Shrirasthu Shubhamasthu: ದತ್ತ ತಾತನ ಮನೆಯಿಂದ ಸಂಧ್ಯಾ ಕಿಕ್ ಔಟ್: ಶಾರ್ವರಿ ಮಾಡಿದ ಪ್ಲ್ಯಾನ್ ಠುಸ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಎದುರು ರೆಡ್ ಹ್ಯಾಂಡ್ ಆಗಿ ಶಾರ್ವರಿ ಸಿಕ್ಕಿ ಬಿದ್ದಿದ್ದಾಳೆ. ನಿದ್ದೆ ಬರುವ ಮಾತ್ರೆಗಳನ್ನು ಮಹೇಶನಿಗೆ ಯಾಕೆ ಕೊಡುತ್ತಿದ್ದೀರಾ? ಎಂದು ತುಳಸಿ ಪ್ರಶ್ನಿಸಿದ್ದಾಳೆ.
ತುಳಸಿಯನ್ನು ಉಪಾಯವಾಗಿ ಸಮಾಧಾನ ಮಾಡಿದರೆ, ಹೇಗಾದರೂ ಮಾಡಿ ಬಂದಿರುವ ಗಂಡಾಂತರದಿಂದ ಎಸ್ಕೇಪ್ ಆಗಬಹುದು ಎಂದು ಶಾರ್ವರಿ ಭಾವಿಸುತ್ತಾಳೆ.
ಶಾರ್ವರಿ, ತುಳಸಿಗೆ ಸುಳ್ಳು ಹೇಳಲು ಮುಂದಾಗಿದ್ದಾಳೆ. ತಾನು ಯಾಕೆ ಮಹೇಶನಿಗೆ ನಿದ್ದೆ ಮಾತ್ರೆ ನೀಡುತ್ತಿದ್ದೇನೆ. ಅದರ ಹಿಂದಿನ ಕಾರಣವೇನು ಎಂದು ಕಣ್ಣೀರು ಹಾಕುತ್ತಾ ಹೇಳಿಕೊಳ್ಳುತ್ತಾಳೆ.

ಸತ್ಯ ಒಪ್ಪಿಕೊಂಡ ಸಂಧ್ಯಾ
ಇತ್ತ ಸಂಧ್ಯಾಳ ಬಣ್ಣ ಬಯಲಾಗುವ ಸಮಯ ಬಂದಿದೆ. ಮನೆಯಲ್ಲಿದ್ದ ಒಡವೆಗಳನ್ನೆಲ್ಲಾ ತಾನೇ ಕದ್ದು, ಗಿರವಿ ಇಟ್ಟಿರುವುದಾಗಿ ಸಂಧ್ಯಾ, ದತ್ತ ತಾತನಿಗೆ ಹೇಳುತ್ತಾಳೆ. ದತ್ತ ತಾತ, ಸಮರ್ಥ್ ಹಾಗೂ ಸಿರಿಗೆ ಆಶ್ಚರ್ಯವಾಗುವುದರ ಜೊತೆಗೆ ಕೋಪವೂ ಬರುತ್ತದೆ. ಮನೆಯಲ್ಲೇ ಇದ್ದುಕೊಂಡು ಮನೆ ಹಾಳು ಮಾಡಿದ್ದೀಯಾ. ಹೀಗೆಲ್ಲಾ ಮಾಡುವುದಕ್ಕೆ ನಿನಗೆ ಮನಸಾದರೂ ಹೇಗೆ ಬಂತು ಎಂದು ಪ್ರಶ್ನೆ ಮಾಡುತ್ತಾರೆ. ಆಗ ಸಂಧ್ಯಾ ಏನೂ ಹೇಳುವುದಿಲ್ಲ ಎನ್ನುತ್ತಾಳೆ. ಪ್ರಸಾದ್ ನಿನ್ನನ್ನು ಬಿಟ್ಟು ಹೋಗಬಾರದು ಎಂದರೆ ಸತ್ಯ ಹೇಳು ಎಂದಾಗ ಸಂಧ್ಯಾ ತಾನು ಎಲ್ಲಾ ಹಣವನ್ನು ಸೈಟ್‌ಗಾಗಿ ನಂದಿನಿಗೆ ನೀಡಿರುವ ವಿಚಾರ ಹೇಳುತ್ತಾಳೆ. ಅಲ್ಲದೇ, ಇನ್ನೊಂದು ವಾರದಲ್ಲಿ ಸೈಟ್ ತನ್ನ ಹೆಸರಿಗೆ ಆಗಲಿದ್ದು, ಒಡವೆಗಳನ್ನು ಬಿಡಿಸಿಕೊಡುವುದಾಗಿ ಹೇಳುತ್ತಾಳೆ.
ಸಂಧ್ಯಾಳನ್ನು ಹೊರಗಟ್ಟಿದ ದತ್ತ ತಾತ
ನಂದಿನಿಗೆ ಹಣ ಕೊಟ್ಟಿರುವುದಕ್ಕೆ ದತ್ತ ತಾತ ಬೈಯುತ್ತಾರೆ. ಅವಳು ಮೋಸ ಮಾಡುತ್ತಾಳೆ. ನೀನು ಹೋಗಿ ಹೋಗಿ ಅವಳನ್ನು ನಂಬಿದ್ದೀಯಾ ಎಂದು ಬೈಯುತ್ತಾನೆ. ಇನ್ನು ಸಮರ್ಥ್‌ಗೆ ಕೆಲಸಕ್ಕೆ ತೊಂದರೆಯಾಗಬಾರದು ಅಂತ ದತ್ತ ತಾತ ಮಾಧವ್ ಉಡುಗೊರೆಯಾಗಿ ಕೊಟ್ಟ ಚಿನ್ನದ ಸರವನ್ನು ಅಡವಿಡಲು ಹೇಳುತ್ತಾನೆ. ಆದರೆ, ಸಂಧ್ಯಾ ಅದನ್ನೂ ಕೂಡ ಅಡವಿಟ್ಟಿರುವುದಾಗಿ ಹೇಳುತ್ತಾಳೆ. ಆಗ ದತ್ತ ತಾತ ಕೋಪ ಮಾಡಿಕೊಂಡು ಸಂಧ್ಯಾಳನ್ನು ಹೊಡೆಯಲು ಹೋಗುತ್ತಾರೆ. ಇನ್ನು ಇವಳು ನಮ್ಮ ಮನೆಯಲ್ಲಿದ್ದರೆ, ಇರೋ ಬರೋದನ್ನೆಲ್ಲಾ ಮಾರಿ ಬಿಡುತ್ತಾಳೆ, ಎಂದು ದತ್ತ ತಾತ, ಸಂಧ್ಯಾಳನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ಸಂಧ್ಯಾ ಸಂಜೆಯಾದರೂ ಕೂಡ ಮನೆಯ ಬಾಗಿಲಲ್ಲೆ ನಿಂತಿರುತ್ತಾಳೆ.

