ. ಯಾಕೆ ನಿಧಿ ಏನಾಯ್ತು..? ನಿನ್ನೆ ಪಾರ್ಟಿಯಲ್ಲಿ ಏನಾಯ್ತು ಎಂದು ಹೇಳು, ಈಗ ಯಾಕೆ ಅಳುತ್ತಿದ್ದೀಯಾ ಎಂದು ಕೇಳುತ್ತಾನೆ.

ರಾತ್ರಿ ನಡೆದ ಘಟನೆ ಹೇಳಿಕೊಂಡ ನಿಧಿ

ನಿಧಿ ರಾತ್ರಿ ನಡೆದ ಘಟನೆಯನ್ನು ಸ್ವಲ್ಪವೂ ಮುಚ್ಚಿಡದೇ ಹೇಳುತ್ತಾಳೆ. ತುಳಸಿ ಬಂದು ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದು, ತನ್ನನ್ನು ಮಗಳು ಎಂದು ಹೇಳಿದ್ದು ಎಲ್ಲವನ್ನೂ ಹೇಳುತ್ತಾಳೆ. ಇದನ್ನೆಲ್ಲಾ ಕೇಳುವ ಅವಿಗೆ ಶಾಕ್ ಆಗುತ್ತದೆ. ಅಮ್ಮನಿಗೆ ಪ್ಲೀಸ್ ಹೇಳಬೇಡಿ ಬ್ರೋ, ತುಳಸಿ ಅವರು ಇರಲಿಲ್ಲ ಎಂದಿದ್ದರೆ, ನನ್ನ ಪರಿಸ್ಥಿತಿ ಇವತ್ತು ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಹೇಳುತ್ತಾಳೆ.

Shrirasthu Shubhamasthu serial 03rd October episode written update

ಪೂರ್ಣಿಮಾಗೆ ಸತ್ಯ ಹೇಳಿದ ಅವಿ

ಅವಿ, ಪೂರ್ಣಿಮಾ ಬಳಿ ನಿಧಿ ವಿಚಾರವನ್ನು ಹೇಳುತ್ತಾನೆ. ಈ ಮಾತನ್ನು ಕೇಳಿದ ಪೂರ್ಣಿಮಾಳಿಗೂ ಶಾಕ್ ಆಗುತ್ತದೆ. ಇಷ್ಟೆಲ್ಲಾ ಆಯ್ತಾ. ಆದರೆ, ತುಳಸಿ ಅಮ್ಮ ಮನೆಗೆ ಯಾಕೆ ಬರಲಿಲ್ಲ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವಿ, ಶಾರ್ವರಿ ತುಳಸಿಯನ್ನು ಮನೆಯಿಂದ ಹೊರಗೆ ಹಾಕಿದ ವಿಚಾರವನ್ನು ಹೇಳಿ ಬಿಡುತ್ತಾನೆ. ಈ ಮಾತನ್ನು ಕೇಳಿ ನಿಜಕ್ಕೂ ಶಾಕ್ ಆದ ಪೂರ್ಣಿಮಾ, ಅವಿಗೆ ಸತ್ಯ ಅರ್ಥ ಮಾಡಿಸಬೇಕು ಎಂದು ಪಾಪಮ್ಮನ ಕೈಯಲ್ಲಿ ಸುಳ್ಳೊಂದನ್ನು ಹೇಳಿಸುತ್ತಾಳೆ. ಆಗ ಅವಿ ನಂಬುವುದಿಲ್ಲ. ಪೂರ್ಣಮಾ ಬಂದು, ನನ್ನ ಮೇಲೆ ಇಷ್ಟು ನಂಬಿಕೆ ಇಟ್ಟಿರುವ ನೀವು, ತುಳಸಿ ಅಮ್ಮನನ್ನು ಯಾಕೆ ಬ್ಲೈಂಡ್ ಆಗಿ ಅವರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುತ್ತಿದ್ದೀರಾ? ಎಂದು ಅರ್ಥ ಮಾಡಿಸಲು ಯತ್ನಿಸುತ್ತಾಳೆ.

ಸತ್ಯ ಅರಿತ ದತ್ತ ತಾತ

ಇತ್ತ ದತ್ತ ತಾತ ಅನುಮಾನ ಮೂಡಿ ತುಳಸಿಯನ್ನು ವಿಚಾರಿಸುತ್ತಿರುತ್ತಾರೆ. ನೀನು ಯಾಕೆ ಇಲ್ಲಿಗೆ ಬಂದಿದ್ದೀಯಾ. ಜಗಳ ಏನಾದರೂ ಆಯ್ತಾ..? ನಿನ್ನ ಮನಸ್ಸಲ್ಲಿ ಏನು ನಡೆಯುತ್ತಿದೆ ಎಂದು ಕೇಳಿದಾಗ, ತುಳಸಿ ಸುಳ್ಳು ಹೇಳಲಾಗದೇ, ತಾನು ಆ ಮನೆಗೆ ಸೂಕ್ತವಲ್ಲ. ನನ್ನ ಅವಶ್ಯಕತೆ ಆ ಮನೆಯಲ್ಲಿ ಯಾರಿಗೂ ಇಲ್ಲ ಎಂದು ಹೇಳುತ್ತಾಳೆ. ಆಗ ದತ್ತ ತಾತ ಬೈಯುತ್ತಾನೆ. ನಿನ್ನ ಸ್ಥಾನವನ್ನು ನೀನೇ ಸೃಷ್ಟಿಸಿಕೊಳ್ಳಬೇಕೇ ಹೊರತು, ಕಾಯಬಾರದು ಎಂದು ಬುದ್ಧಿ ಹೇಳುತ್ತಾನೆ.

ಸಮರ್ಥ್‌ಗೆ ಗ್ರಹಚಾರ ಬಿಡಿಸಿದ ತಾತ

ಅದೇ ಸಮಯಕ್ಕೆ ಸಮರ್ಥ್ ಬರುತ್ತಾನೆ. ಅಮ್ಮ ನಮ್ಮ ಮನೆಯಲ್ಲೇ ಇರಲಿ. ಅವರು ಎಲ್ಲಗೂ ಹೋಗುವುದು ಬೇಡ. ನನಗೆ ಅವರು ಹೊರೆಯಲ್ಲ ಎಂದು ಹೇಳುತ್ತಾನೆ. ಸಮರ್ಥ್ ಮಾತುಗಳಿಂದ ಕೋಪ ಮಾಡಿಕೊಂಡ ದತ್ತ ತಾತ, ಮೊಮ್ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಿನ್ನ ತಾಯಿ ದುಡಿದ ಸಂಬಳವನ್ನು ನಿನ್ನ ಅಕೌಂಟ್‌ನಲ್ಲಿ ಇಟ್ಟುಕೊಂಡು ಮಜಾ ಮಾಡುತ್ತಿದ್ದೀಯಾ. ಈಗ ಬಂದು ಅಮ್ಮ ನನಗೆ ಹೊರೆಯಾಗಲ್ಲ ಎಂದು ಕಥೆ ಹೇಳಬೇಡ. ಮೊದಲು ಮನೆಯ ಜವಾಬ್ದಾರಿ ಹೊತ್ತುಕೊಳ್ಳುವುದನ್ನು ಕಲಿ ಎಂದು ಬುದ್ಧಿ ಹೇಳುತ್ತಾನೆ.

More from Filmibeat

English summary
Shrirasthu Shubhamasthu Kannada serial today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X