Shrirasthu Shubhamasthu: ದತ್ತ ತಾತನ ಪ್ರಶ್ನೆಗೆ ನಡುಗಿದ ಮಾಧವ್: ಮನದ ಮಾತು ಹೇಳುತ್ತಾನಾ..?

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ ಈಗ ಕಿಲಾಡಿತನದಿಂದ ಮಾವನನ್ನು ಕಳಿಸಿದ್ದಾಳೆ. ತನ್ನ ಮಾವನಿಗೆ ಹಳೆಯ ಹಣವನ್ನು ವಾಪಸ್ ಕೊಟ್ಟರೆ ಮಾತ್ರವೇ ಮನೆಗೆ ಬರುವುದು ಎಂದು ಹೇಳಿದ್ದಾಳೆ.

ಜುಗ್ಗ ಮಾವನೂ ಸದ್ಯ ಸೊಸೆ ಮುದ್ದು ಮನೆಗೆ ಬರಲಿ ಬಳಿಕ ಹಣವನ್ನು ಪೀಕಬಹುದು ಎಂದು ಸುಮ್ಮನಾಗಿದ್ದಾನೆ. ಇನ್ನು ಸಂಧ್ಯಾ, ನಂದಿನಿಯನ್ನು ಭೇಟಿ ಮಾಡುತ್ತಾಳೆ.

Shrirasthu -Shubhamasthu-serial

ನಂದಿನಿಯನ್ನು ಸಂಧ್ಯಾ ಹೋಟೆಲ್ ರೂಮ್‌ಗೆ ಕರೆಸಿಕೊಂಡಿದ್ದಾಳೆ. ನಂದಿನಿ ಕೂಡ ಸಂಧ್ಯಾ ಬಳಿ ಇರುವ ಹಣವನ್ನು ದೋಚಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ.

ಮಾಧವನಿಗೆ ವಿಚಾರ ತಿಳಿದು ಬೇಸರ

ಇನ್ನು ಮನೆಗೆ ಬರುವ ಮಾಧವ್‌ಗಾಗಿ ಎಲ್ಲರೂ ಕಾಯುತ್ತಿರುತ್ತಾರೆ. ಬಂದ ಕೂಡಲೇ ಅಭಿಜಿತ್, ಮಾಧವ್‌ನನ್ನು ಪ್ರಶ್ನೆ ಮಾಡುತ್ತಾನೆ. ಇದೆಲ್ಲಾ ಎಷ್ಟು ಸರಿ? ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ..? ಆ ಹೆಂಗಸಿಗೂ ಇದೆಲ್ಲಾ ಯಾಕೆ..? ಅಂತೆಲ್ಲಾ ಪ್ರಶ್ನೆ ಮಾಡಿದಾಗ ಮೊದಲು ಮಾಧವ್‌ಗೆ ಏನೂ ಅರ್ಥವಾಗುವುದಿಲ್ಲ. ಅಭಿ ಪೇಪರ್ ಅನ್ನು ಮುಂದೆ ತಂದು ಇಟ್ಟಾಗ, ಪೂರ್ಣಿಮಾ ಪೇಪರ್ ಅನ್ನು ಕಿತ್ತುಕೊಳ್ಳುತ್ತಾಳೆ. ಮಾಧವ್ ಬಲವಂತ ಮಾಡಿ ಪೇಪರ್ ಅನ್ನು ತೆಗೆದುಕೊಂಡು ಓದುತ್ತಾನೆ.

Shrirasthu -Shubhamasthu-serial

ಅಭಿ ಮೇಲೆ ಮಾಧವ್ ಗಲಾಟೆ

ಪೇಪರ್ ನೋಡಿದ ಮಾಧವ್‌ಗೆ ಶಾಕ್ ಆಗುತ್ತದೆ. ಅಭಿ ಅಪ್ಪನನ್ನು ಕೆಟ್ಟದಾಗಿ ಬೈಯುತ್ತಾನೆ. ಜೊತೆಗೆ ತುಳಸಿ ಅವರನ್ನೂ ಕೂಡ ಬೈಯುತ್ತಾನೆ. ಆಗ ಮಾಧವ್ ಗಲಾಟೆ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ಬರುವ ಅವಿ ಈ ವಿಚಾರದಲ್ಲಿ ಎಷ್ಟು ಮಾತನಾಡಿದರೂ ಅಷ್ಟೇ ಈ ಮನುಷ್ಯ ನಮ್ಮ ಮಾತಿಗೆ ಬೆಲೆ ಕೊಡೋದಿಲ್ಲ ಎನ್ನುತ್ತಾನೆ. ಈ ಮಾತನ್ನು ಕೇಳಿಸಿಕೊಂಡ ಅಭಿ ನನಗೂ ಅಷ್ಟೇ ಈ ವಿಚಾರದಿಂದ ನನ್ನ ಬದುಕಿಗೆ ತೊಂದರೆ ಆದರೆ ನಾನು ಸುಮ್ಮನೆ ಇರೋದಿಲ್ಲ ಎಂದು ವಾರ್ನ್ ಮಾಡಿ ಹೋಗುತ್ತಾನೆ.

