Shrirasthu Shubhamasthu: ಅವಿಗೆ ಸತ್ಯ ಅರ್ಥ ಮಾಡಿಸಿದ ಪೂರ್ಣಿಮಾ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿ ನಡೆದ ಘಟನೆಯನ್ನು ಪದೇ ಪದೇ ನೆನೆಯುತ್ತಾ ಬೇಸರದಲ್ಲಿ ಒಬ್ಬಳೇ ಕುಳಿತಿರುತ್ತಾಳೆ. ಎಂದಿನಂತೆ ಶಾರ್ವರಿ ಬರುತ್ತಾಳೆ. ಓದಿಕೊಳ್ಳುವುದು ಬಿಟ್ಟು ಹೀಗೆ ನಿತ್ಯ ಟೈಂ ಪಾಸ್ ಮಾಡುತ್ತಿದ್ದೀಯಲ್ಲ ಏನಾಗಿದೆ ನಿನಗೆ ಎಂದು ನಿಧಿಯನ್ನು ಶಾರ್ವರಿ ಪ್ರಶ್ನೆ ಮಾಡುತ್ತಾಳೆ.
ನಿಧಿ ಏನನ್ನೂ ಮಾತನಾಡದೆ ತುಳಸಿಯನ್ನು ನೆನಪು ಮಾಡಿಕೊಂಡು ಸುಮ್ಮನೆ ಕುಳಿತಿರುತ್ತಾಳೆ. sಇತ್ತ ಶಾರ್ವರಿನೇ ತುಳಸಿ ಅಮ್ಮನನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳಿದ್ದು. ಅದಕ್ಕೆ ತುಳಸಿ ಅವರು ತಮ್ಮ ತವರು ಮನೆಗೆ ಹೋಗಿದ್ದಾರೆ ಎಂಬ ಸತ್ಯ ಗೊತ್ತಾಗಿದೆ.

ಅವಿ ಅಂದು ತುಳಸಿ ಅವರನ್ನು ಮನೆಯಿಂದ ಹೊರಗೆ ಕಳಿಸುವಾಗ ಸುಮ್ಮನಿದ್ದು ಮಾಡಿದ ತಪ್ಪೇನು ಎಂಬುದನ್ನು ಪೂರ್ಣಿಮಾ ಅರ್ಥ ಮಾಡಿಸಲು ಮುಂದಾಗಿದ್ದಾಳೆ. ಯಾರನ್ನೂ ಕಣ್ಣು ಮುಚ್ಚಿಕೊಂಡು ನಂಬಬಾರದು. ಇನ್ನೊಬ್ಬರ ವಿಚಾರದಿಂದ ನಾವು ಯಾವ ವ್ಯಕ್ತಿಯನ್ನೂ ಜಡ್ಜ್ ಮಾಡಬಾರದು ಎಂದು ಹೇಳುತ್ತಾಳೆ.
ಗಂಡನಿಗೆ ಬುದ್ಧಿ ಹೇಳಿದ ಪೂರ್ಣಿಮಾ
ತುಳಸಿ ಅವರು ನಿಮಗೆ ಮೊದಲಿನಿಂದಲೂ ಪರಿಚಯವಿತ್ತು. ಆಗ ಅವರ ಮೇಲೆ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದಿರಿ. ಆದರೆ, ಈ ಮನೆಗೆ ಸೊಸೆಯಾಗಿ ಬಂದ ಮೇಲೆ ನೀವು ಮಾಡಿದ್ದೆಲ್ಲಾ ತಪ್ಪೇ ಅಲ್ವಾ ಎಂದು ಬುದ್ಧಿ ಹೇಳುತ್ತಾಳೆ. ಪೂರ್ಣಿಮಾ, ಅವಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವಾಗಲೇ ಅಲ್ಲಿಗೆ ಮಾಧವ್ ಕೂಡ ಬಂದಿರುತ್ತಾನೆ. ಮಾಧವ್‌ಗೂ ಸತ್ಯ ಅರ್ಥವಾಗಿ ಬೇಸರವಾಗುತ್ತದೆ. ಇನ್ನು ಪೂರ್ಣಿಮಾ, ಅವಿಯನ್ನು ನೀವು ಮಾಡಿದ್ದು ತಪ್ಪು ಎಂದು ಹೇಳಿ ಹೊರಟು ಹೋಗುತ್ತಾಳೆ.
ಮಗನ ಬಂಡವಾಳ ತಿಳಿದ ತುಳಸಿ
ಇನ್ನು ದತ್ತ ತಾತ, ಸಮರ್ಥ್ ಹಣವನ್ನೆಲ್ಲಾ ತೆಗೆದುಕೊಂಡು ಮಜಾ ಮಾಡುತ್ತಿರುವುದರ ಬಗ್ಗೆ ಎಲ್ಲರ ಎದುರಿಗೂ ಹೇಳಿದಾಗ ಅವನಿಗೆ ಅವಮಾನವಾಗುತ್ತದೆ. ಅಮ್ಮನ ಮೊದಲ ಸಂಬಳವನ್ನು ಅವಳ ಒಪ್ಪಿಗೆ ಇಲ್ಲದೇ ಖರ್ಚು ಮಾಡಿದ ನೀನು ಅವಳ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ ಎಂದು ಬೈದು ಕಳಿಸುತ್ತಾನೆ. ಇತ್ತ ತುಳಸಿಗೆ ದತ್ತ ತಾತ ನೀನು ನಿನ್ನ ಮನೆಗೆ ಹೋಗು ತುಳಸಿ, ಅದೇ ಸರಿ ಎಂದು ಬುದ್ಧಿ ಹೇಳುತ್ತಾನೆ.