ಮಹೇಶನಿಗಾಗಿ ಮನೆಗೆ ಬಂದ ವೈದ್ಯರು
ಶಾರ್ವರಿ ಹೇಳಿದ ವಿಚಾರ ಅಲ್ಲಿಗೆ ಬಿಡದ ತುಳಸಿ, ಮಾಧವ್ ಬಳಿ ಹೇಳಿಕೊಳ್ಳುತ್ತಾಳೆ. ಮಾಧವ್ ವೈದ್ಯರನ್ನು ಕರೆಸುತ್ತಾನೆ. ವೈದ್ಯರು ಈಗ ಕೊಡುತ್ತಿರುವ ಎಲ್ಲಾ ಮಾತ್ರೆಗಳನ್ನು ನಿಲ್ಲಿಸಿಬಿಡಿ. ಇಂದಿನಿಂದ ನಾನು ಕೊಡುವ ಈ ಹೊಸ ಮಾತ್ರೆಗಳನ್ನು ಕೊಡಿ ಎನ್ನುತ್ತಾರೆ. ಸದಾ ಮಹೇಶ್ ಅವರ ಜೊತೆಗೆ ಯಾರಾದರು ಇರಬೇಕು ಎಂದಾಗ ಮಾಧವ್, ತುಳಸಿ ನೋಡಿಕೊಳ್ಳುತ್ತಾರೆ, ಶಾರ್ವರಿಗೆ ಆಫಿಸ್ ಕೆಲಸ ಇರುತ್ತದೆ ಎಂದು ಹೇಳುತ್ತಾನೆ. ವೈದ್ಯರು, ತುಳಸಿಗೆ ಮಾತ್ರೆಯ ಚೀಟಿ ಕೊಟ್ಟು ನೀವೇ ಮಾತ್ರೆಗಳನ್ನು ಕೊಡಿ ಎಂದು ಹೇಳುತ್ತಾರೆ. ಬಳಿಕ ಶಾರ್ವರಿಗೆ ಮಹೇಶ್ ರಾತ್ರಿಯೆಲ್ಲಾ ಹಾಗೆ ಮಾಡುತ್ತಿರುವುದು ಅವರಿಗೆ ಎಲ್ಲಾ ನೆನಪಾಗುತ್ತಿರಬೇಕು ಅದಕ್ಕೆ ಹಾಗೆ ಮಾಡುತ್ತಾರೆ ಹೆದರಬೇಡಿ ಎಂದು ಹೇಳುತ್ತಾರೆ.
ನಂದಗಿರಿಗೆ ಹೋಗಲು ಬಯಸಿದ ಮಹೇಶ
ಮಹೇಶ ಕೂಡ ಅಣ್ಣ -ಅತ್ತಿಗೆ ಎಂದು ಕರೆದು ಮಾಧವ್‌ಗೆ ಖುಷಿ ಕೊಡುತ್ತಾನೆ. ತುಳಸಿ, ಮಹೇಶ್ ಅವರನ್ನು ಮಾತನಾಡಿಸುತ್ತಿರುತ್ತಾಳೆ. ಆಗ ಮಹೇಶ ನಂದಗಿರಿಗೆ ಹೋಗಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ನಿಧಿ ಹೋಗೋಣ ಅಲ್ಲಿಗೆ ಹೋದರೆ, ಅಪ್ಪನಿಗೆ ಎಲ್ಲಾ ನೆನಪು ಬರಬಹುದು ಎನ್ನುತ್ತಾಳೆ. ಇದಕ್ಕೆ ಮನೆಯವರೆಲ್ಲಾ ಒಪ್ಪುತ್ತಾರೆ. ಆದರೆ, ಶಾರ್ವರಿಗೆ ಭಯವಾಗಿದ್ದು, ಈ ಟ್ರಿಪ್ ಹೋಗುವುದನ್ನು ತಪ್ಪಿಸುತ್ತಾಳಾ? ಎಂದು ಕಾದು ನೋಡಬೇಕಿದೆ.


Click it and Unblock the Notifications