ಶಾರ್ವರಿಗೆ ಅಡ್ಡಲಾದ ತುಳಸಿ

ಮಾಧವ್ ತನ್ನ ಹಾಗೂ ತುಳಸಿ ಬಗ್ಗೆ ಪೇಪರ್‌ನಲ್ಲಿ ಬಂದಿರುವ ಸುದ್ದಿಯ ಬಗ್ಗೆ ಬೇಸರ ಮಾಡಿಕೊಂಡು ಮಹೇಶ್ ಬಳಿ ಮಾತನಾಡುತ್ತಾನೆ. ಆಗ ತನ್ನ ಮನದಲ್ಲಿರುವ ತುಳಸಿ ಮೇಲಿನ ಭಾವನೆಯನ್ನು ಯಾವತ್ತಿಗೂ ಹೊರಗೆ ಯಾರಿಗೂ ತಿಳಿಸುವುದಿಲ್ಲ ಎಂದು ಮಹೇಶ್ ಎದುರು ಹೇಳುತ್ತಾನೆ. ಇದರಿಂದ ಮಹೇಶ್‌ಗೂ ಬೇಸರವಾಗುತ್ತದೆ. ಇನ್ನು ಶಾರ್ವರಿ ಪೇಪರ್‌ನಲ್ಲಿ ಬಂದ ಸುದ್ದಿಯ ಬಗ್ಗೆ ಒಂದು ಸಂದರ್ಶನ ಕೊಡುವಂತೆ ಮಾಧವ್‌ಗೆ ಹೇಳುತ್ತಾಳೆ. ಆದರೆ, ಮಾಧವ್ ಬೇಡ. ನಾನಾಗಿ ನಾನು ಸಂದರ್ಶನ ಕೊಟ್ಟರೆ, ತುಳಸಿ ಅವರಿಗೆ ತೊಂದರೆಯಾಗುತ್ತೆ ಬೇಡ ಎನ್ನುತ್ತಾನೆ. ಇದರಿಂದ ಶಾರ್ವರಿಗೆ ಕೋಪ ಬರುತ್ತದೆ.

ಅಮ್ಮನ ಮೇಲೆ ಸಮರ್ಥ್‌ಗೆ ಕೋಪ

ಇನ್ನು ಸಮರ್ಥ್‌ಗೆ ತನ್ನ ತಾಯಿಯ ಮೇಲೆ ಕೋಪ ಇರುತ್ತದೆ. ಈ ವಯಸ್ಸಲ್ಲಿ ಮಾಧವ್ ಜೊತೆಗೆ ಓಡಾಡಿ ಹೀಗೆಲ್ಲಾ ಸುದ್ದಿಯಾಗಿದ್ದಾರೆ. ನಮ್ಮ ಕುಟುಂಬದ ಮಾನ ಮರ್ಯಾದೆ ಇದರಿಂದ ಹಾಳಾಗುತ್ತಿದೆ ಎಂದು ಕೋಪ ಮಾಡಿಕೊಂಡಿರುತ್ತಾನೆ. ಊಟ ಬಡಿಸುವಾಗಲೂ ಕೋಪ ಮಾಡಿಕೊಂಡು ಎದ್ದು ಹೋಗುತ್ತಾನೆ. ಇದರಿಂದ ತುಳಸಿಗೆ ರಾತ್ರಿ ಎಲ್ಲಾ ನಿದ್ದೆ ಬರುವುದಿಲ್ಲ.

ದತ್ತ ತಾತನ ಪ್ರಶ್ನೆಗೆ ತಬ್ಬಿಬ್ಬಾದ ಮಾಧವ್

ಇನ್ನು ಮಾಧವ್ ತುಳಸಿ ಮನೆಗೆ ಹೋಗುತ್ತಿರುತ್ತಾನೆ. ದಾರಿಯಲ್ಲಿ ದತ್ತ ತಾತ ವಾಕಿಂಗ್ ಹೋಗುತ್ತಿರುತ್ತಾನೆ. ತಾತ, ಮಾಧವ್‌ನನ್ನು ನೋಡಿ ಗಾಡಿ ನಿಲ್ಲಿಸಲು ಹೇಳುತ್ತಾರೆ. ನಿಮ್ಮ ಜೊತೆಗೆ ಮಾತನಾಡಬೇಕು ಎಂದಾಗ ಮಾಧವ್ ಸಂಕೋಚ ಪಡುತ್ತಾನೆ. ದತ್ತ ತಾತ ಜನರ ಬಗ್ಗೆ ಯೋಚಿಸಬೇಡ. ಪೇಪರ್‌ನಲ್ಲಿ ಬಂದ ವಿಚಾರಕ್ಕೆ ಬೇಸರವಿಲ್ಲ. ಆದರೆ, ನಿನಗೆ ಯಾವತ್ತಾದರೂ ನಿನಗೆ ಸಂಗಾತಿ ಬೇಕು ಅನಿಸಿದೆಯಾ ಎಂದು ಪ್ರಶ್ನೆ ಮಾಡುತ್ತಾನೆ. ಈ ಪ್ರಶ್ನೆಯನ್ನು ಕೇಳಿಸಿಕೊಂಡ ಮಾಧವ್‌ಗೆ ಏನು ಉತ್ತರ ನೀಡಬೇಕು ಎಂಬುದು ತಿಳಿಯದೇ, ಶಾಕ್ ಆಗುತ್ತಾನೆ.

More from Filmibeat

English summary
Shrirasthu Shubhamasthu serial 04th Juiy Episode Written Update. here is details about Madhav gets shocked for Datha thatha’s question, will he says about Tulasi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X