Shrirasthu Shubhamasthu: ದತ್ತ ತಾತನ ಮೋಸಕ್ಕೆ ಬಗ್ಗದ ಅವಿ: ಆಟದಲ್ಲಿ ಗೆದ್ದು ತೋರಿಸಿದ ಮಾಧವ್ ಮಗ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ, ಅವಿಗೆ ಬುದ್ಧಿ ಹೇಳಿದ ಮೇಲೆ ಆಫಿಸ್‌ಗೆ ಹೋಗದೇ ನೇರವಾಗಿ ತುಳಸಿ ಮನೆಗೆ ಬಂದಿದ್ದಾನೆ. ಆದರೆ, ಅವಿ ಯಾವ ಉದ್ಧೇಶದಿಂದ ತುಳಸಿ ಮನೆಗೆ ಬಂದಿದ್ದಾನೆ ಎಂಬುದು ಗೊತ್ತಿಲ್ಲ. ಅವಿ ಹೇಳುವ ಮುನ್ನವೇ ದತ್ತ ತಾತ ಮಾತನಾಡಲು ಬಿಟ್ಟಿಲ್ಲ.
ನಮ್ಮ ಮನೆಯಲ್ಲಿ ಊಟ ಮಾಡಿಕೊಂಡೇ ಹೋಗಬೇಕು ಎಂದು ಬಲವಂತ ಮಾಡಿದ್ದಾರೆ. ಅವಿ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿದೆ. ತುಳಸಿಗೂ ಕೂಡ ಅವಿ ಯಾಕೆ ಬಂದಿದ್ದಾನೆ ಎಂಬ ವಿಚಾರವೇ ಗೊತ್ತಿಲ್ಲ. ಏನು ಹೇಳುತ್ತಾನೋ ಎಂದು ತುಳಸಿ ಯೋಚಿಸುತ್ತಿರುತ್ತಾಳೆ.

ಆ ಮನೆಯಿಂದ ಬರುವಾಗ ಅವಿ ಅವರಿಗೆ ಹೇಳಿ ಬಂದಿದ್ದಾ ಎಂದು ತುಳಸಿಯನ್ನು ಸಿರಿ ಪ್ರಶ್ನಿಸಿದ್ದಕ್ಕೆ ಹು ಎಂದು ಹೇಳುತ್ತಾಳೆ. ಆಗ ಅವಿ ಅವರು ತಡೆಯಲಿಲ್ಲವಾ ಎಂದು ಕೇಳಿದ್ದಕ್ಕೆ ತುಳಸಿ ಮಾತು ಮರೆಸಲು ಯತ್ನಿಸುತ್ತಾಳೆ. ಸಿರಿ ಅರ್ಥ ಮಾಡಿಕೊಂಡು ಸುಮ್ಮನಾಗುತ್ತಾಳೆ.
ಮನೆಯ ವಿಚಾರವನ್ನು ಬಚ್ಚಿಟ್ಟ ತುಳಸಿ
ಸಿರಿ, ಅವಿ ಅವರಿಗೆ ಸಿಹಿ ತಿಂಡಿ ಇಷ್ಟವಾದರೆ, ಏನಾದರೂ ಮಾಡೋಣವಾ ಎಂದು ಕೇಳುತ್ತಾಳೆ. ಆಗ ತುಳಸಿ ತಾನು ಮಾಡಿದ ಅಡುಗೆಯನ್ನು ಅವಿ ತಿನ್ನುತ್ತಾನೋ ಇಲ್ಲವೋ ಎಂದು ಯೋಚಿಸುತ್ತಾಳೆ. ಸಿರಿ ಮತ್ತು ತುಳಸಿ ಏನು ಮಾತನಾಡುತ್ತಿರಬಹುದು ಎಂದು ತಿಳಿದುಕೊಳ್ಳಲು ಸಂಧ್ಯಾ ಕದ್ದು ಕೇಳಿಸಿಕೊಳ್ಳುತ್ತಿರುತ್ತಾಳೆ.