ಸಮರ್ಥ್ ಮೇಲೆ ಸಿರಿಗೆ ಬೇಸರ
ಸಿರಿ, ಸಮರ್ಥ್ ಮೇಲೆ ಮತ್ತೆ ಕೋಪ ಮಾಡಿಕೊಳ್ಳುತ್ತಾಳೆ. ಅಮ್ಮನ ಸಂಬಳದಲ್ಲಿ ಮಜಾ ಮಾಡುವಷ್ಟು ಬುದ್ಧಿವಂತ ಆಗಿದ್ಯಾ.? ನಿನ್ನ ಮೇಲೆ ಇದ್ದ ನಂಬಿಕೆ ಎಲ್ಲಾ ಸುಳ್ಳಾಗಿ ಹೋಯ್ತು. ನಿನಗೆ ಕೆಲಸ ಇಲ್ಲ ಅಂತ ನನಗೆ ಸ್ವಲ್ಪವೂ ಬೇಸರವಾಗಿರಲಿಲ್ಲ. ಆದರೆ, ನೀನು ಮಾಡಿರುವ ಕೆಲಸ ಸ್ವಲ್ಪವೂ ಸರಿ ಇಲ್ಲ ಸಮರ್ಥ್‌ಗೆ ಬೈಯುತ್ತಾಳೆ. ಇಬ್ಬರೂ ಮತ್ತೆ ಜಗಳ ಮಾಡಿಕೊಳ್ಳುತ್ತಾರೆ.
ದತ್ತ ತಾತನ ಮನೆಗೆ ಬಂದ ಅವಿನಾಶ್
ಮಾವನ ಮಾತಿಗೆ ಸರಿ ಎನ್ನುವ ತುಳಸಿ ಹೊರಡುತ್ತಾಳೆ. ದತ್ತ ತಾತ, ತುಳಸಿಯನ್ನು ಮನೆಗೆ ಬಿಟ್ಟು ಬರಲು ಹೊರಡುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ಅವಿ ಕೂಡ ತುಳಸಿ ಮನೆಗೆ ಬರುತ್ತಾನೆ. ಬಹುಶಃ ಪೂರ್ಣಿಮಾ ಹೇಳಿದ ಮಾತುಗಳನ್ನು ಅರ್ಥ ಮಾಡಿಕೊಂಡ ಅವಿ, ತುಳಸಿ ಅವರನ್ನು ಮನೆಗೆ ಕರೆದುಕೊಂಡು ಹೋಗಲೆಂದು ಬಂದಿರಬೇಕು. ಆದರೆ, ತುಳಸಿಗೆ ಅವಿಯನ್ನು ನೋಡುತ್ತಿದ್ದಂತೆ ಭಯವಾಗುತ್ತದೆ. ನಮ್ಮ ಮನೆಗೆ ಯಾವತ್ತೂ ಬರಬೇಡಿ ಎಂದು ಹೇಳುವುದಕ್ಕೆ ಬಂದಿದ್ದಾನೇನೋ ಅನಿಸುತ್ತೆ. ಆದರೆ, ದತ್ತ ತಾತನಿಗೆ ಈ ಯಾವ ವಿಚಾರವೂ ತಿಳಿದಿಲ್ಲ. ಹಾಗಾಗಿ ದತ್ತ ತಾತ, ಅವಿಯನ್ನು ಬಲವಂತವಾಗಿ ಕೂರಿಸಿ, ಊಟ ಮಾಡಿಕೊಂಡೇ ಹೋಗಬೇಕು ಎಂದು ಹೇಳುತ್ತಾರೆ. ಮುಂದೆ ಅವಿ ಏನು ಹೇಳುತ್ತಾನೋ ಕಾದು ನೋಡಬೇಕಿದೆ.


Click it and Unblock the Notifications











