Shrirasthu Shubhamasthu: ಸಂಧ್ಯಾ ಭೇಟಿಗೆ ಬಂದ ನಂದಿನಿ, ದತ್ತ ತಾತನ ಕೈಗೆ ಸಿಕ್ಕಿ ಬೀಳುತ್ತಾಳಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್‌ಗೆ ದತ್ತ ತಾತ ಸಮಾಧಾನ ಮಾಡುತ್ತಿರುತ್ತಾನೆ. ನೀನು ಅಭಿ ಆಫೀಸ್ ಪ್ಯಾಂಟ್ರಿಯಲ್ಲಿ ಕೆಲಸ ಮಾಡುತ್ತಿರುವ ವಿಚಾರಕ್ಕೆ ಬೇಸರ ಪಟ್ಟುಕೊಳ್ಳಬೇಡ ಎಂದಿದ್ದಾನೆ.

ನ್ಯಾಯವಾಗಿ ದುಡಿಯುತ್ತಿದ್ದೀಯಾ. ನಿನಗೂ ಒಳ್ಳೆಯ ಕೆಲಸ ಸಿಗುತ್ತದೆ. ಇನ್ನು ಸಿರಿಗೆ ಈ ಸತ್ಯವನ್ನು ನಾನೇ ಹೇಳಬಹುದು. ಆದರೆ ಅದು ಸರಿಯಲ್ಲ. ನೀನೇ ನಿಧಾನವಾಗಿ ಸಮಯ ನೋಡಿಕೊಂಡು ಸಿರಿ ಬಳಿ ಸತ್ಯ ಹೇಳು. ಅವಳು ಬೇಸರ ಮಾಡಿಕೊಳ್ಳುವುದಿಲ್ಲ. ಹೆಚ್ಚು ಯೋಚನೆ ಮಾಡಬೇಡ ಎಂದಿದ್ದಾರೆ.

 Shrirasthu Shubhamasthu serial 05th December episode written update

ಆಫೀಸಿಗೆ ಹೊರಟ ಶಾರ್ವರಿ

ಇತ್ತ ಶಾರ್ವರಿಯನ್ನು ಅವಿ ಆಫೀಸಿಗೆ ಬರುವಂತೆ ಹೇಳುತ್ತಾನೆ. ಇವತ್ತು ಬಹಳ ಮುಖ್ಯವಾದ ಮೀಟಿಂಗ್ ಇದೆ. ನೀವು ಅಭಿ ಇಬ್ಬರೂ ಇರಬೇಕು ಎಂದು ಹೇಳುತ್ತಾನೆ. ಆದರೆ, ಶಾರ್ವರಿ ಆಫೀಸಿಗೆ ಬರುವುದಕ್ಕೆ ಒಪ್ಪುವುದಿಲ್ಲ. ಮಾಧವ್ ಹಾಗೂ ಮನೆಯವರೆಲ್ಲಾ ಮಾತನಾಡಿ, ನೀನು ಆಫೀಸಿನಲ್ಲಿ ಇಲ್ಲ ಎಂದರೆ, ಮಕ್ಕಳಿಗೆ ಕಷ್ಟವಾಗುತ್ತೆ. ಹೋಗಿ ಬಾ ಎಂದು ಹೇಳುತ್ತಾರೆ. ಶಾರ್ವರಿಗೆ ಈಗ ಆಫೀಸಿಗೆ ಹೋಗದೇ ಬೇರೆ ದಾರಿ ಇರುವುದಿಲ್ಲ. ಹೀಗಾಗಿ ನಿಧಿಗೆ ಜವಾಬ್ದಾರಿ ಕೊಟ್ಟು ಆಫೀಸಿಗೆ ಹೋಗುತ್ತಾಳೆ.

ತುಳಸಿ ಜೊತೆಗೆ ಮಾತನಾಡುವ ಮಹೇಶ

ರೂಮ್ ಬಿಟ್ಟು ಎಲ್ಲೂ ಹೋಗಬೇಡ. ನಿಮ್ಮ ಅಪ್ಪ ಆಗಾಗ ಏನೇನೋ ಮಾತನಾಡುತ್ತಾರೆ. ತುಳಸಿಯನ್ನು ಯಾವುದೇ ಕಾರಣಕ್ಕೂ ರೂಮಿಗೆ ಬಿಡಬೇಡ ಎಂದು ಶಾರ್ವರಿ, ನಿಧಿಗೆ ವಾರ್ನ್ ಮಾಡಿರುತ್ತಾಳೆ. ಆದರೆ, ನಿಧಿಗೆ ಸ್ನೇಹಿತರು, ಪಾರ್ಟಿ ಮೇಲಿರುವ ಗಮನ ಬೇರೆ ಯಾವುದರಲ್ಲೂ ಇಲ್ಲ. ಸ್ನೇಹಿತರೊಬ್ಬರು ಕಾಲ್ ಮಾಡಿ ಈಗಲೇ ಪಾರ್ಟಿಗೆ ಬಾ ಎಂದು ಕರೆಯುತ್ತಾರೆ. ಆಗ ನಿಧಿ ಸ್ವಲ್ಪವೂ ಯೋಚಿಸದೇ, ತುಳಸಿಗೆ ಅಪ್ಪನನ್ನು ನೋಡಿಕೊಳ್ಳಿ ಎಂದು ಹೇಳಿ ಹೋಗುತ್ತಾಳೆ.