ತಾತನ ಜೊತೆ ಚೆಸ್ ಆಡಿದ ಅವಿ
ಅವಿಗೆ ಬೋರ್ ಆಗುತ್ತಿರುತ್ತದೆ. ಮನೆಗೆ ಶೇಷು ಕೂಡ ಬರುತ್ತಾರೆ. ಆಗ ಅವಿ ಈ ಮನೆ ಹುಚ್ಚರ ಸಂತೆನೇ ಸರಿ ಎಂದು ಅಂದುಕೊಳ್ಳುತ್ತಾನೆ. ಅಷ್ಟರಲ್ಲಿ ದತ್ತ ತಾತ, ಚೆಸ್ ಬೋರ್ಡ್ ತರುತ್ತಾನೆ. ಇಬ್ಬರೂ ಆಟವಾಡೋಣ ಎಂದು ಬಲವಂತ ಮಾಡುತ್ತಾರೆ. ಮೊದಲ ಆಟದಲ್ಲಿ ದತ್ತ ತಾತ ಮೋಸವಾಡಿ ಅವಿಯನ್ನು ಸೋಲಿಸುತ್ತಾನೆ. ಅವಿ ಇಲ್ಲ. ಇದು ಮೋಸದ ಆಟ ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ.
ಆಟದಲ್ಲಿ ಗೆದ್ದ ಅವಿ
ಮತ್ತೊಂದು ಆಟವಾಡೋಣ ಎಂದು ಅವಿ ಮತ್ತು ದತ್ತ ತಾತ ನಿರ್ಧಾರ ಮಾಡುತ್ತಾರೆ. ಎರಡನೆಯ ಆಟದಲ್ಲೂ ದತ್ತ ತಾತ ಮೋಸ ಮಾಡಲು ಯತ್ನಿಸಿದಾಗ ಅವಿ ಯಾಮಾರುವುದಿಲ್ಲ. ಆಗ ಅವಿ ವಿನ್ ಆಗುತ್ತಾನೆ. ಖುಷಿಯಲ್ಲಿ ಅವಿ ನೋಡಿ ತಾತ ನಾನೇ ಗೆದ್ದಿದ್ದು ಎಂದು ಹೇಳುತ್ತಾನೆ. ಅವಿ, ತಾತ ಎಂದಿದ್ದಕ್ಕೆ ದತ್ತನಿಗೂ ಖುಷಿಯಾಗುತ್ತದೆ.
ನಿಧಿಗೆ ಶಾರ್ವರಿ ಆರ್ಡರ್
ನಿಧಿ ಪಾರ್ಟಿ ವಿಚಾರವನ್ನು ಶಾರ್ವರಿ ಬಳಿ ಹೇಳದೇ ಮುಚ್ಚಿಟ್ಟಿರುತ್ತಾಳೆ. ಶಾರ್ವರಿ ಏನು ಯೋಚಿಸುತ್ತಿದ್ದೀಯಾ ಹೇಳು ಎಂದು ಎಷ್ಟೇ ಕೇಳಿದರೂ ಹೇಳುವುದಿಲ್ಲ. ಅದರ ಬದಲು ನಿಧಿ, ತುಳಸಿ ಅಕಸ್ಮಾತ್ ಮತ್ತೆ ಮನೆಗೆ ವಾಪಸ್ ಬಂದರೆ ಏನು ಮಾಡುತ್ತೀಯಾ? ಎಂದು ಕೇಳುತ್ತಾಳೆ. ಆಗ ಶಾರ್ವರಿ ಅದಕ್ಕೆ ಅವಕಾಶನೇ ಎನ್ನುತ್ತಾಳೆ. ಶಾರ್ವರಿ, ಪೂರ್ಣಿಮಾ ಹುಟ್ಟುಹಬ್ಬದ ಸೆಲಬ್ರೇಷನ್‌ಗೆ ರಾತ್ರಿ 12 ಗಂಟೆ ನೀನು ಹಾಜರ್ ಇರಬೇಕು ಎಂದು ನಿಧಿಗೆ ಆರ್ಡರ್ ಮಾಡುತ್ತಾಳೆ.
ಪೂರ್ಣಿಮಾ ಹುಟ್ಟುಹಬ್ಬಕ್ಕೆ ಸಿದ್ಧತೆ
ಇನ್ನು ಮಾಧವ್, ಪೂರ್ಣಿಮಾ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಬೇಕು ಎಂದು ಹಾಲ್‌ನಲ್ಲಿ ಡೆಕೊರೇಷನ್ ಮಾಡಿಸಲಾಗುತ್ತಿದೆ. ಹೀಗಾಗಿ ಮಾಧವ್, ಪೂರ್ಣಿಮಾಳನ್ನು ಎಲ್ಲೂ ಹೋಗದಂತೆ ಅಡುಗೆ ಮನೆಯಲ್ಲೇ ಕೆಲಸ ಕೊಡುತ್ತಿದ್ದಾರೆ. ಪೂರ್ಣಿಮಾಗೆ ಈ ವಿಚಾರ ಗೊತ್ತಾಗಿಲ್ಲ. ಇನ್ನು ಅವಿ ಬೇರೆ ತುಳಸಿ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಫೋನ್ ಕೂಡ ತೆಗೆಯುತ್ತಿಲ್ಲ. ಸದ್ಯ ಮನೆಯ ಎಲ್ಲಾ ಕೆಲಸಗಳು ಮತ್ತೆ ತನ್ನ ಸುಪರ್ದಿಗೆ ಬಂದಿರುವುದಕ್ಕೆ ಶಾರ್ವರಿ ಬಹಳ ಖುಷಿ ಪಡುತ್ತಿದ್ದಾಳೆ.


Click it and Unblock the Notifications