 Shrirasthu Shubhamasthu serial 05th December episode written update

ಮತ್ತೆ ಗೂಡು ಕಟ್ಟೋಣ ಎಂದ ತುಳಸಿ

ತುಳಸಿ, ಮಹೇಶನಿಗೆ ಊಟ ಮಾಡಿಸಿದಾಗ, ಗೂಡು ಚೆನ್ನಾಗಿತ್ತು. ಅವಳು ಎಲ್ಲವನ್ನೂ ಹಾಳು ಮಾಡಿದಳು ಎಂದು ಹೇಳುತ್ತಾನೆ. ತುಳಸಿ ನಾವೆಲ್ಲಾ ಸೇರಿ ಮತ್ತೆ ಗೂಡು ಕಟ್ಟೋಣ ಎಂದು ಸಮಾಧಾನ ಮಾಡುತ್ತಾಳೆ.

ದತ್ತ ತಾತನ ಮನೆಗೆ ಬಂದ ನಂದಿನಿ

ಇತ್ತ ದತ್ತ ತಾತ, ಸಂಧ್ಯಾಳಿಗೆ ಈರುಳ್ಳಿ ಹೆಚ್ಚುವ ಕೆಲಸ ಕೊಟ್ಟು ವಾಕಿಂಗ್ ಹೋಗಿರುತ್ತಾರೆ. ಇದೇ ವೇಳೆಗೆ ನಂದಿನಿ, ಸಂಧ್ಯಾ ಮನೆಗೆ ಬರುತ್ತಾಳೆ. ಈ ಹಿಂದೆ ಸಂಧ್ಯಾ ಕದ್ದ 10 ಲಕ್ಷ ರೂ. ಹಣ ಹಾಗೂ ಇತ್ತೀಚೆಗೆ ಸಂಧ್ಯಾಳಿಂದ ಮತ್ತೆ ಒಂದು ಲಕ್ಷ ಹಣ ಡಬಲ್ ಮಾಡಿ ಕೊಡುವುದಾಗಿ ನಂದಿನಿ ಸುಳ್ಳು ಹೇಳಿರುತ್ತಾಳೆ. ಅದೇ ರೀತಿ ಊರಲ್ಲೆಲ್ಲಾ ಹಣ ಪೀಕಿರುತ್ತಾಳೆ. ಈಗ ಕದ್ದು ಮುಚ್ಚಿ ಓಡಾಡುತ್ತಿರುತ್ತಾಳೆ. ಈಗ ನೋಡಿದರೆ, ಮತ್ತೆ ಮನೆಗೆ ಬಂದಿದ್ದಾಳೆ. ಸಂಧ್ಯಾಳಿಗೆ ಗಾಬರಿಯಾಗುತ್ತದೆ.

ಮತ್ತೆ 3 ಲಕ್ಷ ರೂ. ಕೇಳಿದ ನಂದಿನಿ

ಇದೀಗ ನಂದಿನಿ ಇನ್ನೂ ಮೂರು ಲಕ್ಷ ರೂಪಾಯಿ ಕೊಡು. ನೀನು ಕೊಟ್ಟ ಹಣ ಈಗ ಲೇಔಟ್‌ಗೆ ಇನ್ವೆಸ್ಟ್ ಮಾಡಲಾಗಿದೆ. ನಿನಗೆ ಇನ್ನೊಂದು ವರ್ಷದಲ್ಲಿ 60/40 ಸೈಟ್ ನಮ್ಮ ಬಾಸ್ ಕೊಡುತ್ತಾರೆ. ಅದಕ್ಕೆ ನೀನು ಇನ್ನು ಮೂರು ಲಕ್ಷ ರೂಪಾಯಿ ಕೊಟ್ಟರೆ ಸಾಕು ಎಂದು ಹೇಳುತ್ತಾಳೆ. ಸಂಧ್ಯಾಳಿಗೆ ಸೈಟ್ ತನ್ನ ಹೆಸರಿನಲ್ಲಿ ಸಿಗುತ್ತದೆ ಎಂಬುದನ್ನು ಕೇಳಿ ಖುಷಿಯಾಗುತ್ತದೆ. ಆದರೆ ದುಡ್ಡಿಗೆ ಏನು ಮಾಡುವುದು ಎಂದು ಯೋಚಿಸುತ್ತಿರುತ್ತಾಳೆ. ನಂದಿನಿ, ದತ್ತ ತಾತನ ಮನೆ ಕಡೆ ಹೋದಳು ಎಂದು ತಿಳಿದ ಶೇಷು ಹಾಗೂ ದತ್ತ ತಾತ ಇಬ್ಬರೂ ಮನೆಗೆ ಬರುತ್ತಾರೆ. ನಂದಿನಿ ಅಡುಗೆ ಮನೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾಳೆ.

More from Filmibeat

English summary
Shrirasthu Shubhamasthu kannada serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X